AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ವಿಮರ್ಶಕ ಜಿ.ಎಚ್ ನಾಯಕ್ ವಿಧಿವಶ

ಖ್ಯಾತ ವಿಮರ್ಶಕ ಜಿ.ಹೆಚ್​.ನಾಯಕ್​(88) ಅವರು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು (ಮೇ.26) ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಖ್ಯಾತ ವಿಮರ್ಶಕ ಜಿ.ಎಚ್ ನಾಯಕ್ ವಿಧಿವಶ
ಜಿ ಹೆಚ್​​ ನಾಯಕ್​
ವಿವೇಕ ಬಿರಾದಾರ
|

Updated on:May 26, 2023 | 3:18 PM

Share

ಮೈಸೂರು: ಖ್ಯಾತ ವಿಮರ್ಶಕ ಜಿ.ಹೆಚ್​.ನಾಯಕ್​(88) (GH Nayak) ಅವರು ವಿಧಿವಶರಾಗಿದ್ದಾರೆ. ಅವರಿಗೆ ಪತ್ನಿ ಮೀರಾ ನಾಯಕ್​​, ಪುತ್ರಿ ಕೀರ್ತಿ ಹಾಗೂ ಮೊಮ್ಮಕ್ಕಳು ಇದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು (ಮೇ.26) ಮೈಸೂರಿನ (Mysore) ಕುವೆಂಪು ನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಜಿ.ಹೆಚ್​. ನಾಯಕ್ ಅವರು ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದವರಾದ ಜಿ.ಹೆಚ್​. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂದೆ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ನಿವೃತ್ತಿ ಬಳಿಕ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿದ್ದರು.

ಕೃತಿಗಳು

ಸಮಕಾಲೀನ (1973)

ಅನಿವಾರ್ಯ (1980)

ನಿರಪೇಕ್ಷೆ (1984)

ನಿಜದನಿ (1988)

ವಿನಯ ವಿಮರ್ಶೆ (1991)

ಸಕಾಲಿಕ (1995)

ಗುಣ ಗೌರವ (2002)

ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002)

ಕೃತಿ ಸಾಕ್ಷಿ (2006)

ಸ್ಥಿತಿ ಪ್ರಜ್ಞೆ (2007)

ಮತ್ತೆ ಮತ್ತೆ ಪಂಪ (2008)

ಸಾಹಿತ್ಯ ಸಮೀಕ್ಷೆ (2009)

ಉತ್ತರಾರ್ಧ (2011)

ಸಂಪಾದನೆ

ಕನ್ನಡ ಸಣ್ಣಕಥೆಗಳು

ಹೊಸಗನ್ನಡ ಕವಿತೆಗಳು

ಸಂವೇದನೆ (ಅಡಿಗರ ಗೌರವ ಗ್ರಂಥ)

ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ

ಶತಮಾನದ ಕನ್ನಡ ಸಾಹಿತ್ಯ (ಸಂಪುಟ – ೧.೨)

ಪ್ರಶಸ್ತಿಗಳು

ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಿರಪೇಕ್ಷ ವಿಮರ್ಶಾ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ಯ ಪ್ರಶಸ್ತಿ.

ನಿಜದನಿ ವಿಮರ್ಶಾ ಕೃತಿಗೆ ‘ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ’ ಲಭಿಸಿವೆ.

ಪಂಪ ಪ್ರಶಸ್ತಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Fri, 26 May 23