ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಮೊದಲ ರೈಲು! ಮೆಜೆಸ್ಟಿಕ್ನಿಂದ 45 ನಿಮಿಷ ಮಾತ್ರ
ಕೇವಲ 10 ರೂಪಾಯಿಗೆ ಕೆ.ಆರ್ ಪುರ, ಮೆಜೆಸ್ಟಿಕ್, ಯಶವಂತಪುರ, ವೈಟ್ ಫೀಲ್ಡ್, ಬಯ್ಯಪ್ಪನಹಳ್ಳಿ, ಚಿಕ್ಕಬಳ್ಳಾಪುರದಿಂದ ಪ್ರಯಾಣ ಆರಂಭವಾಗಲಿದ್ದು, ಇನ್ನು ಎಕ್ಸ್‌ಪ್ರೆಸ್ ರೈಲಿಗೆ 30 ರೂಪಾಯಿ. ಕೋಲಾರ 30ರೂ., ಬಂಗಾರಪೇಟೆ 25 ರೂ.., ಶ್ರೀನಿವಾಸಪುರ 25 ರೂ.,, ಚಿಂತಾಮಣಿಯಿಂ 20 ರೂಪಾಯಿ ದರ ನಿಗದಿ ಮಾಡಲಾಗಿದೆ.
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಆರಂಭವಾಗಿದ್ದು, ಇಂದು ಮುಂಜಾನೆ 6 ಗಂಟೆಗೆ ಮೊದಲ ರೈಲು ಮೆಜೆಸ್ಟಿಕ್ನಿಂದ ಏರ್ಪೋರ್ಟ್ಗೆ ಕೇವಲ 45 ನಿಮಿಷಗಳಲ್ಲಿ ತಲುಪಿದೆ. ಏರ್ಪೋರ್ಟ್ ಸಿಬ್ಬಂದಿ ಚಪ್ಪಾಳೆ ಹೊಡೆಯುವ ಮೂಲಕ ಮೊದಲ ರೈಲನ್ನು ಸ್ವಾಗತಿಸಿದರು. ಪ್ರತಿದಿನ 5 ರೈಲುಗಳು, 10 ಟ್ರಿಪ್ ಸಂಚಾರ ಮಾಡಲಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ರೈಲು ಹಾಲ್ಟ್ ಸ್ಟೇಷನ್ ನಿರ್ಮಾಣವಾಗಿದ್ದು, ಕೇವಲ 10 ರೂಪಾಯಿಗೆ ಕೆ.ಆರ್ ಪುರ, ಮೆಜೆಸ್ಟಿಕ್, ಯಶವಂತಪುರ, ವೈಟ್ ಫೀಲ್ಡ್, ಬಯ್ಯಪ್ಪನಹಳ್ಳಿ, ಚಿಕ್ಕಬಳ್ಳಾಪುರದಿಂದ ಪ್ರಯಾಣ ಮಾಡಬಹುದು. ಎಕ್ಸ್ ಪ್ರೆಸ್ ರೈಲಿಗೆ 30 ರೂ. ನಿಗದಿ ಪಡಿಸಲಾಗಿದೆ. ಕೋಲಾರ- 30 ರೂಪಾಯಿ, ಬಂಗಾರಪೇಟೆ -25 ರೂ., ಶ್ರೀನಿವಾಸಪುರ 25 ರೂಪಾಯಿ, ಚಿಂತಾಮಣಿಗೆ 20 ರೂಪಾಯಿಯಂತೆ ದರ ನಿಗದಿ ಮಾಡಲಾಗಿದೆ.
ರೈಲ್ವೆ ನಿಲ್ದಾಣದಿಂದ ಏರ್ಪೋರ್ಟ್ ಒಳಗೆ 3 ಕಿ.ಮೀ ಅಂತರವಿದೆ. ಈ ದೂರ ಕ್ರಮಿಸಲು ಉಚಿತ ಬಸ್ ವ್ಯವಸ್ಥೆ (Feeder Bus) ಮಾಡಲಾಗಿದೆ. ಇಷ್ಟು ದಿನ ಏರ್ಪೋರ್ಟ್ಗೆ ಹೋಗುವುದು ತುಂಬ ದೊಡ್ಡ ಸಮಸ್ಯೆಯಾಗಿತ್ತು.. ಟ್ರಾಫಿಕ್ ಕಿರಿಕಿರಿಯಿಂದಾಗಿ 1-2 ರಿಂದ ತಾಸು ಬೇಕಾಗಿತ್ತು. ಇದೀಗ ನೂತನ ರೈಲು ವ್ಯವಸ್ಥೆಯಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ.
ಕೆಂಪೇಗೌಡ ಏರ್ಪೋರ್ಟ್ ಹೋಗೋರಿಗೆ ಶುಭ ಸುದ್ದಿ, ಸದ್ಯದಲ್ಲೇ ಬರಲಿದೆ ಸ್ಪೆಷಲ್ ರೈಲು
Published On - 10:58 am, Mon, 4 January 21