Ramzan Calendar: ರಂಜಾನ್ ಮಾಸದ ಆರಂಭ ಯಾವಗಿನಿಂದ ಗೊತ್ತಾ? ಇಲ್ಲಿದೆ ಉಪವಾಸದ ಕ್ಯಾಲೆಂಡರ್

Ramadan 2021: ರಂಜಾನ್ ಹಬ್ಬವನ್ನು ಒಂದು ತಿಂಗಳು ಉಪವಾಸ ಮಾಡುವ ಮೂಲಕ ಆಚರಿಸಲಾಗುತ್ತದೆ. ರಂಜಾನ್ ತಿಂಗಳ ಕೊನೇ ದಿನವನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಏಪ್ರಿಲ್ 14ರಿಂದ ಮೇ 13ರ ವರೆಗೆ ರಂಜಾನ್ ಉಪವಾಸದ ಅವಧಿ.

Ramzan Calendar: ರಂಜಾನ್ ಮಾಸದ ಆರಂಭ ಯಾವಗಿನಿಂದ ಗೊತ್ತಾ? ಇಲ್ಲಿದೆ ಉಪವಾಸದ ಕ್ಯಾಲೆಂಡರ್
ರಂಜಾನ್
Follow us
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 30, 2021 | 8:59 PM

Ramzan Time Table in India 2021 | ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಿಗೆ ಬರುವ ರಂಜಾನ್ ಹಬ್ಬ ಮುಸ್ಲಿಮರಿಗೆ ಅತ್ಯಂತ ಪವಿತ್ರ ಹಾಗೂ ಧಾರ್ಮಿಕವಾಗಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಇದು ಮುಸ್ಲಿಮರ ಅತ್ಯಂತ ದೊಡ್ಡ ಹಬ್ಬ. ಸತತ ಒಂದು ತಿಂಗಳ ಕಾಲ ಪ್ರಾರ್ಥನೆ, ಉಪವಾಸದ ಮೂಲಕ ಮುಸ್ಲಿಮರು ದೇವರನ್ನು ನೆನೆಯುತ್ತಾರೆ. ರಂಜಾನ್​ ಸಂದರ್ಭದಲ್ಲಿ ದೇವರು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್​ನ ಮೊದಲ ಆವೃತ್ತಿಯನ್ನು ಪ್ರವಾದಿ ಮಹಮ್ಮದರಿಗೆ ಬೋಧಿಸಿದ್ದರು ಎಂಬ ನಂಬಿಕೆಯಿದೆ. ರಂಜಾನ್ ಹಬ್ಬವನ್ನು ಒಂದು ತಿಂಗಳು ಉಪವಾಸ ಮಾಡುವ ಮೂಲಕ ಆಚರಿಸಲಾಗುತ್ತದೆ. ರಂಜಾನ್ ತಿಂಗಳ ಕೊನೇ ದಿನ ಅಂದ್ರೆ ಉಪವಾಸದ ಕೊನೇ ದಿನವನ್ನು ರಂಜಾನ್ ಹಬ್ಬವಾಗಿ ಈದ್ ಎಂದು ಆಚರಿಸಲಾಗುತ್ತದೆ. ಏಪ್ರಿಲ್ 14ರಿಂದ ರಂಜಾನ್ ಉಪವಾಸ ಶುರುವಾಗಲಿದೆ. ಮೇ 13ರವರೆಗೆ ಮುಸ್ಲಿಮರು ಉಪವಾಸದ ಆಚರಣೆ ಮಾಡುತ್ತಾರೆ.

ಭಾವೈಕ್ಯದ ಪ್ರಭಾವಳಿ ಪ್ರೀತಿ ಮತ್ತು ಭಾತೃತ್ವದ ಪ್ರತೀಕವಾದ ರಂಜಾನ್‌ ಹಬ್ಬವನ್ನು ಕುತುಬ್‌-ಎ ರಂಜಾನ್‌, ಈದ್‌ ಉಲ್‌ ಫಿತರ್‌ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ. ರಂಜಾನ್‌ಗೆ ಭಾವೈಕ್ಯದ ಪ್ರಭಾವಳಿ ಉಂಟು. ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬವಾಗಿದೆ ರಂಜಾನ್. ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆಯ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುದು ಕೂಡಾ ಆ ಆಚರಣೆಯ ಮುಖ್ಯ ನಿಯಮ.

ರಂಜಾನ್ ಸಮಯದಲ್ಲಿ ಉಪವಾಸ ಇನ್ನು ಪವಿತ್ರ ರಂಜಾನ್​ ತಿಂಗಳಲ್ಲಿ ಇರುವ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಒಂದು ತಿಂಗಳ ಉಪವಾಸ ಮಾಡುವ ಮೂಲಕ ನಮ್ಮ ಸಂಬಂಧ ದೇವರ ಜೊತೆ ಮತ್ತಷ್ಟು ಗಟ್ಟಿಯಾಗುತ್ತೆ. ದೇವರಿಗೆ ಹತ್ತಿರವಾಗಲು ಸಹಾಯ ಮಾಡುತ್ತೆ ಎಂದು ಮುಸ್ಲಿಮರು ನಂಬುತ್ತಾರೆ. ರಂಜಾನ್ ಹಬ್ಬಕ್ಕೆ ಉಪವಾಸವೇ ಅತಿ ಮುಖ್ಯ. ಆಹಾರ, ನೀರು ಏನನ್ನೂ ಸೇವಿಸದೆ ಅಲ್ಲಾಹ್​ನನ್ನು ಸ್ಮರಿಸುವ ಮೂಲಕ ದೇವರಿಗೆ ಪ್ರಿಯರಾಗಲು ಇಷ್ಟಪಡುವ ಮಂದಿ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ.

ಉಪವಾಸ ಸಮಯದಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡುವುದು, ಕುರಾನ್ ಓದುವುದು. ದಾನ ಧರ್ಮ ಮಾಡುವುದು. ಹೀಗೆ ಒಳ್ಳೆ ಕಾರ್ಯಗಳನ್ನು ಮಾಡುತ್ತಾರೆ. ಹಸಿದವರಿಗೆ ಊಟ ಹಾಕಿ, ಒಡವರಿಗೆ ಹಬ್ಬ ಮಾಡಲು ಬೇಕಾದ ದಿನಸಿಗಳನ್ನು ದಾನ ಮಾಡಿ ಖುಷಿ ಪಡ್ತಾರೆ. ಇಡೀ ದಿನ ಉಪವಾಸ ಇರುವುದರಿಂದ ಮಾನಸಿಕ ಸ್ಥೈರ್ಯ ಬಲಗೊಳ್ಳುತ್ತೆ. ಉಪವಾಸ ಇರುವ ವ್ಯಕ್ತಿಯು ಇತರರ ಸಂಕಟ ತಿಳಿದು ಉತ್ತಮನಾಗಲು ಪ್ರಯತ್ನಿಸುತ್ತಾನೆ ಎಂಬ ನಂಬಿಕೆ ಇದೆ.

ಭಾರತದ ದೇಶದ ಮುಖ್ಯ ನಗರಗಳ ಉಪವಾಸದ ವೇಳಾಪಟ್ಟಿ ಹೇಗಿದೆ ಎಂಬುವುದನ್ನು ಇಲ್ಲಿ ತಿಳಿಯಿರಿ.

ವಿವಿಧ ನಗರಗಳ ಉಪವಾಸ ವೇಳಾಪಟ್ಟಿ

Ramdan Time table

ಬೆಂಗಳೂರಿನ ರಂಜಾನ್ ವೇಳಾಪಟ್ಟಿ

Ramdan Time table

Ramdan Time table

ಬೆಂಗಳೂರಿನ ರಂಜಾನ್ ವೇಳಾಪಟ್ಟಿ

ಮಂಗಳೂರಿನ ರಂಜಾನ್ ಉಪವಾಸದ ವೇಳಾಪಟ್ಟಿ

Mangaluru Ramdan Time table

Mangaluru Ramdan Time table

ಮಂಗಳೂರಿನ ರಂಜಾನ್ ಉಪವಾಸದ ವೇಳಾಪಟ್ಟಿ

ಇದನ್ನೂ ಓದಿ: ಶಬ್ ಎ ಬರಾತ್ 2021; ಕ್ಷಮೆಯ ರಾತ್ರಿ.. ತಿಳಿಯಿರಿ ಮುಸ್ಲಿಮರು ಆಚರಿಸುವ ಪ್ರವಿತ್ರ ರಾತ್ರಿಯ ಮಹತ್ವ