Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯಗೆ ಧಮ್​, ತಾಕತ್​ ಇದ್ರೆ ಅಭಿವೃದ್ಧಿ ರಾಜಕಾರಣ ಮಾಡಲಿ, ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಬೇಡಿ -ಪ್ರತಾಪ್ ಸಿಂಹ

ಸಿದ್ದರಾಮಯ್ಯ ಅವರೆ ನಿಮಗೆ ನಿಜವಾಗಲೂ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟು ಕೊಂಡು ರಾಜಕಾರಣ ಮಾಡಿ. ಈ ತರ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯಗೆ ಧಮ್​, ತಾಕತ್​ ಇದ್ರೆ ಅಭಿವೃದ್ಧಿ ರಾಜಕಾರಣ ಮಾಡಲಿ, ನನ್ನ ಮೇಲೆ ವೈಯಕ್ತಿಕ ದಾಳಿ ಮಾಡಬೇಡಿ -ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on: Dec 26, 2023 | 1:44 PM

ಮೈಸೂರು, ಡಿ.26: ಸಂಸತ್​ ಘಟನೆ ಬಳಿಕ ನನ್ನ ಮೇಲೆ ಕಾಂಗ್ರೆಸ್​ನಿಂದ ವೈಯಕ್ತಿಕ ದಾಳಿ ನಡೆಯುತ್ತಿದೆ ಎಂದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಆರೋಪ ಮಾಡಿದ್ದಾರೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನವರೆಗೂ ನನ್ನ ಟಾರ್ಗೆಟ್ ಮಾಡಲಾಗುತ್ತಿದೆ. ನನ್ನನ್ನು ಭಯೋತ್ಪಾದಕ ಅಂತಾ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ನನ್ನ ಸಹೋದರ ಮರಗಳ್ಳ ಅಂತ ಕಾಂಗ್ರೆಸ್ಸಿಗರು ಪೋಸ್ಟ್ ಮಾಡಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಸಹೋದರನ ಮೇಲೆ ನೂರಾರು ಮರ ಕಡಿದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಸಂಸತ್ ಘಟನೆ ನಂತರ ಕಾಂಗ್ರೆಸ್ ನನ್ನ ಮೇಲೆ ವೈಯಕ್ತಿಕ ದಾಳಿ ಜಾಸ್ತಿ ಮಾಡಿದೆ. ಕಾರ್ಯಕರ್ತನಿಂದ ಹಿಡಿದು ಸಿಎಂ ಪುತ್ರನ ವರೆಗೂ ಎಲ್ಲರೂ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನ ಭಯೋತ್ಪಾದಕ ಅಂತಾ ಬಿಂಬಿಸುವ ಪ್ರಯತ್ನ ಕಾಂಗ್ರೆಸಿಗರು ಮಾಡಿದರು. ಮುಸ್ಲಿಂರೆಲ್ಲಾ ಭಯೋತ್ಪಾದಕರು ಅನ್ನೋ ರೀತಿ ನನಗೆ ಮುಸ್ಲಿಂ ವೇಷ ತೊಡಿಸಿ ಕೈಯಲ್ಲಿ ಬಾಂಬ್ ಕೊಟ್ಟಿದ್ದರು. ಸಂಸತ್ ವಿಚಾರದಲ್ಲಿ ನಾನು ಸ್ಪಷ್ಟನೆ ಕೊಟ್ಟ ಬೆನ್ನಲೆ ಪ್ರತಾಪ್ ಸಿಂಹ ಸಹೋದರ ಮರಗಳ್ಳ ಅಂತಾ ಕಾಂಗ್ರೆಸ್ ನವರು ಪೋಸ್ಟ್ ಮಾಡಿದ್ದರು. ಡಿ.‌ 16 ರಂದು ಎಫ್​ಐಆರ್ ಆಗಿದೆ ಅದನ್ನು ಮೊನ್ಮೆ ನನ್ನ ತಮ್ಮನ ಹೆಸರಿನಲ್ಲಿ ತಿರುಚಿದ್ದು ಯಾಕೆ? ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Electric Bus: 100 ಹೊಸ ಎಲೆಕ್ಟ್ರಿಕ್ ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ, ವಿಶೇಷತೆಗಳೇನು?

ಪ್ರತಾಪ್ ಸಿಂಹನನ್ನು ಈ ಕ್ಷೇತ್ರದಲ್ಲಿ ಸೋಲಿಸಲು ಆಗಲ್ಲ ಅಂತಾ ಸಿದ್ದರಾಮಯ್ಯ ಅವರಿಗೆ ಗೊತ್ತು. FIRನಲ್ಲಿ ತಮ್ಮನ ಹೆಸರಿಲ್ಲ, ಆದ್ರೂ ಅವನ ಹೆಸರು ಏಕೆ ತರುತ್ತಿದ್ದಾರೆ. ನನ್ನ ತಮ್ಮಂದಿರು, ತಂಗಿ ಯಾರು ಅಂತನೂ ಮೈಸೂರು ಜನ ನೋಡಿಲ್ಲ. ಚುನಾವಣೆ ವೇಳೆ ನನ್ನ ತಮ್ಮಂದಿರು 1 ತಿಂಗಳು ಬಂದು ಹೋಗ್ತಾರೆ ಅಷ್ಟೇ. ಮೈಸೂರು ಕಡೆ ಅವರು ಮತ್ತೆ ಯಾವತ್ತೂ ತಲೆ ಹಾಕಲ್ಲ. ಯಾವ ಸಂಸದರು, ಶಾಸಕರ ಸಹೋದರರು ಕೃಷಿ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ ಹೇಳಿ?

ನನ್ನ ಸಹೋದರರು ಕೃಷಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಮಿನಜ, ಮಿನಿಟ್, ಕಾಂಟ್ರಾಕ್ಟ್, ವರ್ಗಾವಣೆ ಯಾವುದರಲ್ಲೂ ನನ್ನ ಸಹೋದರರು ಇಲ್ಲ. ಪ್ರತಾಪ್ ಸಿಂಹಗೆ ಅವಹೇಳನ ಮಾಡಬೇಕು ಅಂತಾ ಹೀಗೆ ಮಾಡುತ್ತಿದ್ದಾರೆ. ನಿಮ್ಮದೆ ಪೊಲೀಸ್ ಇಲಾಖೆ, ನಿಮ್ಮದೆ ಸರಕಾರ ಇದೆ ತನಿಖೆ ಮಾಡಿ. ಕಾಂಗ್ರೆಸ್​ಗೆ ನನ್ನ ಮೇಲೆ ಯಾಕೆ ದ್ವೇಷ? ನಿಮಗೆ, ಬಡವರ ಮಕ್ಕಳು ರಾಜಕಾರಣ ಮಾಡಬಾರದಾ? 9 ವರ್ಷದಲ್ಲಿ ನಾನು ಏನು ಕೆಲಸ ಮಾಡಿದ್ದೇನೆ ಸಿದ್ದರಾಮಯ್ಯ ಅವರು 40 ವರ್ಷದಲ್ಲಿ ಏನು ಮಾಡಿದ್ದಾರೆ ಹೇಳಲಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ

ನೀನು ಗೌಡ, ಕುರುಬು, ನೀನು ಲಿಂಗಾಯತ ಅಂತಾ ನಾನು ಅವರ ರೀತಿ ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾತ್ರ ನಾನು ಮಾಡುವುದು. ನಿರಂತರವಾಗಿ ನನ್ನ ಮೇಲೆ ದಾಳಿ ನಡೆಯುತ್ತಿದೆ. ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತ ಕೂಡಲೆ ಸಿದ್ದರಾಮಯ್ಯ ಕುರ್ಚಿ ಅಲ್ಲುಗಾಡುತ್ತದೆ. ಹೀಗಾಗಿ ನನ್ನ ಮೇಲೆ ಸತತ ಅಕ್ರಮಣ ಸಾಗಿದೆ. ಸಿದ್ದರಾಮಯ್ಯ ಅವರೆ ನಿಮಗೆ ನಿಜವಾಗಲೂ ತಾಕತ್ತು, ಧಮ್ ಇದ್ದರೆ ಅಭಿವೃದ್ಧಿ ಇಟ್ಟು ಕೊಂಡು ರಾಜಕಾರಣ ಮಾಡಿ. ಈ ತರ ದ್ವೇಷದ ರಾಜಕಾರಣ ಮಾಡಬೇಡಿ. ಸಿದ್ದರಾಮಯ್ಯ ಅವರು ಅಭದ್ರತೆಯಿಂದ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ 28 ಜನ ಸಂಸದರು ಇದ್ದಾರೆ. ಆದರೆ ಪ್ರತಾಪ್ ಸಿಂಹನ ಮಾತ್ರ ಟಾರ್ಗೆಟ್ ಮಾಡುತ್ತಾರೆ ಏಕೆ? ನಾನು ಸೋಮಾರಿ ಸಿದ್ದನ ರೀತಿ ಸುಮ್ಮನೆ ಕುಳಿತು ಕೊಂಡು ಜಾತಿ ರಾಜಕಾರಣ ಮಾಡಿಲ್ಲ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದೇನೆ ಹೀಗಾಗಿ ನಾನೇ ಟಾರ್ಗೆಟ್ ಆಗುತ್ತಿದ್ದೇನೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ