AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾನ್ಮಾರ್​ನಲ್ಲಿ ಸೋಲಿನ ಹತಾಶೆಯಲ್ಲಿ ಜನರ ಮೇಲೆ ಮಿಲಿಟರಿ ಬಾಂಬ್ ದಾಳಿ: ಅರಾಕನ್ ಸೈನ್ಯದಿಂದ ತಕ್ಕ ಪ್ರತ್ಯುತ್ತರದ ರಣಕಹಳೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕ್ಯುಕ್ತಾವ್ ಮಾರುಕಟ್ಟೆಯಲ್ಲಿ ಕನಿಷ್ಠ 49 ನಾಗರಿಕರು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿನ ಸೋಲಿನ ಹತಾಶೆಯಲ್ಲಿ ಮಿಲಿಟರಿ ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿದೆ ಎಂದು ಅರಾಕನ್ ಸೈನ್ಯ ಖಂಡಿಸಿದೆ. ಪ್ರತ್ಯುತ್ತರದ ಎಚ್ಚರಿಕೆ ನೀಡಿದೆ. 2021ರ ನಂತರ ಅಂತರ್ಯುದ್ಧ ತೀವ್ರಗೊಂಡಿದ್ದು, ರಖೈನ್‌ನಲ್ಲಿ ಆಹಾರ, ಔಷಧ ಕೊರತೆ ಎದುರಾಗಿದೆ.

ಮ್ಯಾನ್ಮಾರ್​ನಲ್ಲಿ ಸೋಲಿನ ಹತಾಶೆಯಲ್ಲಿ ಜನರ ಮೇಲೆ ಮಿಲಿಟರಿ ಬಾಂಬ್ ದಾಳಿ: ಅರಾಕನ್ ಸೈನ್ಯದಿಂದ ತಕ್ಕ ಪ್ರತ್ಯುತ್ತರದ ರಣಕಹಳೆ
ಬಾಂಬ್ ದಾಳಿ Image Credit source: The Independent
ನಯನಾ ರಾಜೀವ್
|

Updated on: Sep 29, 2026 | 9:34 AM

Share

ಮ್ಯಾನ್ಮಾರ್, ಸೆಪ್ಟೆಂಬರ್ 29: ಪಶ್ಚಿಮ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಮಿಲಿಟರಿ ಆಡಳಿತವು ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 49 ಮಂದಿ ನಾಗರಿಕರು ಸಾವನ್ನಪ್ಪಿದ್ದು, 58 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಬಲ ಜನಾಂಗೀಯ ಬಂಡಾಯ ಪಡೆಯಾದ ಅರಾಕನ್ ಸೇನೆಯ ನಿಯಂತ್ರಣದಲ್ಲಿರುವ ಕ್ಯುಕ್ತಾವ್ ಪಟ್ಟಣದ ಪ್ರಮುಖ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ.

ಸೋಮವಾರ ಮಧ್ಯಾಹ್ನ ವ್ಯಾಪಾರ-ವಹಿವಾಟು ನಡೆಯುತ್ತಿದ್ದ ಸಮಯದಲ್ಲಿ ಮಿಲಿಟರಿ ಫೈಟರ್ ಜೆಟ್ ಒಂದು ಸ್ಥಳೀಯ ಸಗಟು ಮಾರುಕಟ್ಟೆ ಪ್ರದೇಶದ ಮೇಲೆ ಎರಡು ಶಕ್ತಿಶಾಲಿ ಬಾಂಬ್‌ಗಳನ್ನು ಬೀಳಿಸಿದೆ. ಈ ದಾಳಿಯಲ್ಲಿ ತರಕಾರಿ, ದಿನಸಿ ಮಾರಾಟಗಾರರು, ಖರೀದಿಗೆ ಬಂದಿದ್ದ ಸಾರ್ವಜನಿಕರು ಮತ್ತು ದಾರಿಹೋಕರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಲಿಯಾಗಿದ್ದಾರೆ. ಗಾಯಗೊಂಡ 58 ಜನರಲ್ಲಿ ಸುಮಾರು 22 ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ. ಬಾಂಬ್ ಸ್ಫೋಟದ ರಭಸಕ್ಕೆ ಹತ್ತಿರದ ಕಟ್ಟಡಗಳು ಹೊತ್ತಿ ಉರಿದಿದ್ದು, ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ ಹಾಗೂ ಸಮೀಪದ ಸೇತುವೆಗೂ ಹಾನಿಯಾಗಿದೆ.

ಅರಾಕನ್ ಸೇನೆಯ ಪ್ರತೀಕಾರದ ಎಚ್ಚರಿಕೆ:

ಕ್ಯುಕ್ತಾವ್ ಪಟ್ಟಣವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಅರಾಕನ್ ಸೇನೆಯು ಈ ದಾಳಿಯನ್ನು ಕಟುವಾಗಿ ಖಂಡಿಸಿದೆ. “ಸೇನೆಯು ಯುದ್ಧಭೂಮಿಯಲ್ಲಿ ಸೋಲುತ್ತಿರುವುದನ್ನು ಸಹಿಸದೆ, ಉದ್ದೇಶಪೂರ್ವಕವಾಗಿ ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ಸಾಮೂಹಿಕ ಹತ್ಯೆ ನಡೆಸುತ್ತಿದೆ. ಈ ಮಾರಣಹೋಮಕ್ಕೆ ಕಾರಣರಾದ ಸೇನಾ ಕಮಾಂಡರ್‌ಗಳು ಮತ್ತು ಜುಂಟಾ ಆಡಳಿತದ ವಿರುದ್ಧ ಶೀಘ್ರದಲ್ಲೇ ಪರಿಣಾಮಕಾರಿ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅರಾಕನ್ ಸೈನ್ಯ ಎಚ್ಚರಿಕೆ ನೀಡಿದೆ.

2021 ರ ಕ್ಷಿಪ್ರಕ್ರಾಂತಿ ಮತ್ತು ಅಂತರ್ಯುದ್ಧ: ಫೆಬ್ರವರಿ 2021 ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಪ್ರಜಾಸತ್ತಾತ್ಮಕ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ (ಜುಂಟಾ) ಅಧಿಕಾರ ಹಿಡಿದ ನಂತರ ಮ್ಯಾನ್ಮಾರ್‌ನಲ್ಲಿ ತೀವ್ರ ಅಂತರ್ಯುದ್ಧ ಭುಗಿಲೆದ್ದಿದೆ.

ಮತ್ತಷ್ಟು ಓದಿ:

‘ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’; ಅಫ್ಘಾನ್ ಮೇಲಿನ ಪಾಕಿಸ್ತಾನದ ದಾಳಿಗೆ ಭಾರತ ಖಂಡನೆ

ರಖೈನ್‌ನಲ್ಲಿ ಅರಾಕನ್ ಸೇನೆಯ ಪ್ರಾಬಲ್ಯ: ರಖೈನ್ ರಾಜ್ಯದಲ್ಲಿ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಅರಾಕನ್ ಸೇನೆಯು ಕಳೆದ ನವೆಂಬರ್‌ನಿಂದ ಬೃಹತ್ ಕಾರ್ಯಾಚರಣೆ ನಡೆಸಿ, ರಾಜ್ಯದ ಒಟ್ಟು 17 ಪಟ್ಟಣಗಳ ಪೈಕಿ 14 ಪಟ್ಟಣಗಳನ್ನು ಹಾಗೂ ಪ್ರಮುಖ ಸೇನಾ ನೆಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ತನ್ನ ಹಿಡಿತ ಕಳೆದುಕೊಳ್ಳುತ್ತಿರುವ ಸೇನಾ ಪಡೆ ಹತಾಶೆಯಿಂದ ವೈಮಾನಿಕ ದಾಳಿಗಳನ್ನು ಹೆಚ್ಚಿಸಿದೆ.

ಆಹಾರ ಹಾಗೂ ಔಷಧಿ ಬಿಕ್ಕಟ್ಟು: ಯುದ್ಧದ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಸೇನೆಯು ರಖೈನ್ ಪ್ರದೇಶಕ್ಕೆ ತೆರಳುವ ಎಲ್ಲಾ ಪ್ರಮುಖ ಹೆದ್ದಾರಿ, ಜಲಮಾರ್ಗ ಮತ್ತು ವ್ಯಾಪಾರ ಸಂಪರ್ಕಗಳನ್ನು ನಿರ್ಬಂಧಿಸಿದೆ. ಪರಿಣಾಮವಾಗಿ ಲಕ್ಷಾಂತರ ನಿರಾಶ್ರಿತ ನಾಗರಿಕರು ತೀವ್ರ ಆಹಾರ ಕೊರತೆ, ಅಪೌಷ್ಟಿಕತೆ ಮತ್ತು ವೈದ್ಯಕೀಯ ಸೌಲಭ್ಯಗಳಿಲ್ಲದೆ ನಲುಗುತ್ತಿದ್ದಾರೆ. ಈ ಹಿಂದೆ ಕಳೆದ ಡಿಸೆಂಬರ್‌ನಲ್ಲಿ ಮ್ರೌಕ್-ಯು ಪಟ್ಟಣದ ಆಸ್ಪತ್ರೆ ಮೇಲೂ ಸೇನೆ ವೈಮಾನಿಕ ದಾಳಿ ನಡೆಸಿ 34 ನಾಗರಿಕರನ್ನು ಕೊಂದಿತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್