ಪ್ರೇಮಿಗಳ ದಿನದಿಂದೇ ಜಲಾಶಯಕ್ಕೆ ಹಾರಿ ಪ್ರಾಣಬಿಟ್ಟ ಜೋಡಿ!

ಕೊಡಗು: ಫೆಬ್ರವರಿ 14 ಅಂದ್ರೆ ಅದು ಪ್ರೇಮಿಗಳ ದಿನ. ಇಂದು ತಮ್ಮ ನಿವೇದನೆಯನ್ನ ಹಂಚಿಕೊಳ್ಳೋ ತವಕದಲ್ಲಿ ಪ್ರೇಮಿಗಳಿರ್ತಾರೆ. ಆದ್ರೆ, ಇದೇ ದಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ. ಹಾರಂಗಿ ಜಲಾಶಯಕ್ಕೆ ಹಾರಿ ಸಚಿನ್, ಸಿಂಧು ಸಾವನ್ನಪ್ಪಿದ್ದಾರೆ. ಹುಣಸೂರು ತಾಲೂಕಿನ ಯಮಗುಂಭ ಗ್ರಾಮದ ಸಿಂಧು, ಕೊತ್ತೆಗಾಲ ಗ್ರಾಮದ ಸಚ್ಚಿನ್ ಪಿಯುಸಿಯಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಸಿಂಧುಗೆ ಮನೆಯವರು ನೋಡಿದ ಹುಡುಗನೊಂದಿಗೆ ಫೆ.16ರಂದು ಮದುವೆ ನಿಶ್ಚಯವಾಗಿತ್ತು. ಪ್ರೇಮಿಗಳಿಬ್ಬರದ್ದೂ ಅನ್ಯ ಕೋಮಿನವರಾದ ಕಾರಣ ಪೋಷಕರ ವಿರೋಧವಿತ್ತು. ಹಾಗಾಗಿ […]

ಪ್ರೇಮಿಗಳ ದಿನದಿಂದೇ ಜಲಾಶಯಕ್ಕೆ ಹಾರಿ ಪ್ರಾಣಬಿಟ್ಟ ಜೋಡಿ!
Follow us
ಸಾಧು ಶ್ರೀನಾಥ್​
|

Updated on: Feb 14, 2020 | 6:52 PM

ಕೊಡಗು: ಫೆಬ್ರವರಿ 14 ಅಂದ್ರೆ ಅದು ಪ್ರೇಮಿಗಳ ದಿನ. ಇಂದು ತಮ್ಮ ನಿವೇದನೆಯನ್ನ ಹಂಚಿಕೊಳ್ಳೋ ತವಕದಲ್ಲಿ ಪ್ರೇಮಿಗಳಿರ್ತಾರೆ. ಆದ್ರೆ, ಇದೇ ದಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ. ಹಾರಂಗಿ ಜಲಾಶಯಕ್ಕೆ ಹಾರಿ ಸಚಿನ್, ಸಿಂಧು ಸಾವನ್ನಪ್ಪಿದ್ದಾರೆ.

ಹುಣಸೂರು ತಾಲೂಕಿನ ಯಮಗುಂಭ ಗ್ರಾಮದ ಸಿಂಧು, ಕೊತ್ತೆಗಾಲ ಗ್ರಾಮದ ಸಚ್ಚಿನ್ ಪಿಯುಸಿಯಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ, ಸಿಂಧುಗೆ ಮನೆಯವರು ನೋಡಿದ ಹುಡುಗನೊಂದಿಗೆ ಫೆ.16ರಂದು ಮದುವೆ ನಿಶ್ಚಯವಾಗಿತ್ತು. ಪ್ರೇಮಿಗಳಿಬ್ಬರದ್ದೂ ಅನ್ಯ ಕೋಮಿನವರಾದ ಕಾರಣ ಪೋಷಕರ ವಿರೋಧವಿತ್ತು.

ಹಾಗಾಗಿ ಇಂದು ಊರಿನಿಂದ ಬೈಕ್​ನಲ್ಲಿ ಬಂದಿದ್ದ ಪ್ರೇಮಿಗಳು, ಮನನೊಂದು ಹಾರಂಗಿ ಜಲಾಶಯಕ್ಕೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.