ನಾಯಿಗಳಾಯ್ತು, ಈಗ ರಾಯಚೂರಿನಲ್ಲಿ ಹಂದಿಗಳ ಡೆಡ್ಲಿ ಅಟ್ಯಾಕ್: ಬಾಲಕಿಯ ಎಳೆದಾಡಿ ಕಚ್ಚಿಹಾಕಿದ ಹಂದಿಗಳು!
ಇತ್ತೀಚೆಗೆ ಸಿಂಧನೂರು ಪಟ್ಟಣ ಹಾಗೂ ರಾಯಚೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಜನ ರೋಸಿ ಹೋಗಿದ್ರು. ಅದರಲ್ಲೂ ರಾಯಚೂರಿನಲ್ಲಿ ಬೀದಿ ನಾಯಿಗಳ ಸರಣಿ ದಾಳಿಯಿಂದ ಮಕ್ಕಳು ಆಸ್ಪತ್ರೆ ಸೇರಿ ಸಾವಿನ ದವಡೆಯಿಂದ ಪಾರಾಗಿದ್ರು. ಈ ಭಯದ ವಾತಾವರಣದ ಬೆನ್ನಲ್ಲೇ ರಾಯಚೂರು ನಗರದಲ್ಲಿ ಈಗ ಹಂದಿಗಳ ಹಾವಳಿ ಜೋರಾಗಿದೆ.
Pig attack: ಅಲ್ಲಿ ಇತ್ತೀಚೆಗೆ ನಾಯಿಗಳ ಭೀಕರ ದಾಳಿಗೆ ಮಕ್ಕಳು ನರಳಾಡಿ, ಸಾವಿನ ಕದ ತಟ್ಟಿ ಬಂದಿದ್ದರು. ಆದ್ರೀಗ ಅದೇ ಜಾಗದಲ್ಲಿ ಆಟವಾಡ್ತಿದ್ದ ಮಕ್ಕಳ ಮೇಲೆ ನಾಯಿಗಳ ಬದಲು ಹಂದಿಗಳು ಡೆಡ್ಲಿ ಅಟ್ಯಾಕ್ ನಡೆಸಿದ್ದು ಬಾಲಕಿ (girl) ಸ್ಥಿತಿ ಗಂಭೀರವಾಗಿದೆ. ಆಟವಾಡಿಕೊಂಡು ಇರಬೇಕಿದ್ದ ವಯಸ್ಸಲ್ಲಿ ಆಕೆ ಭೀಕರ ದಾಳಿಗೆ ಒಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಈಕೆಯ ಈ ಪರಿಸ್ಥಿತಿಗೆ ಕಾರಣ ಹಂದಿಗಳ ದಾಳಿ. ಹೌದು.. ಇತ್ತೀಚೆಗೆ ಸಿಂಧನೂರು ಪಟ್ಟಣ ಹಾಗೂ ರಾಯಚೂರು (raichur) ನಗರದಲ್ಲಿ ಬೀದಿ ನಾಯಿಗಳ ಹಾವಳಿಗೆ ಜನ ರೋಸಿ ಹೋಗಿದ್ರು. ಅದರಲ್ಲೂ ರಾಯಚೂರಿನಲ್ಲಿ ಬೀದಿ ನಾಯಿಗಳ ಸರಣಿ ದಾಳಿಯಿಂದ ಮಕ್ಕಳು ಆಸ್ಪತ್ರೆ ಸೇರಿ ಸಾವಿನ ದವಡೆಯಿಂದ ಪಾರಾಗಿದ್ರು. ಈ ಭಯದ ವಾತಾವರಣದ ಬೆನ್ನಲ್ಲೇ ರಾಯಚೂರು ನಗರದಲ್ಲಿ ಈಗ ಹಂದಿಗಳ ಹಾವಳಿ ಜೋರಾಗಿದೆ.
ನಾಯಿಗಳು ಅದ್ಹೇಗೆ ಅಟ್ಟಾಡಿಸಿ ಪುಟ್ಟ ಮಕ್ಕಳ ಮೇಲೆ ದಾಳಿ ಮಾಡ್ತಾವೋ ಅದೇ ರೀತಿ ಹಂದಿಗಳು ಕೂಡ ಪುಟಾಣಿಯೊಬ್ಬಳ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ. ಹೌದು, ರಾಯಚೂರು ನಗರದ ಅರಬ್ ಮೊಹಲ್ಲಾ ಅನ್ನೋ ಏರಿಯಾದಲ್ಲಿ ಮನೆ ಮುಂದೆ ಆಟವಾಡ್ತಿದ್ದ ಆರು ವರ್ಷದ ಮುದ್ದಮ್ಮ ಅನ್ನೋ ಬಾಲಕಿ ಮೇಲೆ ಹಂದಿಗಳು ಅಟ್ಯಾಕ್ ಮಾಡಿವೆ. ಆಕೆಯನ್ನ ಎಳೆದಾಡಿ ಮನಸ್ಸೋ ಇಚ್ಛೆ ಕಚ್ಚಿ ಹಾಕಿವೆ.
ಅಷ್ಟಕ್ಕು ದಾಳಿಗೊಳಗಾಗಿರೊ ಮುದ್ದಮ್ಮ,ಯಲ್ಲಮ್ಮ ಅನ್ನೋ ಮಹಿಳೆಯ ಮಗಳು.. ಕೂಲಿ ಮಾಡ್ಕೊಂಡು ಜೀವನ ನಡೆಸ್ತಿರೊ ಈ ಕುಟುಂಬವೀಗ ಮಗಳಿಗೆ ಚಿಕಿತ್ಸೆ ಕೊಡಿಸೋವಷ್ಟು ಹಣವಿಲ್ಲದೇ ಪರದಾಡ್ತಿದೆ. ಮುದ್ದಮ್ಮ ಹಾಗೂ ಆಕೆಯ ತಂಗಿ ಇಬ್ಬರೂ ನಿತ್ಯ ಮನೆ ಬಳಿ ಆಟವಾಡ್ತಿದ್ದರು. ಅದೇ ವೇಳೆ ಮುದ್ದಮ್ಮ ಓಡಾಡೋ ಸಮಯದಲ್ಲಿ ಎರಡು ಹಂದಿಗಳು ಮುದ್ದಮ್ಮಳ ಮೇಲೆ ಎರಗಿವೆ. ಏಕಾಏಕಿ ದಾಳಿ ನಡೆಸಿವೆ. ಮುಖ, ಕತ್ತು, ಗಂಟಲು, ಕೈಕಾಲು ಹಾಗೂ ಬೆನ್ನಿನ ಭಾಗವನ್ನ ಕಚ್ಚಿ ಹಾಕಿವೆ.
Also Read: ಬೀದರ್ – ಕಾಡುಹಂದಿ ದಾಳಿಗೆ ಮಹಿಳೆ ಸಾವು; ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವ ಈಶ್ವರ್ ಖಂಡ್ರೆ
ಇದನ್ನ ನೋಡಿದ ಸ್ಥಳೀಯರು ಹಂದಿಗಳನ್ನ ಓಡಿಸೊ ಯತ್ನ ಮಾಡಿದ್ರು. ಆದರೂ ಅವು ಜಗ್ಗದೆ ಬಗ್ಗದೆ ದಾಳಿ ಮುಂದುವರೆಸಿದ್ವು. ಬಳಿಕ ಕಲ್ಲೆಸೆದು ಅವುಗಳನ್ನ ಓಡಿಸಲಾಗಿದೆ.. ಅಷ್ಟೊತ್ತಿಗಾಗಲೇ ಮುದ್ದಮ್ಮ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ಲು.. ಆಗ ಸ್ಥಳೀಯರು ಆಕೆಯನ್ನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಕ್ಕಪಕ್ಕದವರು ಬರೋದು ಎರಡೇ ನಿಮಿಷ ತಡವಾಗಿದ್ದರೂ.. ಮುದ್ದಮ್ಮಳನ್ನ ಹಂದಿಗಳು ಕಚ್ಚಿ ಕೊಂದು ಹಾಕ್ತಿದ್ವು ಅಂತ ಆಕೆಯ ತಾಯಿ ಯಲ್ಲಮ್ಮ ಕಣ್ಣೀರಿಡ್ತಿದ್ದಾಳೆ.
ಘಟನೆ ನಡೆದ ಬಳಿಕ ಈ ವರೆಗೆ ರಾಯಚೂರು ನಗರಸಭೆಯ ಯಾವೊಬ್ಬ ಅಧಿಕಾರಿಯೂ ಈ ಬಡಕುಟುಂಬವನ್ನ ಸೌಜನ್ಯಕ್ಕೂ ಭೇಟಿ ಮಾಡಿಲ್ಲ. ಪಾಪ ಆ ಕಂದ ಅಕ್ಕಪಕ್ಕ ಹೊರಳಾಡಲು ಆಗದೇ ಗಾಯದ ನೋವಿನಿಂದ ಇಡೀ ದಿನ ನಿದ್ರೆಯಿಲ್ಲದೇ ಒದ್ದಾಡ್ತಿರೋದು ದುರಂತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ