30 ವರ್ಷಗಳಿಂದ ನಡೆದುಕೊಂಡು ಬಂದ ರೈತರ ಹೋರಾಟ: ವಿಜಯಪುರ ಡೋಣಿ ನದಿ ತೀರದ ರೈತರ ಕಣ್ಣೀರು ಒರೆಸುತ್ತಾ ಸರ್ಕಾರ?

ಕೃಷ್ಣಾ ಹಾಗೂ ಭೀಮಾನದಿಗೆ ಮಹಾರಾಷ್ಟ್ರದಲ್ಲಿನ ಮಳೆ ಆಸರೆಯಾದರೆ ಡೋಣಿ ನದಿಗೆ ಜಿಲ್ಲೆಯಲ್ಲಿ ಮಳೆಯಾದರೆ ಮಾತ್ರ ನೀರು. ಕೃಷ್ಣಾನದಿಯಲ್ಲಿ ಸಮಾಗಮವಾಗೋ ಡೋಣಿಯನ್ನು ಈ ಭಾಗದ ಕಣ್ಣೀರಿನ ನದಿ ಹುಚ್ಚು ನದಿ ಎಂದು ಕರೆಯುತ್ತಾರೆ. ಕಾರಣ ಮಳೆಗಾದಲ್ಲಿ ಪ್ರತಿ ವರ್ಷ ತನ್ನ ಪಥ ಬದಲಿಸಿ ಹುಚ್ಚು ಹುಚ್ಚಾಗಿ ಹರಿಯುತ್ತದೆ.

30 ವರ್ಷಗಳಿಂದ ನಡೆದುಕೊಂಡು ಬಂದ ರೈತರ ಹೋರಾಟ: ವಿಜಯಪುರ ಡೋಣಿ ನದಿ ತೀರದ ರೈತರ ಕಣ್ಣೀರು ಒರೆಸುತ್ತಾ ಸರ್ಕಾರ?
ಡೋಣಿ ನದಿ ಹೂಳು
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2023 | 11:10 PM

ವಿಜಯಪುರ, ಸೆಪ್ಟೆಂಬರ್​​ 7: ಸದ್ಯ ಕಾವೇರಿ ನದಿ (Cauvery River) ನೀರು ಹಂಚಿಕೆ ವಿಚಾರ ನ್ಯಾಯಾಲಯದ ಅಂಗಳದಲ್ಲಿದೆ. ಮಳೆ ಕೊರತೆ ಕಾರಣ ತಮಿಳುನಾಡಿಗೆ ನೀರು ಬಿಡಲು ಆಗಲ್ಲಾ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದೆ. ಕಾವೇರಿ ನೀರಿನ ವಿಚಾರವೇ ಪ್ರಮುಖ ರಾಜಕೀಯ ಪಕ್ಷಗಳಿಗೆ ಆರೋಪ ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿವೆ. ಇಷ್ಟರ ಮದ್ಯೆ ಕಾವೇರಿ ಜಲ ವಿಚಾರ ಹಾಗೂ ಕಾವೇರಿಗೆ ನೀಡಿ ಪ್ರಾಮುಖ್ಯತೆಯನ್ನು ನಮ್ಮ ಭಾಗದ ನದಿಗಳಿಗೆ ಜಲ ವಿವಾದಕ್ಕೂ ನೀಡಬೇಕೆಂದು ಉತ್ತರ ಕರ್ನಾಟಕ ಭಾಗದ ರೈತರು ಒತ್ತಾಯ ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ರೈತರು ಡೋಣಿ ನದಿ ಹೂಳಿನ ವಿಚಾರವಾಗಿ ಸರ್ಕಾರ ಗಮನ ನೀಡಲಿ ಎಂದು ಒತ್ತಾಯ ಮಾಡಿದ್ದಾರೆ. ಡೋಣಿ ನದಿ ಹೂಳು ರೈತರ ಸಂಕಷ್ಟ ಕುರಿತ ವರದಿ ಇಲ್ಲಿದೆ ಮುಂದೆ ಓದಿ.

ವಿಜಯಪುರ ಬಾಗಲಕೋಟೆ ಜಿಲ್ಲೆ ಅಖಂಡವಾಗಿದ್ದಾಗ ಜಿಲ್ಲೆಯಲ್ಲಿ ಯದು ನದಿಗಳು ಇದ್ದವು. ಬಾಗಲಕೋಟೆ ಜಿಲ್ಲೆ ಪ್ರತ್ಯೇಕವಾದ ಬಳಿಕ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾಮ ಭೀಮಾ ಹಾಗೂ ಡೋಣಿ ನದಿಗಳಿವೆ. ಕೃಷ್ಣಾ ಹಾಗೂ ಭೀಮಾನದಿಗೆ ಮಹಾರಾಷ್ಟ್ರದಲ್ಲಿನ ಮಳೆ ಆಸರೆಯಾದರೆ ಡೋಣಿ ನದಿಗೆ ಜಿಲ್ಲೆಯಲ್ಲಿ ಮಳೆಯಾದರೆ ಮಾತ್ರ ನೀರು. ಕೃಷ್ಣಾನದಿಯಲ್ಲಿ ಸಮಾಗಮವಾಗೋ ಡೋಣಿಯನ್ನು ಈ ಭಾಗದ ಕಣ್ಣೀರಿನ ನದಿ ಹುಚ್ಚು ನದಿ ಎಂದು ಕರೆಯುತ್ತಾರೆ. ಕಾರಣ ಮಳೆಗಾದಲ್ಲಿ ಪ್ರತಿ ವರ್ಷ ತನ್ನ ಪಥ ಬದಲಿಸಿ ಹುಚ್ಚು ಹುಚ್ಚಾಗಿ ಹರಿಯುತ್ತದೆ.

ಮಳೆಗಾದಲ್ಲಿ ಡೋಣಿಯಲ್ಲಿ ನೀರು ಬಂದರೆ ಸಾಕು ಅಲ್ಲಿ ನಷ್ಟವೇ ಆಗೋದು ಮಾತ್ರ ಗ್ಯಾರಂಟಿ. ಪಥ ಬದಲಿಸಿ ಹರಿಯೋ ಡೋಣಿ ಹೂಳಿನಿಂದ ತುಂಬಿರೋ ಕಾರಣ ಕಂಡ ಕಂಡಲ್ಲಿ ಹರಿಯುತ್ತದೆ. ಜಮೀನುಗಳಲ್ಲಿ ಹೊಕ್ಕು ಫಲವತ್ತಾದ ಮಣ್ಣನ್ನು ಕೊರೆದುಕೊಂಡು ಹೋಗುತ್ತದೆ. ಜಿಲ್ಲೆಯ ತಿಕೋಟಾ ಬಬಲೇಶ್ವರ ದೇವರಹಿಪ್ಪರಗಿ ಬಸವನಬಾಗೇವಾಡಿ ಹಾಗೂ ತಾಳಿಕೋಟೆ ತಾಲೂಕಿನ ಸುಂಆರು 1000 ಕ್ಕೂ ಆಧಿಕ ಗ್ರಾಮಗಳಲ್ಲಿ ಒಮ್ಮೇಲೆ ಪ್ರವಾಹವನ್ನು ಸೃಷ್ಟಿ ಮಾಡುತ್ತದೆ.

ಇದನ್ನೂ ಓದಿ: Bone Fracture: ಸ್ಪರ್ಧಾಳು ಪಕ್ಕದಲ್ಲಿ ನಿಂತಿದ್ದವನ ಕಾಲಿನ ಮೇಲೆ ಜಾರಿಬಿತ್ತು 175 ಕೆಜಿ ತೂಕದ ಗುಂಡುಕಲ್ಲು! ಮುರಿದ ಕಾಲು ಮೂಳೆ

ಹೀಗಾಗಿ ಡೋಣಿ ತಟದ ಗ್ರಾಮಸ್ಥರಿಗೆ ರೈತರಿಗೆ ಡೋಣಿಯಲ್ಲಿ ನೀರು ಬಂದರೆ ಎದೆ ಬಡಿತ ಹೆಚ್ಚಾಗುತ್ತದೆ. ಈ ಕಾರಣದಿಂದ ನದಿ ತಟದ ಗ್ರಾಮಗಳ ರೈತರು ಡೋಣಿ ನದಿಯ ಹೂಳು ತೆಗೆಸಲು ಡೋಣಿ ಹೂಳೆತ್ತಲು ಸಮಿತಿಯನ್ನು ಮಾಡಿದ್ದರು. ಆದರೆ ಆಡಳಿತಾರೂಢ ಸರ್ಕಾರಗಳು ಯಾವುದೇ ಕಾಮಗಾರಿಯನ್ನು ಆರಂಭಿಸಿಲ್ಲಾ. ಭರವಸೆ ನೀಡುವುದು ವಾಡಿಕೆಯಾಗಿದೆ. ಇದು ಡೋಣಿ ನದಿ ತಟದ ಗ್ರಾಮಗಲ ಜನರಿಗೆ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಕಳೆದ ಮೂವತ್ತು ವರ್ಷಗಳಿಂದಲೂ ಡೋಣಿ ನದಿ ಹೂಳನ್ನು ತೆಗೆಯಲು ಪ್ರಯತ್ನ ನಡೆದೇ ಇದ್ದರೂ ಯಾವುದೇ ಫಲ ನೀಡಿಲ್ಲಾ. ಈ ಹಿಂದೆ 50 ರಿಂದ 100 ಅಡಿ ಆಳವಿದ್ದ ಡೊಣಿ ನದಿ ಇದೀಗಾ 3 ರಿಂದ 4 ಅಡಿ ಆಳ ಮಾತ್ರ ಉಳಿಸಿದೆ. ಮಳೆಯಾದರೆ ಸಾಕು ನದಿಯ ನೀರು ಕಂಡ ಕಂಡಲ್ಲಿ ಹೊರ ಚಾಚಿ ಹಾರಿಯುತ್ತದೆ. ಇದರಿಂದ ಜಮೀನುಗಳು ಹಾಗೂ ಗ್ರಾಮಗಳಲ್ಲಿ ಸಮಸ್ಯೆಯಾಗುತ್ತದೆ. ಕಳೆದ 2009 ರಲ್ಲಿ ಬೀಕರ ಮಳೆಗೆ ಇದೇ ಡೋಣಿ ಹುಚ್ಚು ಹುಚ್ಚಾಗಿ ಹರಿದಿದ್ದ ಕಾರಣ ಅಪಾರ ನಷ್ಟವಾಗಿತ್ತು. ಆಗ 36 ಹಳ್ಳಿಗಳ ಜನರು ಸಂಕಷ್ಟಕ್ಕೆ ಈಡಾಗಿದ್ದರು. ನದೀ ತೀರ ವ್ಯಾಪ್ತಿಯ ತಿಕೋಟಾ, ದೇವರಹಿಪ್ಪರಗಿ, ಬಬಲೇಶ್ವರ, ಬಸವನಬಾಗೇವಾಡಿ ಹಾಗೂ ತಾಳಿಕೋಟೆ ತಾಲೂಕುಗಳ ಜನರು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದರು.

ಭೀಕರ ಪ್ರವಾಹಕ್ಕೆ ಆಗ 42 ಜನರು ಮತ್ತು 342 ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದರು. 93 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದವು. ಆಗಿನ ಬಿಜೆಪಿ ಸರ್ಕಾರ ಮೃತಪಟ್ಟವರಿಗೆ ಹಾಗೂ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ಹಣವನ್ನು ನೀಡಿದರು. ಆದರೆ ಡೋಣಿ ನದಿ ಹೂಳೆತ್ತುವ ಕಾಯಕಕ್ಕೆ ಮುಂದಾಗಲಿಲ್ಲಾ. ಬಸನಗೌಡ ಪಾಟೀಲ್ ಯತ್ನಾಳ 1994 ರಲ್ಲಿ ವಿಜಯಪುರ ನಗರ ಶಾಸಕರಾಗಿದ್ದ ವೇಳೆಯೂ ದೋಣಿ ನದಿ ಹೂಳು ತೆಗೆಯುವ ಮಾತು ಕೇಳಿ ಬಂದಿತ್ತು. 2010 ರಲ್ಲಿ ಬಿಜೆಪಿ ಸರ್ಕಾರ ಡೋಣಿ ನದಿ ಹೂಳು ತೆಗೆಯಲು 600 ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಹೇಳಿತ್ತು, ಆದರೆ ಅದೂ ಆಗಲಿಲ್ಲಾ. ಬಳಿಕ 2013 ರಿಂದ 2018 ರಲ್ಲಿ ನೀರಾವರಿ ಸಚಿವರಾಗಿದ್ದ ಎಂ ಬಿ ಪಾಟೀಲರು ಸಹ ಡೀಣಿ ನದಿಯನ್ನು ಹೂಳೆತ್ತುವ ಮಾತನ್ನಾಡಿದ್ದರೂ ಅದು ಮಾತಾಗಿಯೇ ಉಳಿಯಿತು.

ಇದನ್ನೂ ಓದಿ: ವಿಜಯಪುರ, ಬೆಳಗಾವಿ, ದಾವಣಗೆರೆ ಜಿಲ್ಲೆಗಳಲ್ಲಿ ‌ಭೀಕರ ಬರ ಬವಣೆ: ಇನ್ನೂ ಸಾಕಷ್ಟು ಬರ ಪೀಡಿತ ತಾಲೂಕುಗಳು ಇವೆ, ಸರ್ಕಾರ ಅದರತ್ತ ಗಮನ ಹರಿಸಲಿ

2018 ರಿಂದ 2023 ರವರೆಗೆ ಎರಡು ಸರ್ಕಾರಗಳು ಆಡಳಿತ ನಡೆಸಿದರೂ ಡೋಣಿ ಬಗ್ಗೆ ಗಮನ ನೀಡಲಿಲ್ಲಾ. ಇದೀಗಾ ಕಾಂಗ್ರೆಸ್ ನ ಬಹುಮತ ಸರ್ಕಾರವಿದೆ. ಜಿಲ್ಲೆಯವರೇ ಆದ ಎಂ ಬಿ ಪಾಟೀಲ್ ಕೈಗಾರಿಕಾ ಸಚಿವರಾಗಿದ್ದು ಡೋಣಿ ನದಿ ಹೂಳಿನತ್ತ ದೃಷ್ಟಿ ನೆಡಬೇಕಿದೆ. ಕೇವಲ ಕಾವೇರಿ ನದಿ ನೀರು ವಿವಾದದ ಕುರಿತು ಗಮನ ಹರಿಸೋ ಸರ್ಕಾರ ಡೋಣಿ ನದಿಯ ಬಗ್ಗೆಯೂ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಚಿಂತಿಸಲಿ ಎಂದಿದ್ಧಾರೆ ವಿಜಯಪುರ ಜಿಲ್ಲೆಯ ರೈತರು. ಡೋಣಿ ನದಿ ಹೂಳು ತೆಗೆಸಲು ಆಧಿಕಾರದಲ್ಲಿದ್ದವರಿಗೆಲ್ಲಾ ಮನವಿ ಕೊಟ್ಟಿದ್ದೇ ಬಂತು ನಮ್ಮ ಡೋಣಿ ನದಿಯ ಹೂಳು ಮಾತ್ರ ಹಾಗೇ ಉಳಿದಿದೆ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ಧಾರೆ.

ಸದ್ಯ ಜಿಲ್ಲೆಯಲ್ಲಿ ನಿರೀಕ್ಷಿತವಾದ ಮಳೆಯಾಗಿಲ್ಲಾ. ಬರದ ಛಾಯೆ ಜಿಲ್ಲೆಯಲ್ಲಿ ಆವರಿಸಿದೆ. ಇಂಥ ಸಮಸ್ಯೆದಲ್ಲೇ ನದಿಯ ಹೂಳು ತೆಗೆದರೆ ಅನಕೂಲವಾಗುತ್ತದೆ. ನದಿಯ ಎರಡೂ ಬದಿಯಲ್ಲಿ ಒತ್ತೂವಾರಿಯಾಗಿದ್ದನ್ನು ತೆರವು ಮಾಡಿ ನದಿಯ ಹೂಳನ್ನು ಈಗಾಗರೂ ತೆಗೆಯಲು ಸರ್ಕಾರ ಮನಸ್ಸು ಮಾಡಬೇಕಿದೆ.

ಡೋಣಿ ನದಿ ಹೂಳೆತ್ತಲು ರಾಜ್ಯ ಸರ್ಕಾರ ಅಷ್ಟೇಯಲ್ಲಾ ಕೇಂದ್ರ ಸರ್ಕಾರವೂ ಸಹಾಯ ಮಾಡಬೇಕಿದೆ. ಇಲ್ಲವಾದರೆ ಪ್ರತಿ ಮಳೆಯಾಗದ ಗೋಳು ಮುಂದೆಯೂ ಪುನರಾವರ್ತನೆಯಾಗುತ್ತದೆ ಎಂದು ಮನವಿ ಮಾಡಿದ್ದಾರೆ. ಈ ವಿಚಾರದತ್ತ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಮನ ಹರಿಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಡೋಣಿ ನದಿ ತಟದ ರೈತರು ಜನರು ಹೋರಾಟದತ್ತ ಮುಖ ಮಾಡಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ