ಗ್ರಾ.ಪಂ ಸದಸ್ಯ ಕಿಡ್ನಾಪ್​: ಕಾಂಗ್ರೆಸ್‌ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ಕೊಡ್ತಿದ್ದಾರೆ ಎಂದ ಜಗದೀಶ್ ನಾಗರಾಜಯ್ಯ

ಕಿಡ್ನಾಪ್‌ಗೆ ಕುಮ್ಮಕ್ಕು ನೀಡಿರುವ ಪ್ರಭಾವಿಗಳಿಗೂ ಶಿಕ್ಷೆ ಆಗಬೇಕು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಗರಾಜಯ್ಯ ಆರೋಪ ಮಾಡಿದರು.

ಗ್ರಾ.ಪಂ ಸದಸ್ಯ ಕಿಡ್ನಾಪ್​: ಕಾಂಗ್ರೆಸ್‌ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ಕೊಡ್ತಿದ್ದಾರೆ ಎಂದ ಜಗದೀಶ್ ನಾಗರಾಜಯ್ಯ
ಗ್ರಾಪಂ ಸದಸ್ಯನ‌ ಕಿಡ್ನಾಪ್ ಪ್ರಕರಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 13, 2022 | 4:48 PM

ತುಮಕೂರು: ಬಲವಂತವಾಗಿ ಥಳಿಸಿ ಕಾರಿನಲ್ಲಿ ಕಿಡ್ನಾಪ್ (kidnapped) ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಕಿಡ್ನಾಪ್‌ಗೆ ಕುಮ್ಮಕ್ಕು ನೀಡಿರುವ ಪ್ರಭಾವಿಗಳಿಗೂ ಶಿಕ್ಷೆ ಆಗಬೇಕು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಗರಾಜಯ್ಯ ಆರೋಪ ಮಾಡಿದರು. ಕಿಡ್ನಾಪ್‌ ಸಂಬಂಧ ಎಫ್‌ಐಆರ್ ದಾಖಲಾದರೂ ಅವಿಶ್ವಾಸ ಗೊತ್ತುವಳಿ ಸಭೆ ನಡೆಸಿದ್ದಾರೆ. ಕಾಂಗ್ರೆಸ್‌ನವರ ಈ ಕೃತ್ಯಕ್ಕೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ. ಸಿಸಿ ಟಿವಿಯಲ್ಲಿ ಕಿಡ್ನಾಪ್ ದೃಶ್ಯಾವಳಿಗಳು ಸೆರೆಯಾಗಿವೆ. ಕುಣಿಗಲ್‌ ಕ್ಷೇತ್ರವನ್ನ ರಿಪಬ್ಲಿಕ್ ಆಫ್ ಕನಕಪುರ ಮಾಡಲು ಹೊರಟಿದ್ದಾರೆ. ಸ್ವಾಭಿಮಾನಿ ಕುಣಿಗಲ್ ಜನತೆ ಈ ಗೂಂಡಾಗಿರಿಗೆ ಒಳಗಾಗುತ್ತಿದ್ದಾರೆ ಎಂದು ಡಿಕೆ ಬ್ರದರ್ಸ್‌ಗೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಗರಾಜಯ್ಯ ಎಚ್ಚರಿಕೆ ನೀಡಿದರು. ಕಿಡ್ನಾಪ್‌ ಆದ ಮಂಜುನಾಥ್‌ನಿಂದ ಗನ್‌ಪಾಯಿಂಟ್‌‌‌ನಲ್ಲಿ ಹೇಳಿಕೆ ಕೊಡಿಸಿದಂತಿದೆ. ಆ ವಿಡಿಯೋ ನೋಡಿದರೆ ತುಂಬಾ ಭಯದ ವಾತವರಣದಲ್ಲಿ ಹೇಳಿಕೆ ನೀಡಿದಂತಿದೆ ಎಂದು ಜಗದೀಶ್ ನಾಗರಾಜಯ್ಯ ಹೇಳಿದರು.

ನಿಡಸಾಲೆ ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯನ ಕಿಡ್ನಾಪ್ ಪ್ರಕರಣ ಹಿನ್ನೆಲೆ ಡ್ಯಾಮೇಜ್ ಕಂಟ್ರೋಲ್‌ಗೆ ಕಾಂಗ್ರೆಸ್ ಶಾಸಕ ಡಾ.ಕೆ.ರಂಗನಾಥ್ ಬೆಂಬಲಿಗರು ಮುಂದಾದರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ? ಕಿಡ್ನಾಪ್‌ ಆದ ಮಂಜುನಾಥ್‌ನಿಂದ ಕೇವಲ ಹನ್ನೊಂದು ಸೆಕೆಂಡ್‌ಗಳ ವಿಡಿಯೋ ತುಣುಕು ಬಿಡುಗಡೆ ಮಾಡಲಾಗಿದೆ. ನನಗೆ ರಾಜಕೀಯ ಜೀವನ ಬೇಸರ ತಂದಿದೆ. ನಾನಾಗಿ ನಾನು ಬಂದಿದ್ದೀನಿ, ಯಾರೂ ಕಿಡ್ನಾಪ್ ಮಾಡಿಲ್ಲ ಎಂದಷ್ಟೇ ಹೇಳುವ ಹನ್ನೊಂದು ಸೆಕೆಂಡ್‌ಗಳ ವಿಡಿಯೋ‌. ಬಲವಂತವಾಗಿ ಹೇಳಿಕೆ ಮಾಡಿ ವಿಡಿಯೋ ಮಾಡಿರುವ ಶಂಕೆ‌ ವ್ಯಕ್ತವಾಗಿದೆ. ತಡರಾತ್ರಿ ಕಾರಿನಲ್ಲಿ ಎಳೆದೊಯ್ದು ಕಿಡ್ನಾಪ್ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಸದ್ಯ ಗ್ರಾಪಂ‌ ಸದಸ್ಯ ಮಂಜುನಾಥ್ ಹೇಳಿಕೆ ವಿಡಿಯೋ ಅನುಮಾನ ಮೂಡಿಸಿದೆ. ಅಮೃತೂರು ಠಾಣೆಯಲ್ಲಿ ದಾಖಲಾಗಿರುವ ಕಿಡ್ನಾಪ್ ಪ್ರಕರಣ‌ ದಾಖಲಾಗಿದೆ.

ಮಂಜುನಾಥ ಸೇರಿದಂತೆ ಒಟ್ಟು 10 ಗ್ರಾ. ಪಂ. ಸದಸ್ಯರು ಪಂಚಾಯಿತಿ ಅಧ್ಯಕ್ಷೆ ಪುಟ್ಟಲಿಂಗಮ್ಮ (Puttalingamma) ವಿರುದ್ಧ ಅವಿಶ್ವಾಸ ನಿರ್ಣಯ ಮಂಡಸಿದ ಬಳಿಕ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸ ಮುಗಿಸಿಕೊಂಡು ವಾಪಸ್ಸು ಬರುವಾಗ ಎಡೆಯೂರಿನಲ್ಲಿ ಊಟಕ್ಕೆ ನಿಂತಿದ್ದಾರೆ. ಊಟ ಮುಗಿಸಿ ಕಾರು ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಾಗ ಹೋಟೆಲ್ ಮುಂಭಾಗದಲ್ಲಿ ಅವರಿಗಾಗಿ ಕಾಯುತ್ತಿದ್ದ ಅಪರಿಚಿತರ ತಂಡ ಮಂಜುನಾಥ್​ರನ್ನು ಕಾರಿನಲ್ಲಿ ಅಪಹರಿಸುತ್ತಾರೆ.