ವಿಜಯಪುರ: ಇತ್ತೀಚೆಗಷ್ಟೇ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ಹಗಲು ರಾತ್ರಿಯೆನ್ನದೆ ನೆಲದಲ್ಲಿ ಭಾರಿ ಸದ್ದಿನಿಂದ ಗ್ರಾಮಸ್ಥರು ಕಂಗಾಲಾಗಿದ್ದರು. ಇದೀಗ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿಬರುತ್ತಿದೆ. ಅಲ್ಲದೆ, ಕೆಲ ಮನೆಗಳಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ. ಹಗಲು ಮತ್ತು ರಾತ್ರಿ ವೇಳೆ ಕೇಳಿ ಬರುವ ಭಾರಿ ಸದ್ದಿಗೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಸದಾ ನೆಲದೊಳಗೆ ಭಾರಿ ಸದ್ದು, ಗೋಡೆಗಳಲ್ಲಿ ಬಿರುಕು: ಗ್ರಾಮಸ್ಥರು ಕಂಗಾಲು!
ಹಲವು ದಿನಗಳಿಂದ ಗ್ರಾಮದಲ್ಲಿ ಭೂಮಿ ನಡುಗಿದ ರೀತಿಯಲ್ಲಿ ಅನುಭವವಾಗುತ್ತಿದೆ. ಹೀಗಾಗಿ ಭಯದ ವಾತಾವರಣದಲ್ಲೇ ಗ್ರಾಮಸ್ಥರು ರಾತ್ರಿ ಕಾಲ ಕಳೆಯುವಂತಾಗಿದೆ. ಗ್ರಾಮಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗು ಪರಿಣಿತರು ಭೇಟಿ ನೀಡಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಇದನ್ನೂ ಓದಿ