ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ – ಕೊಪ್ಪಳ ಗವಿ ಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತ ಕೆರಯೋದೇಕೆ ಗೊತ್ತಾ?

ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಾರಣಾಸಿಯಿಂದ ಬಂದ ಶ್ರೀ ರುದ್ರಮುನಿ ಶಿವಯೋಗಿಗಳು ಮಠವನ್ನು ಸ್ಥಾಪಿಸಿದ ಮೂಲ ಗುರುಗಳಾಗಿದ್ದಾರೆ. ರುದ್ರಮುನಿ ಶಿವಯೋಗಿಗಳಿಂದ ಆರಂಭವಾದ ಮಠದ ಪರಂಪರೆಯಲ್ಲಿ ಇದೀಗ ಹದಿನೆಂಟನೇ ಪೀಠಾಧಿಪತಿಯಾಗಿರೋದು ಸದ್ಯ ಇರುವ ಅಭಿವನ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಯವರು.

ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ - ಕೊಪ್ಪಳ ಗವಿ ಮಠದ ಜಾತ್ರೆಯನ್ನು  ದಕ್ಷಿಣದ ಕುಂಭಮೇಳ ಅಂತ ಕೆರಯೋದೇಕೆ ಗೊತ್ತಾ?
ಕೊಪ್ಪಳ ಗವಿ ಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತ ಕೆರಯೋದೇಕೆ ಗೊತ್ತಾ?
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on: Jan 27, 2024 | 4:19 PM

ರಾಜ್ಯದಲ್ಲಿ ಅನೇಕ ಮಠ ಮಂದಿರಗಳಿದ್ದು, ಧರ್ಮ ರಕ್ಷಣೆ, ಶಿಕ್ಷಣ, ಸಾಹಿತ್ಯ ಸೇರಿದಂತೆ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸಗಳನ್ನು ಮಾಡುತ್ತಾ ಬಂದಿವೆ. ರಾಜ್ಯದ ಶ್ರಯೋಭಿವೃದ್ದಿಯಲ್ಲಿ ಮಠಗಳ ಪಾತ್ರ ಕೂಡಾ ದೊಡ್ಡದಿದೆ. ಆದ್ರೆ ಇತ್ತೀಚೆಗೆ ಕೆಲ ಮಠಗಳು ಕೆಟ್ಟ ಘಟನೆಗಳಿಂದ ಸುದ್ದಿಯಾಗುತ್ತಿದ್ದರೆ, ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಮಠವೊಂದು ಕಳೆದ ಕೆಲ ವರ್ಷಗಳಿಂದ,ಹೊಸ ಹೊಸ ವಿಚಾರ, ಆಚಾರಗಳ ಮೂಲಕ ರಾಜ್ಯವಲ್ಲದೇ ದೇಶಾದ್ಯಂತ ಸುದ್ದಿಯಾಗುತ್ತಿದೆ. ಆ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಅಂತಲೇ ಪ್ರಸಿದ್ದಿಯಾಗಿದೆ. ಬನ್ನಿ ಹಾಗಾದ್ರೆ ಆ ಮಠ ಯಾವುದು, ಆ ಮಠದ ವಿಶೇಷಗಳೇನು, ಆ ಮಠಕ್ಕಿರುವ ಐತಿಹಾಸಿಕ ಹಿನ್ನೆಲೆಯ ಪರಿಚಯ ಇಲ್ಲಿದೆ.

ರಾಜ್ಯದಲ್ಲಿ ಗುರು ವಿರಕ್ತ ಪರಂಪರೆ ಸೇರಿದಂತೆ ಅನೇಕ ಪರಂಪರೆಗಳನ್ನು ಹೊಂದಿರುವ ನೂರಾರು ಮಠಗಳಿವೆ. ಪ್ರತಿಯೊಂದು ಮಠಗಳು ಕೂಡಾ ತಮ್ಮದೆ ಆದ ಚೌಕಟ್ಟಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ. ರಾಜ್ಯದಲ್ಲಿ ಶಿಕ್ಷಣದ ಬೆಳವಣಿಗೆ, ಸಾಹಿತ್ಯ, ಸಂಗೀತ,ಕ್ರೀಡೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ಕೆಲಸಗಳನ್ನು ಮಠಮಾನ್ಯಗಳು ಮಾಡುತ್ತಲೇ ಇವೆ. ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹ ಮಾಡುವ ಮೂಲಕ ಸಾವಿರಾರು ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದು ಇದೇ ಮಠಗಳು ಅನ್ನೋದು ಕೂಡಾ ವಿಶೇಷವಾಗಿದೆ.

ತುಮಕೂರಿನಲ್ಲಿ ಸಿದ್ದಗಂಗಾ ಮಠ, ದಾಸೋಹ ಸೇರಿದಂತೆ ಶಿಕ್ಷಣದ ಮೂಲಕ ದೊಡ್ಡ ಹೆಸರು ಮಾಡಿದ್ದರೆ, ಇತ್ತ ಉತ್ತರ ಕರ್ನಾಟಕ ಬಾಗದಲ್ಲಿ ಅಂತಹದೊಂದು ಕೆಲಸವನ್ನು ಮಾಡುತ್ತಿರುವದು ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಮತ್ತು ಐತಿಹಾಸಿಕ ಗವಿಮಠ. ಸದ್ಯ ಕೊಪ್ಪಳದ ಗವಿಮಠ, ರಾಜ್ಯದ ಸುಪ್ರಸಿದ್ದ ಮಠಗಳ ಸಾಲಿನಲ್ಲಿದ್ದು, ಅನೇಕ ಜನಪರ ಕೆಲಸಗಳ ಮೂಲಕ ಮತ್ತು ವಿಶಿಷ್ಟವಾಗಿ ನಡೆಸುವ ಜಾತ್ರೆಯ ಮೂಲಕ ಜನಮಾನಸದಲ್ಲಿದೆ. ಅದರಲ್ಲೂ ಸದ್ಯದ ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶಿಕ್ಷಣ ದಾಸೋಹ, ಅನ್ನ ದಾಸೋಹ ಸೇರಿದಂತೆ ಜನರ ಬಾಳಿಗೆ ಬೆಳಕಾಗುವ, ಅವರ ಸಮಸ್ಯೆಗಳಿಗೆ ಪರಿಹಾರಾತ್ಮಕ ಕೆಲಸಗಳ ಮೂಲಕ, ಸರ್ವಧರ್ಮಗಳ ನಡುವೆ ಸಮನ್ವಯತೆಯನ್ನು ಮೂಡಿಸುವ ಕೆಲಸಗಳ ಮೂಲಕ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾರೆ.

Also Read: ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಭಕ್ತರಿಗೆ ಭೂರಿ ಭೋಜನ -ದಾಸೋಹಕ್ಕೆ ಲಕ್ಷ ಲಕ್ಷ ಹೋಳಿಗೆ, ರೊಟ್ಟಿ ನೀಡಿದ ಭಕ್ತರು

ಮಠದ ಐತಿಹಾಸಿಕ ಹಿನ್ನೆಲೆ

ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಾರಣಾಸಿಯಿಂದ ಬಂದ ಶ್ರೀ ರುದ್ರಮುನಿ ಶಿವಯೋಗಿಗಳು ಮಠವನ್ನು ಸ್ಥಾಪಿಸಿದ ಮೂಲ ಗುರುಗಳಾಗಿದ್ದಾರೆ. ರುದ್ರಮುನಿ ಶಿವಯೋಗಿಗಳಿಂದ ಆರಂಭವಾದ ಮಠದ ಪರಂಪರೆಯಲ್ಲಿ ಇದೀಗ ಹದಿನೆಂಟನೇ ಪೀಠಾಧಿಪತಿಯಾಗಿರೋದು ಸದ್ಯ ಇರುವ ಅಭಿವನ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಯವರು. ಇನ್ನು ಕೊಪ್ಪಳದ ಗವಿಮಠದ ಪ್ರಮುಖ ಆರಾಧ್ಯಕೇಂದ್ರ ಗವಿಸಿದ್ದೇಶ್ವರ ಕರ್ತೃ ಗದ್ದುಗೆ. ಇದು ಮಠದ ಹನ್ನೊಂದಡೆ ಪೀಠಾಧಿಪಾತಿಯಾಗಿದ್ದ ಗವಿಸಿದ್ದೇಶ್ವರ ಸ್ವಾಮೀಜಿಯವರ ಕ್ರಿಯಾಸಮಾದಿಯಾಗಿದೆ. ಇದೇ ಕರ್ತೃ ಗುದ್ದುಗೆ ಭಕ್ತರ ಆರಾಧನೆಯ ಕೇಂದ್ರವಾಗಿದೆ.

ಗವಿಸಿದ್ದೇಶ್ವರ ಶ್ರೀಗಳ ಗುರುಗಳಾಗಿದ್ದ ಹತ್ತನೇ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ, ತಾವು ಲಿಂಗೈಕ್ಯರಾಗಲು ಮಠದಲ್ಲಿ ನಿರ್ಮಿಸಿಕೊಂಡಿದ್ದ ಕ್ರಿಯಾಸಮಾದಿಯನ್ನು ತಾವೇ ಜೀವಂತ ಪ್ರವೇಶಿಸಿದ್ದ ಹನ್ನೊಂದನೆ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ, ಗುರುಗಳ ಬದಲಿಗೆ ತಾವೇ ಕ್ರಿಯಾ ಸಮಾದಧಿಯನ್ನು ಪ್ರವೇಶಿಸಿ, ಲಿಂಗ ಪೂಜೆ ಮಾಡುತ್ತಾ ಜೀವಂತ ಸಮಾದಿಯಾಗಿದ್ದಾರಂತೆ. ಹೀಗಾಗಿ ಅವರನ್ನು ಈ ಬಾಗದಲ್ಲಿ ದೇವರ ಸ್ವರೂಪದಲ್ಲಿ ಭಕ್ತರು ಕಾಣುತ್ತಾರೆ. ಗವಿಸಿದ್ದೇಶ್ವರ ಸ್ವಾಮೀಜಿಯ ಗದ್ದುಗೆ ದರ್ಶನದಿಂದ ಜೀವನದ ಸಂಕಷ್ಟಗಳೆಲ್ಲಾ ದೂರವಾಗುತ್ತೆವ ಅನ್ನೋ ನಂಬಿಕೆ ಗವಿಮಠದ ಭಕ್ತರಲ್ಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರು ಗವಿಸಿದ್ದೇಶ್ವರ ಶ್ರೀಗಳ ಗದುಗೆಯ ದರ್ಶನ ಪೆಡದು ಪುನಿತರಾಗುತ್ತಾರೆ.

ಮಠದ ಕೀರ್ತಿಯನ್ನು ಪ್ರಕಾಶಮಾನಗೊಳಿಸಿದ್ದು ಅಭಿನವ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ

ಇನ್ನು ಅನೇಕ ವರ್ಷಗಳ ಇತಿಹಾಸ ಹೊಂದಿರುವ ಮಠ ಕಳೆದ ಕೆಲ ವರ್ಷಗಳಿಂದ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಸದ್ಯದ 18ನೇ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು. ಹೌದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಹೊಸ ಹೊಸ ಯೋಜನೆ,ಯೋಚನೆಗಳ ಮೂಲಕ ಮಠದ ಹೆಸರನ್ನು ಉಚ್ಛ್ರಾಯ ಸ್ಥಿತಿಗೆ ತಗೆದುಕೊಂಡು ಹೋಗುತ್ತಿದ್ದಾರೆ. ಮಠದ ಅಭಿವೃದ್ದಿಯ ಜೊತೆಗೆ ಮಠದ ಭಕ್ತರ ಶ್ರಯೋಭಿವೃದ್ದಿಗಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸ್ವಾಮೀಜಿಯವರ ಪ್ರವಚನಗಳನ್ನು ಕೇಳಲು ಲಕ್ಷಾಂತರ ಸೇರುತ್ತಾರೆ. ಮಠದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣೀಭೂತರಾಗಿರುವ ಸ್ವಾಮೀಜಿ, ತಮ್ಮ ಕಾಯಕ ಮತ್ತು ನಡೆ ನುಡಿಗಳಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾರೆ.

ದಕ್ಷಿಣದ ಕುಂಭಮೇಳ ಕೊಪ್ಪಳದ ಗವಿಮಠದ ಜಾತ್ರೆ

ಇನ್ನು ಪ್ರತಿವರ್ಷ ಮಠದ ಹನ್ನೊಂದನೆ ಪೀಠಾಧಿಪತಿಯಾಗಿರುವ ಗವಿಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣಾರ್ಥ ಜಾತ್ರೆ ನಡೆಯುತ್ತದೆ. ಈ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತಲೆ ಕರೆಯಲಾಗುತ್ತದೆ. ಯಾಕಂದ್ರೆ ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಈ ವರ್ಷ ಕೂಡಾ ಜನವರಿ 27 ರಂದು ಮಠದ ಆವರಣದಲ್ಲಿ ರಥೋತ್ಸವ ನಡೆಯಲಿದೆ. ಜನವರಿ 27 ರಿಂದ ಮೂರು ದಿನಗಳ ಕಾಲ ಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದ್ರೆ ಒಂದು ತಿಂಗಳ ಕೂಡಾ ಜಾತ್ರೆ ನಡೆಯುತ್ತದೆ. ಜಾತ್ರೆಯ ಅಂಗವಾಗಿ ತೆಪ್ಪೋತ್ಸವ, ಗಂಗಾರತಿ ಕಾರ್ಯಕ್ರಮಗಳು ಕೂಡಾ ನಡೆಯುತ್ತವೆ.

ಜಾತ್ರೆಗೆ ರಾಜ್ಯವಲ್ಲದೇ ಸುತ್ತಮುತ್ತಲಿನ ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು, ಜಾತ್ರೆಗೆ ಬರುವುದ ವಿಶೇಷ. ಇನ್ನು ಗವಿಮಠದ ಜಾತ್ರೆ ದಾಸೋಹದಿಂದ ಕೂಡಾ ಹೆಚ್ಚು ಸುದ್ದಿಯಲ್ಲಿದೆ. ಈ ಜಾತ್ರೆಗೆ ನಾಡಿನ ಅನೇಕ ಭಕ್ತರು ಸ್ವಯಂಪ್ರೇರಣೆಯಿಂದ ಲಕ್ಷ ಲಕ್ಷ ಹೋಳಿಗೆ, ಮಾದಲಿ, ರೊಟ್ಟಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ತಂದು ಕೊಡ್ತಾರೆ. ಲಕ್ಷಾಂತರ ಭಕ್ತರು, ಭಕ್ಷ್ಯ ಬೋಜನಗಳನ್ನು ಜಾತ್ರೆಯ ಸಮಯದಲ್ಲಿ ಸವಿಯುತ್ತಾರೆ. ಜಾತ್ರೆಯ ಮಾರನೆ ದಿನ ನಡೆಯುವ ಮಿರ್ಚಿ ಜಾತ್ರೆಯಲ್ಲಿ ಕೂಡಾ ಲಕ್ಷಾಂತರ ಜನರಿಗೆ ಮಿರ್ಚಿ ನೀಡಲಾಗುತ್ತದೆ. ರಥೋತ್ಸವದ ದಿನವೇ ಸರಿಸುಮಾರು ಆರರಿಂದ ಎಂಟು ಲಕ್ಷ ಜನ ಸೇರುವದರಿಂದ, ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತ ಕರೆಯಲಾಗುತ್ತದೆ.

ಇನ್ನು ಜಾತ್ರೆ ಅಂದ್ರೆ ರಥೋತ್ಸವ, ಸಂಭ್ರಮ ಮಾತ್ರವಲ್ಲಾ. ಅನೇಕ ವೈಚಾರಿಕ ಕೆಲಸಗಳಿಗೆ, ಜಾಗೃತಿಯ ಕಾರ್ಯಕ್ರಮಗಳಿಗೆ ಕೂಡಾ ಸಾಕ್ಷಿಯಾಗುತ್ತಿರುವದು ಕೊಪ್ಪಳ ಗವಿಮಠ ಜಾತ್ರೆಯ ವಿಶೇಷವಾಗಿದೆ. ಜನ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಈ ಬಾರಿ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಭಿಯಾಗಿರುವ ನೂರಾರು ಜನರ ಬದುಕಿನ ಕಥೆಗಳನ್ನು ತೋರಿಸುವ ಕೆಲಸಕ್ಕೆ ಸ್ವಾಮೀಜಿ ಮುಂದಾಗಿದ್ದಾರೆ. ಈ ಹಿಂದೆ ಕೂಡಾ ಅಭಿವನ ಗವಿಸಿದ್ದೇಶ್ವರ ಸ್ವಾಮೀಜಿ, ಬಾಲ್ಯ ವಿವಾಹ, ಜಲ ಸಂರಕ್ಷಣೆ, ರಕ್ತಧಾನ, ಲಕ್ಷ ವೃಕ್ಷೋತ್ಸವದ ಅನೇಕ ಜಾಥಾಗಳನ್ನು ಮಾಡಿ, ಅರಿವು, ಆರೋಗ್ಯ, ಶಿಕ್ಷಣದ ಬೆಳವಣಿಗೆ ಮಾಡುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಅಂತಾರೆ ಮಠದ ಭಕ್ತ ನೂರಂದಯ್ಯ ಕಂಬಾಳಿಮಠ, ಮಠದ ಭಕ್ತ

ಕೊಪ್ಪಳದ ಗವಿಮಠ ಇದೀಗ ದೇಶದ ಸುಪ್ರಸಿದ್ದ ಮಠಗಳಲ್ಲಿ ಒಂದು ಅನ್ನೋ ಹೆಸರನ್ನು ಪಡೆದಿದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ದಿ ಪಡೆದಿದ್ದು ಲಕ್ಷಾಂತರ ಭಕ್ತರು ಜಾತ್ರೆಗೆ ಬರುವುದು ವಿಶೇಷವಾಗಿದೆ. ಸದ್ಯದ ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ದಾಸೋಹದ ಜೊತೆಗೆ ವೈಚಾರಿಕ ಅರಿವು, ಸಮಾಜ ಸುಧಾರಣೆಯ ಕೆಲಸವನ್ನು ಮಾಡುತ್ತಾ, ಧಾರ್ಮಿಕ ಸುಧಾರಕರಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ.

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್