ಹೆಚ್​ಡಿಕೆ, ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಅಹ್ಮದ್ ಈ ನಾಲ್ಕು ಜನ ಕರ್ನಾಟಕಕ್ಕೆ ಕಂಟಕ: ಕೆ.ಎಸ್. ಈಶ್ವರಪ್ಪ

ಹೆಚ್​ಡಿಕೆ, ಡಿಕೆಶಿ, ಸಿದ್ದರಾಮಯ್ಯ, ಜಮೀರ್ ಅಹ್ಮದ್ ಈ ನಾಲ್ಕು ಜನ ಕರ್ನಾಟಕಕ್ಕೆ ಕಂಟಕ: ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ಸಿದ್ದರಾಮಯ್ಯ ಈ ನಾಲ್ಕು ಜನರು ರಾಜ್ಯಕ್ಕೆ ಕಂಟಕ. ಇವರಿಗೆ ರಾಜ್ಯ ಅಭಿವೃದ್ಧಿ ಆಸಕ್ತಿ ಇಲ್ಲ. ಮುಸ್ಲಿಂರನ್ನು ಹಾಳು ಮಾಡಲು ಈ ನಾಲ್ಕು ಜನರು ಇರುವುದು. ಹಿಜಾಬ್ ವಿವಾದ ಎತ್ತಿದ ಆರು ವಿದ್ಯಾರ್ಥಿನಿಯರಿಗೆ ಈ ನಾಲ್ವರು ಮಹಾಪುರುಷರು ಬುದ್ದಿ ಹೇಳಿದ್ದರೆ ರಾಜ್ಯದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಂರು ಬಂದ್ ಕರೆ ಕೊಟ್ಟಾಗ ಇದೇ ನಾಲ್ವರು ಅವರಿಗೆ ಬೆಂಬಲ ನೀಡಬೇಕೆಂದು ಹೇಳಿದರು ಎಂದು ಶಿವಮೊಗ್ಗದಲ್ಲಿ ಟಿವಿ9ಗೆ ಸಚಿವ ಕೆ.ಎಸ್ ಈಶ್ವರಪ್ಪ […]

TV9kannada Web Team

| Edited By: ganapathi bhat

Apr 05, 2022 | 4:05 PM


ಶಿವಮೊಗ್ಗ: ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಜಮೀರ್ ಅಹಮದ್, ಸಿದ್ದರಾಮಯ್ಯ ಈ ನಾಲ್ಕು ಜನರು ರಾಜ್ಯಕ್ಕೆ ಕಂಟಕ. ಇವರಿಗೆ ರಾಜ್ಯ ಅಭಿವೃದ್ಧಿ ಆಸಕ್ತಿ ಇಲ್ಲ. ಮುಸ್ಲಿಂರನ್ನು ಹಾಳು ಮಾಡಲು ಈ ನಾಲ್ಕು ಜನರು ಇರುವುದು. ಹಿಜಾಬ್ ವಿವಾದ ಎತ್ತಿದ ಆರು ವಿದ್ಯಾರ್ಥಿನಿಯರಿಗೆ ಈ ನಾಲ್ವರು ಮಹಾಪುರುಷರು ಬುದ್ದಿ ಹೇಳಿದ್ದರೆ ರಾಜ್ಯದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮುಸ್ಲಿಂರು ಬಂದ್ ಕರೆ ಕೊಟ್ಟಾಗ ಇದೇ ನಾಲ್ವರು ಅವರಿಗೆ ಬೆಂಬಲ ನೀಡಬೇಕೆಂದು ಹೇಳಿದರು ಎಂದು ಶಿವಮೊಗ್ಗದಲ್ಲಿ ಟಿವಿ9ಗೆ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ನೇತೃತ್ವದಲ್ಲಿ ಪೂರ್ಣ ಬಹುಮತ ಬಂದಿದೆ. ಬಹುಮತ ಬರಲು ಕಾರಣ ಸಂವಿಧಾನ ಮತ್ತು ಕೋರ್ಟ್​ಗೆ ಕೊಟ್ಟ ಗೌರವ. ಯೋಗಿ ಎಲ್ಲರನ್ನೂ ಸಮಾನರಾಗಿ ನೋಡಿದ್ದಾರೆ. ಮುಸ್ಲಿಂ ಮಹಿಳೆಯರು ಯೋಗಿ ಸಿಎಂ ಆಗಬೇಕೆಂದು ಪ್ರಚಾರ ಮಾಡಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಈ ಮೂವರು ಆರ್​​ಎಸ್​ಎಸ್ ಕುರಿತು ಟೀಕೆ ಮಾಡುತ್ತಾರೆ. ಇವರಿಗೆ ಟೀಕೆ ಮಾಡುವ ಯಾವುದೇ ಅಧಿಕಾರಿ ಇಲ್ಲ. ಇವತ್ತು ರಾಜ್ಯವೂ ತಣ್ಣಗೆ ಇದೆ. ಅದು ಇವರಿಗೆ ತೃಪ್ತಿ ಇಲ್ಲ. ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ನೆಮ್ಮದಿಯಿಂದ ಇರಲು ಆಸಕ್ತಿ ಇಲ್ಲ. ಇವರಿಗೆ ಮುಸ್ಲಿಂ ಮತಗಳು ಮಾತ್ರ ಬೇಕು. ಅವರ ಪರ ಜೋರಾಗಿ ಕೂಗಿದರೆ ಮತಗಳು ಬರುತ್ತವೆ ಎನ್ನುವ ಭ್ರಮೆಯಲ್ಲಿ ಅವರು ಇದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮಣ್ಣು ಮುಕ್ಕುತ್ತಾರೆ. ಕುಮಾರಸ್ವಾಮಿ ಲೆಕ್ಕದಲ್ಲೇ ಇಲ್ಲ. ಜೆಡಿಎಸ್ ಪಕ್ಷ ಬಿಟ್ಟು ಎಲ್ಲರೂ ಹೋಗುತ್ತಿದ್ದಾರೆ. ಬಸವರಾಜ್ ಹೊರಟ್ಟಿ ಬಿಜೆಪಿ ಸೇರುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಯೂ ಮಾತನಾಡಿದ ಅವರು ತಾಯಿ ತ್ಯಾಗದ ಮುಂದೆ ಯಾವುದು ಇಲ್ಲ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಜೀಜಾಬಾಯಿ ಬ್ಲೌಸ್ ಧರಿಸದೇ ಇದ್ದಿದ್ದಕ್ಕೆ ಶಿಜಾಜಿ ಕೇಳಿದ್ರು. ಆಗ ನನಗೆ ಹಾರಾಡುತ್ತಿರುವ ಹಸಿರು ಬಾವುಟ ಬೇಕು ಎಂದಿದ್ರು. ಹಸಿರು ಬಾವುಟವನ್ನ ಬ್ಲೌಸ್ ಆಗಿ ಧರಿಸುತ್ತೇನೆ ಎಂದಿದ್ರು. ಶಿವಾಜಿ ಮೊಘಲರ ಧ್ವಜವನ್ನ ಕಿತ್ತು ಹಾಕಿ ತಾಯಿಗೆ ಕೊಟ್ಟರು ಎಂದು ಈಶ್ವರಪ್ಪ ಹೇಳಿದ್ದಾರೆ. ಸಚಿವ ಈಶ್ವರಪ್ಪ ದೇಶದ ಮಹಿಳೆಯನ್ನ ದುರ್ಗೆಗೆ ಹೋಲಿಸಿದ್ದಾರೆ. ನನಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿದ್ದ ಮನೆ ತಣ್ಣಗೆ ಇರುತ್ತದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ: ಹಲಾಲ್ ಕಟ್ ಮತ್ತು ಅಜಾನ್ ಬಗ್ಗೆ ಸಚಿವ ಈಶ್ವರಪ್ಪ ತಳೆದಿರುವ ಮೃದುಧೋರಣೆ ಆಶ್ಚರ್ಯ ಹುಟ್ಟಿಸುತ್ತದೆ!

ಇದನ್ನೂ ಓದಿ: ಮುಸ್ಲಿಮರನ್ನು ಒಪ್ಪಿಸಿ ಶಬ್ದ ಕಡಿಮೆ ಮಾಡಿಸಿ, ಅಜಾನ್ ವಿಚಾರದಲ್ಲಿ ಸ್ಪರ್ಧೆ ಬೇಡ: ಈಶ್ವರಪ್ಪ ಕಿವಿಮಾತು

Follow us on

Related Stories

Most Read Stories

Click on your DTH Provider to Add TV9 Kannada