Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?

ಅದು ಕೊಪ್ಪಳದ ಸುಪ್ರಸಿದ್ದ ರಾಘವೇಂದ್ರ ಸ್ವಾಮಿ ಮಠ. ಆದರೆ ಈ ಮಠಕ್ಕೆ ಮುಂಜಾನೆಯೇ ನೂರಾರು ಭಕ್ತರ ಆಗಮನವಾಗಿತ್ತು. ಕೇವಲ ಭಕ್ತರು ಮಾತ್ರವಲ್ಲ, ಪೊಲೀಸರು ಕೂಡ ಎಂಟ್ರಿಯಾಗಿದ್ದರು. ಮಠದ ಮುಂಭಾಗದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಇದಕ್ಕೆಲ್ಲಾ ಮಠದ ಆಡಳಿತ ವಿವಾದ ಕಾರಣವಾಗಿದೆ.

ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?
ರಾತೋರಾತ್ರಿ ಮುನ್ನಲೆಗೆ ಬಂದ ಕೊಪ್ಪಳ ರಾಘವೇಂದ್ರಸ್ವಾಮಿ ಮಠದ ವಿವಾದ: ಏನದು?
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 27, 2025 | 12:44 PM

ಕೊಪ್ಪಳ, ಮಾರ್ಚ್​ 27: ಅದು ಕೊಪ್ಪಳ (koppal) ನಗರದಲ್ಲಿರುವ ರಾಘವೇಂದ್ರಸ್ವಾಮಿ ಮಠ (raghavendra swamy mutt). ಇಷ್ಟು ದಿನಗಳ ಕಾಲ ಮಠವನ್ನು ಸ್ಥಳೀಯರೇ ನೋಡಿಕೊಂಡು ಹೋಗುತ್ತಿದ್ದರು. ಆದರೆ ಕಳೆದ ರಾತ್ರಿ ಮಠದ ಆಡಳಿತ ವಿಚಾರವಾಗಿ ದಿಢೀರನೆ ವಿವಾದ ಬುಗಿಲೆದ್ದಿದೆ. ಮಂತ್ರಾಲಯ ಮಠದ ಸ್ವಾಮೀಜಿ ಮತ್ತು ಕೆಲ ಸ್ಥಳೀಯ ಭಕ್ತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ ಇಂದು ಮಠದಲ್ಲಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಇನ್ನೊಂದಡೆ ಮಠಕ್ಕೆ ಬಂದರೂ ಒಳಗೆ ಹೋಗದೆ ಮಂತ್ರಾಲಯ ಮಠದ ಸ್ವಾಮೀಜಿ ಮರಳಿ ಹೋಗಿದ್ದಾರೆ.

ಮಠದ ಚುಕ್ಕಾಣಿ ವಿಚಾರದಲ್ಲಿ ಭಿನ್ನಾಭಿಪ್ರಾಯ

ಕೊಪ್ಪಳ ನಗರದ ಗದಗ ರಸ್ತೆಯಲ್ಲಿ ರಾಘವೇಂದ್ರಸ್ವಾಮಿ ಮಠವಿದೆ. ಆದರೆ ಈ ಮಠದ ಆಡಳಿತವನ್ನು ಯಾರು ನಡೆಸಬೇಕು ಅನ್ನೋ ವಿವಾದ ಕಳೆದ ರಾತ್ರಿ ದಿಢೀರನೆ ಮುನ್ನಲೆಗೆ ಬಂದಿದೆ. ಮಾರ್ಚ್ 26 ಮತ್ತು 27 ರಂದು ರಾಘವೇಂದ್ರ ಸ್ವಾಮಿ ಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಮಂತ್ರಾಲಯದಿಂದ ಸುಭುದೇಂದ್ರತೀರ್ಥ ಸ್ವಾಮೀಜಿ, ಮಾರ್ಚ್ 26 ರಂದು ರಾತ್ರಿ ಮಠಕ್ಕೆ ಆಗಮಿಸಿದ್ದರು. ಮಠದಲ್ಲಿ ಸ್ವಾಮೀಜಿ ಆಶಿರ್ವಚನ, ದರ್ಶನ ಕೂಡ ನೀಡಿದ್ದರು. ನಂತರ ಮಠದ ಆಡಳಿತ ವಿಚಾರದ ಬಗ್ಗೆ ಭಕ್ತರು ಸ್ವಾಮೀಜಿ ಜೊತೆ ಚರ್ಚೆ ನೆಡೆಸಿದ್ದರು.

ಇದನ್ನೂ ಓದಿ: ಫ್ಯಾಕ್ಟರಿ ಬೇಡ: ಗವಿಶ್ರೀ ಭಾಗವಹಿಸಿದ್ದ ಕೊಪ್ಪಳ ಬಂದ್ ಹೇಗಿತ್ತು ನೋಡಿ

ಇದನ್ನೂ ಓದಿ
Image
ಆಯಸ್ಸು ಮುಗಿದರೂ ಬದಲಾಗದ ತುಂಗಭದ್ರಾ ಡ್ಯಾಂ ಕ್ರೆಸ್ಟ್​ಗೇಟ್​ಗಳು!
Image
ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ
Image
ಫ್ಯಾಕ್ಟರಿ ಬೇಡ: ಗವಿಶ್ರೀ ಭಾಗವಹಿಸಿದ್ದ ಕೊಪ್ಪಳ ಬಂದ್ ಹೇಗಿತ್ತು ನೋಡಿ
Image
ಕೊಪ್ಪಳ: ಕಾರ್ಖಾನೆ ಆರಂಭಕ್ಕೆ ವಿರೋಧ, ದುಸ್ಥಿತಿ ಕಂಡು ಗವಿಶ್ರೀ ಕಣ್ಣೀರು

ಈ ಹಿಂದೆ ಹುಲಗಿ ರಂಗನಾಥ ಆಚಾರ್ ಮಠದ ಅಧ್ಯಕ್ಷರಾಗಿದ್ದರು. ಆದರೆ ಅವರ ನಿಧನದ ನಂತರ ಮಠದ ಆಡಳಿತ ನೋಡಿಕೊಂಡು ಹೋಗುವ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಸಮಯದಲ್ಲಿ 1971 ರಲ್ಲಿ ಈ ಮಠವನ್ನು ಮಂತ್ರಾಲಯ ಮಠದ ಸುಪರ್ದಿಗೆ ನೀಡಲಾಗಿದೆ. ಅಂದಿನ ಭಕ್ತರು ಮತ್ತು ಪದಾಧಿಕಾರಿಗಳು ತಮ್ಮ ಮಠಕ್ಕೆ ನೀಡಿರುವ ದಾಖಲೆ ಪತ್ರ ಲಭ್ಯಗಳಿವೆ ಅಂತ ಮಂತ್ರಾಲಯ ಸ್ವಾಮೀಜಿ ಹೇಳಿದ್ದರು. ನಂತರ ಇನ್ಮುಂದೆ ಯಾರು ಮಠದ ಆಡಳಿತವನ್ನು ನಡೆಸಿಕೊಂಡು ಹೋಗಬೇಕು ಅನ್ನೋದರ ಬಗ್ಗೆ ತಾವೇ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡೋದಾಗಿ ಹೇಳಿದ್ದರು. ಆದರೆ ಇದು ಮಠದ ಇನ್ನೊಂದು ಭಕ್ತ ವರ್ಗದ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸ್ವಾಮೀಜಿ ಉಳಿದುಕೊಂಡಿದ್ದ ಕೊಪ್ಪಳ ನಗರದ ಬಸವ ನಗರದಲ್ಲಿರುವ ಮನೆಗೆ ರಾತೋರಾತ್ರಿ ಹೋಗಿದ್ದ ನೂರಾರು ಭಕ್ತರು, ಮಠದ ವಿಚಾರವಾಗಿ ಚರ್ಚೆ ನಡೆಸಿದ್ದರು. ಈ ಸಮಯದಲ್ಲಿ ಕಳೆದ ರಾತ್ರಿ ಗೊಂದಲದ ವಾತಾರವರಣ ನಿರ್ಮಾಣವಾಗಿತ್ತು.

ಇನ್ನು ಮಂತ್ರಾಲಯ ಮಠದ ಸ್ವಾಮೀಜಿ, ಕೊಪ್ಪಳ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯ ಮಠಕ್ಕೆ ಸೇರಿರುವ ಮಠವಾಗಿದೆ ಅಂತ ಹೇಳಿರೋದು, ಸ್ಥಳೀಯ ಕೆಲ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಇಲ್ಲಿಯವರಗೆ ಯಾವುದೇ ಮಠಕ್ಕೆ ಸೇರದೆ, ಸ್ವತಂತ್ರವಾಗಿತ್ತು. ಸ್ಥಳೀಯರೇ ಆಡಳಿತ ನಡೆಸಿಕೊಂಡು ಹೋಗ್ತಿದ್ದರು. ಆದರೆ ಇದೀಗ ದಿಢೀರನೆ ಮಂತ್ರಾಲಯ ಮಠದ ಸ್ವಾಮೀಜಿ, ತಮ್ಮ ಮಠಕ್ಕೆ ಈ ಮಠ ಸೇರಿದೆ ಅಂತ ಹೇಳ್ತಿದ್ದಾರೆ. ಇದೊಂದು ಸ್ವತಂತ್ರ ಮಠ ಅನ್ನೋದು ಇನ್ನೊಂದಿಷ್ಟು ಸ್ಥಳೀಯ ಭಕ್ತರ ವಾದವಾಗಿದೆ.

ರಾಮದೇವರ ಪೂಜೆ, ತುಲಾಭಾರ ದಿಢೀರ್ ರದ್ದು

ಕಳೆದ ಕೆಲ ದಿನಗಳಿಂದ ಗುಸುಗುಸು ನಡೆದಿದ್ದ ವಿವಾದ, ಕಳೆದ ರಾತ್ರಿ ದಿಢೀರನೆ ಸ್ಪೋಟಗೊಂಡಿದೆ. ಮಂತ್ರಾಲಯ ಮಠದ ಸ್ವಾಮೀಜಿ ಮತ್ತು ಸ್ಥಳೀಯ ಕೆಲ ಭಕ್ತರ ನಡುವೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ, ಇಂದು ಮಠದಲ್ಲಿ ನಡೆಯಬೇಕಿದ್ದ ರಾಮದೇವರ ಪೂಜೆ, ತುಲಾಭಾರ ಕಾರ್ಯಕ್ರಮವನ್ನು ದಿಢೀರನೆ ರದ್ದಗೊಳಿಸಲಾಗಿದೆ.

ಮಠದ ವ್ಯವಸ್ಥಾಪಕ ಜಗನ್ನಾಥ್ ಹುನಗುಂದ ಹೇಳಿದ್ದಿಷ್ಟು

ಇಂದು ಮುಂಜಾನೆ ಮಂತ್ರಾಲಯ ಮಠದ ಸ್ವಾಮೀಜಿ ಮಠಕ್ಕೆ ಆಗಮಿಸಿದ್ರು, ಮಠದೊಳಗೆ ಹೋಗದೆ, ತಮ್ಮ ಮುನಿಸನ್ನು ತೋರಿಸಿದರು. ಮಠದ ಹೊರಗೆ ನಿಂತು ನಮಸ್ಕಾರ ಮಾಡಿದ ಸ್ವಾಮೀಜಿ, ಮಠದೊಳೆಗೆ ಹೋಗದೆ, ಮರಳಿ ಹೋಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಠದ ಸದ್ಯದ ವ್ಯವಸ್ಥಾಪಕ ಜಗನ್ನಾಥ್ ಹುನಗುಂದ, ಸ್ವಾಮೀಜಿಗೆ ಮಠಕ್ಕೆ ಬಂದು ಪೂಜೆ ಸಲ್ಲಿಸುವಂತೆ ಮನವಿ ಮಾಡಿದ್ದೆವು. ಆದರೆ ಅವರು ಅಸಮಾಧಾನಗೊಂಡು ಹೋಗಿದ್ದಾರೆ. ಮಠದ ಆಂತರಿಕ ವಿಚಾರವನ್ನು ಎಲ್ಲರೂ ಕೂತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಆದರೆ ಮಠ ಸ್ಥಳೀಯರಿಗೆ ಸೇರಿದ್ದು, ಇದನ್ನು ಸ್ಥಳೀಯರಿಗೆ ನೀಡುವಂತೆ ಮನವಿ ಮಾಡಿದ್ದೇವೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಕೊಪ್ಪಳ ಜನರ ಹೋರಾಟಕ್ಕೆ ಸಂದ ಜಯ: ಬಲ್ಡೋಟ ಪ್ಯಾಕ್ಟರಿ ಕಾಮಗಾರಿ ಸ್ಥಗಿತಕ್ಕೆ ಸಿಎಂ ಸೂಚನೆ

ಸದ್ಯ ರಾತೋರಾತ್ರಿ ಮಠದ ಆಡಳಿತ ವಿಚಾರ ಮತ್ತು ಮಠ ಯಾರಿಗೆ ಸೇರಿದ್ದು ಅನ್ನೋ ಚರ್ಚೆ ಮುನ್ನಲೆಗೆ ಬಂದಿದೆ. ಮಠದ ವಿವಾದ ತೀರ್ವವಾಗಿರೋದರಿಂದ, ಮಂತ್ರಾಲಯ ಮಠದ ಸ್ವಾಮೀಜಿ, ಇಂದು ನಡೆಯಬೇಕಿದ್ದ ತುಲಾಭಾರ ಮತ್ತು ರಾಮದೇವ ಪೂಜೆಯನ್ನು ರದ್ದು ಮಾಡಿದ್ದಾರೆ. ಆದರೆ ಇದೀಗ ಮಠದ ಆಡಳಿತ ನಡೆಸುವ ವಿಚಾರ ಎರಡು ಕಡೆಯ ಭಕ್ತರ ನಡುವೆ ತೀರ್ವವಾಗಿದ್ದು, ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದು ಗೊತ್ತಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:41 pm, Thu, 27 March 25

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು