AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

51ರ ಪೈಕಿ 21 ಗರ್ಭಿಣಿಯರ ಝೀಕಾ ಸ್ಯಾಂಪಲ್ ನೆಗೆಟಿವ್, ನಿಟ್ಟುಸಿರುಬಿಟ್ಟ ರಾಯಚೂರು ಜಿಲ್ಲಾಡಳಿತ! ಉಳಿದವರದು ಪೆಂಡಿಂಗ್

ಪ್ರಾಥಮಿಕ ಹಂತದಲ್ಲಿ ಬಂದ 21 ಗರ್ಭಿಣಿ ಮಹಿಳೆಯರ ರಿಪೋರ್ಟ್ ನಲ್ಲಿ ಝಿಕಾ ನೆಗೆಟಿವ್ ಬಂದಿದ್ದು ಇನ್ನೆರಡು ದಿನಗಳಲ್ಲಿ ಉಳಿದವರ ರಿಪೋರ್ಟ್ ಹೊರಬೀಳಲಿದೆ.

51ರ ಪೈಕಿ 21 ಗರ್ಭಿಣಿಯರ ಝೀಕಾ ಸ್ಯಾಂಪಲ್ ನೆಗೆಟಿವ್, ನಿಟ್ಟುಸಿರುಬಿಟ್ಟ ರಾಯಚೂರು ಜಿಲ್ಲಾಡಳಿತ! ಉಳಿದವರದು ಪೆಂಡಿಂಗ್
ಝಿಕಾ ವೈರಸ್Image Credit source: Google
TV9 Web
| Updated By: ಆಯೇಷಾ ಬಾನು|

Updated on: Dec 20, 2022 | 11:33 AM

Share

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ರಾಜ್ಯದ ಮೊದಲ ಝೀಕಾ ವೈರಸ್(Zika Virus) ಪತ್ತೆಯಾಗಿದೆ. ಜಿಲ್ಲೆಯ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದ್ದು ಆರೋಗ್ಯ ಇಲಾಖೆ(Health Department Karnataka) ಈ ಬಗ್ಗೆ ತಲೆ ಕೆಡಿಸಿಕೊಂಡಿತ್ತು. ಹೀಗಾಗಿ ಒಟ್ಟು 51 ಗರ್ಭಿಣಿ ಮಹಿಳೆಯ ಸ್ಯಾಂಪಲ್ ಪಡೆದು ವೈದ್ಯರು ಪುಣೆಯ ವೈರಾಲಜಿ ಲ್ಯಾಬ್​ಗೆ ಕಳಿಸಿದ್ದರು. ಸದ್ಯ 21 ಗರ್ಭಿಣಿ ಮಹಿಳೆಯರ ಸ್ಯಾಂಪಲ್ ರಿಪೋರ್ಟ್ ನೆಗೆಟಿವ್ ಬಂದಿದೆ. ನೆಗೆಟಿವ್ ರಿಪೋರ್ಟ್ ಹಿನ್ನೆಲೆ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.

ಪ್ರಾಥಮಿಕ ಹಂತದಲ್ಲಿ ಬಂದ 21 ಗರ್ಭಿಣಿ ಮಹಿಳೆಯರ ರಿಪೋರ್ಟ್ ನಲ್ಲಿ ಝಿಕಾ ನೆಗೆಟಿವ್ ಬಂದಿದ್ದು ಇನ್ನೆರಡು ದಿನಗಳಲ್ಲಿ ಉಳಿದವರ ರಿಪೋರ್ಟ್ ಹೊರಬೀಳಲಿದೆ. ರಾಜ್ಯದಲ್ಲೇ ರಾಯಚೂರಿನಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿತ್ತು. 5 ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್ ಆಗಿತ್ತು. ಈ ಹಿನ್ನೆಲೆ ಸೊಂಕಿತ ಬಾಲಕಿಯ ಸುತ್ತಮುತ್ತಲಿನ ಜನರ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್​ಗೆ ಕಳಿಸಲಾಗಿತ್ತು. ಆರೋಗ್ಯ ಇಲಾಖೆ ಹೆಚ್ಚಾಗಿ ಗರ್ಭಿಣಿಯರ ಸ್ಯಾಂಪಲ್ ಕಲೆಕ್ಟ್ ಮಾಡಿತ್ತು. ಸ್ಯಾಂಪಲ್ ಪಡೆದ 51 ಗರ್ಭಿಣಿಯರಲ್ಲಿ 21 ಗರ್ಭಿಣಿ ‌ಮಹಿಳೆಯರಲ್ಲಿ ನೆಗೆಟಿವ್ ವರದಿ ಬಂದಿದೆ.

ಇದನ್ನೂ ಓದಿ: Zika virus: ಝಿಕಾ ವೈರಸ್ ತಡೆಗಟ್ಟಲು ಇಲ್ಲಿದೆ ಬೆಂಗಳೂರಿನ ವೈದ್ಯರ ಸಲಹೆ

ಝೀಕಾ ವೈರಸ್‌ ಎಂದರೇನು? ಝೀಕಾ ವೈರಸ್‌ ಈಡಿಸ್‌ ಸೊಳ್ಳೆಯಿಂದ ಹಬ್ಬುತ್ತದೆ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಆರಂಭದಲ್ಲಿ ಸೌಮ್ಯವಾಗಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಕ ರೋಗಗಳ ರೀತಿ ಬದಲಾಗುತ್ತವೆ. ಅದರಂತೆಯೇ ಝೀಕಾ ವೈರಸ್‌ ಕೂಡ ಹಗಲಿನಲ್ಲಿ ಕಚ್ಚುವ ಈಡಿಸ್‌ ಸೊಳ್ಳೆಗಳ ಮೂಲಕ ಹರಡುತ್ತದೆ.

ಗರ್ಭಿಣಿ ಮಹಿಳೆಯರು ಎಚ್ಚರದಿಂದಿರುವುದು ಅಗತ್ಯ

ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ. ಆದ್ದರಿಂದ ಆದಷ್ಟು ಸೊಳ್ಳೆ ಕಡಿತದಿಂದ ದೂರವಿರಿ. ನಿರ್ಲಕ್ಷಿಸಿದರೆ ಮಗುವಿನ ನರಮಂಡಲದಲ್ಲಿ ಅಸಹಜತೆಗಳು ಮತ್ತು ದೈಹಿಕ ಅಥವಾ ಬೆಳವಣಿಗೆಯ ವೈಪರೀತ್ಯಗಳಂತಹ ತೊಡಕುಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಝಿಕಾವನ್ನು ಹೇಗೆ ತಡೆಯುವುದು?

ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟುವುದು ಬಹಳ ಮುಖ್ಯ. ಮಳೆ ಬಂದಿರುವುದರಿಂದ ಅಲ್ಲಲ್ಲಿ ನೀರು ತುಂಬಿರುತ್ತದೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ. ಪಾತ್ರೆಗಳು ಮತ್ತು ಟೈರುಗಳಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳಿ. ಸೊಳ್ಳೆ ಪರದೆಗಳಿಂದ ಕಿಟಕಿಗಳನ್ನು ಮುಚ್ಚಿ ಮತ್ತು ಸೊಳ್ಳೆ ಕಡಿತವನ್ನು ತಡೆಗಟ್ಟಲು ನಿವಾರಕಗಳನ್ನು ಬಳಸಿ. ಹೊರಗಡೆ ಹೋಗುವಾಗ ಉದ್ದ ಕೈಗಳ ಬಟ್ಟೆಯನ್ನು ಧರಿಸಿ ಎಂದು ಸಲಹೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ