AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು-ತಾಳಗುಪ್ಪ, ಚಾಮರಾಜನಗರ-ತಿರುಪತಿ ಸೇರಿ 6 ರೈಲು ಪ್ರಯಾಣಿಕರಿಗೆ ಗುಡ್​​ ನ್ಯೂಸ್: ಇನ್ಮುಂದೆ ಇನ್ನಷ್ಟು ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ

ನೈಋತ್ಯ ರೈಲ್ವೆಯು ಅಕ್ಟೋಬರ್ 20 ರಿಂದ 6 ಪ್ರಮುಖ ರೈಲುಗಳಿಗೆ ಅತ್ಯಾಧುನಿಕ ಲಿಂಕೆ ಹಾಫ್‌ಮನ್ ಬುಷ್ (LHB) ಬೋಗಿಗಳನ್ನು ಪರಿಚಯಿಸುತ್ತಿದೆ. ಇದು ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಮತ್ತು ಸುಖಕರ ಪ್ರಯಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ. ಸಾಂಪ್ರದಾಯಿಕ ICF ಬೋಗಿಗಳ ಬದಲಿಗೆ ಈ ಜರ್ಮನ್ ತಂತ್ರಜ್ಞಾನದ LHB ಬೋಗಿಗಳು ಹೆಚ್ಚಿನ ಆರಾಮ ಮತ್ತು ಉತ್ತಮ ಅನುಭವ ನೀಡಲಿವೆ. ಹೊಸ ಬೋಗಿಗಳು ಹಂತ ಹಂತವಾಗಿ ಅಳವಡಿಕೆಯಾಗಲಿವೆ.

ಮೈಸೂರು-ತಾಳಗುಪ್ಪ, ಚಾಮರಾಜನಗರ-ತಿರುಪತಿ ಸೇರಿ 6 ರೈಲು ಪ್ರಯಾಣಿಕರಿಗೆ ಗುಡ್​​ ನ್ಯೂಸ್: ಇನ್ಮುಂದೆ ಇನ್ನಷ್ಟು ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 12, 2026 | 1:22 PM

Share

ಶಿವಮೊಗ್ಗ, ಅ.12: ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಹಾಗೂ ಸುಖಕರ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು (South Western Railway) ಮಹತ್ವದ ನಿರ್ಧಾರ ಕೈಗೊಂಡಿದೆ. ಸಾಂಪ್ರದಾಯಿಕ ಐಸಿಎಫ್ (ICF) ಬೋಗಿಗಳ ಬದಲಾಗಿ ಅತ್ಯಾಧುನಿಕ, ಸುಸಜ್ಜಿತ ಲಿಂಕೆ ಹಾಫ್‌ಮನ್ ಬುಷ್ (LHB) ಜರ್ಮನ್ ತಂತ್ರಜ್ಞಾನದ ಬೋಗಿಗಳನ್ನು 6 ಪ್ರಮುಖ ಜೋಡಿ ರೈಲುಗಳಿಗೆ ಅಳವಡಿಸಲು ನಿರ್ಧರಿಸಿದೆ. ಅಕ್ಟೋಬರ್ 20 ರಿಂದ ಹಂತ ಹಂತವಾಗಿ ಈ ನೂತನ ಎಲ್‌ಎಚ್‌ಬಿ ಬೋಗಿಗಳು ಸಂಚಾರ ಆರಂಭಿಸಲಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಅನುಭವ ನೀಡಲಿವೆ.

ಎಲ್‌ಎಚ್‌ಬಿ ಬೋಗಿಗಳು ಅಳವಡಿಕೆಯಾಗುವ ರೈಲುಗಳು ಹಾಗೂ ದಿನಾಂಕದ ವಿವರ:

ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂ: 16227/16228):

ಮೈಸೂರಿನಿಂದ: ಅಕ್ಟೋಬರ್ 20, 2026 ರಿಂದ

ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ

ತಾಳಗುಪ್ಪ – ಶಿವಮೊಗ್ಗ ಟೌನ್ – ತಾಳಗುಪ್ಪ (ರೈಲು ಸಂ: 56217/56218):

ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ

ಶಿವಮೊಗ್ಗದಿಂದ: ಅಕ್ಟೋಬರ್ 21, 2026 ರಿಂದ

ನಂಜನಗೂಡು ಟೌನ್ – ಮೈಸೂರು – ನಂಜನಗೂಡು ಟೌನ್ (ರೈಲು ಸಂ: 56205/56206):

ನಂಜನಗೂಡಿನಿಂದ: ಅಕ್ಟೋಬರ್ 22, 2026 ರಿಂದ

ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ

ಚಾಮರಾಜನಗರ – ಮೈಸೂರು – ಚಾಮರಾಜನಗರ (ರೈಲು ಸಂ: 56203/56204):

ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ

ಚಾಮರಾಜನಗರದಿಂದ: ಅಕ್ಟೋಬರ್ 24, 2026 ರಿಂದ

ಚಾಮರಾಜನಗರ – ತಿರುಪತಿ – ಚಾಮರಾಜನಗರ (ರೈಲು ಸಂ: 16219/16220):

ಚಾಮರಾಜನಗರದಿಂದ: ಅಕ್ಟೋಬರ್ 22, 2026 ರಿಂದ

ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ

ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ತಿರುಪತಿ – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂ: 16203/16204):

ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ

ಚೆನ್ನೈ ಸೆಂಟ್ರಲ್‌ನಿಂದ: ಅಕ್ಟೋಬರ್ 23, 2026 ರಿಂದ

ಇದನ್ನೂ ಓದಿ: 2027ಕ್ಕೆ ಚಿನ್ನದ ಬೆಲೆ ಬರೋಬ್ಬರಿ 2.82 ಲಕ್ಷ ರೂ. ದಾಟುತ್ತಾ?: ಬಾಬಾ ವಂಗಾ ಹೆಸರಿನಲ್ಲಿ ವೈರಲ್ ಆಗಿರುವ ಭವಿಷ್ಯದ ಅಸಲಿಯತ್ತೇನು?

ಬೋಗಿಗಳ ಸಂರಚನೆಯಲ್ಲಿ ಬದಲಾವಣೆ :

ಹಳೆಯ ವ್ಯವಸ್ಥೆ (21 ಬೋಗಿಗಳು): 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಹಾಗೂ 2 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿಗಳು. ನೂತನ ಎಲ್‌ಎಚ್‌ಬಿ ವ್ಯವಸ್ಥೆ (19 ಬೋಗಿಗಳು) ಮಾಡಲಾಗಿದೆ. 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್, 1 ದಿವ್ಯಾಂಗ ಸ್ನೇಹಿ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿ ಹಾಗೂ 1 ಜನರೇಟರ್ ಕಾರ್ ಬೋಗಿ ಇರಲಿದೆ. ಇನ್ನು ಇಲಾಖೆ ಪ್ರಮುಖ ಸೂಚನೆಯನ್ನು ಕೂಡ ನೀಡಿ ರೈಲು ಸಂಖ್ಯೆ 56217/56218, 56205/56206 ಮತ್ತು 56203/56204 ರ ಎಸಿ ಬೋಗಿಗಳನ್ನು ಅಗತ್ಯವಿದ್ದರೆ ಲಾಕ್ ಮಾಡಿದ ಸ್ಥಿತಿಯಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ).

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More