ವಿಜಯಪುರ: ಯುಗಾದಿ ಅಮಾವಾಸ್ಯೆ ಮಾರನೇ ದಿನ ಪಾಡ್ಯದಂದು ಸ್ವಾಮೀಜಿ ನುಡಿದ ಕಾರ್ಣಿಕ ಭವಿಷ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಜಯಪುರ ತಾಲೂಕಿನ ಮಖಣಾಪುರ ಗ್ರಾಮದ ಸೋಮಲಿಂಗೇಶ್ವರ ಜಾತ್ರೆಯ ವೇಳೆ ನುಡಿಯೋ ಭವಿಷ್ಯವಾಣಿ ಇದಾಗಿದೆ. ಸಿಂದಗಿ ತಾಲೂಕಿನ ದೇವನಾವದಗಿ ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದ ಕಲ್ಲೂರಸಿದ್ದ ಮಠದ ಪೀಠಾಧಿಪತಿ ಸೋಮಲಿಂಗ ಒಡೆಯರ್ ಅವರು ಯುಗಾದಿ ಪಾಡ್ಯದ ದಿನ ಮಖಣಾಪುರಕ್ಕೆ ಆಗಮಿಸಿ, ಕಾರ್ಣಿಕ ಭವಿಷ್ಯ ಹೇಳುತ್ತಾರೆ. ಕಾರ್ಣಿಕದಲ್ಲಿ ಮಳೆ ಬೆಳೆ ರಾಜಕಾರಣ ಆಗು ಹೋಗುಗಳ ಕುರಿತು ಕಾರ್ಣಿಕ ಭವಿಷ್ಯ ಬಹಿರಂಗವಾಗಿದೆ.
ಈ ಬಾರಿ ರಾಜಕಾರಣದ ಭವಿಷ್ಯ ನುಡಿದ ಸೋಮಲಿಂಗ ಒಡೆಯರ್ ಅವರು ಕಾಂಗ್ರೆಸ್ ಮತ್ತು ಬಿಜೆಪಿ ರಾಜಕಾರಣ ಕುರಿತು ಕಾರ್ಣಿಕ ಹೇಳಿದ್ದಾರೆ. ಕಾಂಗ್ರೆಸ್- ಬಿಜೆಪಿ ನಾ ಮುಂದ್ ನೀ ಮುಂದ ಅನ್ನೋದ್ರಾಗ ಜಗತ್ತೇ ಅಲ್ಲೋಲ ಕಲ್ಲೋಲ್ ಆಗ್ತದೆ ಎಂದು ಸೋಮಲಿಂಗ ಒಡೆಯರ್ ಭವಿಷ್ಯ ಹೇಳಿದ್ದಾರೆ. ಬಿಜೆಪಿ ಜನಾ ಹಿಡಕೊಂಡ ಹೋದ್ರ ನಿಶಾನೆ ಹಿಡಿಯುತ್ತೇನೆ. ಇಲ್ಲಾಂದ್ರ ಮೂರು ಕಡೆ ಕಡದ್ ತುಂಡ್ ಮಾಡ್ತೇನಿ ಎಂದು ಕಾರ್ಣಿಕ ಭವಿಷ್ಯದಲ್ಲಿ ಹೇಳಿದ್ದಾರೆ.
ಇನ್ನು ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಎಲ್ಲಾ ಮಳೆಗಳು ಉತ್ತಮ ಎಂದು ಹೇಳಿದ್ದಾರೆ. ಭೂಕಂಪನ ಭವಿಷ್ಯ ನುಡಿದ ಕಲ್ಲೂರುಸಿದ್ಧ ಮಠದ ಪೀಠಾಧಿಪತಿ ಭೂತ್ಯಾನ ಹಚ್ಚಿ ಬಯಲು ಮಾಡಿದ್ರ ಎರಡು ಮೂಲೆ ತೊಟ್ಟಲಿಟ್ಟು ತೂಗಿತು. ಅಂದರೆ ಭೂಕಂಪನ ಆಗುತ್ತದೆ ಎಂದು ಕಾರ್ಣಿಕ ವಾಣಿಯಲ್ಲಿ ಹೇಳಿದ್ದಾರೆ. ಪ್ರತಿ ವರ್ಷ ಯುಗಾದಿಯ ಪಾಡ್ಯದ ನಸುಕಿನ ಜಾವದಲ್ಲಿ ನುಡಿಯೋ ಕಾರ್ಣಿಕವಾಣಿ ಈ ವರ್ಷ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದ ಕೋಡಿಮಠ ಶ್ರೀ ಹಾಸನ: ಹಾರನಹಳ್ಳಿ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ (Prediction). ಈ ವರ್ಷದ ಮಳೆ ಕೆಂಡಮಂಡಲ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆಯಾಗಲಿದೆ. ಅಶಾಂತಿ, ಮತೀಯ ಗಲಭೆ, ದೊಂಬಿಗಳು, ಸಾವು, ಕೊಲೆ ನೋವುಗಳು ಹೆಚ್ಚಾಗಲಿವೆ. ವಿಶೇಷವಾಗಿ ಎಲಕ್ಟ್ರಿಕ್‌ನಿಂದ ಹೆಚ್ಚು ಅಪಾಯವಿದೆ ಎಂದು ಮಾರ್ಮಿಕವಾಗಿ ಕೋಡಿಮಠ ಶ್ರೀ ನುಡಿದಿದ್ದಾರೆ
ಮತ್ತೊಂದು ಭಯಾನಕ ಭವಿಷ್ಯ ನುಡಿದ ಕೋಡಿಮಠ ಶ್ರೀ: ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಘೋರ ಭವಿಷ್ಯ ನುಡಿದಿರುವ ಕೋಡಿಮಠ ಶ್ರೀ ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ಭಾರತದಲ್ಲಿ ಇಲ್ಲಿಯವರೆಗೂ ಕಂಡೂ ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ. ಜಗತ್ತಿನ ಸಾಮ್ರಾಟರುಗಳು ತಲ್ಲಣಗೊಳ್ಳುತ್ತಾರೆ. ಸಾವು ನೋವುಗಳು ಹೆಚ್ಚಾಗುತ್ತವೆ ಎಂದು ಕೋಡಿಮಠ ಶ್ರೀ ಆಘಾತಕಾರಿ ಭವಿಷ್ಯ ಹೇಳಿದ್ದಾರೆ.