ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಜೀವನ ರೂಪಿಸಿಕೊಳ್ಳೋ ಕನಸು ಕಂಡಿದ್ದ ಅಂಗನವಾಡಿ ಶಿಕ್ಷಕಿಯ ಪ್ರೇಮಿ ಹತ್ಯೆ; ಮಾಜಿ ಪತಿ ಸೇರಿ 3 ಅರೆಸ್ಟ್

ಡಿವೋರ್ಸ್ ನೀಡಿದ್ದ ಪತ್ನಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಗುಂಡಪ್ಪ ಮೌನೇಶನಾಯಕನನ್ನು ಕೊಲೆ ಮಾಡಿದ್ದು ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಗಂಡನ ಬಿಟ್ಟು ಮತ್ತೊಬ್ಬನ ಜೊತೆ ಜೀವನ ರೂಪಿಸಿಕೊಳ್ಳೋ ಕನಸು ಕಂಡಿದ್ದ ಅಂಗನವಾಡಿ ಶಿಕ್ಷಕಿಯ ಪ್ರೇಮಿ ಹತ್ಯೆ; ಮಾಜಿ ಪತಿ ಸೇರಿ 3 ಅರೆಸ್ಟ್
ಬಂಧಿತ ಆರೋಪಿಗಳು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 11, 2021 | 11:45 AM

ರಾಯಚೂರು: ಜಿಲ್ಲೆಯ ಅಂಗನವಾಡಿ ಶಿಕ್ಷಕಿಯ ಲವ್ವಿ ಡವ್ವಿ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಗುಂಡಪ್ಪ, ಮೌನೇಶ ಮತ್ತು ಕನಕಪ್ಪರ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಡಿವೋರ್ಸ್ ನೀಡಿದ್ದ ಪತ್ನಿಯ ಜೊತೆ ಸಂಬಂಧ ಇಟ್ಟುಕೊಂಡಿದ್ದ ಎಂಬ ಕಾರಣಕ್ಕೆ ಗುಂಡಪ್ಪ ಮೌನೇಶನಾಯಕನನ್ನು ಕೊಲೆ ಮಾಡಿದ್ದು ಸದ್ಯ ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಘಟನೆ ಹಿನ್ನೆಲೆ 7 ವರ್ಷಗಳ ಹಿಂದೆ ಗುಂಡಪ್ಪ ವಿಜಯಲಕ್ಷ್ಮೀಯನ್ನ ಮದ್ವೆಯಾಗಿದ್ದ. ಆದ್ರೆ ಸಂಸಾರದಲ್ಲಿ ಸಾಮರಸ್ಯ ಇಲ್ಲದೆ ಗುಂಡಪ್ಪ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದ. ಬಳಿಕ ವಿಜಯಲಕ್ಷ್ಮೀ ಅದೇ ಗ್ರಾಮದ ಈ ಮೌನೇಶನಾಯಕನ ಪ್ರೀತಿ ಬಲೆಗೆ ಬಿದ್ದಿದ್ಲು. ಕಳೆದ ಮೂರು ವರ್ಷಗಳಿಂದ ಮೌನೇಶ್ ಹಾಗೂ ವಿಜಯಲಕ್ಷ್ಮೀ ಒಂದೇ ಮನೆಯಲ್ಲಿ ಜೀವನ ನಡೆಸ್ತಿದ್ರು. ಆದ್ರೆ ತನ್ನ ಮಾಜಿ ಪತ್ನಿ ಜೊತೆ ಮೌನೇಶ್ ಸಲುಗೆಯಿಂದ ಇದ್ದಿದ್ದಕ್ಕೆ ಗುಂಡಪ್ಪ ಕತ್ತಿ ಮಸೆಯುತ್ತಿದ್ದ. ಅದೇ ಸೇಡು ಇಟ್ಕೊಂಡು ಜುಲೈ 23ರಂದು ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಗುಂತಗೊಳ ಗ್ರಾಮದ ದೇವಸ್ಥಾನದ ಮುಂದೆ ಮೌನೇಶನಾಯಕನನ್ನು ಕೊಲೆ ಮಾಡಿದ್ದ.

ಪ್ರೇಯಸಿಗಾಗಿ ಎಂಗೇಜ್ಮೆಂಟ್ನೂ ಕ್ಯಾನ್ಸಲ್ ಮಾಡಿದ್ದ ಮೌನೇಶ್ಗೆ ಇನ್ನೂ ಮದುವೆಯಾಗಿರಲಿಲ್ಲ. ಈ ಹಿಂದೆಯೇ ಆಗಿದ್ದ ನಿಶ್ಚಿತ್ತಾರ್ಥವನ್ನ ವಿಜಯಲಕ್ಷ್ಮೀಗಾಗಿ ಕ್ಯಾನ್ಸಲ್ ಮಾಡಿದ್ದ. ಮುಂದಿನ ದಿನಗಳನ್ನ ವಿಜಯಲಕ್ಷ್ಮೀ ಜೊತೆಯಲ್ಲೇ ಇರಲು ನಿರ್ಧರಿಸಿದ್ದ. ನಿತ್ಯ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಇದನ್ನ ಗಮನಿಸಿದ್ದ ಗುಂಡಪ್ಪ ಮೌನೇಶ್ ಕಥೆ ಮುಗಿಸೋ ಸ್ಕೆಚ್ ಹಾಕಿದ್ದ. ಅದ್ರಂತೆ ತನ್ನ ಐವರು ಸಹಚರರೊಂದಿಗೆ ಸೇರಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಸದ್ಯ ಈಗ ಲಿಂಗಸ್ಗೂರು ಠಾಣೆ ಪೊಲೀಸರು ಗುಂಡಪ್ಪ ಸೇರಿ ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಹತ್ಯೆ; ಕೊಲೆ ಮಾಡಿದ್ದು ನಾವಲ್ಲ ಎಂದ ತಾಲಿಬಾನ್ ಉಗ್ರರು

Published On - 11:22 am, Wed, 11 August 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ