AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡದಿ ಟೌನ್‌ಶಿಪ್​ ಯೋಜನೆ: ರೈತರ ವಿರೋಧದ ನಡುವೆ 7,351 ಎಕರೆಗೆ ಅಂತಿಮ ಅಧಿಸೂಚನೆ ಪ್ರಕಟ

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ತೀವ್ರ ವಿರೋಧದ ನಡುವೆಯೂ ಒಟ್ಟು 7,351 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಇದು ಮೂರನೇ ಹಂತದ ಅಧಿಸೂಚನೆಯಾಗಿದ್ದು, ರಾಮನಗರ ತಾಲೂಕಿನ ಕಂಚಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳ 1,895 ಎಕರೆ ಭೂಮಿ ಸೇರಿದೆ. ಈಗಾಗಲೇ ಎರಡು ಹಂತಗಳಲ್ಲಿ ಭೂಮಿ ಸ್ವಾಧೀನಕ್ಕೆ ಪ್ರಕಟಣೆ ಹೊರಡಿಸಲಾಗಿತ್ತು.

ಬಿಡದಿ ಟೌನ್‌ಶಿಪ್​ ಯೋಜನೆ: ರೈತರ ವಿರೋಧದ ನಡುವೆ 7,351 ಎಕರೆಗೆ ಅಂತಿಮ ಅಧಿಸೂಚನೆ ಪ್ರಕಟ
ಬಿಡದಿ ಟೌನ್‌ಶಿಪ್​ ಯೋಜನೆ
ಪ್ರಶಾಂತ್​ ಬಿ.
| Edited By: |

Updated on: Oct 30, 2026 | 8:22 PM

Share

ರಾಮನಗರ, ಅಕ್ಟೋಬರ್​​ 30: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಬಿಡದಿ ಟೌನ್​ಶಿಪ್ ಯೋಜನೆಗೆ ರೈತರ ವಿರೋಧದ ಮಧ್ಯೆಯೂ ಇದೀಗ ರಾಜ್ಯ ಸರ್ಕಾರ ಮೂರನೇ ಹಂತದ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ರಾಮನಗರ ತಾಲೂಕಿನ ಕಂಚಗಾರನಹಳ್ಳಿ ಹಾಗೂ ಬೈರಮಂಗಲ ಗ್ರಾಮಗಳ ಒಟ್ಟು 1,895 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಈ ಪೈಕಿ ಕಂಚಗಾರನಹಳ್ಳಿ ಗ್ರಾಮದ 753 ಎಕರೆ ಹಾಗೂ ಬೈರಮಂಗಲ ಗ್ರಾಮದ 1,142 ಎಕರೆ ಭೂಮಿ ಸೇರಿದೆ.

ಈಗಾಗಲೇ ಸರ್ಕಾರದಿಂದ ಎರಡು ಹಂತದಲ್ಲಿ ಅಧಿಸೂಚನೆ

ಈಗಾಗಲೇ ಸರ್ಕಾರ ಎರಡು ಹಂತಗಳಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಜೂನ್ 11 ರಂದು ಮೊದಲ ಹಂತದಲ್ಲಿ ಮೂರು ಕಂದಾಯ ಗ್ರಾಮಗಳಾದ ಕೆಂಪಯ್ಯನಪಾಳ್ಯ, ವಡೇರಹಳ್ಳಿ ಹಾಗೂ ಮಂಡಲಹಳ್ಳಿಯ ಒಟ್ಟು 516 ಎಕರೆಗೆ ಅಧಿಸೂಚನೆ ಹೊರಡಿಸಲಾಗಿತ್ತು.

LIVE TV

816 ರೈತರಿಗೆ ಸಾವಿರಾರು ಕೋಟಿ ರೂ ಹಣ

ಎರಡನೇ ಹಂತದಲ್ಲಿ ಕೆ.ಜಿ. ಗೊಲ್ಲರಪಾಳ್ಯ, ಬನ್ನಿಗಿರಿ, ಅರಳಾಳುಸಂದ್ರ ಹಾಗೂ ಹೊಸೂರು ಗ್ರಾಮಗಳ ಒಟ್ಟು 4,940 ಎಕರೆಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು. ಇದರಲ್ಲಿ ಈಗಾಗಲೇ 1,280 ರೈತರು ಸ್ವಯಂಪ್ರೇರಿತರಾಗಿ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, 816 ರೈತರಿಗೆ ಸಾವಿರಾರು ಕೋಟಿ ರೂ ಹಣ ಹಾಗೂ ನಿವೇಶನಗಳನ್ನು ನೀಡಲಾಗಿದೆ.

ಇದನ್ನೂ ಓದಿ: Bidadi Township: ವಿವಾದದ ನಡುವೆಯೂ ಬಿಡದಿ ಟೌನ್​ ಶಿಪ್​​​ಗೆ​ ಅಂತಿಮ ಅಧಿಸೂಚನೆ ಪ್ರಕಟ, ರೈತರ ಮುಂದೆ 2 ಆಯ್ಕೆ

ಇನ್ನು ಇದೀಗ ಮೂರನೇ ಹಂತದಲ್ಲಿ ಕಂಚಗಾರನಹಳ್ಳಿ ಹಾಗೂ ಬೈರಮಂಗಲ ಗ್ರಾಮಗಳ 1895 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಬಿಡದಿ ಟೌನ್​ಶಿಪ್​ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 7351 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ರೈತರ ವಿರೋಧದ ನಡುವೆಯೇ ಸರ್ಕಾರ ಈ ಕ್ರಮ ಕೈಗೊಂಡಿದೆ.

1,800 ಕೋಟಿ ರೂ ಪರಿಹಾರ ವಿತರಣೆ

ಅಂದಹಾಗೆ ಜಿಬಿಡಿಎಯಿಂದ 1,800 ಕೋಟಿ ರೂ ಒಟ್ಟು ಪರಿಹಾರ ವಿತರಣೆ ಮಾಡಲಾಗಿದೆ. ಅದರಲ್ಲಿ 816 ರೈತರ ಖಾತೆಗೆ ನಗದು ರೂಪದಲ್ಲಿ 1,236 ಕೋಟಿ ರೂ ವಿತರಣೆ ಮಾಡಲಾಗಿದೆ. ಇನ್ನೂ 250 ಎಕರೆಗೆ ನಿವೇಶನಗಳ ರೂಪದಲ್ಲಿ ​564 ಕೋಟಿ ರೂ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರಶಾಂತ್​ ಬಿ.
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ, ರಜನೀಕಾಂತ್ ಅತಿಥಿ?
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ಸಿಎಂಗೆ ಮಹತ್ವದ ಮನವಿ ಮಾಡಿಕೊಂಡ ತನ್ವೀರ್ ಸೇಠ್
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ವಾಟಾಳ್ ನಾಗರಾಜ್​ಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕು ಎಂದು ನನಗೆ ಆಸೆ: ಸಿಎಂ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಇನೋವಾ ಕಾರು ಕಳ್ಳತನ
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?
ಸ್ಟಿಂಗ್​​ ಪ್ರಕರಣ ಸಂಬಂಧ ಕುಮಾರಸ್ವಾಮಿ ದೆಹಲಿ ಮನೆ ಮಹಜರು?