ಕೂಲಿ ಮಾಡಲು ಹೊರಟ ಮಹಿಳೆಯರಿಂದ ಗ್ರಾಮದ ಅಭಿವೃದ್ದಿ, ಬರಡು ಭೂಮಿಯಲ್ಲಿ ಭತ್ತದ ಬೆಳೆಯ ಕಮಾಲ್

ಗ್ರಾಮದ 35 ಜನ ಮಹಿಳೆಯರು ಸೇರಿ ತಮ್ಮದೇ ಆರೋಹಣ ಗ್ರಾಮೀಣಾಭಿವೃದ್ದಿ ಸಂಸ್ಥೆ ನಿರ್ಮಾಣ ಮಾಡಿಕೊಂಡರು. ಈ ಸಂಸ್ಥೆಯಡಿಯಲ್ಲಿ ಮಹಿಳೆಯರ ಆರೋಗ್ಯ, ಸ್ವಾವಲಂಭಿ ಬದುಕು, ಜೊತೆಗೆ ಪರಿಸರ ಮತ್ತು ಅಂತರ್ಜಲ ಅಭಿವೃದ್ದಿ ಅನ್ನೋ ಧ್ಯೇಯದೊಂದಿಗೆ ಕೆಲಸ ಶುರುಮಾಡಿದರು.

ಕೂಲಿ ಮಾಡಲು ಹೊರಟ ಮಹಿಳೆಯರಿಂದ ಗ್ರಾಮದ ಅಭಿವೃದ್ದಿ, ಬರಡು ಭೂಮಿಯಲ್ಲಿ ಭತ್ತದ ಬೆಳೆಯ ಕಮಾಲ್
ಕೂಲಿ ಮಾಡಲು ಹೊರಟ ಮಹಿಳೆಯರಿಂದ ಗ್ರಾಮದ ಅಭಿವೃದ್ದಿ, ಬರಡು ಭೂಮಿಯಲ್ಲಿ ಭತ್ತದ ಬೆಳೆಯ ಕಮಾಲ್
Follow us
TV9 Web
| Updated By: ಆಯೇಷಾ ಬಾನು

Updated on: Apr 15, 2022 | 3:22 PM

ಕೋಲಾರ: ಅವರೆಲ್ಲಾ ಗ್ರಾಮೀಣ ಭಾಗದಲ್ಲಿ ಕೂಲಿ ಮಾಡಿ ಬದುಕುವ ಮಹಿಳೆಯನ್ನು ಊರಿನ ಅಭಿವೃದ್ದಿ ಸಾದ್ಯ ಎಂದು ಕನಸಿನಲ್ಲೂ ಎಣಿಸಿರಲಿಲ್ಲ, ಆದರೆ ಮನಸ್ಸಿದ್ದರೆ ಮಾರ್ಗ ಅನ್ನೋ ನಿಟ್ಟಿನಲ್ಲಿ ಕೊರೊನಾ ಸಂದರ್ಭದಲ್ಲಿ ಮಾಡಿದ ಅದೊಂದು ದೃಢ ನಿರ್ಧಾರದಿಂದಾಗಿ ಇಂದು ಮಹಿಳೆಯರ ಸ್ವಾವಲಂಭಿ ಜೀವನದ ಜೊತೆಗೆ ತಮ್ಮೂರಿನ ಅಭಿವೃದ್ದಿಗೂ ಕೊಡುಗೆ ನೀಡುತ್ತಿದ್ದಾರೆ.

ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದುಕೊಂಡವರಿಂದ ಊರಿನ ಕೆರೆ ತುಂಬಿ ಹರಿಯುತ್ತಿದೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಪಿಚ್ಚಗುಂಟ್ಲಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ. ಈ ಗ್ರಾಮಗಳಲ್ಲಿ ಬಹುತೇಕ ಕೂಲಿ ಮಾಡುವ ಮಹಿಳೆಯರೇ ಹೆಚ್ಚು. ನಿತ್ಯ ಅಕ್ಕ ಪಕ್ಕದ ಗ್ರಾಮಗಳಿಗೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದರು ಆದರೆ ಕೊರೊನಾ ಸಂದರ್ಭದಲ್ಲಿ ಒಂದು ಗ್ರಾಮದ ಜನರನ್ನು ಇನ್ನೊಂದು ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಬಾರದಂತೆ ನಿರ್ಬಂಧ ಹಾಕಲಾಗಿತ್ತು. ಆ ವೇಳೆ ಕೂಲಿ ಮಾಡುವ ಮಹಿಳೆಯರಿಗೆ ಸಂಕಷ್ಟ ಎದುರಾಗಿತ್ತು, ಆಗ ಪಿಚ್ಚಗುಂಟ್ಲಹಳ್ಳಿ ಗ್ರಾಮದ 35 ಜನ ಮಹಿಳೆಯರು ಸೇರಿ ಆರೋಹಣ ಗ್ರಾಮೀಣಾಭಿವೃದ್ದಿ ಸಂಸ್ಥೆ ನಿರ್ಮಾಣ ಮಾಡಿಕೊಂಡು, ಮಹಿಳೆಯರ ಆರೋಗ್ಯ, ಮಹಿಳೆಯರ ಸ್ವಾವಲಂಭಿ ಬದುಕು ಹಾಗೂ ಪರಿಸರ ಸಂರಕ್ಷಣೆ, ಅಂತರ್ಜಲ ಅಭಿವೃದ್ದಿ ಅನ್ನೋ ಧ್ಯೇಯದೊಂದಿಗೆ ಸಂಸ್ಥೆ ಕಟ್ಟಿ ನಿಂತಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲೇ ಎದೆಗುಂದದೆ ಸಾಧನೆಗೆ ಮುನ್ನುಡಿ ಕೊರೊನಾ ಸಂದರ್ಭದಲ್ಲಿ ಅಕ್ಕ ಪಕ್ಕದ ಊರಿನಲ್ಲಿ ಕೂಲಿ ಕೆಲಸ ಸಿಗದೆ ಹೋದಾಗ ಪಿಚ್ಚಗುಂಟ್ಲಹಳ್ಳಿ ಗ್ರಾಮದ 35 ಜನ ಮಹಿಳೆಯರು ಸೇರಿ ತಮ್ಮದೇ ಆರೋಹಣ ಗ್ರಾಮೀಣಾಭಿವೃದ್ದಿ ಸಂಸ್ಥೆ ನಿರ್ಮಾಣ ಮಾಡಿಕೊಂಡರು. ಈ ಸಂಸ್ಥೆಯಡಿಯಲ್ಲಿ ಮಹಿಳೆಯರ ಆರೋಗ್ಯ, ಸ್ವಾವಲಂಭಿ ಬದುಕು, ಜೊತೆಗೆ ಪರಿಸರ ಮತ್ತು ಅಂತರ್ಜಲ ಅಭಿವೃದ್ದಿ ಅನ್ನೋ ಧ್ಯೇಯದೊಂದಿಗೆ ಕೆಲಸ ಶುರುಮಾಡಿದರು. ಈ ವೇಳೆ ಇವರ ಬೆನ್ನೆಲುಬಿಗೆ ನಿಂತಿದ್ದು ಬೆಂಗಳೂರಿನ ಇಂಡಿಯಾ ಕೇರ್ ಪೌಂಡೇಶನ್, ರೋಟರಿ ಸೇರಿದಂತೆ ಕೆಲವು ಸಂಘ ಸಂಸ್ಥೆಗಳ ನೆರವಿನಿಂದ ತಮ್ಮ ಗ್ರಾಮದಲ್ಲೇ ಅಂತರ್ಜಲ ಅಭಿವೃದ್ದಿಗೆ ಬೇಕಾದ ಕೆಲಸ ಕಾರ್ಯಗಳನ್ನು ಮಾಡಲು ಮುಂದಾದರೂ.

ಗ್ರಾಮದಲ್ಲೇ ಕೂಲಿ ಕೆಲಸ ಮಹಿಳೆಯರ ಜೊತೆಗೆ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ದಿಯ ಕಾಯಕ ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಕೆಲಸವೂ ಬೇಕು, ಕೆಲಸ ಮಾಡಿದರೆ ಸಂಸ್ಥೆಯ ಧ್ಯೇಯವೂ ಈಡೇರಬೇಕು ಎಂದುಕೊಂಡು ಮಹಿಳೆಯರು ಪಿಚ್ಚಗುಂಟ್ಲಹಳ್ಳಿ ಹಾಗೂ ಹೊಸಕರೆಯ ಗ್ರಾಮದ ಕೆರೆ ಹೂಳು ತೆಗೆದು ಪೊಷಕ ಕಾಲುವೆಗಳನ್ನು ಅಭಿವೃದ್ದಿ ಪಡಿಸಿದ್ದರು. ಕೆರೆಯ ಪೋಷಕ ಕಾಲುವೆ ಗಳನ್ನು ಸರಿಪಡಿಸುವುದು, ಕೆರೆಯ ಪೂರಕ ಕಾಲುವೆ ಕೆರೆಯ ಹೂಳು ತೆಗೆಯುವ ಕೆಲಸ ಆರಂಭಿಸಿದರು, ಇದರಿಂದ ಗ್ರಾಮದ ಅಭಿವೃದ್ದಿಯ ಜೊತೆಗೆ ಮಹಿಳೆಯರಿಗೂ ತಮ್ಮೂರಿನಲ್ಲೇ ಕೂಲಿ ಕೆಲಸ ಸಿಗುವಂತಾಯಿತು ಎನ್ನುತ್ತಾರೆ ಆರೋಹಣ ಸಂಸ್ಥೆಯ ಮುಖ್ಯಸ್ಥೆ ಆಶಾ ಅವರು.

ಮಹಿಳೆಯರಿಗೆ ಕೂಲಿಯಷ್ಟೇ ಅಲ್ಲಾ ಅಪಾರ ಗೌರವವೂ ಸಿಕ್ಕಿತ್ತು ಕೊರೊನಾ ಸಂದರ್ಭದಲ್ಲಿ ಮಹಿಳೆಯರಿಗೆ ಕೂಲಿ ಕೆಲಸ ಸಿಕ್ಕಿತ್ತು ಅನ್ನೋದು ಆಕ್ಷಣಕ್ಕೆ ಸಿಕ್ಕ ನೆಮ್ಮದಿಯ ವಿಚಾರ ಆದರೂ ಇದಾದ ನಂತರ ಮಹಿಳೆಯರಿಂದ ಮಾಡಲಾದ ಅಂತರ್ಜಲ ಅಭಿವೃದ್ದಿ ಕೆಲಸಗಳಿಂದ ಗ್ರಾಮದ ಮಹಿಳೆಯರು ನಿರೀಕ್ಷೆ ಮಾಡದ ರೀತಿಯಲ್ಲಿ ಪ್ರತಿಫಲ ಸಿಕ್ಕಿತ್ತು. ಆರೋಹಣ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪರಿಸರ ರಕ್ಷಣೆ ಮತ್ತು ಅಂತರ್ಜಲ ಅಭಿವೃದ್ದಿ ಜೊತೆಗೆ ಮಹಿಳೆಯರ ಸ್ವಾವಲಂಭಿ ಬದುಕು ಅನ್ನೋ ಎರಡೂ ಧ್ಯೇಯ ಈಡೇರಿತ್ತು, ಇದರ ಜೊತೆಗೆ ಮತ್ತೊಂದು ಸಾಧನೆ ಎಂದರೆ ಈ ಮಹಿಳೆಯರು ಮಾಡಿದ ಕೆರೆ ಅಭಿವೃದ್ದಿಯಿಂದ ಕಳೆದ ವರ್ಷ ಸುರಿದ ಮಳೆಯಿಂದ ಹೆಚ್ಚಿನ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ದಿಯಾಗಿತ್ತು.

Rural Women group start up 1 ಅಂತರ್ಜಲ ಅಭಿವೃದ್ದಿಯೂ ಆಗಿತ್ತು ಒಣಗಿದ್ದ ಭತ್ತದ ಗದ್ದೆಯೂ ಹಸಿರಾಗಿತ್ತು ಯಾವಾಗ ಕೆರೆಯಲ್ಲಿ ಹೆಚ್ಚಾಗಿ ನೀರು ನಿಲ್ಲೋದಕ್ಕೆ ಆರಂಭವಾಗಿತ್ತೋ ಗ್ರಾಮದ ಸುತ್ತ ಮುತ್ತ ಅಂತರ್ಜಲ ಅಭಿವೃದ್ದಿ ಜೊತೆಗೆ ಕೆರೆಯ ಸುತ್ತಮುತ್ತಲಿದ್ದ ಸುಮಾರು 75 ಎಕರೆ ಪ್ರದೇಶದಲ್ಲಿ ಹಲವು ವರ್ಷಗಳ ನಂತರ ಭತ್ತ ಬೆಳೆಯುವ ವಾತಾವರಣ ನಿರ್ಮಾಣವಾಗಿತ್ತು. ಪರಿಣಾಮ ಪಿಚ್ಚಗುಂಟ್ಲಹಳ್ಳಿ ಹಾಗೂ ಹೊಸಕರೆ ಗ್ರಾಮಗಳ ರೈತರು ಈಗಾಗಲೇ ಎರಡು ಭತ್ತದ ಬೆಳೆ ಬೆಳೆದಿದ್ದು ಈಗ ಮೂರನೇ ಬೆಳೆ ಬೆಳೆಯಲು ಆರಂಭಿಸಿದ್ದಾರೆ, ಈಗಲೂ ಕೆರೆಯಲ್ಲಿ ನೀರಿದ್ದು ಬೇಸಿಗೆಯಲ್ಲಿ ಬೆಳೆ ಬೆಳೆಯುವ ಜೊತೆಗೆ ಜನ ಜಾನುವಾರುಗಳು ಪ್ರಾಣಿ ಪಕ್ಷಿಗಳಿಗೆ ನೀರು ಸಿಗುತ್ತಿದೆ ಇದರಿಂದ ಮಹಿಳೆಯರಿಗೂ ತಮ್ಮ ಸ್ವಾವಲಂಭಿ ಬದುಕಿನ ಜೊತೆಗೆ ನಮ್ಮ ಗ್ರಾಮದ ಅಭಿವೃದ್ದಿಗೆ ಶ್ರಮಿಸಿದೆವು ಅನ್ನೋ ತೃಪ್ತಿ ಎನ್ನುತ್ತಾರೆ ಗ್ರಾಮದ ಮಹಿಳೆ ಲಲಿತಾ.

ಒಟ್ಟಾರೆ ನಾವು ಹಳ್ಳಿಯ ಜನ ಬದುಕು ಮಾಡೋದೆ ಕಷ್ಟ ಎನ್ನುತ್ತಾ ನಮ್ಮ ಕೈಯಲ್ಲಿ ಏನೂ ಮಾಡೋದಕ್ಕೆ ಆಗೋದಿಲ್ಲ ಎಂದು ಕೈಕಟ್ಟಿ ಕೂರದ ಮಹಿಳೆಯರು ಒಗ್ಗಟ್ಟಾಗಿ ಮಾಡಿದ ಕೆಲಸ ತಮ್ಮ ಸ್ವಾವಲಂಭಿ ಬದುಕಿನ ಜೊತೆಗೆ ನಿರೀಕ್ಷೆಗೂ ಮೀರಿದ ಗ್ರಾಮದ ಅಭಿವೃದ್ದಿ ಮಾಡಿರೋದು ಮಹಿಳೆಯರ ಶಕ್ತಿಗೆ ಸರಿಸಾಟಿ ಇಲ್ಲಾ ಅನ್ನೋದು ಸಾಬೀತಾಗಿದೆ.

ವರದಿ: ರಾಜೇಂದ್ರ ಸಿಂಹ, ಟಿವಿ9 ಕನ್ನಡ ಕೋಲಾರ

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದವರು ಹಾಸಿಗೆ, ದಿಂಬು ಕೊಡುವಲ್ಲಿಯೂ ಭ್ರಷ್ಟಾಚಾರ ಮಾಡಿದ್ದಾರೆ: ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ