ಮಂಡ್ಯ CEN ಪೊಲೀಸರ ಭರ್ಜರಿ ಕಾರ್ಯಾಚರಣೆ; 23 ಲಕ್ಷ ಮೌಲ್ಯದ 130 ಮೊಬೈಲ್ ಫೋನ್​ ವಶ

ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ 130 ವಿವಿಧ ಮಾದರಿಯ 23 ಲಕ್ಷ ಮೌಲ್ಯದ 130 ಮೊಬೈಲ್ ಫೋನ್​ಗಳನ್ನ ವಶಕ್ಕೆ ಪಡೆದು, ದೂರು ನೀಡಿದವರಿಗೆ ಎಸ್ಪಿ ಎನ್.ಯತೀಶ್ ಹಿಂದಿರುಗಿಸಿದ್ದಾರೆ.

ಮಂಡ್ಯ CEN ಪೊಲೀಸರ ಭರ್ಜರಿ ಕಾರ್ಯಾಚರಣೆ; 23 ಲಕ್ಷ ಮೌಲ್ಯದ 130 ಮೊಬೈಲ್ ಫೋನ್​ ವಶ
ಮಂಡ್ಯ
Follow us
ಕಿರಣ್ ಹನುಮಂತ್​ ಮಾದಾರ್
|

Updated on: May 18, 2023 | 12:44 PM

ಮಂಡ್ಯ: ಮೊಬೈಲ್ ಕಳೆದು ಹೋದ್ರೆ (Mobile Lost) ಕೆಲವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡುತ್ತಾರೆ. ಇನ್ನು ಕೆಲವರು ಪೊಲೀಸ್ ಠಾಣೆ ರಗಳೆಯೆಲ್ಲಾ ಯಾಕೆ ಅಂತಾ ಸುಮ್ಮನಾಗುತ್ತಾರೆ. ಆದ್ರೆ, ಕೇಂದ್ರ ಸರ್ಕಾರ ಕಳೆದ ಐದಾರು ತಿಂಗಳ ಹಿಂದೆ ಇಡೀ ದೇಶದಲ್ಲಿ ಎಲ್ಲಿಯೇ ಮೊಬೈಲ್ ಕಳೆದು ಹೋದ್ರು ಒಂದೇ ವೆಬ್ ಸೈಟ್​ನಲ್ಲಿ (Central Equipment Identity Register -CEIR) ತಾವಿದ್ದಲ್ಲಿಯೇ ದೂರು ದಾಖಲಿಸಬಹುದಾದ ಯೋಜನೆ ತಂದಿತ್ತು. ಈ ಮೂಲಕ ಜಿಲ್ಲೆಯಾದ್ಯಂತ ಕಳ್ಳತನವಾಗಿದ್ದ 130 ವಿವಿಧ ಮಾದರಿಯ ಮೊಬೈಲ್ ಫೋನ್​ಗಳ ಕುರಿತು ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ (CEIR) ಮೂಲಕ ಸಾರ್ವಜನಿಕರು ದೂರು ದಾಖಲಿಸಿದ್ದರು.

ಇನ್ನು ಈ ದೂರಿನ್ವಯ CEN ( Cyber Economic and Narcotics Crime Police) ಪೊಲೀಸರು 23 ಲಕ್ಷ ಮೌಲ್ಯದ 130 ಮೊಬೈಲ್ ಫೋನ್​ಗಳನ್ನ ಇದೀಗ ವಶಕ್ಕೆ ಪಡೆದು ಕಳೆದುಕೊಂಡ ಸಾರ್ವಜನಿಕರಿಗೆ ಹಿಂದುರಿಗಿಸಲಾಗಿದೆ. CEN ಪೊಲೀಸ್ ಠಾಣಾ ಅರಕ್ಷಕ ಜಯಕುಮಾರ್ ನೇತೃತ್ವದದಲ್ಲಿ ಎಸ್ಪಿ ಎನ್.ಯತೀಶ್ ತಂಡ ರಚಿಸಿದ್ದರು. ಭರ್ಜರಿ ಕಾರ್ಯಾಚರಣೆ ಮೂಲಕ ಕಳೆದು ಹೋದ ಮೊಬೈಲ್​ನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು CEN ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಅವರು ಪ್ರಮಾಣ ಪತ್ರ ಕೊಟ್ಟು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:Tech Tips: ಇನ್ನುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ: ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ

ಇನ್ನು ಇದೇ ವೇಳೆ ಎಸ್ಪಿ ಮಾತನಾಡಿ ಮಂಡ್ಯ ಜಿಲ್ಲೆಯಾಧ್ಯಂತ ಹಲವು ಮೊಬೈಲ್ ಫೋನ್ ಕಳ್ಳತನ ವಾಗಿದ್ದವು. CEIR ಪೋರ್ಟಲ್ ಮೂಲಕ ಪತ್ತೆ ಮಾಡಲಾಗಿದೆ. ಇನ್ನೂ ಕೆಲವು ಮೊಬೈಲ್ ಫೋನ್ ಟ್ರೇಸ್ ಮಾಡಲಾಗಿದೆ. ಫೋನ್ ಕಳ್ಳತನ ಮಾಡಿ ಬೇರೆ ಬೇರೆ ರಾಜ್ಯಕ್ಕೂ ಮಾರಾಟ ಮಾಡಿದ್ದರು. ಎಲ್ಲವನ್ನೂ ಪತ್ತೆ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ. ಇನ್ನು ಸಾರ್ವಜನಿಕರು CEIR ಪೋರ್ಟಲ್ ಉಪಯೋಗಿಸಿಕೊಳ್ಳಿ, ಕಳುವಾದ ನಿಮ್ಮ ಫೋನ್​ಗಳ ಪತ್ತೆ ಮಾಡಲಾಗುವುದು ಎಂದು ಎಸ್ಪಿ ಮನವಿ ಮಾಡಿದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ