ರಾಜ್ಯದ ಮೂರು ಜಿಲ್ಲೆಗಳಲ್ಲಿ ಎನ್ಐಎ ಅಧಿಕಾರಿಗಳ ದಾಳಿ; ಶಂಕಿತ ಉಗ್ರರ ಬಂಧನ
ಇಂದು ಬೆಳಗ್ಗೆ (ಜುಲೈ 31) ಎನ್ಐಎ, ರಾಜ್ಯ ಗುಪ್ತದಳ ಅಧಿಕಾರಿಗಳು ಉತ್ತರ ಕನ್ನಡ, ತುಮಕೂರು, ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು: ಇಂದು ಬೆಳಗ್ಗೆ (ಜುಲೈ 31) ಎನ್ಐಎ (NIA), ರಾಜ್ಯ ಗುಪ್ತದಳ ಅಧಿಕಾರಿಗಳು ಉತ್ತರ ಕನ್ನಡ (Uttar Kannada), ತುಮಕೂರು (Tumakuru) ಮತ್ತು ಬೆಳಗಾವಿ (Belagavi) ಜಿಲ್ಲೆಯಲ್ಲಿ ಏಕ ಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ತುಮಕೂರು, ಭಟ್ಕಳದಲ್ಲಿ ತಲಾ ಒಬ್ಬೊಬ್ಬ ಶಂಕಿತ ಉಗ್ರರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಮರಳೂರು ದಿಣ್ಣೆ ಮೂಲದ ನಿವಾಸಿ ಮನೆ ಮೇಲೆ ಎನ್ಐಎ ದಾಳಿ ಮಾಡಿದ್ದು, ಓರ್ವ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರ, ISIS ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದಾನೆ ಎಂಬ ಆರೋಪದಡಿ ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರ ಮೂಲದ ಯುನಾನಿ ಮೆಡಿಕಲ್ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದು, ಶಂಕಿತ ಉಗ್ರನನ್ನು ಎನ್ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಇನ್ನುಳಿದ ಶಂಕಿತ್ರ ಉಗ್ರರನ್ನು ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು ಯಾವ ಸಂಘಟನೆ ಗೆ ಸೇರಿದ್ದಾರೆ ಎಂದು ಪರಿಶೀಲನೆ ಮಾಡುತ್ತಿದ್ದಾರೆ.
ಶಂಕಿತ ಉಗ್ರರು ಐಸಿಎಸ್ ಜೊತೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಜೂನ್ 25 ರಂದು ಸುಮೋಟೋ ಕೇಸ್ ಎನ್ಐಎ ದಾಖಲಿಸಿತ್ತು. IPC 153A, 153B ಹಾಗೂ UAPA 18, 18b, 38, 39, 40 ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದೆ. ಎನ್ಐಎ ದಾಳಿ ವೇಳೆ ಹಲವು ದಾಖಲೆಗಳನ್ನು ಪರಿಶೀಲಿಸಿದೆ. ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಮಹಾರಾಷ್ಟ್ರ ಮೂಲದ ಸಾಜಿದ್ ಮಕ್ರಾನಿ ಬಂಧಿಸಿದ ಎನ್ಐಎ: ತುಮಕೂರಿನಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮಹಾರಾಷ್ಟ್ರ ಮೂಲದವನಾಗಿದ್ದಾನೆ. ಸಾಜಿದ್ ಮಕ್ರಾನಿ ಬಂಧಿತ ಶಂಕಿತ ಉಗ್ರ. ಈತನು ಯುನಾನಿ ಕೋರ್ಸ್‌ನ 3ನೇ ವರ್ಷದ ವಿದ್ಯಾರ್ಥಿಯಾಗಿದ್ದು, ತುಮಕೂರಿನ ಸದಾಶಿವನಗರದ 9ನೇ ಕ್ರಾಸ್ ರಂಗಸ್ವಾಮಿ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದನು. ಶಂಕಿತ ಉಗ್ರ ಸಾಜಿದ್ ಮಕ್ರಾನಿ ಮೂವರು ಸ್ನೇಹಿತರೊಂದಿಗೆ ವಾಸವಿದ್ದನು.
ಶಂಕಿತ ಉಗ್ರ ಅರೆಸ್ಟ್ ಹಿನ್ನೆಲೆ ಮಾಜಿ ಶಾಸಕ ರಫೀಕ್ ಅಹಮದ್ ಮಾತನಾಡಿ ಖಾಸಗಿ ಮೆಡಿಕಲ್ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿರವ ಬಗ್ಗೆ ವದಂತಿ ಇದೆ. ಯುನಾನಿ ಮೆಡಿಕಲ್ ಕಾಲೇಜ್ನ್ನು ನಮ್ಮ ಹೆಚ್ಎಮ್ ಎಸ್ ಸಂಸ್ಥೆಯಿಂದ ಬಾಂಬೆಯ ಆಡಳಿತ ಮಂಡಳಿಗೆ ಮಾರಾಟ ಮಾಡಿದ್ದೇವೆ. ಬಾಂಬೆ ಆಡಳಿತ ಮಂಡಳಿಯವರು ಯುನಾನಿ ಮೆಡಿಕಲ್ ಕಾಲೇಜ್ ನಡೆಸಿಕೊಂಡು ಹೋಗುತ್ತಾ ಇದ್ದಾರೆ ಎಂದರು.
ಯುನಾನಿ ಮೆಡಿಕಲ್ ಕಾಲೇಜ್ಗೂ ನಮ್ಮ ಖಾಸಗಿ ವಿದ್ಯಾ ಸಂಸ್ಥೆಗೂ ಸಂಬಂದವಿಲ್ಲ. ಕಳೆದ 15 ವರ್ಷಗಳಿಂದ ಸಂಬದವಿಲ್ಲ. ಅವರೇ ನಡೆಸಿಕೊಂಡು ಬರುತ್ತಿದ್ದಾರೆ. ಕೆಲವು ವದಂತಿಗಳು ಇದಾವೆ. ಖಾಸಗಿ ಅಂತಾ ಆದರೆ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಭಟ್ಕಳದಲ್ಲಿ ಬಂಧಿತನಾದ ಶಂಕಿತ ಉಗ್ರನ ಮೇಲೆ Suomoto ಕೇಸ್: ಭಟ್ಕಳದಲ್ಲಿ ಬಂಧಿತನಾದ ಶಂಕಿತ ಉಗ್ರನ ಮೇಲೆ ಎನ್‌ಐಎ ಅಧಿಕಾರಿಗಳು ಸುಮೋಟೋ (Suomoto) ಪ್ರಕರಣ ದಾಖಲಿಸಿದ್ದಾರೆ. ಅಬ್ದುಲ್ ಮುಕ್ತದರ್ ಬಂಧಿತ ಶಂಕಿತ ಉಗ್ರನಾಗಿದ್ದು, ಈತನ ಮೇಲೆ ಪ್ರಕರಣ ದಾಖಲಾಗಿದೆ. ಶಂಕಿತ ಉಗ್ರ ಐಎಸ್‌ಐ ಕಳಿಸುವ ಲೇಖನಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದನು.
Published On - 2:37 pm, Sun, 31 July 22