ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಬಹಳ ಅನಕೂಲವಾಗಲಿದೆ: ಸಿಎಂ ಬೊಮ್ಮಾಯಿ
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿರುವುದು ಎಲ್ಲಾ ಸಮುದಾಯಕ್ಕೆ ಆಶಾಕಿರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಸತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ (Economically Weaker Sections EWS) ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿರುವುದು ಎಲ್ಲಾ ಸಮುದಾಯಕ್ಕೆ ಆಶಾಕಿರಣವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಂಸತ ವ್ಯಕ್ತಪಡಿಸಿದ್ದಾರೆ. ಕಾಪು ಹಾಗೂ ಬೈಂದೂರಿನಲ್ಲಿ ಜನ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ಇಂದು (ನ. 8) ಉಡುಪಿಗೆ ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಜಾರಿಗೆ ತರಲಾಗಿದೆ. ಸಂವಿಧಾನಕ್ಕೆ ತಿದ್ದುಪಡಿಯ ಮೂಲಕ ಜಾರಿಗೆ ತರಲಾಗಿದೆ. ಬಡವರು ಮತ್ತು ಅವಕಾಶ ವಂಚಿತರಿಗೆ ಈ ಆದೇಶದಿಂದ ಬಹಳ ಉಪಯೋಗವಾಗಿದೆ. ಇದು ಶಿಕ್ಷಣ ಮತ್ತು ಉದ್ಯೋಗ ಲಭ್ಯತೆಗೆ ಆಶಾಕಿರಣ ಬೆಳವಣಿಗೆಯಾಗಿದೆ ಎಂದರು.
ಈ ಮೀಸಲಾತಿಯಿಂದ ಸುಪ್ರೀಂಕೋರ್ಟ್ ಆದೇಶದಿಂದ ಹಿಂದುಳಿದವರು ಅವಕಾಶ ಪಡೆಯಲು ಅನುಕೂಲವಾಗಿದೆ. ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರದಲ್ಲಿರುವುದರಿಂದಲೇ ಈ ಮಹತ್ವದ ಹೆಚ್ಚೆ ಇಡಲಾಗಿದೆ. ಪ್ರಧಾನಿ ಮೋದಿಯ ದೂರದರ್ಶತ್ವದಿಂದ ಇದು ಅನುಷ್ಠಾನವಾಗಿದೆ. ಈ ಬೆಳವಣಿಗೆಯಿಂದ ನನಗೆ ಬಹಳ ಸಂತೋಷವಾಗಿದೆ ಎಂದು ಸಂತಸಪಟ್ಟರು.
ದೇಶದ ಅಭಿವೃದ್ಧಿಯ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಯು ಮುಖ್ಯ. ಆರ್ಥಿಕ ಸ್ವಾವಲಂಬನೆಗೆ ಇದೊಂದು ದಿಟ್ಟ ಹೆಜ್ಜೆ. ತಾಂತ್ರಿಕ ಮತ್ತು ಸಾಂವಿಧಾನಿಕ ವಿಚಾರ ಇಟ್ಟು ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗಿತ್ತು. ಕೂಲಂಕುಶ ಪರಿಶೀಲನೆ ಮಾಡಿದ ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ರಾಜ್ಯ ಮತ್ತು ದೇಶದಲ್ಲಿ ಈ ಆದೇಶ ಬಹಳ ದೊಡ್ಡ ಪ್ರಮಾಣದಲ್ಲಿ ಅನುಷ್ಠಾನವಾಗಲಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಧ್ಯಾನ ಕಡ್ಡಾಯ: ಒಳ್ಳೆ ಕೆಲಸ ಪ್ರಾರಂಭಿಸುವಾಗ ಪರ ವಿರೋಧ ಚರ್ಚೆ ಆಗುತ್ತೆ
ಕರ್ನಾಟಕದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿದಿನ 10 ನಿಮಿಷ ಧ್ಯಾನ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಲೇಖಕರು ಮತ್ತು ಸಾಹಿತಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದ್ದಿದ್ದಾರೆ. ಈ ಕುರಿತು ಮಾತನಾಡಿದ ಅವರು ಪತ್ರ ನನ್ನ ಗಮನಕ್ಕೆ ಇನ್ನೂ ಬಂದಿಲ್ಲ. ಪರಿಶೀಲನೆ ಮಾಡುತ್ತೇನೆ. ಯಾವುದೇ ಒಳ್ಳೆ ಕೆಲಸ ಪ್ರಾರಂಭಿಸುವಾಗ ಪರ ವಿರೋಧ ಚರ್ಚೆ ಆಗುತ್ತೆ. ಸರಾಸರಿಯಾಗಿ ಎಲ್ಲವನ್ನು ಆಲೋಚನೆ ಮಾಡಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು.
ಅಡಿಕೆ ರೋಗವನ್ನು ತಡೆಗಟ್ಟಲು ವಿಜ್ಞಾನಿಗಳು ಕೆಲವು ಸಲಹೆ ನೀಡಿದ್ದಾರೆ
ಅಡಿಕೆ ರೋಗ ತಡೆಗಟ್ಟಲು 10 ಕೋಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು ಅಡಿಕೆ ಬೆಳೆಗಾರರಿಗೆ ಬಿಳಿ ಚುಕ್ಕಿ ರೋಗ ದೊಡ್ಡ ಸಮಸ್ಯೆಯಾಗಿದೆ. ಕೃಷಿ ವಿಶ್ವವಿದ್ಯಾಲಯ ಮತ್ತು ಕೇಂದ್ರ ತಂಡ ಅಧ್ಯಯನ ನಡೆಸುತ್ತೆ. ರೋಗ ಹರಡದಂತೆ ತಡೆಗಟ್ಟಲು ವಿಜ್ಞಾನಿಗಳು ಕೆಲವು ಸಲಹೆ ನೀಡಿದ್ದಾರೆ. ಸಿಂಪಡಣೆಯ ಮೂಲಕ ರೋಗ ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ರೋಗ ಮೂಲ ತಿಳಿದುಕೊಂಡು ಸೂಕ್ತ ಔಷಧಿ ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Mon, 7 November 22