ಉಡುಪಿಯಲ್ಲಿ ಹಿಜಾಬ್ಗಾಗಿ ಹೋರಾಟ ಮಾಡಿದ್ದ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಗೆ ಗೈರು
ಉಡುಪಿ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಮುಸ್ಕಾನ್, ಸಫಾ ಪರೀಕ್ಷೆಗೆ ಪರೀಕ್ಷೆಗೆ ಹಾಜರಾಗಿಲ್ಲ. ಉಡುಪಿಯಲ್ಲಿ ಇಂದಿನಿಂದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ಆರಂಭವಾಗಿದೆ.
ಉಡುಪಿ: ಜಿಲ್ಲೆಯಿಂದ ಆರಂಭವಾದ ಹಿಜಾಬ್ (Hijab) ಕಿಚ್ಚು ರಾಜ್ಯವಲ್ಲ ಇಡೀ ದೇಶದಾದ್ಯಂತ ಹಬ್ಬಿತ್ತು. ಹಿಜಾಬ್ಗಾಗಿ ಹೋರಾಟ ಮಾಡಿದ್ದ ವಿದ್ಯಾರ್ಥಿನಿಯರು (Students) ಪ್ರಥಮ ಪಿಯುಸಿ ಅಂತಿಮ ಪರೀಕ್ಷೆಗೆ ಗೈರಾಗಿದ್ದಾರೆ. ಉಡುಪಿ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನ ಮುಸ್ಕಾನ್, ಸಫಾ ಪರೀಕ್ಷೆಗೆ ಪರೀಕ್ಷೆಗೆ ಹಾಜರಾಗಿಲ್ಲ. ಉಡುಪಿಯಲ್ಲಿ ಇಂದಿನಿಂದ ಪ್ರಥಮ ಪಿಯುಸಿ ಅಂತಿಮ ಪರೀಕ್ಷೆ ಆರಂಭವಾಗಿದೆ. ಆದರೆ ಹಿಜಾಬ್ ನಮ್ಮ ಹಕ್ಕು ಎಂದು ಹಿಜಾಬ್ಗಾಗಿ ಹೋರಾಟಕ್ಕೆ ಇಳಿದಿದ್ದ ಇಬ್ಬರು ಪರೀಕ್ಷೆ ಬರೆದಿಲ್ಲ ಅಂತ ಕಾಲೇಜಿನ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಪ್ರಭಾಕರ್ ಭಟ್ ಭಾಗಿಗೆ ಸಿಎಫ್ಐ ವಿರೋಧ: ಕಲ್ಲಡ್ಕ ಪ್ರಭಾಕರ್ ಭಟ್ ಮುಖ್ಯ ಅತಿಥಿಯಾಗಿದ್ದಕ್ಕೆ ಸಿಎಫ್ಐ ವಿರೋಧ ವ್ಯಕ್ತಪಡಿಸಿದೆ. ನಾಳೆ ನಡೆಯುವ ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಪ್ರಭಾಕರ ಭಟ್ ಆಗಮಿಸಲಿದ್ದಾರೆ. ಆದರೆ ಸಿಎಫ್‌ಐ ಶೀಘ್ರವೇ ನಿರ್ಧಾರ ಹಿಂಪಡೆಯಬೇಕೆಂದು ಮಂಗಳೂರು ವಿವಿಗೆ ಆಗ್ರಹಿಸಿದೆ.
ನಿನ್ನೆ ರಾಜಾಜಿನಗರದ ಸಿದ್ದಗಂಗಾ ಪರೀಕ್ಷಾ ಕೇಂದ್ರದಲ್ಲಿ ನಡೆದ ಘಟನೆ ಏನು? ಪರೀಕ್ಷೆ ಕೊಠಡಿಗೆ ಹಿಜಾಬ್ಗೆ ಅವಕಾಶ ಇಲ್ಲ ಅಂತ ಶಿಕ್ಷಣ ಇಲಾಖೆ ಸ್ಪಷ್ಟವಾಗಿ ಆದೇಶಿಸಿದೆ. ದುಪ್ಪಟ್ಟ ಮೂಲಕ ತಲೆ, ಕಿವಿ, ಮುಖವನ್ನ ಕವರ್ ಮಾಡಿಕೊಂಡು ವಿದ್ಯಾರ್ಥಿನಿಯರು ಪರೀಕ್ಷೆಗೆ ಮುಂದಾಗಿದ್ದರು. ಮುಸ್ಲಿಂ ಬಾಲಕರು ತಲೆಗೆ ಟೋಪಿ ಧರಿಸಿದ್ದನ್ನ ಪರೀಕ್ಷಾ ಅಧೀಕ್ಷಕಿ ತೆಗೆಸಿದ್ದರು. ಇದರ ಜೊತೆಗೆ ಪರೀಕ್ಷಾ ಸಿಬ್ಬಂದಿ ಸಹ ದುಪ್ಪಟ್ಟದಲ್ಲಿ ಹಿಜಾಬ್ ಧಾರಣೆ ಮಾಡಿದ್ದರು. 3 ಬಾರಿ ಸೂಚಿಸಿದ್ದರೂ ಶಿಕ್ಷಕಿ ನೂರ್ ಫಾತಿಮಾ ಹಿಜಾಬ್ ತೆಗೆಯಲು ನಿರಾಕರಿಸಿದ್ದರು. ನನಗೆ ಹಿಜಾಬ್ ಧರಿಸಿ ಅಭ್ಯಾಸ ಆಗಿದೆ. ತೆಗೆಯೋಕೆ ಆಗಲ್ಲ ಎಂದರು. ಹೀಗಾಗಿ ತಕ್ಷಣ ಮುಖ್ಯ ಅಧೀಕ್ಷಕರು ಪರೀಕ್ಷಾ ಮೇಲ್ವಿಚಾರಕಿಯನ್ನು ಅಮಾನತು ಮಾಡಿದ್ದಾರೆ.
ಇದನ್ನೂ ಓದಿ
ತುಮಕೂರು ಸಿದ್ದಗಂಗಾ ಮಠಕ್ಕೆ ರಾಹುಲ್ ಗಾಂಧಿ, ಬೆಂಗಳೂರಿನಲ್ಲಿ ಹಿರಿಯ ನಾಯಕರ ಸಭೆ: ಡಿಕೆ ಶಿವಕುಮಾರ್
Published On - 12:33 pm, Tue, 29 March 22