ಕುಣಿಗಲ್​: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ: ಮೂವರ ಬಂಧನ

ಬರ್ತಡೇ ಆಚರಿಸಿಕೊಂಡ ಯುವಕ ಬೆಳಗ್ಗೆ ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ‌ ಸ್ವತಃ ಹೆಂಡತಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಈಗ ಬಯಲಾಗಿದೆ.

ಕುಣಿಗಲ್​: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ: ಮೂವರ ಬಂಧನ
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನ ಹತ್ಯೆಗೆ ಸುಫಾರಿ ನೀಡಿದ ಪತ್ನಿ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 13, 2023 | 5:51 PM

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಕೆರೆಯಲ್ಲಿ ಫೆ.4ರಂದು ಅನುಮಾನಾಸ್ಪದವಾಗಿ ಮಂಜುನಾಥ್ ಎಂಬುವವರ ಶವ ಪತ್ತೆಯಾಗಿತ್ತು. ಈ ಕುರಿತು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಸ್ವತಃ ದೊಡ್ಡಮ್ಮನ ಮಗನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ ಮಂಜುನಾಥ್ ಪತ್ನಿಯೇ ಸುಪಾರಿ ಕೊಟ್ಟು ಗಂಡನನ್ನ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆ ಮಂಜುನಾಥ್ ಪತ್ನಿ ಹರ್ಷಿತಾ ಸೇರಿ ರಘು, ರವಿಕಿರಣ್ ಎಂಬುವವರನ್ನ ಬಂಧಿಸಲಾಗಿದೆ.

ಇನ್ನು ತಾಲೂಕಿನ ಸೀನಪ್ಪನಹಳ್ಳಿ ನಿವಾಸಿ ಮಂಜುನಾಥ್, ಫೆ.3ರಂದು ಹುಟ್ಟುಹಬ್ಬ ಆಚರಿಸಿಕೊಂಡು ನಿವಾಸಕ್ಕೆ ಬಂದಿದ್ದ. ಬಳಿಕ ಫೋನ್​ ಬಂತೆಂದು ಮನೆಯಿಂದ ಹೊರಹೋಗಿದ್ದ ಮಂಜುನಾಥ್​ನನ್ನು ಬರ್ಬರವಾಗಿ ಹತ್ಯೆಗೈದು ಶವವನ್ನ ಕೆರೆಗೆ ಎಸೆಯಲಾಗಿದೆ. ತನಿಖೆ ವೇಳೆ ಮಂಜುನಾಥ್ ಪತ್ನಿ ಹರ್ಷಿತಾ ಸುಪಾರಿ ಆಟ ಬಯಲಾಗಿದ್ದು, ತನ್ನ ದೊಡ್ಡಮ್ಮನ ಮಗ ರಘು, ರವಿಕಿರಣ್​ಗೆ ಸುಪಾರಿ ನೀಡಿರುವುದು ಬಯಲಾಗಿದೆ. ಈ ಕೊಲೆಗೆ ಸುಮಾರು 7 ಲಕ್ಷ ರೂ ಸುಪಾರಿ ನೀಡಲಾಗಿದೆ ಎನ್ನಲಾಗಿದೆ. ಪೊಲೀಸರ ತನಿಖೆ ಆರಂಭಿಸಿದ್ದಾಗ ಈ ಮಾಹಿತಿ ಆಚೆ ಬಂದಿದೆ. ಇನ್ನೂ ಒಟ್ಟು 7 ಜನ ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಇದೀಗ ಮೂವರನ್ನ ಬಂಧಿಸಲಾಗಿದೆ.

ಇದನ್ನೂ ಓದಿ:ಬೀದರ್​: ಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ ಯುವತಿಯನ್ನ ಕತ್ತು ಹಿಸಿಕಿ ಕೊಲೆ ಮಾಡಿದ ಪಾಗಲ್​ ಪ್ರೇಮಿ

ಇನ್ನು ಹರ್ಷಿತಾ ಮೂಲತಃ ಮಾಗಡಿಯ ಸೋಲುರು ಬಳಿಯ ಒಂಭತ್ತನಗುಂಟೆಯವರು. ಆರೋಪಿ ರಘು ಮತ್ತು ರವಿಕಿರಣ್ ಹರ್ಷಿತಾಳ ಸ್ವಂತ ದೊಡ್ಡಮ್ಮನ ಮಕ್ಕಳು. ಇವರು ಬೆಂಗಳೂರಿನ ಲಿಂಗದೀರನಹಳ್ಳಿಯವರು. ಅಂದಹಾಗೆ 2022 ನೇ ಮಾರ್ಚ್ 13 ರಂದು ಸೀನಪ್ಪನಹಳ್ಳಿಯಲ್ಲಿಯ ಮಂಜುನಾಥನ ಜೊತೆ ಹರ್ಷಿತಾ ಜೊತೆ ಮದುವೆಯಾಗಿತ್ತು. ಮಂಜುನಾಥ್​ನಿಗೆ ತಂದೆ ತಾಯಿ ಇಲ್ಲ. 90 ವರ್ಷದ ಅಜ್ಜಿ ಮಾತ್ರ ಇದ್ದಾರೆ. ಹರ್ಷಿತಾ ಅಣ್ಣ ರಘು ಜೊತೆ ಸದಾ ಫೋನಿನಲ್ಲಿ ಸಲುಗೆಯಿಂದ ಮಾತನಾಡುತಿದ್ದಳು ಎನ್ನಲಾಗಿದ್ದು, ಇದೀಗ ರಾತ್ರೋರಾತ್ರಿ ಮಂಜುನಾಥ್​ನನ್ನ ಕೊಲೆ ಮಾಡಿ ಕೆರೆಯಲ್ಲಿ ಹಾಕಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Mon, 13 February 23