ದೀಪಾವಳಿ ಹಬ್ಬವೆಂದು ಎತ್ತುಗಳ ಮೈತೊಳೆಯಲು ಹೋಗಿದ್ದ ಇಬ್ಬರು ಬಾಲಕರ ದುರಂತ ಅಂತ್ಯ
ಕುಷ್ಟಗಿ ತಾಲೂಕಿನ ರಾಂಪುರ ಗ್ರಾಮದ ಬಳಿ ಕ್ವಾರಿ ಗುಂಡಿಯಲ್ಲಿ ಬಿದ್ದು ನಾಲ್ವರು ಮಕ್ಕಳು ಬಿದ್ದಿದ್ದು, ನಾಲ್ವರಲ್ಲಿ ಇಬ್ಬರು ಅಸ್ವಸ್ಥರಾಗಿದ್ದಾರೆ
ಕೊಪ್ಪಳ: ಕಲ್ಲು ಕ್ವಾರಿ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಕುಷ್ಟಗಿ (Kushtagi) ತಾಲೂಕಿನ ರಾಂಪುರ ಗ್ರಾಮದ ಬಳಿ ನಡೆದಿದೆ. ಮಹಾಂತೇಶ ಮಾದರ(9), ವಿಜಯ್ ಮಾದರ(9) ಮೃತ ಬಾಲಕರು. ದೀಪಾವಳಿ ಹಿನ್ನೆಲೆಯಲ್ಲಿ ನಾಲ್ವರು ಬಾಲಕರು ಎತ್ತುಗಳ ಮೈತೊಳೆಯಲು ಕಲ್ಲು ಕ್ವಾರಿಗೆ ಹೋಗಿದ್ದರು. ಈ ವೇಳೆ ಕ್ವಾರಿ ಗುಂಡಿಯಲ್ಲಿ ನಾಲ್ವರು ಮಕ್ಕಳು ಬಿದ್ದಿದ್ದಾರೆ. ನಾಲ್ವರಲ್ಲಿ ಇಬ್ಬರು ಅಸ್ವಸ್ಥರಾಗಿದ್ದು, ಇಬ್ಬರ ಸಾವನ್ನಪ್ಪಿದ್ದಾರೆ. ಅಸ್ವಸ್ಥ ಬಾಲಕರನ್ನು ಬಾದಾಮಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲುಷಿತ ನೀರು ಸೇವಿಸಿ ಮಹಿಳೆ ಸಾವು
ಯಾದಗಿರಿ: ಶಹಾಪುರ ತಾಲೂಕಿನ ಹೋತಪೇಟ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿಯ ಸ್ಥತಿ ಗಂಭೀರವಾಗಿದೆ. ರಮ್ಮ(92) ಮೃತ ಮಹಿಳೆ. ಹೊನ್ನಪ್ಪಗೌಡ (45) ಸ್ಥತಿ ಗಂಭೀರವಾಗಿದೆ. ಕಲುಷಿತ ನೀರು ಸೇವಿಸಿ ಹೋತಪೇಟ ಗ್ರಾಮದ ವಾರ್ಡ್ ನಂಬರ್ 1ರಲ್ಲಿ ಭೇದಿಯಿಂದ 34 ಜನ ಬಳಲುತ್ತಿದ್ದಾರೆ. 34 ಜನರ ಪೈಕಿ ಓರ್ವ ಸಾವನ್ನಪ್ಪಿದ್ದು, 8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ವೈದ್ಯರ ತಂಡದಿಂದ ನಿರಂತರವಾಗಿ ಆರೋಗ್ಯ ತಪಾಸಣೆ ನಡೆಯುತ್ತಿದೆ.
ಈ ವಾರ್ಡ್ನ ಜನರಿಗೆ ತೆರೆದ ಬಾವಿಯಿಂದ ನೀರು ಸರಬರಾಜು ಆಗುತ್ತದೆ. ತೆರದ ಬಾವಿಯಿಂದ ಟ್ಯಾಂಕ್ಗೆ ನೀರು ಹೋಗಿ ಅಲ್ಲಿಂದ ಸರಬರಾಜು ಆಗುತ್ತದೆ. ನೀರು ಸರಬರಾಜು ಪೈಪ್ ಅಲ್ಲಲ್ಲಿ ಡ್ಯಾಮೇಜ್ ಆಗಿದ್ದರಿಂದ ನೀರು ಕಲುಷಿತ ಆಗಿರುವ ಸಾಧ್ಯತೆ ಇದೆ. ಸದ್ಯ ಗ್ರಾಮದ ಜನರಿಗೆ ಬೇರೆ ಗ್ರಾಮದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಕೆರೆಯಲ್ಲಿ ಈಜಲು ತೆರಳಿದ್ದ ಪಿಯುಸಿ ವಿದ್ಯಾರ್ಥಿ ಸಾವು
ಮಂಡ್ಯ: ಕೆರೆಯಲ್ಲಿ ಈಜಲು ತೆರಳಿದ್ದ ಪಿಯುಸಿ ವಿದ್ಯಾರ್ಥಿ ಮುಳುಗಿ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಾರಸವಾಡಿ ಗ್ರಾಮದ ಕೆ.ಎಂ.ಹರ್ಷ(18) ಮೃತ ವಿದ್ಯಾರ್ಥಿ. ಕಾಲೇಜಿಗೆ ರಜೆ ಹಿನ್ನೆಲೆ ಮೂವರು ಸ್ನೇಹಿತರ ಜೊತೆ ಕೆ.ಎಂ.ಹರ್ಷ ಕೆರೆಯಲ್ಲಿ ಈಜಲು ತೆರಳಿದ್ದಾನೆ. ಈ ವೇಳೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಕೊಪ್ಪ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Mon, 24 October 22