ವಿಜಯಪುರದ ಬಿಳಿ ಜೋಳದ ಬೆಲೆ ಏರಿಕೆ: ರೊಟ್ಟಿ ಪ್ರಿಯರಿಗೂ ತಟ್ಟಿದ ದರ ಬಿಸಿ
ಉತ್ತಮ ಜೋಳ ಬೆಳೆಯೋ ಜಿಲ್ಲೆಗಳ ಪೈಕಿ ವಿಜಯಪುರ ಜಿಲ್ಲೆಯಲ್ಲಿ ಸದ್ಯ ಜೋಳವನ್ನು ಬೆಳೆಯುತ್ತಿಲ್ಲಾ. ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯೋ ಕ್ಷೇತ್ರವೂ ಕಡಿಮೆಯಾಗಿದೆ. ಇಷ್ಟರ ಜೊತೆಗೆ ಈ ಬಾರಿಯ ಬರ ಜೋಳವನ್ನೇ ಬಿತ್ತನೆ ಮಾಡದಂತೆ ಮಾಡಿದೆ. ಒಂದು ವೇಳೆ ಬಿತ್ತನೆ ಮಾಡಿದ್ದರೂ ಪ್ರಯೋಜನವಿಲ್ಲವಾಗಿದ್ದು ಜೋಳದ ದರ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಜೋಳದ ದರ ಇನ್ನೂ ಹೆಚ್ಚಳವಾಗಲಿದೆ.
ವಿಜಯಪುರ, ಅಕ್ಟೋಬರ್ 18: ವಿಜಯಪುರದ (Vijayapura) ಜೋಳದ ರೊಟ್ಟಿ ಎಂದರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರುಚಿಕಟ್ಟಾದ ಹಾಗೂ ಬೆಳ್ಳೆಯ ಬಿಳಿ ಜೋಳದ ರೊಟ್ಟಿ ಊಟ ಮಾಡುವುದೇ ಒಂದು ಖುಷಿಯ ವಿಚಾರ. ಉತ್ತರ ಕರ್ನಾಟಕ ಭಾಗದ ಊಟದಲ್ಲಿ ರೊಟ್ಟಿಗೆ ಅಗ್ರಸ್ಥಾನ ಇದೆ. ರೊಟ್ಟಿ ಇಲ್ಲದ ಊಟವನ್ನು ಈ ಭಾಗದ ಜನರು ಊಟವೆಂದೇ ಕರೆಯಲ್ಲಾ. ಊಟದ ಪ್ರಮುಖ ಭಾಗವಾದ ರೊಟ್ಟಿ ತಯಾರು ಮಾಡಲು ಜೋಳ ಅವಶ್ಯಕವಾಗಿದೆ. ಉತ್ತಮ ಜೋಳ ಬೆಳೆಯೋ ಜಿಲ್ಲೆಗಳ ಪೈಕಿ ವಿಜಯಪುರ ಜಿಲ್ಲೆಯಲ್ಲಿ ಈಗಾ ಜೋಳವನ್ನು ಬೆಳೆಯುತ್ತಿಲ್ಲಾ. ವರ್ಷದಿಂದ ವರ್ಷಕ್ಕೆ ಜೋಳ ಬೆಳೆಯೋ ಕ್ಷೇತ್ರವೂ ಕಡಿಮೆಯಾಗಿದೆ. ಇಷ್ಟರ ಜೊತೆಗೆ ಈ ಬಾರಿಯ ಬರ ಜೋಳವನ್ನೇ ಬಿತ್ತನೆ ಮಾಡದಂತೆ ಮಾಡಿದೆ. ಬಿತ್ತನೆ ಮಾಡಿದ್ದರೂ ಪ್ರಯೋಜನವಿಲ್ಲವಾಗಿದ್ದು ಜೋಳದ ದರ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಜೋಳದ ದರ ಇನ್ನೂ ಹೆಚ್ಚಳವಾಗಲಿದೆ.
ಇಳಕಲ್ ಸೀರೆ ಚೆಂದ, ವಿಜಯಪುರದ ಜೋಳದ ರೊಟ್ಟಿ ಅಂದ ಎಂಬ ಮಾತು ಈ ಭಾಗದಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾದರೆ ಸಾಕು ಎಲ್ಲರ ಮನೆಯಲ್ಲಿ ರೊಟ್ಟಿ ತಟ್ಟುವ ಶಬ್ದ ಕೇಳಿ ಬರುತ್ತದೆ. ಬೆಳ್ಳಂ ಬೆಳಿಗ್ಗೆಯೇ ರೊಟ್ಟಿ ಮಾಡುವುದು ವಾಡಿಕೆಯಾಗಿದೆ. ಅದರಲ್ಲೂ ವಿಜಯಪುರದ ಜೋಳದ ರೊಟ್ಟಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಉತ್ತಮ ರುಚಿ, ಪೌಷ್ಟಿಕಾಂಶ ಹೊಂದಿದ ಗುಣಗಳನ್ನು ಹೊಂದಿರೋ ವಿಜಯಪುರದ ಬಿಳಿ ಜೋಳಕ್ಕೆ ಹೆಚ್ಚಿನ ಡಿಮ್ಯಾಂಡ್ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಜೋಳ ಬಿತ್ತನೆ ಮಾಡುವ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ.
ಇದನ್ನೂ ಓದಿ: ಮಳೆ ಇಲ್ಲದೆ ಬತ್ತಿದ ಅಂತರ್ಜಲ ಮಟ್ಟ; ಫಸಲು ಬಿಡದೇ ಒಣಗಿದ ದ್ರಾಕ್ಷಿ ಬೆಳೆ, ರೈತ ಕಂಗಾಲು
ಜೋಳದ ಬೆಳೆಯೋ ಜಮೀನುಗಳನ್ನು ತೊಗರಿ ಆಕ್ರಮಿಸಿಕೊಂಡಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ನೀಡುವ ಕಾರಣ ರೈತರು ತೊಗರಿಗೆ ಅವಲಂಬಿತರಾಗಿದ್ದಾರೆ. ಇಷ್ಟರ ಮಧ್ಯೆ ಕಳೆದ ವರ್ಷ ಜೋಳದ ಬೆಳೆಯನ್ನು ಬೆಳೆಯಲಾಗಿತ್ತು. ರೈತರಿಗೆ ಅನಕೂಲಕ್ಕಾಗಿ ಸರ್ಕಾರ ಒಂದು ಕ್ವಿಂಟಾಲ್ ಜೋಳಕ್ಕೆ 2100 ರೂಪಾಯಿ ನಿಗದಿ ಮಾಡಿ ಬೆಂಬಲ ಬೆಲೆಯಡಿ ಖರೀದಿ ಮಾಡಲು ಮುಂದಾಗಿತ್ತು. ಆದರೆ ಕಡಿಮೆ ಪ್ರಮಾಣದಲ್ಲಿ ಜೋಳ ಬೆಳೆದ ಕಾರಣ ಮಾರಾಟ ಮಾಡುವಷ್ಟು ಜೋಳ ಯಾರ ಬಳಿಯೂ ಇರಲಿಲ್ಲಾ.
ಇಷ್ಟರ ಮದ್ಯೆ ಈ ಬಾರಿ ಮುಂಗಾರು ಮಳೆ ವಿಫಲವಾಗಿದೆ. ಇದೀಗಾ ಹಿಂಗಾರು ಹಂಗಾಮಿಗೂ ಮಳೆಯಾಗೋ ಲಕ್ಷಣಗಳು ಕಂಡು ಬಂದಿಲ್ಲಾ. ಈ ಕಾರಣದಿಂದ ಮಾರುಕಟ್ಟೆಗೆ ಜೋಳದ ಆವಕ ಆಗುತ್ತಿಲ್ಲಾ. ಅಲ್ಲೊಬ್ಬ ಇಲ್ಲೊಬ್ಬ ರೈತರು ಜೋಳದ ಬಿತ್ತನೆ ಮಾಡಿದರೂ ಫಸಲು ಬರುವ ಯಾವ ಲಕ್ಷಣಗಳೂ ಇಲ್ಲಾ. ಇವೆಲ್ಲ ಕಾರಣಗಳಿಂದ ದಿನದಿಂದ ದಿನಕ್ಕೆ ಜೋಳದ ದರ ಏರಿಕೆಯಾಗುತ್ತಿದೆ. ಇಂದು ಒಂದು ಕ್ವಿಂಟಾಲ್ ಜೋಳಕ್ಕೆ 6000 ರೂಪಾಯಿ ನಿಗದಿಯಾಗಿದೆ. ಮುಂದಿನ ದಿನಗಳಲ್ಲಿ ಜೋಳದ ಆವಕ ಬಾರದಿದ್ದರೆ ದರವೂ ಏರಿಕೆಯಾಗುತ್ತಲೇ ಹೋಗುತ್ತದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಕೃಷಿ ಇಲಾಖೆಯ ಆಧಿಕಾರಿಗಳ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ 2.02 ಲಕ್ಷ ಹೆಕ್ಟೇರ್ ಬಿತ್ತನೆ ಪ್ರಮಾಣದ ಗುರಿ ಹೊಂದಲಾಗಿತ್ತು. ವಾತಾವರಣದಲ್ಲಿ ತೇವಾಂಶ ಕೊರತೆ ಮಳೆಯಾಗದೇ ಇರೋ ಕಾರಣ 23,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಇನ್ನು ಜೋಳದ ವಿಚಾರದಲ್ಲಿ ಜಿಲ್ಲೆಯಲ್ಲಿ 60,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಜೋಳದ ಬಿತ್ತನೆಯಾಗಿದ್ದು 2300 ಹೆಕ್ಟೇರ್ ಗಳಲ್ಲಿ ಮಾತ್ರ. ಪ್ರತಿ ವರ್ಷ ಉತ್ತಮ ದರ ಇಲ್ಲಾ, ಹೆಚ್ಚು ಖರ್ಚು ಎಂಬ ಕಾರಣಕ್ಕೆ ಜೋಳದ ಬಿತ್ತನೆ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈಗಾ ಜೋಳವೇ ಇಲ್ಲಾ ಎಂಬ ಕಾರಣದಿಂದ ಜೋಳದ ದರ ಏರಿಕೆಯಾಗುತ್ತಾ ಹೋಗುತ್ತಿದೆ.
ರೊಟ್ಟಿ ಪ್ರಿಯರಿಗೆ ದರ ಏರಿಕೆ ಬಿಸಿ
ಇದು ರೊಟ್ಟಿ ಪ್ರಿಯರಿಗೆ ದರ ಏರಿಕೆ ಬಿಸಿ ಮುಟ್ಟಿಸಿದೆ. 2018 ರಲ್ಲಿ 1,51,131ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿತ್ತು. 2019 ರಲ್ಲಿ 1,28,122 ಹೆಕ್ಟೇರ್ , 2020 ರಲ್ಲಿ 1,20,144 ಹೆಕ್ಟೇರ್ 2021 ರಲ್ಲಿ 44,076 ಹೆಕ್ಟೇರ್, 2022 ರಲ್ಲಿ 63,681 ಹೆಕ್ಟೇರ್ ಹಾಗೂ 2023 ರಲ್ಲಿ 2300 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಿದ್ದೇ ವರ್ಷದಿಂದ ವರ್ಷಕ್ಕೆ ಜೋಳ ಬಿತ್ತನೆ ಮಾಡುವ ಪ್ರದೇಶ ಕಡಿಮೆಯಾಗುತ್ತಾ ಬಂದಿದ್ದರ ಕುರಿತು ಅಂಕಿ ಅಂಶಗಳೇ ಮಾಹಿತಿ ನೀಡಿವೆ.
ಇದನ್ನೂ ಓದಿ: ಸಚಿವ ಶಿವಾನಂದ ಪಾಟೀಲ್ ಮೇಲೆ ನೋಟುಗಳ ಸುರಿಮಳೆ: ಸಚಿವರ ಸಮರ್ಥನೆ ಹೀಗಿದೆ ನೋಡಿ
ರೈತರು ಸಹ ಜೋಳದ ದರ ಹೆಚ್ಚಳದ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು ರೈತರ ಸ್ಥಿತಿ ಹಲ್ಲಿದ್ಧಾಗ ಕಡಲೆಯಿಲ್ಲಾ, ಕಡಲೆಯಿದ್ಧಾಗ ಹಲ್ಲಿಲ್ಲಾ ಎಂಬಂತಾಗಿದೆ ಎಂದಿದ್ದಾರೆ. ಮಳೆಯೇ ಇಲ್ಲವೆಂದ ಮೇಲೆ ಎಲ್ಲಿಂದ ಬಿತ್ತನೆ ಮಾಡುವುದು. ಬಿತ್ತನೆ ಮಾಡಿದರೂ ಫಸಲು ಬಾರಂತಾಗಿದೆ. ಸರ್ಕಾರ ಕಳೆದ ಬಾರಿಯೇ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಮಾರಾಟ ಮಾಡಲು ಜೋಳವೇ ಇಲ್ಲಾ. ಆದ ಕಾರಣ ಸರ್ಕಾರ ರೈರಿಗೆ ಸಹಾಯ ಧನ ಹಾಗೂ ಬೆಳೆವಿಮೆಯನ್ನಾದರೂ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಪ್ರಮಾಣದಲ್ಲಿ ಜೋಳ ಬಿತ್ತನೆ ಮಾಡಿ ಬೆಳೆಯೋ ಕ್ಷೇತ್ರ ಕಡಿಮೆಯಾಗುತ್ತಾ ಹೋಗಿದೆ. ಇಷ್ಟರ ಮದ್ಯೆ ಬರದ ಕಾರಣ ಜೋಳಕ್ಕೆ ಡಿಮ್ಯಾಂಡ್ ಹುಟ್ಟಿಸಿದೆ. ಕಾರಣ ಈ ಹಿಂಗಾರಿನ ಹಂಗಾಮಿನಲ್ಲೂ ಜೋಳದ ಫಸಲು ಬರೋದು ಅನುಮಾನವೇ ಆಗಿದೆ. ಮಳೆಯಿಲ್ಲದೇ ಬಿತ್ತನೆ ಪ್ರಮಾಣವೂ ವಾಡಿಕೆಗಿಂತ ಅತೀ ಕಡಿಮೆಯಾಗಿದೆ. ಇವೆಲ್ಲ ಕಾರಣದಿಂದ ನಿತ್ಯದ ಆಹಾರದ ಭಾಗವಾಗಿರೋ ಜೋಳದ ಏರಿಕೆಯಾಗುತ್ತಲೇ ಸಾಗಿದೆ. ಒಂದು ಕ್ವಿಂಟಾಲ್ ಗೆ 10 ಸಾವಿರದವರೆಗೂ ಏರಿಕೆಯಾಗೋ ಸಾದ್ಯತೆಯೂ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.