AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವ: ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು!

ರಾಮನಗರ ಜಿಲ್ಲೆಯಲ್ಲಿ ಭೀಕರ ಮಳೆ ಅಭಾವ ಎದುರಾಗಿದ್ದು, ಬಿತ್ತನೆ ಮಾಡಿದ ರಾಗಿ ಪೈರು ಕಣ್ಣೆದುರೇ ಒಣಗಿ ನಾಶವಾಗುತ್ತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇ 88 ರಷ್ಟು ಬೃಹತ್ ಮಳೆ ಕೊರತೆ ಉಂಟಾಗಿದ್ದು, ಸಾಲ ಮಾಡಿ ಬಿತ್ತನೆ ಮಾಡಿದ್ದ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ಸೂಕ್ತ ಬೆಳೆ ನಷ್ಟ ಪರಿಹಾರ ಘೋಷಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವ: ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು!
ಕಣ್ಣೆದುರೇ ಕರುಕಲಾಗುತ್ತಿದೆ ರಾಗಿ ಪೈರು
ಪ್ರಶಾಂತ್​ ಬಿ.
| Edited By: |

Updated on:Sep 11, 2026 | 3:07 PM

Share

ಮುಖ್ಯಾಂಶಗಳು

  • ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಳೆ ಅಭಾವದಿಂದ ರಾಗಿ ಬೆಳೆ ಸಂಪೂರ್ಣ ನಾಶ.
  • ಕೃಷಿ ಇಲಾಖೆಯ ಬಿತ್ತನೆ ಗುರಿಯಲ್ಲಿ ಶೇಕಡಾ 68ರಷ್ಟು ಮಾತ್ರ ಬಿತ್ತನೆ ಪೂರ್ಣ.
  • ಸೆಪ್ಟೆಂಬರ್‌ನಲ್ಲಿ ಶೇ 88ರಷ್ಟು ಮಳೆ ಕೊರತೆಯಿಂದ ಕಂಗಾಲಾದ ಜಿಲ್ಲೆಯ ರೈತರು.

ರಾಮನಗರ, ಸೆಪ್ಟೆಂಬರ್ 11: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬರಗಾಲದ ಛಾಯೆ ಆವರಿಸುತ್ತಿದ್ದು, ವರುಣದೇವ ಸಂಪೂರ್ಣ ಕೈಕೊಟ್ಟಿದ್ದರಿಂದ ರಾಗಿ ಬೆಳೆಗಾರರು ದಾರಿ ಕಾಣದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ರೇಷ್ಮೆ ಮತ್ತು ತೆಂಗಿನ ನಂತರ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿಯು ಮಳೆಯ ಅಭಾವದಿಂದಾಗಿ ಬಿತ್ತಿದ ಪೈರು ಕಣ್ಣೆದುರೇ ಒಣಗಿ ಹೋಗುತ್ತಿದೆ.

ಸೆಪ್ಟೆಂಬರ್‌ನಲ್ಲಿ ಶೇ 88ರಷ್ಟು ಬೃಹತ್ ಮಳೆ ಕೊರತೆ

ಈ ಬಾರಿ ಕೃಷಿ ಇಲಾಖೆಯು ಜಿಲ್ಲೆಯಾದ್ಯಂತ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡುವ ಗುರಿ ಹೊಂದಿತ್ತು. ಆದರೆ ಸೂಕ್ತ ಮಳೆಯಿಲ್ಲದ ಕಾರಣ ಕೇವಲ 55 ಸಾವಿರ ಹೆಕ್ಟೇರ್ (ಶೇ 68) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಅದರಲ್ಲಿ 47 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ರಾಗಿ ಬೆಳೆ ಬೆಳೆಯಲಾಗಿದೆ.

ವಿಶೇಷವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಶೇಕಡಾ 88 ರಷ್ಟು ಬೃಹತ್ ಮಳೆ ಕೊರತೆ ಎದುರಾಗಿದ್ದು, ಹೊಲದಲ್ಲಿರುವ ಪೈರುಗಳು ಸಂಪೂರ್ಣವಾಗಿ ಒಣಗಿ ಬೂದಿಯಾಗುವ ಹಂತಕ್ಕೆ ತಲುಪಿವೆ. ಮುಂಬರುವ ದಿನಗಳಲ್ಲಿ ತಕ್ಷಣಕ್ಕೆ ಮಳೆ ಬಾರದಿದ್ದರೆ ಇಡೀ ರಾಗಿ ಬೆಳೆ ಸಂಪೂರ್ಣ ನಾಶವಾಗುವುದು ಖಚಿತ ಎಂದು ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಕಣ್ಣೀರಿಡುತ್ತಾ ಆಗ್ರಹಿಸುತ್ತಿರುವ ರೈತರು

ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತರು ಈಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ. ಗಂಗಾನಾಯ್ಕ್ ಸೇರಿದಂತೆ ಹಲವು ಸ್ಥಳೀಯ ರೈತರು, ಮಳೆಯಿಲ್ಲದೆ ಕಂಗಾಲಾಗಿದ್ದು ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 11 September 26

Follow Us
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ