ನಾಥೂರಾಮ್ ಗೋಡ್ಸೆ ಪೂಜಿಸುವವರಿಂದ ನಾವು ಕಲಿಯಬೇಕಿಲ್ಲ: ಪ್ರಹ್ಲಾದ್ ಜೋಶಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು
ಪ್ರಹ್ಲಾದ್ ಜೋಶಿ ರಾಜಕಾರಣಿಯಾಗಿ ಮಾತನಾಡಿಲ್ಲ ಅನಿಸುತ್ತೆ. ಪಾದಯಾತ್ರೆಯಿಂದ ರಾಹುಲ್ ಆರೋಗ್ಯ ಸುಧಾರಿಸುತ್ತೆ ಎಂದು ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದರು.
ಕೊಪ್ಪಳ: ನಾಥೂರಾಮ್ ಗೋಡ್ಸೆ ಪೂಜಿಸುವವರಿಂದ ನಾವು ಕಲಿಯಬೇಕಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು. ಪ್ರಹ್ಲಾದ್ ಜೋಶಿ ರಾಜಕಾರಣಿಯಾಗಿ ಮಾತನಾಡಿಲ್ಲ ಅನಿಸುತ್ತೆ. ಪಾದಯಾತ್ರೆಯಿಂದ ರಾಹುಲ್ ಆರೋಗ್ಯ ಸುಧಾರಿಸುತ್ತೆ ಎಂದು ಪ್ರಹ್ಲಾದ್ ಜೋಶಿ ಈ ಹಿಂದೆ ಹೇಳಿಕೆ ನೀಡಿದ್ದರು. ಮುಸ್ಲಿಮರಿಗೆ ಅಲ್ಪಸಂಖ್ಯಾತ ಮೀಸಲಾತಿ ತೆಗೆಯಬೇಕೆಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳಲು ಯಾರು? ಅವರು ಹೇಳಿದರೆ ತೆಗೆಯಲಾಗುತ್ತಾ? ಸಂವಿಧಾನ ಹೇಳಬೇಕು, ಇವರು ಹೇಳಿದಂತೆ ಕೇಳೋಕ್ಕಾಗುತ್ತಾ ಎಂದು ಪ್ರಶ್ನಿಸಿದರು. ಇನ್ನು ಅ. 15 ರಂದು ಬಳ್ಳಾರಿಗೆ ರಾಹುಲ್ ಗಾಂಧಿ ಬರುತ್ತಿದ್ದಾರೆ. ಅಂದು ಮಧ್ಯಾಹ್ನ ಬೃಹತ್ ಸರ್ವಾಜನಿಕ ಸಮಾವೇಶ ಹಮ್ಮಿಕೊಂಡಿದ್ದೆವೆ. ಹೀಗಾಗಿ ಇಂದು ನಮ್ಮ ಸ್ಥಳೀಯ ನಾಯಕರ ಜೊತೆ ಸಭೆ ಮಾಡಿದ್ದೇನೆ ಎಂದು ಕೊಪ್ಪಳದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಭಾರತ ಇಬ್ಬಾಗ ಮಾಡಲು ಹೇಳಿದ್ದೆ ಸಾರ್ವಕರ್
ಭಾರತ ಇಬ್ಬಾಗ ಮಾಡಿದವರಿಂದ ಭಾರತ್ ಜೋಡೋ ಯಾತ್ರೆ ಎನ್ನೋ ಬಿಜೆಪಿ ನಾಯಕರ ಟಿಕೆ ವಿಚಾರವಾಗಿ ಮಾತನಾಡಿದ ಸಿದ್ಧರಾಮಯ್ಯ, ಭಾರತಕ್ಕೆ ಸ್ವಾತಂತ್ರ್ಯ ತಂದಿದ್ದು ಕಾಂಗ್ರೆಸ್ ಪಕ್ಷ. 1937ರ ಸಮಾವೇಶದಲ್ಲಿ ಭಾರತ ಇಬ್ಬಾಗ ಮಾಡಲು ಮೊದಲು ಹೇಳಿದ್ದೆ ಸಾರ್ವಕರ್. ಹಿಂದೂ-ಮುಸ್ಲಿಂದ ಇರೋಕ್ಕಾಗಲ್ಲ ದೇಶ ಇಬ್ಬಾಗ ಮಾಡಿ ಎಂದಿದ್ದರು. ಇತಿಹಾಸ ತಿರುಚುವವರು ಸತ್ಯ ಹೇಳುತ್ತಾರಾ ಎಂದು ಪ್ರಶ್ನಿಸಿದರು. ತ್ಯಾಗ ಬಲಿದಾನ ಮಾಡಿದ್ದು ಕಾಂಗ್ರೆಸ್ ನಾಯಕರು. ಆರ್ಎಸ್ಎಸ್ನವರು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ ಎಂದು ಬಿಜೆಪಿ ನಾಯಕರಿಗೆ ಸಿದ್ದು ಪ್ರಶ್ನಿಸಿದರು.
ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಪಾದಯಾತ್ರೆಯಗಿರಲಿಲ್ಲ: ಇದೊಂದು ಐತಿಹಾಸಿಕ ಪಾದಯಾತ್ರೆ: ಸಿದ್ದರಾಮಯ್ಯ
ಸೆ.7ರಿಂದ ರಾಹುಲ್ ಗಾಂಧಿಯವರ ಭಾರತ್ ಜೊಡೋ ಯಾತ್ರೆ ಶುರುವಾಗಿದೆ. 150 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ. ಇದೊಂದು ಐತಿಹಾಸಿಕ ಪಾದಯಾತ್ರೆ. ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಪಾದಯಾತ್ರೆಯಗಿರಲಿಲ್ಲ. ದೇಶದ ಐಕ್ಯತೆಗಾಗಿ ಪದಯಾತ್ರೆ ನಡೆಯುತ್ತಿದೆ. ಮೋದಿ ಸರ್ಕಾರದ ಬಂದ ಮೇಲೆ ದೇಶದಲ್ಲಿ ಧರ್ಮ, ದ್ವೇಷದ ರಾಜಕೀಯ ನಡೆಯುತ್ತಿದೆ. ಹೀಗಾಗಿ ಜನರಲ್ಲಿ ಅಪನಂಬಿಕೆ ಶುರುವಾಗಿದೆ. ಮೋದಿ ಸರ್ಕಾರದಲ್ಲಿ ಜನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ. ರೂಪಾಯಿ ಮೌಲ್ಯ ಡಾಲರ್ ಎದರು 84ಕ್ಕೆ ಕುಸಿದಿದೆ. ಹಿಂದೆಂದೂ ಕೆಳರಿಯದೆ ಇದ್ದಷ್ಟು ಲಂಚ ಜಾಸ್ತಿಯಾಗಿದೆ. ನಾನು ನಲವತ್ತು ರಾಜಕೀಯದಲ್ಲಿದ್ದೇನೆ 12 ಭಾರಿ ಹಣಕಾಸು ಸಚಿವನಾಗಿದ್ದೇನೆ. ಆದರೆ ಈ ಹಿಂದೆ ಎಂದೂ ಗುತ್ತಿಗೆದಾರರ ಸಂಘ ಕಮೀಷನ್ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದಿರಲಿಲ್ಲ.
ನ್ಯಾಯಂಗ ತನೀಖೆ ಮಾಡಿದರೆ ಸಾಕ್ಷಿ ನೀಡಲು ಸಿದ್ದ ಎನ್ನುತ್ತಿದ್ದಾರೆ. ಇವರು ಏಕೆ ತನೀಖೆ ಮಾಡುತ್ತಿಲ್ಲ. ನಮ್ಮ ಸರ್ಕಾರದಲ್ಲಿ ಆರೋಪ ಬಂದ ತಕ್ಷಣ ನಾನು ಸಿಬಿಐಗೆ ನೀಡಿದೆ. ಪರೇಶ್ ಮೆಸ್ತಾ ಕೇಸ್ ಹಿಡಿದು ಬಹಳಷ್ಟು ಕೇಸ್ ಸಿಬಿಐಗೆ ನೀಡಿದ್ದೆ. ಲಂಚದ ಬಗ್ಗೆ ಚರ್ಚಿಸಲು ನಮಗೆ ಸದನದಲ್ಲಿ ಅವಕಾಶ ನೀಡಲಿಲ್ಲ. ಅವರ ಕಾರ್ಯಕರ್ತ ಸುಸೈಡ್ ಮಾಡ್ಕೊಂಡ. ಅದಕ್ಕೆ ಈಶ್ವರಪ್ಪ ರಾಜೀನಾಮೆ ಕೊಟ್ಟ. ಈಶ್ವರಪ್ಪ ರಾಜಿನಾಮೆ ಏನ್ ಖುಷಿಯಿಂದ ಕೊಟ್ನಾ ಎಂದರು ಸಿದ್ದರಾಮಯ್ಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.