Bengaluru – Mysuru Expressway: ಯಾರಿಗೋ ಹುಟ್ಟಿದ ಕೂಸನ್ನ ಹೆಚ್​ಡಿ ದೇವೇಗೌಡ ತಮ್ಮದೆನ್ನುತ್ತಿದ್ದಾರೆ -ಕೆಎಸ್​ ಈಶ್ವರಪ್ಪ ವಾಗ್ದಾಳಿ

ರಾಜ್ಯದಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್‌ ವಾರ್‌ ಮುಂದುವರೆದಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೆಎಸ್​ ಈಶ್ವರಪ್ಪ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Bengaluru - Mysuru Expressway: ಯಾರಿಗೋ ಹುಟ್ಟಿದ ಕೂಸನ್ನ ಹೆಚ್​ಡಿ ದೇವೇಗೌಡ ತಮ್ಮದೆನ್ನುತ್ತಿದ್ದಾರೆ -ಕೆಎಸ್​ ಈಶ್ವರಪ್ಪ ವಾಗ್ದಾಳಿ
ಹೆಚ್​ಡಿ ದೇವೇಗೌಡ, ಕೆಎಸ್​ ಈಶ್ವರಪ್ಪ
Follow us
ಆಯೇಷಾ ಬಾನು
|

Updated on:Mar 11, 2023 | 1:18 PM

ಮಡಿಕೇರಿ: ಬಿಜೆಪಿಯ ವಿಜಯ ಸಂಕಲ್ಪ‌ ಯಾತ್ರೆ(Vijaya Sankalpa Yatra) ಕೊಡಗು ಪ್ರವೇಶಿಸಿದ್ದು ಇಂದು(ಮಾರ್ಚ್ 11) ಮಡಿಕೇರಿ ನಗರದಲ್ಲಿ ‌ಮೆರವಣಿಗೆ ನಡೆಯಲಿದೆ. ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಮುಖಂಡರಾದ ಕೆಎಸ್ ಈಶ್ವರಪ್ಪ(KS Eshwarappa), ಡಿವಿ ಸದಾನಂದಗೌಡ(DV Sadananda Gowda) ಅವರು ಸಿದ್ದರಾಮಯ್ಯ(Siddaramaiah) ಮತ್ತು ಡಿಕೆ ಶಿವಕುಮಾರ್(DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು. ಯಾರಿಗೋ ಹುಟ್ಟಿದ ಕೂಸನ್ನ ಹೆಚ್​ಡಿ ದೇವೇಗೌಡ(HD DeveGowda) ತಮ್ಮದೆನ್ನುತ್ತಿದ್ದಾರೆ. ಮೊದಲು ಅವರು ಅವರ ಕೂಸು ಯಾವುದು ಎಂಬುದನ್ನ ಅರಿತುಕೊಳ್ಳಲಿ ಎಂದು ಟೀಕಿಸಿದ್ದಾರೆ. ಹಾಗೂ ಇದೇ ವೇಳೆ ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಈ ಬಾರಿ ಜನರು ನಮಗೆ ಪೂರ್ಣ‌ ಬಹುಮತ‌ ಕೊಡುವ ವಿಶ್ವಾಸವಿದೆ ಎಂದಿದ್ದಾರೆ.

ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್​ಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಪಕ್ಷದಲ್ಲಿ ಕಿತ್ತಾಟ ಹೆಚ್ಚಾಗಿದೆ. ಒಂದು ಕಡೆ ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿದ್ದ ದಿವಂಗತ ಆಸ್ಕರ್‌ ಫರ್ನಾಂಡಿಸ್‌ ಅವರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದರು. ಅಲ್ಲದೆ, ಮೈಸೂರು-ಬೆಂಗಳೂರು ಹೆದ್ದಾರಿಯನ್ನು 10 ಪಥಗಳಾಗಿ ವಿಸ್ತರಿಸುವ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದ್ದರು. ಹೀಗಾಗಿ ಇದರ ಕ್ರೆಡಿಟ್ ನಮಗೆ ಸಲ್ಲಬೇಕು ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ. ಮತ್ತೊಂದು ಕಡೆ ಈ ದಶಪಥವು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕನಸಿನ ಕೂಸು ಎಂದು ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಜೆಡಿಎಸ್ ಜಾಹೀರಾತು ನೀಡಿದೆ. ಹಾಗೂ ಈ ದಶಪಥದ ಕ್ರೆಡಿಟ್ ನರೇಂದ್ರ ಮೋದಿಗೆ ಸಲ್ಲಬೇಕು, ಬಿಜೆಪಿ ನಾಯಕರಿಗೆ ಸಲ್ಲಬೇಕು ಎಂಬ ಟ್ವೀಟ್​ಗಳು ಕೂಡ ಹರಿದಾಡುತ್ತಿವೆ. ಸದ್ಯ ರಾಜ್ಯದಲ್ಲಿ ಮೈಸೂರು-ಬೆಂಗಳೂರು ದಶಪಥ ರಸ್ತೆ ಕ್ರೆಡಿಟ್‌ ವಾರ್‌ ಮುಂದುವರೆದಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೆಎಸ್​ ಈಶ್ವರಪ್ಪ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Narendra Modi: ಮಾ.​12ರಂದು ರಾಜ್ಯಕ್ಕೆ ಮತ್ತೆ ಮೋದಿ: ಧಾರವಾಡ ಐಐಟಿ, ಮೈಸೂರು-ಬೆಂಗಳೂರು ಎಕ್ಸಪ್ರೆಸ್​​ ವೇ ಲೋಕಾರ್ಪಣೆ

ಸಿದ್ದರಾಮಯ್ಯ ವಿರುದ್ಧ ಕೆಎಸ್​ ಈಶ್ವರಪ್ಪ ವಾಗ್ದಾಳಿ

ಮನುವಾದಿಗಳು ಮತ್ತು ಪುರೋಹಿತಶಾಹಿಗಳು ಸಮಾಜಕ್ಕೆ‌ ಮಾರಕ ಎಂಬ ಸಿದ್ದರಾಮಯ್ಯ ಹೇಳಿಕೆ‌ ಖಂಡಿಸಿದ ಈಶ್ವರಪ್ಪ, ಸಿದ್ದರಾಮಯ್ಯ ನಂತಹ ದುಷ್ಟನನ್ನ ಎಲ್ಲಿಯೂ ನೋಡಿಲ್ಲ ಎಂದು ಹರಿಹಾಯ್ದರು. ಒಂದು ಸಮಯದಲ್ಲಿ ಸಿದ್ದರಾಮಯ್ಯ ಕುಂಕುಮ ಹಾಕುವವರನ್ನು ಕಂಡರೆ ಬೆಚ್ಚಿಬೀಳುತ್ತಿದ್ದರು. ಇದೀಗ ಅವರೇ ಹಣೆ ತುಂಬಾ ಕುಂಕುಮ‌ ಬಳಿದುಕೊಂಡು ಓಡಾಡುತ್ತಾರೆ ಎಂದು ಟೀಕಿಸಿದರು. ಕೊರಟಗೆರೆಯಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ, ಮುನಿರತ್ನರನ್ನು ಸೋಲಿಸಿದ್ದು ಸಿದ್ದರಾಮಯ್ಯ, ದಲಿತರಿಗೆ ಮೋಸಮಾಡಿದ್ದು ಸಿದ್ದರಾಮಯ್ಯ ಎಂದು ಪ್ರತಿಪಾದಿಸಿದರು.

ಹೆಚ್​ಡಿ ದೇವೇಗೌಡರಿಗೆ ಈಶ್ವರಪ್ಪ ಅಪಹಾಸ್ಯ

ಇದೇ ವೇಳೆ ಮೈಸೂರು-ಬೆಂಗಳೂರು ದಶಪಥ ಕಾಮಗಾರಿಯ ರೂವಾರಿ ದೇವೇಗೌಡ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇವೇಗೌಡ ಯಾರದ್ದೋ ಕೂಸನ್ನು ತಮ್ಮ‌ ಕೂಸೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅಪಹಾಸ್ಯ ಮಾಡಿದರು. ಮೊದಲು ದೇವೇಗೌಡರು ತಮ್ಮ‌ ಕೂಸು ಯಾವುದೆಂದು ಕಂಡುಕೊಳ್ಳಲಿ ಎಂದು ಸಲಹೆ ನೀಡಿದರು. ದಶಪಥ ಕಾಮಗಾರಿಗೆ ಹಣಹೂಡಿಕೆ ಮಾಡಿದ್ದು ಮೋದಿ ಸರ್ಕಾರ. ‌ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ.‌ ಆದರೆ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:21 am, Sat, 11 March 23