Karnataka Rains: ಬೆಂಗಳೂರಿನಲ್ಲಿ ಅಕ್ಟೋಬರ್ 28ರವರೆಗೂ ಮಳೆಯ ಅಬ್ಬರ, ಯೆಲ್ಲೋ ಅಲರ್ಟ್​

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಕರ್ನಾಟಕದ ಮೇಲೂ ಭಾರಿ ಪರಿಣಾಮ ಬೀಳುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

Karnataka Rains: ಬೆಂಗಳೂರಿನಲ್ಲಿ ಅಕ್ಟೋಬರ್ 28ರವರೆಗೂ ಮಳೆಯ ಅಬ್ಬರ, ಯೆಲ್ಲೋ ಅಲರ್ಟ್​
ಮಳೆImage Credit source: PTI
Follow us
|

Updated on: Oct 22, 2024 | 7:50 AM

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ, ಅಕ್ಟೋಬರ್ 28ರವರೆಗೂ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ,ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​​ ಘೋಷಿಸಲಾಗಿದೆ.

ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್​ನಲ್ಲೂ ಮಳೆಯಾಗಲಿದೆ. ಕದ್ರಾ, ಕುಂದಾಪುರ, ಮುಂಡಗೋಡು, ಹಿರೇಕೆರೂರು, ಹೊನ್ನಾಳಿ, ಕಾರವಾರ, ಶಿವಮೊಗ್ಗ, ಚಿತ್ರದುರ್ಗ, ಆನವಟ್ಟಿಯಲ್ಲಿ ಮಳೆಯಾಗಿದೆ. ಕಿರವತ್ತಿ, ಹೊನ್ನಾವರ, ಹುಂಚದಕಟ್ಟೆ, ಶ್ರವಣಬೆಳಗೊಳ, ದಾವಣಗೆರೆ, ಕುಣಿಗಲ್, ಕೃಷಗಣರಾಜಸಾಗರ, ಬನವಾಸಿ, ಜಯಪುರ, ಶ್ರೀರಂಗಪಟ್ಟಣ, ತರೀಕೆರೆ, ನಾಯಕನಹಟ್ಟಿ, ಎನ್​ಆರ್​ಪುರ, ತರೀಕೆರೆ, ಗೇರುಸೊಪ್ಪ, ಗೋಕರ್ಣದಲ್ಲಿ ಮಳೆಯಾಗಿದೆ.

ಕೊಪ್ಪ, ಹಡಗಲಿ, ಶಿರಾಲಿ, ಅಂಕೋಲಾ, ಕೋಟ, ಲೋಂಡಾ, ತಿಪಟೂರು, ಬೆಳ್ಳಟ್ಟಿ, ನಾಪೋಕ್ಲು, ಹೆಸರಘಟ್ಟ, ಚಿಕ್ಕಮಗಳೂರು, ಮಾಗಡಿ, ಅಜ್ಜಂಪುರ, ಕಳಸ, ಕೃಷ್ಣರಾಜಪೇಟೆ, ಕಾರ್ಕಳ, ಸಂಡೂರು, ಹೊಸದುರ್ಗ, ರಾಮನಗರ, ಹರಪನಹಳ್ಳಿ, ಸೇಡಬಾಳ, ಲಕ್ಷ್ಮೇಶ್ವರ, ಕುಂದಗೋಳದಲ್ಲಿ ಮಳೆಯಾಗಿದೆ.

ಮತ್ತಷ್ಟು ಓದಿ: ಚಂಡಮಾರುತ: ಬೆಂಗಳೂರು ಸೇರಿ ಕರ್ನಾಟಕದ 25 ಜಿಲ್ಲೆಗಳಲ್ಲಿ ಧಾರಾಕಾರ ಮಳೆ

ಕಲಬುರಗಿಯಲ್ಲಿ 33.2 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 18.4 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಎಚ್​​ಎಎಲ್​ನಲ್ಲಿ 29.0 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊನ್ನಾವರದಲ್ಲಿ 29.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 30.6ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 32.4ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 30.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೀದರ್​ನಲ್ಲಿ 31.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 30.5ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 33.0ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಗದಗದಲ್ಲಿ29.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಲಬುರಗಿಯಲ್ಲಿ 33.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 27.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಗಾಜಾದಲ್ಲಿ ಜೀವ ಉಳಿಸಿಕೊಳ್ಳಲು ತಂಗಿಯನ್ನು ಹೊತ್ತು 2 ಕಿ.ಮೀ ನಡೆದ ಬಾಲಕಿ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್​​​​ಗೆ ಅನುಮತಿ ಕೋರಿದ ಅಬ್ರಹಾಂ
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ದುರ್ಬಳಕೆ ಹೆಚ್ಚುತ್ತಿದೆ!
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಕೆಲಸ ಹೋಯಿತೆಂದು 12ನೇ ಮಹಡಿಯಿಂದ ಹಾರಲು ಯತ್ನಿಸಿದ ಯುವಕ; ಆಮೇಲೇನಾಯ್ತು?
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಒಂದೇ ಆಧಾರ್ ಕಾರ್ಡ್​ನಲ್ಲಿ ಮೂವರ ಪ್ರಯಾಣ: ಟಿಸಿ ಕೈಗೆ ಸಿಕ್ಕಿಬಿದ್ದರು
ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್
ಟಾಯ್ಲೆಟ್ ಬಳಸುವುದು ಹೇಗೆ? ಹನುಮಂತನಿಗೆ ತೋರಿಸಿಕೊಟ್ಟ ಧನರಾಜ್