AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುಗಿಲೆದ್ದ ಭೂಮಿ ಕಳೆದುಕೊಂಡ ರೈತರ ಆಕ್ರೋಶ: ಬೆಳಗಾವಿ ನೀರಾವರಿ ಕಚೇರಿಗೆ ನುಗ್ಗಿ ಪ್ರತಿಭಟನೆ

ಜೀವನಕ್ಕೆ ಆಧಾರವಾಗಿದ್ದ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ ಪರಿಹಾರದ ಭರವಸೆ ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಗದ ಪರಿಹಾರ ಇಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇಂದು ಬೆಳಗ್ಗೆ ಊರುಗಳಿಂದಲೇ ಜಾನುವಾರುಗಳ ಸಮೇತ ಕಚೇರಿಗೆ ನುಗ್ಗಿ ಒಳ ಭಾಗದಲ್ಲೇ ಕುಟುಂಬ ಸಮೇತ ಹೋರಾಟಕ್ಕೆ ಕುಳಿತಿದ್ದಾರೆ.

ಭುಗಿಲೆದ್ದ ಭೂಮಿ ಕಳೆದುಕೊಂಡ ರೈತರ ಆಕ್ರೋಶ: ಬೆಳಗಾವಿ ನೀರಾವರಿ ಕಚೇರಿಗೆ ನುಗ್ಗಿ ಪ್ರತಿಭಟನೆ
ರೈತರ ಪ್ರತಿಭಟನೆ
ಸಹದೇವ್​ ಮಾನೆ
| Edited By: |

Updated on: Mar 11, 2024 | 9:38 PM

Share

ಬೆಳಗಾವಿ, ಮಾರ್ಚ್​​ 11: ನಾಲ್ಕು ದಶಕಗಳಿಂದ ಭೂಮಿ ಕಳೆದುಕೊಂಡ ಹಿಡಕಲ್ ಜಲಾಶಯ (Hidkal Dam) ದ ಸಂತ್ರಸ್ತರು. ಜೀವನಕ್ಕೆ ಆಧಾರವಾಗಿದ್ದ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ ಪರಿಹಾರದ ಭರವಸೆ ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಗದ ಪರಿಹಾರ ಇಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇಂದು ಬೆಳಗ್ಗೆ ಊರುಗಳಿಂದಲೇ ಜಾನುವಾರುಗಳ ಸಮೇತ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ರೈತರು ಅಲ್ಲಿಂದ ಮೆರವಣಿಗೆ ಮೂಲಕ ಹೊರಟ ನೀರಾವರಿ ಕಚೇರಿ ತಲುಪಿದರು. ಕಚೇರಿಗೆ ನುಗ್ಗಿ ಒಳ ಭಾಗದಲ್ಲೇ ಕುಟುಂಬ ಸಮೇತ ಹೋರಾಟಕ್ಕೆ ಕುಳಿತಿದ್ದಾರೆ.

ಬಳಿಕ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು, ರೈತರ ಜೊತೆ ನಿತೇಶ್ ಪಾಟೀಲ್ ಸಂಧಾನ ಸಭೆ ವಿಫಲವಾಗಿದೆ. ನೀರಾವರಿ ಇಲಾಖೆ ವಿರುದ್ಧ ರೈತ ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಬರಿದಾಗುತ್ತಿದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಹಿಡಕಲ್ ಜಲಾಶಯ

ರೈತರ ಜೊತೆಗಿನ ಸಂಧಾನ ಸಭೆ ವಿಫಲ ಹಿನ್ನೆಲೆ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಡಿಸಿ ನಿತೇಶ್ ಪಾಟೀಲ್ ಸಭೆ ಮಾಡಿದರು. ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.

ಡಿಸಿ ನಿತೇಶ್ ಪಾಟೀಲ್ ಹೇಳಿದ್ದಿಷ್ಟು 

ಅಧಿಕಾರಿಗಳ ಸಭೆ ಬಳಿಕ ಬೆಳಗಾವಿ ಡಿಸಿ ನಿತೇಶ್ ಪಾಟೀಲ್​ ಪ್ರತಿಕ್ರಿಯಿಸಿದ್ದು, ಮಾಸ್ತಿಹೊಳಿ ಗ್ರಾಮದಲ್ಲಿ 394 ಎಕರೆ ಜಮೀನನ್ನ ಹಿಡಕಲ್ ಜಲಾಶಯಕ್ಕೆ ಭೂಸ್ವಾಧೀನ ಸಂಬಂಧಿಸಿದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರೊಂದಿಗೆ ನಾಲ್ಕು ಗಂಟೆಗಳ ಕಾಲ ಸುದೀರ್ಘ ಚರ್ಚೆ ಮಾಡಿದ್ದೇವೆ. 137ಎಕರೆ 09ಗುಂಟೆಗೆ ಯಾವುದೇ ಭೂ‌ಸ್ವಾಧೀನ ಆಗಿರುವ ಬಗ್ಗೆ ದಾಖಲೆ ಇಲ್ಲ. 156ಎಕರೆಗೂ ಪೇಮೆಂಟ್ ರಿಸಿವ್ಡ್ ಗೆ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಹೊಸ ಭೂಸ್ವಾಧೀನ ನಿಯಮದಂತೆ ಹೊಸ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ರೈತರ ಬೇಡಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ: 30 ಅಡಿ ಆಳದ ಬಾವಿಗೆ ಮೆಟ್ಟಿಲುಗಳೇ ಇಲ್ಲ! ಜೀವ ಭಯದಲ್ಲೇ ಜೀವ ಜಲ ತುಂಬಿಸಿಕೊಳ್ಳುವ ಅನಿವಾರ್ಯತೆ ಈ ಮಹಿಳೆಯರದ್ದು

ಇದರ ಬಗ್ಗೆಯೂ ಸರ್ಕಾರದ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಇವತ್ತೆ ಹೊಸ ಪ್ರಸ್ತಾನೆ ಕಳುಹಿಸಲು ಅಧಿಕಾರಿಗಳು ಒಪ್ಪಿದ್ದಾರೆ. ರಾತ್ರಿ ಎಷ್ಟೇ ಸಮಯವಾದರೂ ಕೂಡ ಇಂದೇ ಹೊಸ ಪ್ರಸ್ತಾವನೆ ಬರುತ್ತೆ. ರೈತರ ಹಿತದೃಷ್ಟಿಯಿಂದ ಇವತ್ತು ರಾತ್ರಿಯೇ ಹೊಸ ಪ್ರಸ್ತಾವನೆಯನ್ನ ರೆಡಿ ಮಾಡಿ ಕೊಡುತ್ತಾರೆ. ರೈತರು ಪ್ರತಿಭಟನೆ ಕೈಬಿಡಬೇಕೆಂದು ಮನವಿ ಮಾಡಿದ್ದೇವೆ. ಅಧಿಕಾರಿಗಳ ವಿರುದ್ಧ ರೈತರ ಏನೇ ದೂರುಗಳಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಬೆಂಗಳೂರು ಪೊಲೀಸರಿಂದ ಆಪರೇಷನ್ ಮುಕ್ತ: ಬಾಂಗ್ಲಾದೇಶಿಯರ ಗಡಿಪಾರಿಗೆ ಕ್ರಮ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಗೃಹಲಕ್ಷ್ಮಿಯರಿಗೆ ಬಿಗ್ ಅಪ್‌ಡೇಟ್: ಮನೆ-ಮನೆಗೆ ಭೇಟಿ ನೀಡಿ ಮರುಪರಿಶೀಲನೆ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಶೌಚಾಲಯದಲ್ಲೇ ಅಡುಗೆ, ಊಟ! ಕೋಲಾರ ಬಸ್ ನಿಲ್ದಾಣದಲ್ಲಿ ಅನಾಗರಿಕ ಕೃತ್ಯ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ಸೆಲೆಬ್ರಿಟಿಗಳಿಗೆ ಏಕೆ ಅಗ್ನಿಪರೀಕ್ಷೆ ಇಲ್ಲ? ಕಿಚ್ಚ ಸುದೀಪ್ ಸ್ಪಷ್ಟನೆ
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!
ರಾಯರ ಆರಾಧನಾ ‌ಮಹೋತ್ಸವದಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ!