ವಿಜಯನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹೊಡೆದನೆಂದು ಬಾಲಕ ನಾಪತ್ತೆ; ಶಿಕ್ಷಕನ ವಿರುದ್ಧ ದೂರು ದಾಖಲಿಸಿದ ತಂದೆ

ನಾಗರಾಜ ಎಂಬ 14 ವರ್ಷದ ಬಾಲಕ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯನ್ನ ಶಿಕ್ಷಕ ಶಾಮಸುಂದರ್ ಥಳಿಸಿದ ಪರಿಣಾಮ ಮಗ ಕಾಣೆಯಾಗಿದ್ದಾನೆಂದು ತಂದೆ ದೊಡ್ಡಯ್ಯ ದೂರು ದಾಖಲಿಸಿದ್ದಾರೆ.

ವಿಜಯನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ಹೊಡೆದನೆಂದು ಬಾಲಕ ನಾಪತ್ತೆ; ಶಿಕ್ಷಕನ ವಿರುದ್ಧ ದೂರು ದಾಖಲಿಸಿದ ತಂದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Mar 17, 2022 | 7:46 PM

ವಿಜಯನಗರ: ಶಾಲೆಯಲ್ಲಿ ಶಿಕ್ಷಕರು ಹೊಡೆದಿದ್ದರಿಂದ ತನ್ನ ಮಗ ಕಾಣೆಯಾಗಿದ್ದನೆಂದು ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾದ ಘಟನೆ ವಿಜಯನಗರದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ‌ ದಾಸೋಬನಹಳ್ಳಿ ಗೊಲ್ಲರಹಟ್ಟಿ ನಾಗರಾಜ ಎಂಬ 14 ವರ್ಷದ ಬಾಲಕ ಹಿರೇಕುಂಬಳಗುಂಟೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ವಿದ್ಯಾರ್ಥಿಯನ್ನ ಶಿಕ್ಷಕ ಶಾಮಸುಂದರ್ ಥಳಿಸಿದ ಪರಿಣಾಮ ಮಗ ಕಾಣೆಯಾಗಿದ್ದಾನೆಂದು ತಂದೆ ದೊಡ್ಡಯ್ಯ ದೂರು ದಾಖಲಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಬಾಲಕ ನಾಗರಾಜ ದಾಸೋಬನಹಳ್ಳಿ ಗೊಲ್ಲರಹಟ್ಟಿಯಿಂದ ಶಾಲೆಗೆ ತೆರಳಿದ್ದ. ನಂತರ ಮಧ್ಯಾಹ್ನ ದೊಡ್ಡಯ್ಯನಿಗೆ ಬಾಲಕನ ತಾಯಿ ಫೋನ್ ಮಾಡಿ ಮಗನು ಶಾಲೆಯಲ್ಲಿ ಶಿಕ್ಷಕರೊಬ್ಬರು ಹೊಡೆದಿದ್ದರಿಂದ ಕಾಣೆಯಾಗಿದ್ದನೆಂದು ಹೇಳಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಊರೆಲ್ಲ ಹುಡುಕಾಡಿದ್ದಾರೆ. ಆದ್ರೆ ಬಾಲಕ ಎಲ್ಲೂ ಸಿಕ್ಕಿಲ್ಲ. ಹೀಗಾಗಿ ಮಗನು ಕಾಣೆಯಾಗಲು ಶಿಕ್ಷಕನೇ ಕಾರಣ ಎಂದು ಕಾಣೆಯಾದ ಮಗನ ತಂದೆ ದೊಡ್ಡಯ್ಯ ದೂರು ನೀಡಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Bhagavad Gita: ಗುಜರಾತ್​ನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿನ್ನು ಭಗವದ್ಗೀತೆ ಬೋಧನೆ

ಮೇಕೆದಾಟು ಯೋಜನೆ ವಿಚಾರ ಚರ್ಚೆಗಾಗಿ ಶುಕ್ರವಾರ ಸಂಜೆ ವಿಧಾನ ಮಂಡಲ ಸದನ ನಾಯಕರ ಸಭೆ