AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೀಕರ ಅಪಘಾತ: ವಿಧಿಯಾಟಕ್ಕೆ ಮದುವೆಯಾಗಿ 6 ತಿಂಗಳಲ್ಲೇ ನವ ದಂಪತಿ ದುರ್ಮರಣ

ಅವರಿಬ್ಬರೂ ನೂರಾರು ಕನಸು ಕಂಡಿದ್ದರು. ಸುಂದರ ಸಂಸಾರ ನಡೆಸುವ ಆಸೆಯಿಂದ ಕಷ್ಟಪಟ್ಟು ಜೊತೆಯಾಗಿ ದುಡಿಯುತ್ತಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೇನು 6 ತಿಂಗಳಷ್ಟೇ ಕಳೆದಿತ್ತು. ಆದರೆ ಅಷ್ಟರಲ್ಲೇ ಅವರ ಬಾಳಲ್ಲಿ ವಿಧಿ ಆಟವಾಡಿದೆ. ಕೆಲಸ ಮುಗಿಸಿ ಹೊರಟವರು ಮನೆ ಸೇರುವ ಬದಲು ಮಸಣ ಸೇರಿದ್ದಾರೆ. ಲಾರಿಯೊಂದು ಅವರ ಪಾಲಿಗೆ ಜವರಾಯನಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಭೀಕರ ಅಪಘಾತ: ವಿಧಿಯಾಟಕ್ಕೆ ಮದುವೆಯಾಗಿ 6 ತಿಂಗಳಲ್ಲೇ ನವ ದಂಪತಿ ದುರ್ಮರಣ
ಲಾರಿಗೆ ಬೈಕ್​ ಡಿಕ್ಕಿImage Credit source: Tv9 Kannada
Basavaraj Yaraganavi
| Edited By: |

Updated on: Mar 30, 2026 | 12:10 PM

Share

ಶಿವಮೊಗ್ಗ/ನೆಲಮಂಗಲ, ಮಾರ್ಚ್​​ 30: ಲಾರಿಗೆ ಬೈಕ್​ ಡಿಕ್ಕಿಯಾಗಿ ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದ ಬಿಆರ್​ಪಿ ಬಳಿ ನಡೆದಿದೆ. ಬೈಕ್​ನಲ್ಲಿದ್ದ ಬಾಬು(30), ಸಾವಿತ್ರಿ(26) ಮೃತ ದುರ್ದೈವಿಗಳಾಗಿದ್ದು, ಹೋಟೆಲ್ ಕೆಲಸ ಮುಗಿಸಿ ಊರಿಗೆ ಹೋಗ್ತಿದ್ದಾಗ ಅಪಘಾತ ನಡೆದಿದೆ. ಮೃತರು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ಮೂಲದವರಾಗಿದ್ದು, ಇವರ ಮುದುವೆ ಆಗಿ ಕೇವಲ ಆರು ತಿಂಗಳಾಗಿತ್ತು. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ದೇಗುಲಕ್ಕೆ ತೆರಳಿ ಹಿಂದಿರುಗುವಾಗ ಅಪಘಾತ: ಓರ್ವ ಸಾವು

ದೇವಸ್ಥಾನಕ್ಕೆ ತೆರಳಿ ಸಹೋದರರು ಹಿಂದಿರುಗುತ್ತಿದ್ದ ವೇಳೆ ನಡೆದ ಬೈಕ್​​ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲಮಂಗಲ ಸಮೀಪದ ಮಾದನಾಯಕನಹಳ್ಳಿ ಬಳಿ ನಡೆದಿದೆ. ಶ್ರೀನಿವಾಸ್​​ (68) ಮೃತ ವ್ಯಕ್ತಿಯಾಗಿದ್ದು, ವೆಂಕಟಾಚಲ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕ ಮದುರೈ ದೇವಸ್ಥಾನಕ್ಕೆ ತೆರಳಿದ್ದ ಇವರು ನೈಸ್​​ ರೋಡ್​​ ಮಾರ್ಗವಾಗಿ ಹಿಂದಿರುಗುವ ವೇಳೆ ದುರ್ಘಟನೆ ನಡೆದಿದೆ. ಇವರಿಬ್ಬರೂ ಕನಕಪುರದ ಹಾರೋಹಳ್ಳಿ ನಿವಾಸಿಗಳಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ನೆಲಮಂಗಲ ಶವಗಾರಕ್ಕೆ ಶ್ರೀನಿವಾಸ್​​ ಮೃತದೇಹವನ್ನು ರವಾನಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ ಖಾಸಗಿ ಆಸ್ಪತ್ರೆ ಎಡವಟ್ಟು?; ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ

ಹಿಟ್​​ ಆ್ಯಂಡ್​​ ರನ್​​ಗೆ ಯುವಕ ಬಲಿ

ಮೈಸೂರಿನ ಬೈಲಕುಪ್ಪೆಯಲ್ಲಿ ನಡೆದ ಹಿಟ್​​ ಆ್ಯಂಡ್​​ ರನ್​​ನಲ್ಲಿ ಓರ್ವ ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅನಿಲ್​ ಮೃತನಾಗಿದ್ದು, ಸ್ನೇಹಿತನ ಹುಟ್ಟುಹಬ್ಬದ ಪ್ರಯುಕ್ತ ಕೇಕ್​​ ಕೊಂಡೊಯ್ಯುತ್ತಿದ್ದ ವೇಳೆ ಅಪಘಾತ ನಡೆದಿದೆ. ಕುಶಾಲನಗರದಿಂದ ಬೈಲಕುಪ್ಪೆಗೆ ಅಗಮಿಸುತ್ತಿದ್ದ ವೇಳೆ ಅಪರಿಚಿತ ಕಾರು ಆಟೋಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆಟೋ ಬೈಕಿಗೆ ಗುದ್ದಿದ್ದು, ನೆಲದ ಮೇಲೆ ಬಿದ್ದ ಅನಿಲ್ ಮೇಲೆ ಅದೇ ಕಾರು ಹರಿದ ಪರಿಣಾಮ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ಸಮೇತ ಚಾಲಕ ಎಸ್ಕೇಪ್​​ ಆಗಿದ್ದು, ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಸಕಲೇಶಪುರದ ಆನೆಮಹಲ್ ಬಳಿ ಭೂಕುಸಿತದ ಆತಂಕ
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಪಾತಾಳ ಕಂಡ ಟೊಮ್ಯಾಟೋ ಬೆಲೆ: ರಸ್ತೆ ಬದಿ ತಂದು ಬೆಳೆ ಸುರಿದ ರೈತರು
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮಳೆ ವಿಚಾರವಾಗಿ ಪ್ರಧಾನಿ ಮೋದಿ ಎಚ್ಚರಿಕೆ ಗಂಟೆ ಕೊಟ್ಟಿದ್ದಾರೆ: ಸಿಎಂ
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ; ವಿಡಿಯೋ ವೈರಲ್
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
ಇರಾನ್​ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಅಮೆರಿಕ ದಾಳಿ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ
RSS ವಿರುದ್ಧ ಮಾತಾಡಿದ್ರೆ ಕಾಂಗ್ರೆಸ್​​ನಲ್ಲಿ ಬಡ್ತಿ: ಯತ್ನಾಳ್​​ ಆರೋಪ