Malur: ಕ್ಷುಲ್ಲಕ ಕಾರಣಕ್ಕೆ ಆರ್ಎಸ್ಎಸ್ ಪ್ರಮುಖನಿಗೆ ಅನ್ಯಕೋಮಿನ ಇಬ್ಬರಿಂದ ಚಾಕು ಇರಿತ
ಶನಿವಾರ ಮಧ್ಯಾಹ್ನ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ನಡೆಯುತಿತ್ತು. ಆ ವೇಳೆ ಗಲಾಟೆ ಬಿಡಿಸಲು ಹೋದಾಗ ಅನ್ಯಕೋಮಿನ ಇಬ್ಬರು ರವಿಗೆ ಚಾಕುವಿನಿಂದ ಇರಿದಿದ್ದಾರೆ. ರವಿ ಮುಖಕ್ಕೆ ಚಾಕು ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಲಾರ: ಕ್ಷುಲ್ಲಕ ಕಾರಣಕ್ಕೆ ಆರ್ಎಸ್ಎಸ್ ಪ್ರಮುಖನಿಗೆ ಅನ್ಯಕೋಮಿನ ಇಬ್ಬರು ಚಾಕು ಹಾಕಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ವೆಂಕಟೇಶ್ವರ ದೇಗುಲ ಬಳಿ ಘಟನೆ ನಡೆದಿದೆ. ರವಿ ಎಂಬಾತ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಕ್ಷುಲ್ಲುಕ ಕಾರಣಕ್ಕೆ ಗಲಾಟೆ ನಡೆದಿದ್ದು, ಗಲಾಟೆ ಬಿಡಿಸಲು ಹೋದ ರವಿಗೆ ಚಾಕು ಇರಿಯಲಾಗಿದೆ. ಮದ್ಯದ ಅಮಲಿನಲ್ಲಿ ಅನ್ಯ ಕೋಮಿನ ಯುವಕರಿಬ್ಬರು ಚಾಕುವಿನಿಂದ ಇರಿದಿದ್ದಾರೆ. ಒಬ್ಬ ಆರೋಪಿ ಸೈಯದ್ ವಸೀಂನನ್ನು ಸೆರೆ ಹಿಡಿಯಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಶನಿವಾರ ಮಧ್ಯಾಹ್ನ ಅಂಗಡಿ ಮುಂದೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ನಡೆಯುತಿತ್ತು. ಆ ವೇಳೆ ಗಲಾಟೆ ಬಿಡಿಸಲು ಹೋದಾಗ ಅನ್ಯಕೋಮಿನ ಇಬ್ಬರು ರವಿಗೆ ಚಾಕುವಿನಿಂದ ಇರಿದಿದ್ದಾರೆ. ರವಿ ಮುಖಕ್ಕೆ ಚಾಕು ಹಾಕಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳದಲ್ಲಿ ಜಮಾಯಿಸಿದ ಅರ್‌ಎಸ್‌ಎಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಬ್ಬರೂ ಆರೋಪಿಗಳು ರವಿ ಮಾಲೀಕತ್ವದ ಸ್ಟೀಲ್ ಅಂಗಡಿಯ ಮುಂಭಾಗ ಗಲಾಟೆ ಮಾಡುತ್ತಿದ್ದರು. ಈ ವೇಳೆ ಗಲಾಟೆಯನ್ನು ಬಿಡಿಸಿ ಅಂಗಡಿಗೆ ವಾಪಸ್ಸಾಗುವಾಗ ರವಿ ಮೇಲೆ ಚಾಕು ಇರಿಯಲಾಗಿದೆ. ಆರೋಪಿಗಳ ಪೈಕಿ ಓರ್ವ ಆಟೋ ಚಾಲಕನಾಗಿದ್ದು, ಮತ್ತೋರ್ವ ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಲೂರು ಪೊಲೀಸ್ ಠಾಣೆಯ ಮುಂಭಾಗ ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ.
ನನ್ನನ್ನು ಕೊಲೆ ಮಾಡಲೆಂದೇ ಅನ್ಯಕೋಮಿನವರು ಬಂದಿದ್ದರು
ಕ್ಷುಲ್ಲಕ ಕಾರಣಕ್ಕೆ RSS ಮುಖಂಡನಿಗೆ ಚಾಕು ಇರಿದಿದ್ದ ಪ್ರಕರಣದಲ್ಲಿ ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಚಾಕು ಇರಿದಿದ್ದರು. ನನ್ನನ್ನು ಕೊಲೆ ಮಾಡಲೆಂದೇ ಅನ್ಯಕೋಮಿನವರು ಬಂದಿದ್ದರು. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು RSS ಮುಖಂಡ ರವಿ ಮಾಲೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾ ಎಸ್ಪಿ ಡಿ. ದೇವರಾಜ್ ಸ್ಥಳಕ್ಕೆ ದೌಡು
ಕೋಲಾರ ಆರ್.ಎಸ್.ಎಸ್. ಮುಖಂಡನಿಗೆ ಚಾಕು ಇರಿತ ವಿಚಾರ ಮಾಲೂರು ಪಟ್ಟಣದ ಉದ್ವಿಗ್ನವಾಗಿದ್ದು ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆ ಮುಖಂಡರು ಜಮಾಯಿಸಿದ್ದಾರೆ. ವಿಷಯ ತಿಳಿದು ಕೋಲಾರ ಜಿಲ್ಲಾ ಎಸ್ಪಿ ಡಿ. ದೇವರಾಜ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಸ್ಥಿತಿಉ ತಹಬಂದಿಗೆ ತರಲು ಹಿಂದೂ ಕಾರ್ಯಕರ್ತರನ್ನಪೊಲೀಸ್ ಠಾಣೆ ಆವರಣದಿಂದ ಹೊರ ಕಳುಹಿಸಲಾಗಿದ್ದು, ಹಿಂದೂ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಠಾಣೆ ಹೊರಗೆ ಜಮಾಯಿಸಿರುವ ಕಾರ್ಯಕರ್ತರನ್ನ ಪೊಲೀಸರು ಸಮಾಧಾನ ಪಡಿಸುತ್ತಿದ್ದಾರೆ.
ಕೋಲಾರದಲ್ಲಿ ಕ್ಷುಲ್ಲಕ ಕಾರಣಕ್ಕೆ RSSಪ್ರಮುಖನಿಗೆ ಚಾಕು ಇರಿತ
Published On - 4:40 pm, Sat, 6 August 22