AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದಂಗಡಿ ಕಳ್ಳತನ: ಹೊಸ ಬದುಕಿನ ಆಸೆ ಕಟ್ಟಿಕೊಂಡವನ ಹೊಟ್ಟೆ ಮೇಲೆ ಹೊಡೆದ ಖದೀಮರು

ತುಮಕೂರು ಜಿಲ್ಲೆಯ ಕೊರಟಗೆರೆಯ ವಾಸವಿ ಜ್ಯುವೆಲರ್ಸ್‌ನಲ್ಲಿ ರಾತ್ರೋರಾತ್ರಿ ಕಳ್ಳತನ ನಡೆದಿದೆ. ಹೊಸದಾಗಿ ವ್ಯಾಪಾರ ಆರಂಭಿಸಿದ್ದ ಮಾಲೀಕ ಸಂಬಂಧಿಕರ ಮನೆಗೆ ಹೋಗಿದ್ದಾಗ, ಕಳ್ಳರು ಅಂಗಡಿಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿದ್ದಾರೆ. ಡಿವಿಆರ್ ಕೂಡ ಕಳವು ಮಾಡಲಾಗಿದೆ.

ಚಿನ್ನದಂಗಡಿ ಕಳ್ಳತನ: ಹೊಸ ಬದುಕಿನ ಆಸೆ ಕಟ್ಟಿಕೊಂಡವನ ಹೊಟ್ಟೆ ಮೇಲೆ ಹೊಡೆದ ಖದೀಮರು
ಚಿನ್ನದಂಗಡಿಗೆ ಕನ್ನ ಹಾಕಿದ ಖದೀಮರುImage Credit source: tv9 kannada
ಜಗದೀಶ ಬಿ.
| Edited By: |

Updated on: Oct 09, 2026 | 7:46 PM

Share

ಮುಖ್ಯಾಂಶಗಳು

  • ರಾತ್ರೋರಾತ್ರಿ ಚಿನ್ನದಂಗಡಿ ದೋಚಿದ ಖದೀಮರು
  • ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಘಟನೆ
  • ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

ತುಮಕೂರು, ಅಕ್ಟೋಬರ್​​ 09: ಹೊಸ ಬದುಕಿನ ಆಸೆ ಕಟ್ಟಿಕೊಂಡಿದ್ದ ವ್ಯಕ್ತಿ ಸಣ್ಣ ಚಿನ್ನದಂಗಡಿ ತೆರೆದಿದ್ದರು. ಬರುತಿದ್ದ ಆದಾಯದಲ್ಲೇ ಮುಂದಿನ ಕನಸುಗಳ ಲೆಕ್ಕಾಚಾರ ಹಾಕುತ್ತಿದ್ದರು. ನಿನ್ನೆ ಕೆಲಸದ ನಿಮಿತ್ತ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಹೋಗುವಾಗ ಪೋಷಕರ ಕೈಗೆ ಅಂಗಡಿಯ ಕೀ ಕೊಟ್ಟು ಹೋಗಿದ್ದರು. ಆದರೆ ಇಂದು ಬೆಳಿಗ್ಗೆ ಮನೆಗೆ ಬಂದಿದ್ದ ವ್ಯಕ್ತಿಗೆ ಪೊಲೀಸರು ಕರೆ ಮಾಡಿದ್ದು, ಪೊಲೀಸರ ಅದೊಂದು ಮಾತಿಗೆ ಕುಸಿದು ಬಿದಿದ್ದಾರೆ. ರಾತ್ರೋರಾತ್ರಿ ಖದೀಮರ ಗ್ಯಾಂಗ್​ ಅಂಗಡಿ ದೋಚಿ ಪರಾರಿಯಾಗಿದ್ದಾರೆ.

ಬೀಗ ಮುರಿದು ಚಿನ್ನದಂಗಡಿ ದೋಚಿ ಕಳ್ಳರು ಪರಾರಿ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಜನ ಇಂದು ಅಕ್ಷರಶಃ ಬೆಚ್ಚಿಬಿದಿದ್ದಾರೆ. ಬೆಳಗಿನ ಜಾವ ಎಂದಿನಂತೆ ವಾಕಿಂಗ್​ಗೆ ಬಂದಿದ್ದ ಜನರು ಊರಿನ ನಡುವೆ ಇರುವ ವಾಸವಿ ಚಿನ್ನದಂಗಡಿ ಬೀಗ ಮುರಿದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ವೇಳೆ ಕಳ್ಳರ ಕೃತ್ಯ ಬಯಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ

ಅಸಲಿಗೆ ವಾಸವಿ ಜ್ಯುವೆಲರಿ ಶಾಪ್​​ ಮಾಲೀಕ ಶ್ರೀನಿವಾಸ್​​, ಕಳೆದ ಕೆಲ ವರ್ಷಗಳ ಹಿಂದಷ್ಟೇ ಜ್ಯುವೆಲರಿ ವ್ಯಾಪಾರ ಆರಂಭಿಸಿದ್ದರು. ನಿನ್ನೆ ಸಂಬಂಧಿಕರ ಮನೆಗೆ ಕುಟುಂಬ ಸಮೇತ ತೆರಳಿದ್ದ ಇವರು, ತಮ್ಮ ತಂದೆ, ತಾಯಿಗೆ ಅಂಗಡಿ ಕಡೆ ನೋಡಿಕೊಳ್ಳಲು ಹೇಳಿದ್ದರು. ಆದರೆ ಮರುದಿನ ಬೆಳಿಗ್ಗೆ ಅವರಿಗೊಂಡು ಶಾಕ್​​ ಕಾದಿತ್ತು.

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳುವು

ಅಸಲಿಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡೆ ಬಂದಿದ್ದ ಗ್ಯಾಂಗ್ ಕೃತ್ಯ ಎಸಗಿರುವುದು ಸ್ಪಷ್ಟವಾಗಿದೆ. ನಿನ್ನೆ ಅಂಗಡಿಯಲ್ಲಿ ವೃದ್ಧರಿರುವುದನ್ನ ತಿಳಿದು ಕೃತ್ಯ ಎಸಗಿದ್ದಾರೆ. ಅಂಗಡಿಯ ಬೀಗ ಮುರಿದು ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ಸೇರಿದಂತೆ ಅಂಗಡಿಯೊಳಗಿದ್ದ ಚಿನ್ನ ಹಾಗೂ ಬೆಳ್ಳಿಯನ್ನು ಸಂಪೂರ್ಣವಾಗಿ ದೋಚಿದ ಗ್ಯಾಂಗ್, ಕೊನೆಗೆ ಡಿವಿಆರ್ ಸಮೇತ ಪರಾರಿ ಆಗಿದ್ದಾರೆ.

ಪರಿಚಿತರಿಂದ ಕೃತ್ಯ ಶಂಕೆ

ಅಂಗಡಿಯ ಮಾಲೀಕ ಸಂಬಂಧಿಕರ ಮನೆಗೆ ತೆರಳುವುದು, ಅಂಗಡಿಯಲ್ಲಿ ವೃದ್ಧರಿರುವುದನ್ನ ಅರಿತೆ ಕೃತ್ಯ ಎಸಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಯಾರೋ ಪರಿಚಿತರೆ ಕೃತ್ಯ ಎಸಗಿರುವ ಶಂಕೆ ಮೂಡಿದೆ. ಸದ್ಯ ಮಾಲೀಕ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More