ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರಪ್ಟ್ ಪರ್ಸನ್: ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅತ್ಯಂತ ಭ್ರಷ್ಟ ಎಂದಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯ ತಡೆಯಲು ವಿಫಲರಾದ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಮೈಸೂರಿನಲ್ಲಿ ಆಗ್ರಹಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ವಿಚಾರ ಸಂಬಂಧವಾಗಿಯೂ ಪ್ರತಿಕ್ರಿಯಿಸಿದ ಅವರು, ಎಸ್​ಐಆರ್​ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಟ್ಟಿದ್ದಲ್ಲ ಎಂದಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರಪ್ಟ್ ಪರ್ಸನ್: ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ
ಛಲವಾದಿ ನಾರಾಯಣಸ್ವಾಮಿ ಮತ್ತು ಪ್ರಿಯಾಂಕ್​​ ಖರ್ಗೆ
Image Credit source: Tv9 Kannada and PTI
Edited By:

Updated on: Sep 29, 2026 | 12:58 PM

ಮುಖ್ಯಾಂಶಗಳು

  • ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ - ವಿಪಕ್ಷ ನಾಯಕ ನಾರಾಯಣಸ್ವಾಮಿ
  • ಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ ಪರಿಷತ್​ ವಿಪಕ್ಷ ನಾಯಕ ನಾರಾಯಣಸ್ವಾಮಿ
  • RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ - ವಿಪಕ್ಷ ನಾಯಕ ನಾರಾಯಣಸ್ವಾಮಿ ಹೇಳಿಕೆ

ಮೈಸೂರು, ಸೆಪ್ಟೆಂಬರ್​​ 29: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರಪ್ಟ್ ಪರ್ಸನ್ ಎಂದು ಮೈಸೂರಿನಲ್ಲಿ ಪರಿಷತ್​ ವಿಪಕ್ಷ ನಾಯಕ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ದಲಿತರ ಮಾರಣ ಹೋಮ ಆಗುತ್ತಿದೆ. ಈ ಬಗ್ಗೆ ಗೃಹ ಸಚಿವರು ಒಂದೇ ಒಂದು ಸ್ಟೇಟ್​ಮೆಂಟ್ ಕೊಟ್ಟಿಲ್ಲ. ಇಂತಹ ಗೃಹ ಸಚಿವರು ನಮಗೆ ಬೇಕಾ? ಎಂದು ಪ್ರಶ್ನಿಸಿರುವ ಅವರು, ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಗ್ರಹಿಸಿದ್ದಾರೆ. ಸೋಲಿನ ಭಯದಿಂದ ಲೂಟಿ ಮಾಡುವುದಕ್ಕೆ ಕಾಂಗ್ರೆಸ್ ಇಳಿದಿದ್ದು, ಈ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. SCSP-TSP ಹಣ ದುರ್ಬಳಕೆ ಮಾಡಲಾಗಿದೆ ಎಂದವರು ದೂರಿದ್ದಾರೆ.

‘RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ’

Chalavadi Narayaswamy:ಗೃಹಸಚಿವರು ಮನೆ ಗೃಹ ಬಿಟ್ಟು ಆಚೆನೇ ಬರ್ತಿಲ್ಲ ಖರ್ಗೆಗೆ ಪ್ರಿಯಾಂಕ್​ ಖರ್ಗೆ ಟಾಂಗ್! |#TV9D

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಗೃಹ ಬಿಟ್ಟು ಆಚೆ ಬರುತ್ತಿಲ್ಲ. ಬರೀ ಆರ್​ಎಸ್​ಎಸ್​​ ಬಗ್ಗೆ ಅವರು ಮಾತಾಡ್ತಿದ್ದಾರೆ. ಬೇರೆಯವರ ಚಡ್ಡಿ ಯಾಕೆ ನೋಡ್ತೀರಿ, ನಿಮ್ದು ನೋಡ್ಕೊಳ್ಳಿ. RSSನವರು ಯಾರನ್ನಾದ್ದರೂ ಥಳಿಸಲಿಕ್ಕೆ ಲಾಠಿ ಬಳಸಿದ್ದಾರಾ? RSS ಮುಗಿಸಲು ಪ್ರಿಯಾಂಕ್ ಖರ್ಗೆ ಅಪ್ಪನಿಂದಲೂ ಆಗಿಲ್ಲ. RSS ಮೇಲೆ ಕ್ರಿಮಿನಲ್ ಕೇಸ್​ ಇಲ್ಲ ಅಂತ ನೀವೇ ಹೇಳಿದ್ದೀರಿ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನೀವೆಲ್ಲೂ ಮಾತಾಡಿಲ್ಲ. ಆದರೆ ರಾಜ್ಯದ ಗೃಹ ಸಚಿವರಿಗೆ ಬರೀ ಆರ್​ಎಸ್​ಎಸ್​ ಚಿಂತೆ. ದಲಿತರ ಉದ್ಧಾರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದಲಿತರ ಹೆಸರು ಬಳಸಿಕೊಂಡು ಆಸ್ತಿ ಮಾಡಿದ್ದಾರೆ ಅಷ್ಟೇ. ಗೃಹ ಸಚಿವರ ಭಾಗದಲ್ಲೇ 13 ಅಟ್ರಾಸಿಟಿ ಕೇಸ್ ದಾಖಲಾಗಿವೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸತೀಶ್​​ ಜಾರಕಿಹೊಳಿ ಇಲಾಖೆಗೆ ಗುತ್ತಿಗೆದಾರರಿಂದ ಬಹುಪರಾಕ್​​: ಭ್ರಷ್ಟಾಚಾರ ಆರೋಪದ ನಡುವೆ ಮಹತ್ವದ ಬೆಳವಣಿಗೆ

‘ಮತ ಕಳ್ಳತನ ಆಗ್ತಿಲ್ಲ, ಆಗೋದು ಇಲ್ಲ’

ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ವಿಚಾರ ಸಂಬಂಧವಾಗಿಯೂ ಪ್ರತಿಕ್ರಿಯಿಸಿದ ಅವರು, ಎಸ್​ಐಆರ್​ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧ ಪಟ್ಟಿದ್ದಲ್ಲ. ಅದು ಚುನಾವಣಾ ಆಯೋಗದ ಕೆಲಸ. ಹೀಗಿದ್ದರೂ SIR ವಿಚಾರವಾಗಿ ಕಾಂಗ್ರೆಸ್ ಸಮಸ್ಯೆ ಉಂಟು ಮಾಡಲು ಹೊರಟಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ SIR ನಡೆದಿದೆ, ಆಗ ವಿವಾದ ಆಗಿರಲಿಲ್ಲ ಎಂದವರು ಹೇಳಿದ್ದಾರೆ. ಪ್ರಧಾನಿ ಆಗಬೇಕು ಅಂತಾ ರಾಹುಲ್​​ ಗಾಂಧಿ ಅಭಿಜಿತ್ ದಿಪ್ಕೆ ಫಾಲೋವರ್ ಆಗಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾದವರನ್ನು ನಾವು ಹಾಗೆ ಬಿಡಬೇಕಾ? ಕಾಂಗ್ರೆಸ್​ ಗೆಲ್ಲಲು ಸಾಧ್ಯವಾಗದ ಕಡೆ ವೋಟ್​ ಚೋರಿ ಅಂತಾರೆ. ಮತ ಕಳ್ಳತನ ಆಗ್ತಿಲ್ಲ, ಆಗೋದು ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಸಾಮನ್ಯವಾಗಿ ಕೇಳಲಾಗುವ ಪ್ರಶ್ನೆ ಉತ್ತರಗಳು

ಪ್ರಶ್ನೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ ಎಂದು ಹೇಳಿದ್ಯಾರು?

ಉತ್ತರ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮೋಸ್ಟ್ ಕರೆಪ್ಟ್ ಪರ್ಸನ್ ಎಂದು ಹೇಳಿದ್ದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ಪ್ರಶ್ನೆ: ಪ್ರಿಯಾಂಕ್ ಖರ್ಗೆ ಯಾರು?

ಉತ್ತರ: ಪ್ರಿಯಾಂಕ್ ಖರ್ಗೆ ಕರ್ನಾಟಕ ಸರ್ಕಾರದ ಗೃಹ ಸಚಿವ, ಮಲ್ಲಿಕಾರ್ಜುನ ಖರ್ಗೆ ಮಗ

ಪ್ರಶ್ನೆ: ಛಲವಾದಿ ನಾರಾಯಣಸ್ವಾಮಿ ಯಾರು?

ಉತ್ತರ: ಛಲವಾದಿ ನಾರಾಯಣಸ್ವಾಮಿ ಕರ್ನಾಟಕ ವಿಧಾನ ಪರಿಷತ್​ ವಿಪಕ್ಷ ನಾಯಕ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 12:37 pm, Tue, 29 September 26

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us