AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ನಡೆಯಬೇಕಿದ್ದ ‘ಯುವ ದಸರಾ’ ಕಾರ್ಯಕ್ರಮ ರದ್ದು

ಮೈಸೂರು ದಸರಾ 2023: ಅಕ್ಟೋಬರ್ 16ರಂದು ಮಳೆಯ ಅಬ್ಬರ ಮುಂದುವರಿದು ಯುವ ದಸರಾ ಕಾರ್ಯಕ್ರಮ ರದ್ದುಗೊಂಡಿದೆ. ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರ 'ಸ್ಯಾಂಡಲ್‌ವುಡ್ ನೈಟ್ಸ್' ರದ್ದಾಗಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ, ಮಳೆ ನಡುವೆಯೂ ರೈತ ದಸರಾ ಅದ್ಧೂರಿಯಾಗಿ ಸಾಗಿ, ರೈತರು, ಜಾನುವಾರುಗಳು, ಜನಪದ ಕಲೆಗಳು ಮೆರವಣಿಗೆಗೆ ಮೆರುಗು ನೀಡಿದವು.

ಇಂದು ನಡೆಯಬೇಕಿದ್ದ 'ಯುವ ದಸರಾ' ಕಾರ್ಯಕ್ರಮ ರದ್ದು
ಸಾಂದರ್ಭಿಕ ಚಿತ್ರ Image Credit source: Tv9 kannada
ರಾಮ್​, ಮೈಸೂರು
| Edited By: |

Updated on: Oct 16, 2026 | 11:00 AM

Share

ಮೈಸೂರು, ಅ.16: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ವರುಣ ದೇವನ ಅಬ್ಬರ ಮುಂದುವರಿದಿದೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 16) ರಾತ್ರಿ ನಡೆಯಬೇಕಿದ್ದ ‘ಯುವ ದಸರಾ’ ಕಾರ್ಯಕ್ರಮವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಮತ್ತೊಂದೆಡೆ, ದಸರಾದ 6ನೇ ದಿನವಾದ ಇಂದು ಮಳೆಯ ಸಿಂಚನದ ನಡುವೆಯೇ ರೈತ ದಸರಾ ಮೆರವಣಿಗೆ ಅತ್ಯಂತ ಕಳೆಕಟ್ಟಿತು. ಯುವ ದಸರಾ ವೇದಿಕೆಯಲ್ಲಿ ಇಂದು ‘ಸ್ಯಾಂಡಲ್ ವುಡ್ ನೈಟ್ಸ್’ (Sandalwood Nights) ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಯಕ ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರ ಸಂಗೀತ ರಸಸಂಜೆ ನಿಗದಿಯಾಗಿತ್ತು.

ಟ್ರಿಕ್ ಹೀರೋ ಶಿವರಾಜ್‌ಕುಮಾರ್, ನಟ ಡಾಲಿ ಧನಂಜಯ್, ನಟಿ ರಚಿತಾ ರಾಮ್, ಚಂದನ್ ಶೆಟ್ಟಿ, ಅನುರಾಧ ಭಟ್, ಜಾಸ್ಕರಣ್ ಸಿಂಗ್, ಐಶ್ವರ್ಯ ರಂಗರಾಜನ್ ಸೇರಿದಂತೆ ಹಲವು ಗಣ್ಯರು ಹಾಗೂ ಸಿನಿತಾರೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಸಿಎಂ ಕೂಡ ಆಗಮಿಸುವ ಸಾಧ್ಯತೆಯಿತ್ತು. ಈಗಾಗಲೇ ನಿನ್ನೆ ರಾತ್ರಿ ಬಂದ ಮಳೆಯಿಂದಾಗಿ ಯುವ ದಸರಾ ಕಾರ್ಯಕ್ರಮ ಅರ್ಧಕ್ಕೆ ರದ್ದಾಗಿತ್ತು. ಪ್ರಸ್ತುತ ಮಳೆಯ ಮುನ್ಸೂಚನೆ ಹಾಗೂ ಸುರಕ್ಷತೆಯ ಕಾರಣದಿಂದ ಇಂದಿನ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆಯ ನಡುವೆಯೂ ಅದ್ಧೂರಿಯಾಗಿ ಜರುಗಿದ ‘ರೈತ ದಸರಾ’:

ನಾಡಹಬ್ಬ ಮೈಸೂರು ದಸರಾದ 6ನೇ ದಿನವಾದ ಇಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಅವರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ‘ರೈತ ದಸರಾ’ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯ ಬಳಿಕ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ. ಮೈದಾನದವರೆಗೆ ರೈತ ದಸರಾ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ತುಂತುರು ಮಳೆಯ ಸಿಂಚನದ ನಡುವೆಯೂ ಈ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.

ಇದನ್ನೂ ಓದಿ: ಮೈಸೂರಿನಲ್ಲಿ ಮಳೆ ರೌದ್ರಾವತಾರ! ಯುವ ದಸರಾ ಸ್ಥಗಿತ, ನೆಲಕ್ಕುರುಳಿದ ಸ್ಪೀಕರ್ ಟವರ್‌ಗಳು

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಹಳ್ಳಿಕಾರ್ ಎತ್ತುಗಳು, ಮಲೆನಾಡ್ ಗಿಡ್ಡ ಜನಾಂಗದ ಜಾನುವಾರುಗಳು, ಬಂಡೂರು ಕುರಿಗಳು, ಎತ್ತಿನ ಬಂಡಿಗಳು, ಕೃಷಿ ಉಪಕರಣಗಳು ಎಲ್ಲರ ಗಮನ ಸೆಳೆದವು. ಗೊರವರ ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು. ಟಿಬೆಟಿಯನ್ ರೈತರು ಹಾಗೂ ಕೊಡಗಿನ ವಿಶೇಷ ಬೆಳೆಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾದವು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More