
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದ ಪ್ರದೋಶ್, ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ನಡೆಸಿದ ಕ್ರೂರ ಹಲ್ಲೆ ಹಾಗೂ ಪವಿತ್ರಾ ಗೌಡ ಪಾತ್ರದ ಕುರಿತು ನ್ಯಾಯಾಲಯದಲ್ಲಿ ಮೂರು ಗಂಟೆಗಳ ಕಾಲ ಸುದೀರ್ಘ ಸಾಕ್ಷ್ಯ ನುಡಿದಿದ್ದಾರೆ. ಪ್ರದೋಶ್ ನೀಡಿದ ಈ ಮಹತ್ವದ ಸಾಕ್ಷ್ಯ ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ. ಮತ್ತಷ್ಟು ಓದಿ
ಷೇರು ಮಾರುಕಟ್ಟೆಯಲ್ಲಿ ಸತತ ಎರಡನೇ ದಿನವೂ ಕುಸಿತ ಮುಂದುವರಿದಿದ್ದು, ಹೂಡಿಕೆದಾರರಿಗೆ ಆತಂಕ ತಂದೊಡ್ಡಿದೆ. ಇಂದು ಮುಹೂರ್ತ ವ್ಯಾಪಾರದ ಬಳಿಕ ಸೆನ್ಸೆಕ್ಸ್ 503 ಅಂಕಗಳಷ್ಟು ಭಾರಿ ಕುಸಿತ ಕಂಡರೆ, ನಿಫ್ಟಿ 151 ಅಂಕಗಳಷ್ಟು ಇಳಿಕೆಯಾಗಿದೆ. ನಿನ್ನೆಯೂ ಸಹ ಉಭಯ ಸೂಚ್ಯಂಕಗಳು ನಷ್ಟದೊಂದಿಗೆ ವಹಿವಾಟು ಮುಗಿಸಿದ್ದವು.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮಟನ್ ಶಾಪ್ ಮರೆಯಲ್ಲಿ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಜುನೈದ್ ಪಾಷಾ ಹಾಗೂ ರಿಜ್ವಾನ್ ಬೇಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಪ್ರಜೆಯಿಂದ ಡ್ರಗ್ಸ್ ತರಿಸುತ್ತಿದ್ದ ಆರೋಪಿಗಳಿಂದ 10.60 ಲಕ್ಷ ಮೌಲ್ಯದ 106 ಗ್ರಾಂ ಎಂಡಿಎಂಎ, ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.
ಸ್ಪೇಸ್‌ಎಕ್ಸ್‌ನ ‘ಸ್ಟಾರ್‌ಶಿಪ್’ ರಾಕೆಟ್ ಮೊದಲ ಬಾರಿಗೆ ಭೂಕಕ್ಷೆಗೆ ತಲುಪಿ ಇತಿಹಾಸ ಸೃಷ್ಟಿಸಿದೆ. ಎಂಜಿನ್ ವೈಫಲ್ಯದ ನಡುವೆಯೂ 26 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಮಿಷನ್ ಬೇಗನೇ ಅಂತ್ಯಗೊಂಡು ನೌಕೆ ಪೆಸಿಫಿಕ್‌ನಲ್ಲಿ ನಾಶವಾದರೂ, ನಾಸಾದ ಚಂದ್ರಯಾನ ಹಾಗೂ ಮಸ್ಕ್ ಅವರ ಮಂಗಳ ಗ್ರಹದ ಕನಸಿಗೆ ಇದು ದೊಡ್ಡ ಮೈಲಿಗಲ್ಲು. ಮತ್ತಷ್ಟು ಓದಿ
ಮ್ಯಾನ್ಮಾರ್‌ನ ರಖೈನ್‌ನ ಕ್ಯುಕ್ತಾವ್ ಮಾರುಕಟ್ಟೆ ಮೇಲೆ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ 49 ನಾಗರಿಕರು ಮೃತಪಟ್ಟಿದ್ದಾರೆ. ಯುದ್ಧದ ಸೋಲಿನ ಹತಾಶೆಯಿಂದ ನಾಗರಿಕರನ್ನು ಗುರಿಯಾಗಿಸಲಾಗಿದೆ ಎಂದು ಆರೋಪಿಸಿರುವ ಅರಾಕನ್ ಸೈನ್ಯವು, ತಕ್ಕ ಪ್ರತ್ಯುತ್ತರ ನೀಡುವುದಾಗಿ ಮಿಲಿಟರಿಗೆ ಎಚ್ಚರಿಕೆ ನೀಡಿದೆ. ಮತ್ತಷ್ಟು ಓದಿ
ಕರ್ನಾಟಕದಲ್ಲಿ ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳಿಂದ ಮೃತಪಡುವವರ ಸಂಖ್ಯೆ ದಶಕದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಎಂಸಿಸಿಡಿ ವರದಿ ಪ್ರಕಾರ 2016ರಲ್ಲಿ 5,940 ಇದ್ದ ಸಾವುಗಳು, 2025ರಲ್ಲಿ 18,730ಕ್ಕೆ ಏರಿಕೆಯಾಗಿವೆ. ಕಿಡ್ನಿ ವೈಫಲ್ಯವೇ ಈ ಪ್ರಾಣಾಪಾಯಕ್ಕೆ ಪ್ರಮುಖ ಕಾರಣವಾಗಿದೆ. ಮತ್ತಷ್ಟು ಓದಿ
ಮಳೆಯಿಂದ ಕ್ವಾರ್ಟರ್ ಫೈನಲ್ ಪಂದ್ಯಗಳು ರದ್ದಾದ ಕಾರಣ ಐಸಿಸಿ ಶ್ರೇಯಾಂಕದ ಆಧಾರದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ನೇಪಾಳ, ಅಫ್ಘಾನಿಸ್ತಾನ, ಮಲೇಷ್ಯಾ ಹಾಗೂ ಹಾಂಗ್ ಕಾಂಗ್ ಟೂರ್ನಿಯಿಂದ ಹೊರಬಿದ್ದಿವೆ. ಮತ್ತಷ್ಟು ಓದಿ
ಬಳ್ಳಾರಿ ಜಿಲ್ಲೆಯ ಸೋಮಸಮುದ್ರದಲ್ಲಿ ತಡರಾತ್ರಿ ಪುಟ್‌ಪಾತ್ ಮೇಲೆ ನಿಂತಿದ್ದವರ ಮೇಲೆ ಲಾರಿ ಎರಗಿ ಮಹಾದೇವಿ (48) ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಾಯಾಳುಗಳನ್ನು ಬಳ್ಳಾರಿ ಟ್ರಾಮಾಕೇರ್‌ಗೆ ದಾಖಲಿಸಲಾಗಿದೆ. ಕುರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಕಿಯಿರುವ 38,000 ಕೋಟಿ ರೂ. ಹಣ ಬಿಡುಗಡೆ ಮಾಡಲು ಆಗ್ರಹಿಸಿ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದೆ. ನೀಡಿದ್ದ ಭರವಸೆಯಂತೆ ಹಣ ಬಿಡುಗಡೆ, ಪಾರದರ್ಶಕತೆ, ಜಿಎಸ್‌ಟಿ 8% ವ್ಯತ್ಯಾಸದ ಮೊತ್ತ ಪಾವತಿ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡಲು ತುರ್ತು ಸಭೆ ಕರೆಯುವಂತೆ ಕೋರಿದೆ.
ಹುಣಸೂರು ತಾಲೂಕಿನ ಉದ್ಯೂರು ಗ್ರಾಮದಲ್ಲಿ ಶಾಲಾ ವಾಹನ ಹರಿದು 1.7 ವರ್ಷದ ಲತಿಕ್ಷಾ ಎಂಬ ಹೆಣ್ಣು ಮಗು ಸ್ಥಳದಲ್ಲೇ ಉಸಿರುಚೆಲ್ಲಿದ ಧೋಖದ ಘಟನೆ ನಡೆದಿದೆ.ಶಾಸ್ತ್ರಿ ಪಬ್ಲಿಕ್ ಸ್ಕೂಲ್‌ನ ವಾಹನದಲ್ಲಿ ಮನೆಗೆ ಬಂದಿದ್ದ 4 ವರ್ಷದ ಬಾಲಕನನ್ನು ಆತನ ತಾಯಿ ಇಳಿಸಿಕೊಳ್ಳುತ್ತಿದ್ದಾಗ, ಪಕ್ಕದಲ್ಲೇ ನಿಂತಿದ್ದ ಮಗು ಲತಿಕ್ಷಾಗೆ ವಾಹನ ಡಿಕ್ಕಿಯಾಗಿದೆ. ಅತಿ ವೇಗ ಹಾಗೂ ಅಜಾಗರೂಕ ಚಾಲನೆಯಿಂದಾಗಿ ಮಗುವಿನ ಮೇಲೆ ವಾಹನದ ಚಕ್ರ ಹರಿದ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಶ್‌ನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಸಿಎಆರ್ ಪೊಲೀಸ್ ವಾಹನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಬಿಗಿ ಭದ್ರತೆಯೊಂದಿಗೆ ಕೋರ್ಟ್‌ಗೆ ಕರೆತರುತ್ತಿದ್ದಾರೆ. ಎರಡನೇ ದಿನದ ಸಾಕ್ಷಿಗಳ ಹೇಳಿಕೆ ದಾಖಲಿಸಲು ಬೆಳಿಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ದೊಡ್ಡೇರಿ ಫಾರ್ಮ್‌ಹೌಸ್ ನಕಲಿ ಔಷಧ ಜಾಲದ ಕಿಂಗ್‌ಪಿನ್ ಪ್ರಶಾಂತ್‌ನನ್ನು ಎಸ್‌ಐಟಿ 10 ದಿನ ಕಸ್ಟಡಿಗೆ ಪಡೆದಿದೆ. ಆರೋಪಿಗೆ ಬಿಪಿ, ಶುಗರ್ ಇರುವುದರಿಂದ ವೈದ್ಯಕೀಯ ತಪಾಸಣೆ ನಡೆಸಿ ವಿಚಾರಣೆ ಮಾಡಲಾಗುತ್ತಿದೆ. ಇತರ ಆರೋಪಿಗಳ ಹೇಳಿಕೆ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಅಧಿಕಾರಿಗಳು ಗ್ರಿಲ್ ಮಾಡುತ್ತಿದ್ದಾರೆ.
ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕ್ವಾರ್ಟರ್ ಫೈನಲ್ ಹಂತದಿಂದ ಈಗಾಗಲೇ ಮೂರು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಹೀಗೆ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ತಂಡಗಳೆಂದರೆ ಭಾರತ, ಪಾಕಿಸ್ತಾನ್ ಮತ್ತು ಶ್ರೀಲಂಕಾ. ಇತ್ತ ಶ್ರೀಲಂಕಾ ಎಂಟ್ರಿಯೊಂದಿಗೆ ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರಾಳಿ ಯಾರೆಂಬುದು ಕನ್ಫರ್ಮ್ ಆಗಿದೆ. ಜಪಾನ್‌ನ ನಿಶ್ಶಿನ್‌ನಲ್ಲಿರುವ ಐಚಿ ಪ್ರಿಫೆಕ್ಚರಲ್ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ಅಕ್ಟೋಬರ್ 1, 2026ರ ಗುರುವಾರ ನಡೆಯಲಿರುವ ಎರಡನೇ ಸೆಮಿ-ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿದೆ.
Breaking News Today Live Updates in Kannada: ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಮೆಜೆಸ್ಟಿಕ್, ಮಲ್ಲೇಶ್ವರಂ, ಕೆಂಗೇರಿ, ಬನಶಂಕರಿ ಹಾಗೂ ದಕ್ಷಿಣ ಭಾಗದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ, ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ಕೋರಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಮನವಿ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಯೋಜನಾ ಸ್ಥಳ ಪರಿಶೀಲನೆಗೆ ನಿಯೋಗ ಕಳುಹಿಸುವಂತೆ ತಮಿಳುನಾಡಿಗೆ ಸೂಚಿಸಲು ಕೋರಿದ್ದಾರೆ. ಇನ್ನು ಕ್ರೀಡಾ ಲೋಕದಲ್ಲಿ, ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಬಲಿಷ್ಠ ಟೀಮ್ ಇಂಡಿಯಾ ಲಗ್ಗೆ ಇಟ್ಟಿದ್ದು, ಹೈವೋಲ್ಟೇಜ್ ಕಾದಾಟದಲ್ಲಿ ಭಾರತಕ್ಕೆ ಎದುರಾಳಿಯಾಗುವ ತಂಡ ಅಧಿಕೃತವಾಗಿ ಖಚಿತಗೊಂಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Published On - 9:03 am, Tue, 29 September 26