ಮೈಸೂರು ಮೃಗಾಲಯದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ 40 ಚುಕ್ಕೆ ಜಿಂಕೆಗಳ ಸ್ಥಳಾಂತರ
ಮೈಸೂರು ಮೃಗಾಲಯದಿಂದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅರಣ್ಯದಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ಶ್ರೇಣಿಗೆ 40 ಚುಕ್ಕೆ ಜಿಂಕೆಗಳನ್ನು ಶಿಫ್ಟ್ ಮಾಡಲಾಗಿದೆ. ಬುಧವಾರ ಬೆಳಿಗ್ಗೆ ಜಿಂಕೆಗಳು ಸುರಕ್ಷಿತವಾಗಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ತಲುಪಿವೆ. ಚುಕ್ಕಿ ಜಿಂಕೆಗಳನ್ನು ನಿಗಾದಲ್ಲಿಡಲಾಗಿದೆ.
ಮೈಸೂರು, ಫೆ.22: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಿಂದ (Sri Chamarajendra Zoological Gardens) ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅರಣ್ಯದಲ್ಲಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ (KTR) ಪಣಸೋಲಿ ಶ್ರೇಣಿಗೆ 40 ಚುಕ್ಕೆ ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ. ಮಂಗಳವಾರ (ಫೆಬ್ರವರಿ 20) ಚುಕ್ಕೆ ಜಿಂಕೆಗಳನ್ನು ಕಳಿಸಲಾಗಿದ್ದು ಬುಧವಾರ ಬೆಳಿಗ್ಗೆ ಜಿಂಕೆಗಳು ಸುರಕ್ಷಿತವಾಗಿ ದಾಂಡೇಲಿಯನ್ನು ತಲುಪಿವೆ.
ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಮಾತನಾಡಿ, ಚುಕ್ಕಿ ಜಿಂಕೆಗಳಿಗೆ 3 ತಿಂಗಳಿನಿಂದ ತರಬೇತಿ ನೀಡಲಾಗಿದೆ. KTR ನಲ್ಲಿ ಚುಕ್ಕಿ ಜಿಂಕೆಗಳನ್ನು ಕ್ವಾರಂಟೈನ್ ಮಾಡಲು 2.5 ಎಕರೆಗಳ ಸುತ್ತುವರಿದ ಪ್ರದೇಶವನ್ನು ವಿನ್ಯಾಸಗೊಳಿಸಲಾಗಿದೆ. ಇದು ಜಿಂಕೆಗಳು ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಅವಧಿಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗ: ಪಾರ್ಕ್ನಲ್ಲಿದ್ದ ಜಿಂಕೆ ಪ್ರತಿಮೆ ಉರುಳಿ ಬಿದ್ದು ಮಗು ಸಾವು
ಪ್ರಯಾಣಿಕರಿಗೆ 25 ಸಾವಿರ ದಂಡ
ಕಾಡಿನ ಮಧ್ಯೆ ಕಾರಿನಿಂದ ಇಳಿದ ಪ್ರಯಾಣಿಕರ ಮೇಲೆ ಆನೆ ದಾಳಿ ಮಾಡಿದ್ದ ಕೇಸ್ಗೆ ಸಂಬಂಧಿಸಿದಂತೆ, ಬಂಡಿಪುರ ಅರಣ್ಯ ಇಲಾಖೆಯಿಂದ ಪ್ರಯಾಣಿಕರಿಗೆ $25 ಸಾವಿರ ದಂಡ ವಿಧಿಸಲಾಗಿದೆ. ಫೆ.11ರಂದು ಬಂಡೀಪುರದ ಮೂಲೆಹೊಳೆ ಸಮೀಪ ಪ್ರವಾಸಿಗರ ಮೇಲೆ ಕಾಡಾನೆ ದಾಳಿ ನಡೆಸಿತ್ತು. ಇದೀಗ ಕಾಡಿನಲ್ಲಿ ಇಳಿದಿದ್ದ ಪ್ರವಾಸಿಗರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಮೂವರ ದುರ್ಮರಣ
ಸರ್ಕಾರಿ ಬಸ್ ಡಿಕ್ಕಿ ಬೈಕ್ನಲ್ಲಿ ತೆರಳುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಮಿಟ್ಟಿಮಲಕಾ ಪುರ ಬಳಿ ರಾಯಚೂರಿನಿಂದ ಮಂತ್ರಾಲಯ ಮಾರ್ಗವಾಗಿ ಹೊರಟಿದ್ದ ಬಸ್, ಬೈಕ್ಗೆ ಡಿಕ್ಕಿಯಾಗಿದೆ. ರಾಯ ಚೂರಿನ ಇಂದಿರಾನಗರದ ಕೃಷಿ ಕಾರ್ಮಿಕರಾದ ಪರಶುರಾಮ್, ಗೋವಿಂದ, ರಾಘವೇಂದ್ರ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೂವರ ಶವಗಳು ರಿಮ್ಸ್ಗೆ ಸ್ಥಳಾಂತರಿಸಲಾಗಿದೆ.
ಲಾರಿಗೆ ಸಿಲುಕಿ ಸವಾರರಿಬ್ಬರ ಸಾವು
ಓವರ್ಟೇಕ್ ಮಾಡಲು ಹೋಗಿ ಲಾರಿಗೆ ಸಿಲುಕಿ ಸವಾರರಿಬ್ಬರ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಬಳಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಾದ ಬಾಳಪ್ಪ ಹೂಗಾರ, ಗದಗಯ್ಯ ಹಿರೇಮಠ ಮೃತಪಟ್ಟಿದ್ದಾರೆ. ಮೃತಪಟ್ಟ ಸವಾರರು ಮೂಡಲಗಿ ತಾಲೂಕಿನ ಅರಭಾವಿ ನಿವಾಸಿಗಳಾಗಿದ್ದು, ಓವರ್ಟೇಕ್ ಮಾಡುವಾಗ ಆಯತಪ್ಪಿ ಲಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:13 am, Thu, 22 February 24