AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ

Raichur News: ಸಿಂಧನೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ನಕಲಿ ದಾಖಲೆಗಳ ಮೂಲಕ ಭಾರತದ ಪಾಸ್‌ಪೋರ್ಟ್ ಪಡೆದಿದ್ದ ಈತ ಇಮಿಗ್ರೇಷನ್ ವೇಳೆ ಸಿಕ್ಕಿಬಿದ್ದಿದ್ದ. ತಾನು ಭಾರತದ ಪ್ರಜೆ ಎಂದು ಸಾಬೀತು ಪಡಿಸಲು ಶೋರನಜೀತ್ ಚುನಾವಣಾ ಆಯೋಗದಿಂದ ಗುರುತಿನ ಚೀಟಿ, ಆಧಾರ್ ಕಾರ್ಡ, ಪಾನ್​​ ಕಾರ್ಡ್​​ ಜೊತೆಗೆ ಬ್ಯಾಂಕ್​​ ಆಫ್​​ ಬರೋಡದಲ್ಲಿ ಖಾತೆ ಹೊಂದಿದ್ದ ಎಂಬುದು ತನಿಖೆ ವೇಳೆ ಬಯಲಾಗಿತ್ತು.

ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ ಸಿಂಧನೂರು ನ್ಯಾಯಾಲಯ
ಬಾಂಗ್ಲಾ ಅಕ್ರಮ ವಲಸಿಗನಿಗೆ 5 ವರ್ಷ ಜೈಲುಶಿಕ್ಷೆ, ದಂಡImage Credit source: Tv9 Kannada
ಭೀಮೇಶ್​​ ಪೂಜಾರ್
| Edited By: |

Updated on:Jul 16, 2026 | 1:04 PM

Share

ಮುಖ್ಯಾಂಶಗಳು

  • ಬಾಂಗ್ಲಾ ಅಕ್ರಮ ವಲಸಿಗನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​
  • ಮಹತ್ವದ ಆದೇಶ ನೀಡಿರುವ ಸಿಂಧನೂರು ನ್ಯಾಯಾಲಯ
  • 5 ವರ್ಷ ಜೈಲುಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ಆದೇಶ

ರಾಯಚೂರು, ಜುಲೈ 15: ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗೆ ರಾಯಚೂರು ಜಿಲ್ಲೆಯ ಸಿಂಧನೂರಿನ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್​​ಎಫ್‌ಸಿ ಕೋರ್ಟ್ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಶೋರನಜೀತ್ ಮಂಡಲ್ ಶಿಕ್ಷೆಗೆ ಒಳಗಾಗಿರುವ ಬಾಂಗ್ಲಾ ಪ್ರಜೆಯಾಗಿದ್ದು, ಸಿಂಧನೂರು ತಾಲೂಕಿನ ಆ‌ರ್.ಹೆಚ್.ಕ್ಯಾಂಪ್ ನಂ-3ರಲ್ಲಿ ಈತ ನೆಲೆಸಿದ್ದ. ಸುಮಾರು 10ರಿಂದ 12 ವರ್ಷಗಳ ಹಿಂದೆ ಭಾರತಕ್ಕೆ ಅಕ್ರಮವಾಗಿ ಗಡಿದಾಟಿ ಬಂದಿದ್ದ ಶೋರನಜೀತ್, ಬಳಿಕ ಬಾಂಗ್ಲಾ ನಿರಾಶ್ರಿತರ ಕೇಂದ್ರಗಳಿರುವ ಸಿಂಧನೂರು ತಾಲೂಕಿನಲ್ಲಿ ವಾಸವಿದ್ದ.

ಪಾಸ್​​ಪೋರ್ಟ್​​ ಪರಿಶೀಲನೆ ವೇಳೆ ಲಾಕ್​​ ಆಗಿದ್ದ ಶೋರನಜೀತ್

ತಾನು ಭಾರತದ ಪ್ರಜೆ ಎಂದು ಸಾಬೀತು ಪಡಿಸಲು ಶೋರನಜೀತ್ ಚುನಾವಣಾ ಆಯೋಗದಿಂದ ಗುರುತಿನ ಚೀಟಿ, ಆಧಾರ್ ಕಾರ್ಡ, ಪಾನ್​​ ಕಾರ್ಡ್​​ ಜೊತೆಗೆ ಬ್ಯಾಂಕ್​​ ಆಫ್​​ ಬರೋಡದಲ್ಲಿ ಖಾತೆ ಹೊಂದಿದ್ದ. ಈ ದಾಖಲೆಗಳ ಆಧಾರದಲ್ಲಿ 2028ರ ವರೆಗೆ ಪಾಸ್ ಪೋರ್ಟ್ ಕೂಡ ಪಡೆದಿದ್ದ. ಆದರೆ ಜುಲೈ 17 2018ರಲ್ಲಿ ಬಾಂಗ್ಲಾದೇಶಕ್ಕೆ ಹೋಗುವಾಗ ಚೀಫ್ ಇಮಿಗ್ರೇಷನ್ ಸಿಬ್ಬಂದಿ ಪಾಸ್​​ಪೋರ್ಟ್ ಪರಿಶೀಲನೆ ವೇಳೆ ಈತ ಲಾಕ್​​ ಆಗಿದ್ದ. ಆ ಬಳಿಕ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ 2018ರಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ್ ಈ ಬಗ್ಗೆ ಕೋರ್ಟ್​​ನಲ್ಲಿ ವಾದ ಮಂಡಿಸಿದ್ದು, ಸುಧೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಶಿಕ್ಷೆ ಪ್ರಕಟಿಸಿದೆ.

ಇದನ್ನೂ ಓದಿ: ರಾಯಚೂರಲ್ಲಿ ಖತರ್ನಾಕ್ ಬೈಕ್ ಮೆಕ್ಯಾನಿಕ್ ಗ್ಯಾಂಗ್ ಅರೆಸ್ಟ್; ನಂಬರ್ ಪ್ಲೇಟ್, ಚೆಸ್ಸಿ ಅಳಿಸಿ ಮಾರಾಟ ದಂಧೆ

ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಾವರು ಅಪ್ರಾಪ್ತರು ಸೇರಿ 11 ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದರು. ವಲಸಿಗರು ಪಶ್ಚಿಮ ಬಂಗಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು, ಪಶ್ಚಿಮ ಬಂಗಾಳ ನಿವಾಸಿಗಳೆಂದು ನಕಲಿ ವಿಳಾಸ ಬಳಸಿ ಕೆಲಸಕ್ಕೆ ಬಂದಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಪಶ್ಚಿಮ ಬಂಗಾಳ ಮೂಲದ ಏಜೆಂಟ್​​ಗಳ ವಿರುದ್ಧವೂ ಮಂಗಳೂರಿನ ಉರ್ವಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದಕ್ಕೂ ಕೆಲ ದಿನಗಳ ಹಿಂದೆಯಷ್ಟೇ 8 ಮಂದಿ ಅಕ್ರಮ ಬಾಂಗ್ಲಾ ವಲಸಿಗರನ್ನು ಸುರತ್ಕಲ್​ನಲ್ಲಿ ಪೊಲೀಸರು ಬಂಧಿಸಿದ್ದರು ಎನ್ನುವುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:29 pm, Thu, 16 July 26

Follow Us
ಭಾರತದಲ್ಲಿ ವಿಶ್ವದ ಅತಿಶಕ್ತಿಶಾಲಿ ಹೈಡ್ರೋಜನ್ ರೈಲು
ಭಾರತದಲ್ಲಿ ವಿಶ್ವದ ಅತಿಶಕ್ತಿಶಾಲಿ ಹೈಡ್ರೋಜನ್ ರೈಲು
ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಿದ್ಧತೆ ಹೇಗಿದೆ ನೋಡಿ
ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಿದ್ಧತೆ ಹೇಗಿದೆ ನೋಡಿ
ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು
ಬೆಂಗಳೂರು: ಶಾಲೆ ಕೊಠಡಿ ಒಳಗಡೆ ಕುಸಿದುಬಿದ್ದು 5ನೇ ತರಗತಿ ಬಾಲಕ ಸಾವು
ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ
ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಪಾವಗಡ - ಆಂಧ್ರ ಪ್ರದೇಶ ಗಡಿಯಲ್ಲಿ ಕೋವಿಡ್ ಚೆಕ್​ಪೋಸ್ಟ್: ತಪಾಸಣೆ ಶುರು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಆಕಾಂಕ್ಷಿಗಳು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?