AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ; ದಸರಾ ಮಹೋತ್ಸವಕ್ಕೆ ಅಡ್ಡಿಯಾಗುತ್ತಾ?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಬಾರಿ ಆನೆ ಅಭಿಮನ್ಯುವಿನ ಎಡಭಾಗದ ದಂತವು ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವಾಗ ಮುರಿದಿದೆ. ಘಟನೆಯಲ್ಲಿ ಆನೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಹಾಗೂ ಆರೋಗ್ಯ ಸ್ಥಿರವಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ. ಈ ದಂತ ಭಗ್ನದಿಂದ ಮುಂಬರುವ ಜಂಬೂ ಸವಾರಿಯ ಅಂಬಾರಿ ಹೊರುವ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ; ದಸರಾ ಮಹೋತ್ಸವಕ್ಕೆ ಅಡ್ಡಿಯಾಗುತ್ತಾ?
ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ
ಭಾವನಾ ಹೆಗಡೆ
|

Updated on: Jul 05, 2026 | 2:58 PM

Share

ಮುಖ್ಯಾಂಶಗಳು

  • ಮತ್ತಿಗೋಡು ಶಿಬಿರದಲ್ಲಿ ಮರದ ದಿಮ್ಮಿ ಸಾಗಿಸುವಾಗ ದಸರಾ ಆನೆ ಅಭಿಮನ್ಯು ದಂತ ಭಗ್ನ.
  • ಅಭಿಮನ್ಯು ಆನೆಗೆ ಗಂಭೀರ ಗಾಯಗಳಾಗಿಲ್ಲ, ಸಂಪೂರ್ಣ ಆರೋಗ್ಯವಾಗಿದೆ ಎಂದ ಪಶುವೈದ್ಯರು.
  • ದಂತ ಮುರಿತದಿಂದ ಮುಂಬರುವ ಮೈಸೂರು ದಸರಾ ಅಂಬಾರಿ ಸೇವೆಗೆ ಯಾವುದೇ ಅಡ್ಡಿಯಿಲ್ಲ.

ಮೈಸೂರು, ಜುಲೈ 05: ವಿಶ್ವವಿಖ್ಯಾತ ಮೈಸೂರು ದಸರಾ (Dasara) ಜಂಬೂ ಸವಾರಿಯಲ್ಲಿ ಸತತವಾಗಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ನಾಯಕ, 59 ವರ್ಷದ ‘ಅಭಿಮನ್ಯು’ ಆನೆಯ ಎಡಭಾಗದ ದಂತ ಮುರಿತಕ್ಕೊಳಗಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಸುವಾಗ ಈ ಅಚಾತುರ್ಯ ಸಂಭವಿಸಿದೆ.

ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ, ದಿಮ್ಮಿಗಳು ಆಕಸ್ಮಿಕವಾಗಿ ವಾಲಿಕೊಂಡಿವೆ. ಈ ವೇಳೆ ಭಾರವನ್ನು ತಡೆಯಲಾಗದೇ, ಮರದ ದಿಮ್ಮಿಗೆ ಬಡಿದು ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ತುದಿ ಭಾಗವು ಅರ್ಧಕ್ಕೆ ಕಟ್‌ ಆಗಿದೆ. ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗಳಲ್ಲಿ ಎದುರಾಳಿ ಪ್ರಾಣಿಗಳನ್ನು ಮಟ್ಟಹಾಕಲು ಅಭಿಮನ್ಯುವಿಗೆ ಈ ದಂತವೇ ಪ್ರಮುಖ ಶಕ್ತಿಯಾಗಿತ್ತು.

ಆನೆ ಸಂಪೂರ್ಣ ಆರೋಗ್ಯವಾಗಿದೆ

ದಂತ ಮುರಿತಕ್ಕೊಳಗಾದ ತಕ್ಷಣವೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಭಿಮನ್ಯುವಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ ಮತ್ತು ಆನೆ ಸದ್ಯ ಸಕ್ರಿಯವಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ದಂತದ ತುದಿ ಮುರಿದಿರುವುದರಿಂದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮುರಿದ ದಂತವು ಕಾಲಕ್ರಮೇಣ ಮತ್ತೆ ನೈಸರ್ಗಿಕವಾಗಿ ಬೆಳೆಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ದಸರಾ ಅಂಬಾರಿ ಹೊರುತ್ತಾನಾ ಅಭಿಮನ್ಯು?

2020ರಿಂದ ಸತತವಾಗಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊರುತ್ತಾ ಬಂದಿರುವ ಅಭಿಮನ್ಯು, ಮುಂಬರುವ 2026ರ ದಸರಾ ಮಹೋತ್ಸವದಲ್ಲೂ ಪಾಲ್ಗೊಳ್ಳಲಿದ್ದಾನೆ. ಸತತ 7ನೇ ಬಾರಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಗಜಪಡೆ ನಾಯಕನ ದಸರಾ ಕರ್ತವ್ಯಕ್ಕೆ ಈ ದಂತ ಮುರಿತದಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ. ಆದರೆ, ಈ ಬಾರಿ ಜಂಬೂ ಸವಾರಿಯಲ್ಲಿ ಅಭಿಮನ್ಯು ಮುರಿದ ದಂತದೊಂದಿಗೆ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಜುಲೈ 6 ರಿಂದ 12 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿವೆ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಕೈದಿಗಳು ಬೆಳೆದ ತರಕಾರಿ ಮುಗಿಬಿದ್ದು ಖರೀದಿಸಿದ ಅಧಿಕಾರಿಗಳು, ಸಿಬ್ಬಂದಿ
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಇಂದು ಈ ರಾಶಿಯವರು ಕೋಪ ತಾಪಗಳಿಗೆ ಒಳಗಾಗದೆ ಇದ್ದರೆ ಒಳಿತು
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಕಾಂಗ್ರೆಸ್​ನ ಕತ್ತೆಗಳು SIR ಪ್ರಕ್ರಿಯೆ ಹಾಳುಮಾಡುತ್ತಿವೆ: ವಿಜಯೇಂದ್ರ
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?