ಆಣೆ ಮಾಡಲು ಎಲ್ಲಿಗೆ, ಯಾವಾಗಲಾದರೂ ಬರುವೆ! ಮಂಡ್ಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಓಪನ್ ಚಾಲೆಂಜ್
ನಾನು ಕಮಿಷನ್ ಪಡೆಯೋಕೆ ಇಲ್ಲಿ ಎಂಪಿ ಆಗಿಲ್ಲ, ನಾನು ಅಂಬರೀಷ್ ಹೆಂಡ್ತಿ. ನಮಗೆ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದ ತೊಂದರೆ ಇಲ್ಲ ಹಣ ಮಾಡೊ ಅವಶ್ಯಕಥೆ ನಮಗಿಲ್ಲ.
ಮಂಡ್ಯ: ಭ್ರಷ್ಟಾಚಾರದ ಕುರಿತು ಅವರ ಬಳಿ ದಾಖಲಾತಿ ಇದ್ರೆ ಕೊಡಲಿ. ನಾನು ಬಹಿರಂಗ ಚರ್ಚೆಗೆ ಸಿದ್ದಳಿದ್ದೇನೆ ಎಂದು ಜೆಡಿಎಸ್ ಶಾಸಕರಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮಂಡ್ಯ ತಾಲೂಕಿನ ಬಿ. ಹೊಸೂರು ಕಾಲೋನಿಯ ಅಕ್ಕಮಹಾದೇವಿ ಮಹಿಳಾ ವಿವಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ದಳಪತಿಗಳಿಗೆ ಓಪನ್ ಚ್ಯಾಲೆಂಜ್ ಹಾಕಿದರು. ಮಳವಳ್ಳಿ ಶಾಸಕ ಅನ್ನದಾನಿ ವಿರುದ್ದ ಸಂಸದರು ಸವಾಲ್ ಹಾಕಿದ್ದು, ಒಬ್ಬರು ಕುರಿತು ಮಾತನಾಡುವಾಗ ನೈತಿಕಥೆ ಇರ್ಬೇಕು. ನಾನು ಕಮಿಷನ್ ಪಡೆಯೋಕೆ ಇಲ್ಲಿ ಎಂಪಿ ಆಗಿಲ್ಲ, ನಾನು ಅಂಬರೀಷ್ ಹೆಂಡ್ತಿ. ನಮಗೆ ನಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದ ತೊಂದರೆ ಇಲ್ಲ ಹಣ ಮಾಡೊ ಅವಶ್ಯಕಥೆ ನಮಗಿಲ್ಲ. ನಾನು ಕಮಿಷನ್ ಪಡೆದಿದ್ದೇನೆಂದು ಹೇಳತಾರಲ್ವ. ನೇರವಾಗಿ ಚ್ಯಾಲೆಂಜ್ ಹಾಕುತ್ತಿರುವೆ ಬನ್ನಿ ಮೇಲುಕೋಟೆಗೆ ಹೋಗೋಣ ಅಲ್ಲೇ ದೇವರ ಮುಂದೆ ಆಣೆ ಮಾಡ್ಲಿ. ನನ್ನ ಬಗ್ಗೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿ ಕಳ್ಳೊದಿಲ್ಲ. ಮಾನ ಇದ್ದವರಿಗೆ ಮಾನನಷ್ಟ ಮೊಕದ್ದಮೆ ಹಾಕಬಹುದು ಎಂದು ದಳಪತಿಗಳ ವಿರುದ್ದ ಸಂಸದೆ ಸುಮಲತಾ ಗುಡುಗಿದರು.
ಮಂಡ್ಯದಲ್ಲಿ ಮತ್ತೆ ಮುಂದುವರೆದ ಸಂಸದೆ v/s ಜೆಡಿಎಸ್ ಶಾಸಕರ ಟಾಕ್ ಪೈಟ್
ಸಂಸದೆ ಸುಮಲತಾ ಬರಿ ಫೋಸ್ ಕೊಡುವ ಕೆಲಸ ಮಾಡ್ತಾರೆ. ಎಂಪಿನಾ ಜನ ಮರೆತುಬಿಡ್ತಾರೆ ಅಂತ ಮಂಡ್ಯಕ್ಕೆ ಬರ್ತಾರೆ. ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ ಎಂದು ಸಂಸದೆ ಸುಮಲತಾ ವಿರುದ್ದ ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಅನ್ನದಾನಿ ಕಿಡಿಕಾರಿದರು. ಸಂಸದೆ ಸುಮಲತಾ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಯಾರ ಅತ್ರನೂ ಆ ಕೆಲಸ ಮಾಡ್ತಿಲ್ಲ. ನೀವು ಕಮಿಷನ್ ಪಡಿತ್ತಿದ್ದಿರಿ ಅನ್ಸುತ್ತೆ ಅದನ್ನ ನೆನೆಸಿಕೊಂಡು ಹೇಳ್ತಿದ್ರಾ ಪ್ರಶ್ನಿಸಿದರು. ಕಾಮಗಾರಿ ಗೆ ನಾವೇಲ್ಲ ಪೂಜೆ ಮಾಡಿದ ಮೇಲೆ ಏನು ಪರಿಶೀಲನೆ ಮಾಡ್ತಿರಿ. ಕಾಮಗಾರಿ ಬರಿ ವೀಕ್ಷಣೆಗಾ? ಮಂಡ್ಯಕ್ಕೆ ಕೇಂದ್ರ ಸರ್ಕಾರದಿಂದ ಏನು ಅನುದಾನ ತಂದಿದ್ದಿರಿ. ಆದರ್ಶ ಗ್ರಾಮ, PMJSY ನಿಮ್ದಾ ಅನುದಾನ. ಕೇಂದ್ರದು 25% ನಮ್ಮ ರಾಜ್ಯದು 75% ಕೊಡ್ತೇವೆ. ಆದರ್ಶ ಗ್ರಾಮಕ್ಕೂ ನಮ್ಮ ಪಾಲು ಇದೆ. ಜಿಲ್ಲೆಗೆ ನಿಮ್ದು ಪೂರ್ಣ ಪ್ರಮಾಣದ ಕೆಲಸ ಏನಿದೆ ಎಂದು ಪ್ರಶ್ನಿಸಿದರು.
ಮಳವಳ್ಳಿ ಸೊಸೆ ಅಂತ ಹೇಳಿ 30 ಸಾವಿರ ಓಟ್ ಲೀಡ್ ತಕೊಂಡ್ರಿ. ಸೊಸೆ ಅಂತ ಜನ ಕೊಟ್ಟ ಗೌರವವನ್ನು ಉಳಿಸಿಕೊಳ್ಳಿ. ದೇವೇಗೌಡ್ರು ಕೊಟ್ಟ ರೈಲು ಯೋಜನೆ ದಯಮಾಡಿ ಕೈ ಮುಗಿಯುತ್ತೇವೆ ತಂದು ಕೊಡಿ. ನೀವು ಹೇಳುವುದಕ್ಕೆ ನಾವು ಬದ್ದರಾಗಿರುತ್ತೇವೆ. ಕಮಿಷನ್ ತಗೊತ್ತಾರೆ ಅಂತ, ಚಿಲ್ಲರೆ ಆರೋಪ ಮಾಡೋದನ್ನ ಬಿಟ್ಟು ಕೆಲಸ ಮಾಡಿ. ಎಂಪಿ ಆಗಿದ್ದಿರಿ ಸ್ವಲ್ಪ ತೂಕವಾಗಿ ಇರೋದನ್ನ ಕಲಿಯಿರಿ. ನಾಲ್ಕು ತಿಂಗಳಿಗೆ ಬಂದು ನಾವು ಮಾಡಿರುವ ಕೆಲಸಕ್ಕೆ ಬಂದು ಅಲ್ಲಾಡಿಸುವುದು. ನೀವೇನು ಟೆಕ್ನಿಕಲ್ ಎಕ್ಸ್ಪೋರ್ಟ್ ಹಾ ಎಂದರು. ನಿಮ್ಮ ಜೊತೆ ಯಾವ ಇಂಜಿನಿಯರ್ ಬಂದಿದ್ರು. ಏನು ಪ್ರಾಬ್ಲಂ ಆಗಿದೆ ಕಾಮಗಾರಿಯಲ್ಲಿ. ಯಾರು ದುಡ್ಡು ಇಸ್ಕೊಂಡಿದ್ದಾರೆ, ಯಾರು ಅಂತ ಹೇಳಿ? ಯಾರು ಏನು ಮಾಡಿದ್ದಾರೆ ಅಂತ ಬಹಿರಂಗ ಚರ್ಚೆ ಬಂದ್ರೆ ಗೊತ್ತಾಗುತ್ತೆ. ನಾಲ್ಕು ವರ್ಷದಿಂದ ಒಂದು ಯೋಜನೆಯನ್ನೂ ತರಲಿಲ್ಲ. ಮಂಡ್ಯ ಜಿಲ್ಲೆಗೆ ಕೇಂದ್ರದಿಂದ ಒಂದು ಯೋಜನೆ ತರಲಿಲ್ಲ. PMGSY ಹಿಂದಿನಿಂದಲೂ ಬರ್ತಿದೆ, ನೀವು ತರೋದು ಏನು ಹೊಸದಲ್ಲ. ಬಹಳ ವರ್ಷಗಳ ಹಿಂದೆನೇ ನರೇಗಾ ಬಂದಿದ್ದು.
ನೀವು ಎಂಪಿ ಆದಮೇಲೆ ನರೇಗಾ ಬಂದಿದ್ದಾ. ಮಾಡೋ ಕೆಲಸ ಮಾಡಿ, ದೊಡ್ಡ ಪ್ರಾಜೆಕ್ಟ್ ತಂದುಕೊಡಿ ಮಂಡ್ಯಕ್ಕೆ. ನಾವು ಕಷ್ಟ ಪಟ್ಟು ಪಾದಯಾತ್ರೆ ಮಾಡಿ ಮೈಶುಗರ್ಗೆ ಹೋರಾಟ ಮಾಡಿದ್ದು. ಮಂಡ್ಯ ಜಿಲ್ಲೆಯ ರೈತರ ಹೋರಾಟದಿಂದ ಮೈಶುಗರ್ ಉಳಿತು. ಖಾಸಗೀಕರಣದ ಪರವಾಗಿದ್ದವರು ನೀವು. ನಾವು ಸರ್ಕಾರದ ವಿರುದ್ದ ಗುಡುಗಿ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿದ್ದವರು. ನೀವು ಬರಿ ಫೋಸ್ ಕೊಡುವ ಕೆಲಸ ಮಾಡ್ತಿದ್ದಾರೆ. ಎಂಪಿ ಹಾಗಿ ಮಂಡ್ಯಕ್ಕೆ ಕೊಡುಗೆ ಏನು ಇಲ್ಲ. ಮೂರ್ನಾಲ್ಕು ಜನ ಕರ್ಕೊಂಡು ಬಂದು ಹೋಗ್ತಿರಿ. ಎಂಪಿನಾ ಜನ ಮರೆತುಬಿಡ್ತಾರೆ ಅಂತ ಅವಾಗವಾಗ ಬರ್ತಿರಾ. ನಿಮ್ಮನ್ನು ಜನರು ಮರೆಯಲ್ಲ ಬಿಡಿ, ಚಿತ್ರ ನಟಿಯನ್ನ ಯಾರು ಮರೆಯಲ್ಲ. ಟೆನ್ಸನ್ ತೆಗೆದುಕೊಂಡು ಬರಬೇಡಿ ಸಣ್ಣಪುಟ್ಟದಕ್ಕೆ ಏಕೆ ಬರ್ತಿರಾ. ಗೌರವ, ಒಂದು ತೂಕವನ್ನ ಉಳಿಸಿಕೊಳ್ಳಿ. ದೊಡ್ಡ ಫ್ಯಾಕ್ಟರಿ ತನ್ನಿ, ಉದ್ಯೋಗ ಸೃಷ್ಟಿ ಮಾಡಿ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.