AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ರೈತರಿಗೆ ಕಡಿಮೆ ಹಣ ಸಿಗೋದು ಕರ್ನಾಟಕದಲ್ಲೇ!

ನಂದಿನಿ ಹಾಲು ದರವನ್ನು ಹೆಚ್ಚಳ ಮಾಡುವ ಬೇಡಿಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅಂಗಳ ತಲುಪಿದೆ. ಹಾಲು ಒಕ್ಕೂಟಗಳು ಮತ್ತು ರೈತರು ಪ್ರತಿ ಲೀಟರ್‌ಗೆ ₹10 ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ನೆರೆಯ ರಾಜ್ಯಗಳ ದರಗಳನ್ನು ಪರಿಶೀಲಿಸಿ, ಸಂಪುಟದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಹಾಗಾದರೆ, ನೆರೆ ರಾಜ್ಯಗಳಲ್ಲೆಷ್ಟಿದೆ ಹಾಲಿನ ದರ? ರೈತರಿಗೆ ಎಷ್ಟು ಸಿಗುತ್ತೆ? ಇಲ್ಲಿದೆ ಮಾಹಿತಿ.

ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವ: ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ರೈತರಿಗೆ ಕಡಿಮೆ ಹಣ ಸಿಗೋದು ಕರ್ನಾಟಕದಲ್ಲೇ!
ನಂದಿನಿ ಹಾಲು (ಸಾಂದರ್ಭಿಕ ಚಿತ್ರ)Image Credit source: KMF Nandini Website
ಹರೀಶ್ ಜಿ.ಆರ್​.
| Edited By: |

Updated on: Sep 27, 2026 | 11:01 AM

Share

ಬೆಂಗಳೂರು, ಸೆಪ್ಟೆಂಬರ್ 27: ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆಯ ಕುರಿತು ಚರ್ಚೆ ತೀವ್ರಗೊಂಡಿದ್ದು, ಈ ಕುರಿತ ನಿರ್ಧಾರವು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅಂಗಳ ತಲುಪಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಹಾಲು ಒಕ್ಕೂಟಗಳ ಸದಸ್ಯರು, ನಂತರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರತಿ ಲೀಟರ್ ಹಾಲಿನ ದರವನ್ನು 10 ರೂ. ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದ್ದರು. ಡೀಸೆಲ್, ಕಚ್ಚಾ ವಸ್ತುಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಲು ಉತ್ಪಾದಕ ರೈತರಿಗೆ ನಷ್ಟವಾಗುತ್ತಿದೆ ಎಂದು ಡಿಕೆ ಸುರೇಶ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ.

ಹಾಲು ಒಕ್ಕೂಟಗಳ ಬೇಡಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಹಾಲಿನ ದರ ಎಷ್ಟಿದೆ, ರೈತರಿಗೆ ಎಷ್ಟು ಹಣ ಸಿಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ನೆರೆಯ ರಾಜ್ಯಗಳ ಹಾಲಿನ ದರ ಮತ್ತು ರೈತರಿಗೆ ಸಿಗುವ ಬೆಲೆಯನ್ನು ಪರಿಶೀಲಿಸಿದ ನಂತರ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟಿದೆ ಹಾಲಿನ ದರ? ರೈತರಿಗೆ ಎಷ್ಟು ಸಿಗುತ್ತದೆ?

ಕರ್ನಾಟಕದಲ್ಲಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ 35 ರೂ. ನೀಡಲಾಗುತ್ತಿದೆ. ಆದರೆ, ದೆಹಲಿಯಲ್ಲಿ ಅಮುಲ್ ರೈತರಿಗೆ 40.50 ರೂ., ಮದರ್ ಡೈರಿ ರೈತರಿಗೆ 40.64 ರೂ. ನೀಡುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲೂ ಅಮುಲ್ ರೈತರಿಗೆ ಸುಮಾರು 40 ರೂ. ನೀಡುತ್ತಿದೆ. ಹೀಗಾಗಿ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈತರಿಗೆ ಸಿಗುವ ಬೆಲೆ ಅತ್ಯಂತ ಕಡಿಮೆಯಾಗಿದೆ. ಇದು ರೈತರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ಬೇರೆ ರಾಜ್ಯಗಳ ಹಾಲು ಒಕ್ಕೂಟಗಳು ರೈತರಿಗೆ ನೀಡುವ ಹಣ (ಪ್ರತಿ ಲೀಟರ್​ಗೆ)

  • ಅಮೂಲ್​ (ದೆಹಲಿ) – 40.50 ರೂ.
  • ಮದರ್​ ಡೈರಿ (ದೆಹಲಿ) – 40.64 ರೂ.
  • ಅಮೂಲ್​ (ಗುಜರಾತ್​) – 40.03 ರೂ.
  • ಅಮೂಲ್​ (ಮಹಾರಾಷ್ಟ್ರ) – 40 ರೂ.
  • ಗೂಕೂಲ್​ (ಮಹಾರಾಷ್ಟ್ರ) – 40.05 ರೂ.
  • ವಿಜಯ ಬ್ರಾಂಡ್​ (ತೆಲಂಗಾಣ) – 41.05
  • ಹೆರಿಟೆಜ್​ (ತೆಲಂಗಾಣ) – 42 ರೂ.
  • ಆವೀನ್ – ತಮಿಳುನಾಡು – 42.24 ರೂ.
  • ಅರೋಕ್ಯ -ತಮಿಳುನಾಡು- 41
  • ಮಿಲ್ಮಾ – ಕೇರಳ – 41.8ರೂ

ರೈತರು ಹೈನುಗಾರಿಕೆಯಲ್ಲಿ ಎದುರಿಸುತ್ತಿರುವ ನಷ್ಟವನ್ನು ಸರಿಪಡಿಸಲು ದರ ಹೆಚ್ಚಳ ಅನಿವಾರ್ಯ ಎಂದು ಪ್ರತಿಪಾದಿಸುತ್ತಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ನೀರಿಲ್ಲದೆ ಹಸುಗಳನ್ನು ಸಾಕುವುದೇ ಕಷ್ಟಕರವಾಗಿದೆ. ಜಾನುವಾರುಗಳಿಗೆ ಆಹಾರ ಒದಗಿಸುವುದು, ನಿರ್ವಹಣಾ ವೆಚ್ಚಗಳು ಹೆಚ್ಚಾಗಿದ್ದು, ಹಾಲಿನ ಇಳುವರಿ ಸಹ ಕಡಿಮೆಯಾಗಿದೆ. ಈ ಎಲ್ಲ ಅಂಶಗಳು ಹೈನುಗಾರಿಕೆಯನ್ನು ಲಾಭದಾಯಕವಲ್ಲದ ವೃತ್ತಿಯನ್ನಾಗಿ ಮಾಡಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹಾಲು ಒಕ್ಕೂಟಗಳು ಸಹ ಆಡಳಿತಾತ್ಮಕ ಖರ್ಚು-ವೆಚ್ಚಗಳು ಹೆಚ್ಚಾಗಿರುವುದರಿಂದ ದರ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ. ರೈತರಿಂದ ಹಾಲು ಸಂಗ್ರಹಿಸಿ, ಸಂಸ್ಕರಿಸಿ, ಮಾರಾಟ ಮಾಡಲು ಪ್ರತಿ ಲೀಟರ್‌ಗೆ ₹10 ರಿಂದ ₹12 ಖರ್ಚು ಬೀಳುತ್ತಿದೆ ಎಂದು ಒಕ್ಕೂಟಗಳು ತಿಳಿಸಿವೆ. ಪ್ರಸ್ತಾವಿತ ₹10 ಹೆಚ್ಚಳದಲ್ಲಿ ₹7 ರೈತರಿಗೆ ಮತ್ತು ₹3 ಒಕ್ಕೂಟಗಳಿಗೆ ಸಿಗಬೇಕು ಎಂಬ ಮನವಿಯನ್ನೂ ಮಾಡಿಕೊಂಡಿವೆ. ಆದರೆ, ರೈತರು ದರ ಹೆಚ್ಚಳದ ಸಂಪೂರ್ಣ ಲಾಭ ತಮಗೇ ಸಿಗಬೇಕು ಎಂದು ಆಗ್ರಹಿಸುತ್ತಿದ್ದಾರೆ.

ನಂದಿನಿ ಹಾಲಿನ ಮಾರಾಟ ದರವೂ ಕಡಿಮೆ

ಕರ್ನಾಟಕದಲ್ಲಿ ನಂದಿನಿ ಹಾಲಿನ ಮಾರಾಟ ದರವೂ ಇತರ ರಾಜ್ಯಗಳ ವಿವಿಧ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಮುಖ್ಯಮಂತ್ರಿಗಳು ಗ್ರಾಹಕರ ಮೇಲಿನ ಹೊರೆ ಮತ್ತು ರೈತರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಒಂದು ಮಹತ್ವದ ನಿರ್ಧಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಈ ನಿರ್ಧಾರವು ರಾಜ್ಯದ ಲಕ್ಷಾಂತರ ಹಾಲು ಉತ್ಪಾದಕ ರೈತರ ಭವಿಷ್ಯದ ಮೇಲೆ ನೇರ ಪರಿಣಾಮ ಬೀರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಇಂದಿನಿಂದ ಪಿತೃಪಕ್ಷ ಪ್ರಾರಂಭ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪಾಕ್ ಪ್ರಧಾನಿಯ ಸುಳ್ಳು ಹೇಳಿಕೆಗೆ ನಕ್ಕು ತಲೆಯಾಡಿಸಿದ ಭಾರತೀಯ ರಾಜತಾಂತ್ರಿಕ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ