AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೋನಾ ಕಾಲದಲ್ಲಿ ನಿರ್ಮಾಣವಾಯ್ತು ದೇವಾಲಯ! ಉಡುಪಿಯಲ್ಲಿ ತಲೆ ಎತ್ತಿತು ಪಂಜುರ್ಲಿ ದೇವಸ್ಥಾನ

ಎಲ್ಲವೂ ಊಹಿಸಿದಂತೆ ಆಗಿದ್ದರೆ ಸುಮಾರು 2.45 ಕೋಟಿ ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣವಾಗಬೇಕಿತ್ತು. ಆದರೆ ಲಾಕ್​ಡೌನ್ ಇವರ ಪಾಲಿಗೆ ವರದಾನವಾಯಿತು. ಕರಸೇವಕರು ಕೇವಲ 90 ಲಕ್ಷ ವೆಚ್ಚದಲ್ಲಿ ದೈವಸ್ಥಾನ ನಿರ್ಮಿಸಿ ಮಾನವ ಶಕ್ತಿಯ ಪರಿಚಯ ಮಾಡಿಸಿದ್ದಾರೆ.

ಕೊರೋನಾ ಕಾಲದಲ್ಲಿ ನಿರ್ಮಾಣವಾಯ್ತು ದೇವಾಲಯ! ಉಡುಪಿಯಲ್ಲಿ ತಲೆ ಎತ್ತಿತು ಪಂಜುರ್ಲಿ ದೇವಸ್ಥಾನ
ಊರಿನವರಿಂದಲೇ ನಿರ್ಮಾಣವಾದ ದೇವಾಲಯ
preethi shettigar
| Updated By: ಸಾಧು ಶ್ರೀನಾಥ್​|

Updated on: Feb 16, 2021 | 1:06 PM

Share

ಉಡುಪಿ: ಜಿಲ್ಲೆಯಲ್ಲಿ ಪಂಜುರ್ಲಿ ದೈವದ ಕಾರಣಿಕ ಮತ್ತೊಮ್ಮೆ ಸಾಬೀತಾಗಿದ್ದು, ಕೊರೋನಾ ಕಾಲಘಟ್ಟದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಮಾದರಿಯಲ್ಲಿ ಸುಂದರ ದೇವಾಲಯವೊಂದು ತಲೆಯೆತ್ತಿ ನಿಂತಿದೆ. ಪವಾಡ ಸದೃಶವಾಗಿ ನಿರ್ಮಾಣವಾದ ಈ ದೇವಾಲಯ ಲಾಕ್​ಡೌನ್​ನಲ್ಲಿ ನಿರ್ಮಾಣವಾಗಿದ್ದು, ಇಡೀ ಊರಿನವರ ಪರಿಶ್ರಮದಲ್ಲಿ ಸಂಪೂರ್ಣಗೊಂಡಿದೆ.

ಕರಾವಳಿಯಲ್ಲಿ ದೈವಗಳ ಪವಾಡ ಪದೇ ಪದೇ ಸದ್ದು ಮಾಡುತ್ತದೆ. ಕೊರೋನಾ ಕಾಲಘಟ್ಟದಲ್ಲಿ ಅಂತಹ ಪವಾಡವೊಂದು ಮರುಕಳಿಸಿದ್ದು, ಉಡುಪಿಯ ಕೊಡವೂರು ಸಮೀಪದ ಕಂಗೊಟ್ಟು ಎಂಬಲ್ಲಿರುವ ಈ ಸುಂದರ ದೇವಾಲಯವನ್ನು ನೋಡಿದರೆ ಇದರ ನಿರ್ಮಾಣಕ್ಕೆ ಮುಂದಾದ ಊರ ಜನರ ಶ್ರದ್ಧೆ ಮತ್ತು ಭಕ್ತಿ ಎದ್ದು ಕಾಣುತ್ತದೆ.

ದೇವಾಲಯವನ್ನು ನಿರ್ಮಾಣ ಮಾಡಬೇಕು ಎಂದು ದೃಢ ಸಂಕಲ್ಪ ಮಾಡಿದ್ದಾಗಲೇ ಎದುರಾಗಿದ್ದು, ಕರೋನಾಘಾತ. ಕ್ಷೇತ್ರದ ದೈವ ಪಂಜುರ್ಲಿಯ ಮೇಲೆ ಭಾರ ಹಾಕಿದ ಗ್ರಾಮಸ್ಥರು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಿಸಿಯೇ ಬಿಟ್ಟರು. ಇವರ ಪಾಲಿಗೆ ಶಾಪವೇ ವರವಾಗಿ ಪರಿಣಮಿಸಿದ್ದು ನಿಜಕ್ಕೂ ವಿಸ್ಮಯವೇ ಸರಿ.

annappa panjurli

ದೇವಾಲಯದ ನಿರ್ಮಾಣ ಕಾರ್ಯ

ಕೋರೋನಾ ಬಂದಾಗ ಲಾಕ್​ಡೌನ್ ಘೋಷಣೆಯಾಯಿತು. ಲಾಕ್​ಡೌನ್​ ಘೋಷಣೆಯಾಗಿದ್ದೇ ತಡ ಪರವೂರ ಜನರೆಲ್ಲ ಊರಿಗೆ ಬಂದು ನೆಲೆಸಿದ್ದು, ಊರ ಯುವಕರು ಕೂಡ ಎಲ್ಲಾ ಕೆಲಸ ಬಿಟ್ಟು ಮನೆಯಲ್ಲೇ ಉಳಿಯುವಂತಾಯಿತು. ದೈವದ ಪ್ರೇರಣೆಯೇ ಇರಬೇಕು, ಖಾಲಿ ಕುಳಿತವರೆಲ್ಲಾ ಕರಸೇವೆ ಆರಂಭಿಸಿದ್ದು, ರಾತ್ರಿ-ಹಗಲು ಒಂದು ಮಾಡಿ ದೈವ ಸ್ಥಾನ ನಿರ್ಮಾಣದಲ್ಲಿ ತೊಡಗಿಸಿಕೊಂಡರು.

annappa panjurli

ದೇವಾಲಯದ ಚಿತ್ರಣ

ಸಾಫ್ಟ್ ವೇರ್ ಇಂಜಿನಿಯರ್​ಗಳು, ಖಾಸಗಿ ಕಂಪೆನಿಗಳಲ್ಲಿ ದುಡಿಯುವವರು, ಸರ್ಕಾರಿ ನೌಕರರು, ಕುಶಲ ಕರ್ಮಿಗಳು ಹೀಗೆ ಪ್ರತಿಯೊಬ್ಬರೂ ಕಾರ್ಮಿಕರಾಗಿ ಪ್ರತಿಯೊಂದು ಕೆಲಸವನ್ನೂ ತಮ್ಮ ಕೈಯಾರೆ ನಡೆಸಿದರು. ಕರಸೇವಕರ ಆರು ತಿಂಗಳ ಪರಿಶ್ರಮ ಸುಂದರ ದೇವಾಲಯದ ರೂಪದಲ್ಲಿ ತಲೆ ಎತ್ತಿ ನಿಂತಿದ್ದು, ಈ ಊರಿನ ಜನ ಇದನ್ನು ಶ್ರೀ ಅಣ್ಣಪ್ಪ ಪಂಜುರ್ಲಿ ಪವಾಡ ಎಂದೇ ಭಾವಿಸುತ್ತಾರೆ.

annappa panjurli

ಲಾಕ್​ಡೌನ್​ ಸಂದರ್ಭದಲ್ಲಿ ನಿರ್ಮಾಣವಾದ ದೇವಾಲಯ

ಈ ಕ್ಷೇತ್ರದಲ್ಲಿ ಕಾರಣಿಕದ ದೈವ ಅಣ್ಣಪ್ಪ ಪಂಜುರ್ಲಿಯ ಅನೇಕ ಪವಾಡಗಳು ನಡೆದಿವೆ. ನ್ಯಾಯಾಲಯದಲ್ಲಿ ತೀರ್ಮಾನವಾಗದೆ ಉಳಿದ ಪ್ರಕರಣಗಳು ಇತ್ಯರ್ಥವಾಗಿದೆ. ದೈವಕ್ಕೆ ಕಂಬಳ ಸೇವೆಯನ್ನು ಕೊಟ್ಟು ಸಮಸ್ಯೆಗಳನ್ನು ಬಗೆಹರಿಸಿಕೊಂಡ ಸಾವಿರಾರು ಭಕ್ತರಿದ್ದಾರೆ. ಈಗ ನೋಡನೋಡುತ್ತಿದ್ದಂತೆ ಕರಸೇವಕರಿಂದಲೇ ದೈವಸ್ಥಾನ ನಿರ್ಮಾಣವಾಗಿ ಕ್ಷೇತ್ರದ ಶಕ್ತಿಯನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದು ಸ್ಥಳೀಯರಾದ ಸಂತೋಷ ಶೆಟ್ಟಿ ಹೇಳಿದ್ದಾರೆ.

ಎಲ್ಲವೂ ಊಹಿಸಿದಂತೆ ಆಗಿದ್ದರೆ ಸುಮಾರು 2.45 ಕೋಟಿ ರೂ. ವೆಚ್ಚದಲ್ಲಿ ದೈವಸ್ಥಾನ ನಿರ್ಮಾಣವಾಗಬೇಕಿತ್ತು. ಆದರೆ ಲಾಕ್​ಡೌನ್ ಇವರ ಪಾಲಿಗೆ ವರದಾನವಾಯಿತು. ಕರಸೇವಕರು ಕೇವಲ 90 ಲಕ್ಷ ವೆಚ್ಚದಲ್ಲಿ ದೈವಸ್ಥಾನ ನಿರ್ಮಿಸಿ ಮಾನವ ಶಕ್ತಿಯ ಪರಿಚಯ ಮಾಡಿಸಿದ್ದಾರೆ. ಹೀಗಾಗಿ ಜನರು ದೈವಸ್ಥಾನವನ್ನು ಲಾಕ್​ಡೌನ್ ಟೆಂಪಲ್ ಎಂದು ಕರೆಯುತ್ತಿದ್ದಾರೆ.

ತುಳುನಾಡ ಬ್ರಹ್ಮರು, ವೀರಭದ್ರ ದೇವರು, ಸಿರಿ, ಅಬ್ಬಗ-ದಾರಗ, ರಕ್ತೇಶ್ವರಿ, ನಂದಿಗೋಣ ಕಲ್ಕುಡ ಹಾಗೂ ಬಬ್ಬರ್ಯ ದೈವಗಳನ್ನು ಪುನಃ ಇಲ್ಲಿ ಪ್ರತಿಷ್ಠಾಪನೆ ಆಗುತ್ತಿದ್ದು, ಕೇವಲ ಕರ ಸೇವೆಯಿಂದಲೇ ನಿರ್ಮಾಣವಾದ ಈ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಕರಾವಳಿಗರನ್ನು ಕೈಬೀಸಿ ಕರೆಯುತ್ತಿದೆ.

ಇದನ್ನೂ ಓದಿ: Ram Temple Construction Fund ಮಂದಿರ ನಿರ್ಮಾಣಕ್ಕೆ 500100 ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ