AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸತ್ ಬಜೆಟ್ ಅಧಿವೇಶನದಲ್ಲಿ ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ: ಒಬ್ಬರದ್ದು ಶೂನ್ಯ ಸಾಧನೆ!

ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಕರ್ನಾಟಕದ ಬಹುತೇಕ ಸಂಸದರು ಉತ್ತಮ ಹಾಜರಾತಿ ದಾಖಲಿಸಿದ್ದರೂ, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಶೂನ್ಯ ಹಾಜರಾತಿ ಮತ್ತು ಬೆಳಗಾವಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ 41.9% ಹಾಜರಾತಿಯೊಂದಿಗೆ ಅತ್ಯಂತ ಕಳಪೆ ಹಾಜರಾತಿ ಹಾಕಿದ ಸಂಸದರ ಪಟ್ಟಿಯಲ್ಲಿ ಗಮನ ಸೆಳೆದಿದ್ದಾರೆ.

ಸಂಸತ್ ಬಜೆಟ್ ಅಧಿವೇಶನದಲ್ಲಿ ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ: ಒಬ್ಬರದ್ದು ಶೂನ್ಯ ಸಾಧನೆ!
ಸಂಸತ್ ಅಧಿವೇಶನ (ಸಂಗ್ರಹ ಚಿತ್ರ)Image Credit source: PTI
ಗಣಪತಿ ಶರ್ಮಾ
|

Updated on: Jul 18, 2026 | 9:27 AM

Share

ಮುಖ್ಯಾಂಶಗಳು

  • ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಶೂನ್ಯ ಹಾಜರಾತಿ
  • ಬೆಳಗಾವಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಜರಾತಿ 41.9%
  • ಕರ್ನಾಟಕದ ಮೂವರು ಸಂಸದರದ್ದು 90% ಗೂ ಅಧಿಕ ಹಾಜರಾತಿ

ಬೆಂಗಳೂರು, ಜುಲೈ 19: ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliment Monsoon Session) ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಜೆಟ್ ಅಧಿವೇಶನದ ಸಂಸದರ ಹಾಜರಾತಿ ವಿವರಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಕರ್ನಾಟಕದ (Karnataka) ಇಬ್ಬರು ಲೋಕಸಭಾ ಸದಸ್ಯರು ಕಳಪೆ ಹಾಜರಾತಿಯಿಂದ ಗಮನ ಸೆಳೆದಿದ್ದು, ಮತ್ತೊಂದೆಡೆ ಕೆಲ ಸಂಸದರು 90 ಪ್ರತಿಶತಕ್ಕೂ ಹೆಚ್ಚು ಹಾಜರಾತಿ ದಾಖಲಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಲಭ್ಯ ಅಂಕಿಅಂಶಗಳ ಪ್ರಕಾರ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ರಾಧಾಕೃಷ್ಣ ದೊಡ್ಡಮನಿ ಬಜೆಟ್ ಅಧಿವೇಶನದ 31 ಕಲಾಪಗಳಲ್ಲಿ ಒಂದಕ್ಕೂ ಹಾಜರಾಗದೆ ಶೇ 0 ಹಾಜರಾತಿ ದಾಖಲಿಸಿದ್ದಾರೆ. ಈ ಕುರಿತು ಅವರ ಆಪ್ತರು ಪ್ರತಿಕ್ರಿಯಿಸಿ, ಕುಟುಂಬದ ಸದಸ್ಯರೊಬ್ಬರ ಗಂಭೀರ ಅನಾರೋಗ್ಯ ಹಾಗೂ ಸಂಸದರ ಆರೋಗ್ಯ ಸಮಸ್ಯೆಯಿಂದ ಅವರು ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ 31 ಕಲಾಪಗಳಲ್ಲಿ 13 ದಿನ ಮಾತ್ರ ಹಾಜರಾಗಿದ್ದು, ಅವರ ಹಾಜರಾತಿ ಶೇ 41.9 ಆಗಿದೆ. ಇದು ಕರ್ನಾಟಕದ ಸಂಸದರ ಪೈಕಿ ಅತ್ಯಂತ ಕಡಿಮೆ ಹಾಜರಾತಿಗಳಲ್ಲಿ ಒಂದಾಗಿದೆ.

ಅತಿಹೆಚ್ಚು ಹಾಜರಾತಿ ಹೊಂದಿರುವ ಸಂಸದರು

ಡಾ. ಸಿ.ಎನ್. ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಡಾ. ಕೆ. ಸುಧಾಕರ್ (ಚಿಕ್ಕಬಳ್ಳಾಪುರ) ಮತ್ತು ಶ್ರೇಯಸ್ ಎಂ. ಪಟೇಲ್ (ಹಾಸನ) ಅವರು ಶೇ 90ಕ್ಕಿಂತ ಹೆಚ್ಚು ಹಾಜರಾತಿ ದಾಖಲಿಸಿ ಕರ್ನಾಟಕದ ಅತ್ಯುತ್ತಮ ಹಾಜರಾತಿ ಹೊಂದಿರುವ ಸಂಸದರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ರಮೇಶ್ ಜಿಗಜಿಣಗಿ (ವಿಜಯಪುರ) ಮತ್ತು ಕೋಟ ಶ್ರೀನಿವಾಸ ಪೂಜಾರಿ (ಉಡುಪಿ-ಚಿಕ್ಕಮಗಳೂರು) ತಲಾ ಶೇ 87 ಹಾಜರಾತಿ ದಾಖಲಿಸಿದ್ದಾರೆ.

ಪಿ.ಸಿ. ಮೋಹನ್ (ಬೆಂಗಳೂರು ಕೇಂದ್ರ) ಹಾಗೂ ಮಲ್ಲೇಶ್ ಬಾಬು (ಕೋಲಾರ) ಶೇ 83.8 ಹಾಜರಾತಿ ದಾಖಲಿಸಿದ್ದು, ಜಗದೀಶ್ ಶೆಟ್ಟರ್ (ಬೆಳಗಾವಿ) ಮತ್ತು ಕುಮಾರ್ ನಾಯಕ್ (ರಾಯಚೂರು) ಶೇ 80.6 ಹಾಜರಾತಿಯೊಂದಿಗೆ ಮುಂದಿದ್ದಾರೆ.

ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ (ಮೈಸೂರು-ಕೊಡಗು) ಮತ್ತು ಸಾಗರ್ ಖಂಡ್ರೆ (ಬೀದರ್) ಶೇ 74 ಹಾಜರಾತಿ ದಾಖಲಿಸಿದ್ದಾರೆ. ಬಸವರಾಜ ಬೊಮ್ಮಾಯಿ (ಹಾವೇರಿ) ಹಾಗೂ ಡಾ. ಪ್ರಭಾ ಮಲ್ಲಿಕಾರ್ಜುನ್ (ದಾವಣಗೆರೆ) ಶೇ 67.7, ಸುನೀಲ್ ಬೋಸ್ (ಚಾಮರಾಜನಗರ) ಶೇ 64.5, ಬಿ.ವೈ. ರಾಘವೇಂದ್ರ (ಶಿವಮೊಗ್ಗ) ಮತ್ತು ಗೋವಿಂದ ಕಾರಜೋಳ (ಚಿತ್ರದುರ್ಗ) ಶೇ 61, ಇ. ತುಕಾರಾಂ (ಬಳ್ಳಾರಿ) ಹಾಗೂ ರಾಜಶೇಖರ್ ಹಿಟ್ನಾಳ್ (ಕೊಪ್ಪಳ) ಶೇ 58 ಹಾಜರಾತಿ ದಾಖಲಿಸಿದ್ದಾರೆ.

ಶೇ 90ರ ಮೇಲ್ಪಟ್ಟು ಹಾಜರಾತಿಯುಳ್ಳ ಸಂಸದರ ಸಂಖ್ಯೆ ಶೇ 50ಕ್ಕೂ ಕಡಿಮೆ!

ದೇಶವ್ಯಾಪಿ ಅಂಕಿಅಂಶಗಳ ಪ್ರಕಾರ, ಲೋಕಸಭೆಯ ಶೇ 45.76 ಸದಸ್ಯರು ಮಾತ್ರ ಶೇ 90ರಿಂದ 100ರಷ್ಟು ಹಾಜರಾತಿ ದಾಖಲಿಸಿದ್ದು, ಶೇ 75ಕ್ಕಿಂತ ಹೆಚ್ಚು ಹಾಜರಾತಿ ಹೊಂದಿರುವ ಸದಸ್ಯರ ಪ್ರಮಾಣ ಶೇ 63.98 ಆಗಿದೆ. ಮುಂಗಾರು ಅಧಿವೇಶನದಲ್ಲಿ ಪ್ರಮುಖ ಮಸೂದೆಗಳು ಮತ್ತು ಆರ್ಥಿಕ ವಿಷಯಗಳ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಸಂಸದರ ಹಾಜರಾತಿ ಮತ್ತೊಮ್ಮೆ ಚರ್ಚೆಯ ವಿಷಯವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಹೆಚ್ಚುತ್ತಿರುವ ಕಸ್ತೂರಿ ರಂಗನ್ ಕಿಚ್ಚು ನಾಳೆ ಶೃಂಗೇರಿ ಬಂದ್​​ಗೆ ಕರೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!