Facebook Live| ವರ್ಕ್​ ಫ್ರಮ್ ಹೋಮ್​ನಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಇಲ್ಲಿದೆ ತಜ್ಞರ ಅಭಿಪ್ರಾಯ

ಕೆಲಸಗಾರರು 12 ಗಂಟೆಗಳ ಕಾಲ ಕೆಲಸದಲ್ಲಿ ನಿರತರಾಗಿರುವುದರಿಂದ ಕಂಪನಿಯ ಆದಾಯ ಹೆಚ್ಚಾಗಿದ್ದು, ಮನೆಯ ಕೆಲಸ ಪದ್ಧತಿಯನ್ನು ಮುಂದುವರಿಸಿದ್ದಾರೆ. ಆದರೆ ಇದರಿಂದ ಆದಾಯವಾಗಿರುವುದು ಕೇವಲ ಕಂಪನಿಗೆ. ಕೆಲಸಗಾರರು ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಹಳ್ಳಿಯಿಂದ ಇಲ್ಲಿಗೆ ಕೆಲಸಕ್ಕೆ ಬಂದವರಿಗೆ ಸ್ವಲ್ಪಮಟ್ಟಿಗೆ ಲಾಭದಾಯಕವಾಗಿದೆ. ಇನ್ನು ಕೆಲ ಆಫಿಸ್​ನಲ್ಲಿನ ಚೇರ್ ಮತ್ತು ಟೆಬಲ್​ಗಳನ್ನು ಕೂಡ ಮನೆಗೆ ಕಳುಹಿಸಿದ್ದು, ಒಟ್ಟಾರೆ ಕಂಪನಿಯ ಆದಾಯವನ್ನು ಗಮನಿಸಿದಾಗ ಸಾಕಷ್ಟು ಲಾಭವಾಗಿದೆ.

Facebook Live| ವರ್ಕ್​ ಫ್ರಮ್ ಹೋಮ್​ನಿಂದ ಉಂಟಾಗುತ್ತಿರುವ ಸಮಸ್ಯೆಗಳೇನು ಗೊತ್ತಾ?: ಇಲ್ಲಿದೆ ತಜ್ಞರ ಅಭಿಪ್ರಾಯ
ಐಟಿ ಫೋರಂನ ಪದಾಧಿಕಾರಿ ಕಾರ್ತಿಕ್ ಪ್ರಭಾಕರ್, ಶ್ವಾಸಕೋಶ ತಜ್ಞ ಡಾ.ಪವನ್, ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷ ಜಿ. ಆರ್ ಬಂಗೇರ
Follow us
preethi shettigar
| Updated By: ರಾಜೇಶ್ ದುಗ್ಗುಮನೆ

Updated on: Jan 08, 2021 | 6:40 PM

ಬೆಂಗಳೂರು: ಕೊರೊನಾ ಬಂದಾಗಿನಿಂದಲೂ ಹಲವಾರು ಉದ್ಯಮಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಜಾರಿಗೆ ತಂದಿವೆ. ಆರ್ಥಿಕತೆಯ ಪುನರುಜ್ಜೀವನ ಮಾಡುವ ಉದ್ದೇಶದಿಂದ ಎಲ್ಲಾ ಉದ್ಯಮಗಳು ಮನೆಯಿಂದ ಕೆಲಸ ಪದ್ಧತಿ ಬಿಟ್ಟು ಕಚೇರಿಗೆ ಬಂದು ಕೆಲಸ ಪ್ರಾರಂಭಿಸಲಿ ಎನ್ನುವುದು ಸದ್ಯ ಸರ್ಕಾರದ ಮುಂದೆ ಇರುವ ವಿಚಾರ. ಈ ವಿಚಾರಕ್ಕೆ ಸಂಬಂಧಪಟ್ಟತೆ ಈಗ ಚರ್ಚೆ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಇದರ ಸಾಧಕ ಬಾಧಕಗಳೇನು ಎನ್ನುವುದನ್ನು ನೋಡಬೇಕಿದೆ.

ಈ ಕುರಿತು ಟಿವಿ9 ಫೇಸ್​ಬುಕ್ ಲೈವ್​ನಲ್ಲಿ ತಜ್ಞ ವೈದ್ಯರ ಜೊತೆ, ಆ್ಯಂಕರ್ ಮಾಲ್ತೇಶ್ ಚರ್ಚಿಸಿದರು. ಐಟಿ ಫೋರಂನ ಪದಾಧಿಕಾರಿ ಕಾರ್ತಿಕ್ ಪ್ರಭಾಕರ್, ಶ್ವಾಸಕೋಶ ತಜ್ಞ ಡಾ.ಪವನ್, ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷ ಜಿ. ಆರ್ ಬಂಗೇರ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕೊರೊನಾ ಕಾರಣದಿಂದಾಗಿ ಎಲ್ಲಾ ಐಟಿ ಕಂಪನಿಗಳು ಬಂದ್ ಆಗಿದ್ದು, ಮನೆಯಿಂದಲೇ ತಮ್ಮ ಕೆಲಸವನ್ನು ಪ್ರಾರಂಭಿಸಿವೆ. ಆದರೆ ಈ ರೀತಿ ಮನೆಯ ನಾಲ್ಕು ಗೊಡೆಯ ಮಧ್ಯೆ ಕುಳಿತು ಕೆಲಸ ಮಾಡುವುದರಿಂದ ಮಾನಸಿಕವಾಗಿ ಬಹಳಷ್ಟು ತೊಂದರೆಗಳಾಗುತ್ತದೆ ಜೊತೆಗೆ ಹೆಚ್ಚಿನ ಕಾಲ ಅವರನ್ನು ದುಡಿಸಿಕೊಳ್ಳಗಾಗುತ್ತಿದೆ ಎನ್ನುವುದು ಹಲವರ ವಾದವಾಗಿದೆ.

ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವಾಗ ಏಕೆ ಈ ಐಟಿ ಕಂಪನಿಗಳು ಇನ್ನೂ ಶುರುವಾಗಿಲ್ಲ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಿರುವುದು ಸಹಜ. ಇದಕ್ಕೆ ಕಾರಣ ಐಟಿ ಕಂಪನಿಗಳು ಹೊರ ದೇಶದವುಗಳಾಗಿರುವುದರಿಂದ ಅಲ್ಲಿನ ಸಲಹೆ ಸೂಚನೆಗಳ ಮೇಲೆ ಕೆಲಸಗಳು ಪ್ರಾರಂಭವಾಗುತ್ತದೆ. ಇನ್ನು ಐಟಿ ಕಂಪನಿಗಳಿಗೆ ವರ್ಕ್​ ಫ್ರಮ್ ಹೋಮ್ ಹೊಸತೇನಲ್ಲ. ಈ ಮೊದಲು ವಾರಕ್ಕೆ ಒಂದು ಬಾರಿ ಈ ರೀತಿಯ ಮನೆಯಲ್ಲಿ ಕೆಲಸ ಮಾಡುವ ಪದ್ಧತಿ ಇತ್ತು ಈಗ ಅದು ಹೆಚ್ಚಾಗಿದೆ ಅಷ್ಟೇ. ಆದರೆ ಈಗ ಕೆಲಸಗಾರರಿಂದ ಹೆಚ್ಚಿನ ಪಾಳಿಯ ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ಐಟಿ ಫೋರಂನ ಪದಾಧಿಕಾರಿ ಕಾರ್ತಿಕ್ ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.

ಕೆಲಸಗಾರರು 12 ಗಂಟೆಗಳ ಕಾಲ ಕೆಲಸದಲ್ಲಿ ನಿರತರಾಗಿರುವುದರಿಂದ ಕಂಪನಿಯ ಆದಾಯ ಹೆಚ್ಚಾಗಿದ್ದು, ಮನೆಯ ಕೆಲಸ ಪದ್ಧತಿಯನ್ನು ಮುಂದುವರಿಸಿದ್ದಾರೆ. ಆದರೆ ಇದರಿಂದ ಆದಾಯವಾಗಿರುವುದು ಕೇವಲ ಕಂಪನಿಗೆ. ಕೆಲಸಗಾರರು ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಹಳ್ಳಿಯಿಂದ ಇಲ್ಲಿಗೆ ಕೆಲಸಕ್ಕೆ ಬಂದವರಿಗೆ ಸ್ವಲ್ಪಮಟ್ಟಿಗೆ ಲಾಭದಾಯಕವಾಗಿದೆ. ಇನ್ನು ಕೆಲ ಆಫಿಸ್​ನಲ್ಲಿನ ಚೇರ್ ಮತ್ತು ಟೆಬಲ್​ಗಳನ್ನು ಕೂಡ ಮನೆಗೆ ಕಳುಹಿಸಿದ್ದು, ಒಟ್ಟಾರೆ ಕಂಪನಿಯ ಆದಾಯವನ್ನು ಗಮನಿಸಿದಾಗ ಸಾಕಷ್ಟು ಲಾಭವಾಗಿದೆ. ಇದಕ್ಕೆ ಕಾರಣ ಕೆಲಸಗಾರರ ಮೇಲಿನ ಖರ್ಚು ಅಂದರೆ ಕ್ಯಾಂಟೀನ್, ವಿದ್ಯುತ್​ ಬಿಲ್ ಮತ್ತು ಸಾರಿಗೆ ಮೇಲಿನ ಹಣದ ಉಳಿತಾಯ. ಆದರೆ ಕ್ಯಾಬ್, ಕ್ಯಾಟ್ರಿಂಗ್ ಇನ್ನಿತರ ವ್ಯವಸ್ಥೆ ನೀಡುತ್ತಿದ್ದವರಿಗೆ ಮಾತ್ರ ಇದರಿಂದ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ ಮನೆ ಕೆಲಸ ಪದ್ಧತಿ ಮುಂದುವರಿಸುವುದು ಒಳ್ಳೆಯದಲ್ಲ ಎಂದು ಕಾರ್ತಿಕ್ ಪ್ರಭಾಕರ್ ತಿಳಿಸಿದ್ದಾರೆ.

ಐಟಿ ಉದ್ಯಮಗಳಿಗೆ ಕೆಲಸ ಮಾಡುವುದಕ್ಕೆ ಯಾವುದೇ ರೀತಿಯ ತೊಂದರೆಗಳಿಲ್ಲ. ಕೊರೊನಾ ಹರಡುವಿಕೆಯೂ ಕಡಿಮೆಯಾಗಿದ್ದು, ಶಾಲೆಗಳು ಪ್ರಾರಂಭವಾಗಿದೆ. ಕೊರೊನಾ ಇಂದ ಐಟಿ ಕಂಪನಿ ಮತ್ತೆ ಶುರುವಾಗಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ಐಟಿ ಕೆಲಸಗಾರರಿಗೆ ಸಂಬಳ ಕಡಿಮೆಯಾಗಿದೆ ಮತ್ತು ಮಾನಸಿಕ ಸಮಸ್ಯೆ ಉಂಟಾಗಿದ್ದು, ಕೆಲಸದ ಮೇಲಿನ ಆಸಕ್ತಿಯೂ ಕೂಡ ಕಡಿಮೆಯಾಗಿದೆ ಎಂದು ಶ್ವಾಸಕೋಶ ತಜ್ಞ ಡಾ. ಪವನ್ ಅವರ ಅಭಿಪ್ರಾಯವಾಗಿದೆ.

ಮಹಿಳಾ ಸಹಾಯವಾಣಿಗೆ ಮಹಿಳೆಯರಿಂದ ಸಾಕಷ್ಟು ದೂರುಗಳು ಬಂದಿದ್ದು, ಕುಟುಂಬದಲ್ಲಿ ಸಮಸ್ಯೆ ಎದುರಾಗಿದೆ. ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಮನೆಯಲ್ಲಿನ ಗೃಹಿಣಿಯರಿಗೆ ತೊಂದರೆಯಾಗಿದೆ. ಕೆಲಸದಲ್ಲಿನ ವೈಯಕ್ತಿಕತೆ ಎನ್ನುವುದು ಮನೆಯಲ್ಲಿ ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಆನ್​ಲೈನ್ ಕ್ಲಾಸ್ ಮತ್ತು ವರ್ಕ್ ಫ್ರಮ್ ಹೊಮ್​ನಿಂದಾಗಿ ಮಾನಸಿಕ ಸ್ಥಿಮಿತತೆ ಬಿಗಡಾಯಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಂಸಾರದ ಹಳಿ ತಪ್ಪಲು ಇದು ಕಾರಣವಾಗಿದ್ದು , ಮಾನಸಿಕ ಸಮಸ್ಯೆಯಿಂದ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಕಂಪನಿಗಳು ಪ್ರಾರಂಭ ಮಾಡುವುದಾದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆದಷ್ಟು ಎಸಿಗಳಿಂದ ಮುಕ್ತವಾಗಿ ಅಂದರೆ ಫ್ಯಾನ್​ಗಳನ್ನು ಬಳಸುವ ಮೂಲಕ ಕೊರೊನಾ ಸೋಂಕಿನಿಂದ ದೂರವಿರಬೇಕು ಎಂದು ಡಾ. ಪವನ್ ಸಲಹೆ ನೀಡಿದರು.

ಒಂದೇ ಕಡೆ ಜನರನ್ನು ಸೇರಿಸಿ ಕೆಲಸ ಮಾಡಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಆದ್ದರಿಂದ ಕಂಪನಿಗಳು ಈ ರೀತಿಯಾಗಿ ಕೆಲಸ ಮಾಡುತ್ತಿದ್ದು, ತಂತ್ರಜ್ಞಾನ ಆಧಾರಿತ ಕಂಪನಿಗಳಾಗಿರುವುದರಿಂದ ಕೆಲಸಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಕಂಪನಿಗಳಿಗೆ ಕ್ಯಾಂಟೀನ್, ವಿದ್ಯುತ್​ ಬಿಲ್ ಮತ್ತು ಸಾರಿಗೆ ವ್ಯವಸ್ಥೆಗಳಿಂದಾಗುವ ಖರ್ಚು ಕಡಿಮೆಯಾಗಿದ್ದು, ಕಂಪನಿಗೆ ಆದಾಯವಾಗಿದೆ. ಐಟಿ ಕಂಪನಿಗೆ ಲೆಬರ್ ಲಾ ಅನ್ವಯವಾಗುವುದಿಲ್ಲ. ಇನ್ನೂ ಕಂಪನಿ ಇನ್​ಸೆಂಟಿವ್ ರೂಪದಲ್ಲಿ ಹೆಚ್ಚಿನ ಗಂಟೆಯ ಕೆಲಸಕ್ಕೆ ವೇತನವನ್ನು ಹೆಚ್ಚು ಮಾಡಿರಬಹುದು. ಸದ್ಯಕ್ಕೆ ಜೀವನ ಮತ್ತು ಜೀವ ಉಳಿಸಬೇಕಾಗಿರುವುದರಿಂದ ಜೂನ್​ವರೆಗೆ ಈ ಮನೆ ಕೆಲಸ ಪದ್ಧತಿ ಮುಂದುವರಿಯುತ್ತದೆ ಎಂದು ಎಫ್​ಕೆಸಿಸಿಐನ ಮಾಜಿ ಅಧ್ಯಕ್ಷ ಜಿ. ಆರ್ ಬಂಗೇರ ಹೇಳಿದ್ದಾರೆ.

ಒಟ್ಟಾರೆ ಸಂಬಳ ಬರುವುದೇ ಈ ಕಾಲ ಘಟ್ಟದಲ್ಲಿ ಸಮಾಧಾನಕರ ಆದರೆ ಮಾನಸಿಕ ಸಮಸ್ಯೆ ಮತ್ತು ಕುಟುಂಬ ಸಮಸ್ಯೆಗಳು ಹೆಚ್ಚಾಗಿರುವುದನ್ನು ಕೂಡ ನಾವು ಅಲ್ಲಗಳೆಯುವಂತಿಲ್ಲ. ಕೊರೊನಾ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಮನೆ ಕೆಲಸವನ್ನು ಇನ್ನು ಮುಂದಿನ ದಿನಗಳಲ್ಲಿ ನಿಲ್ಲಸುವುದು ಅನಿವಾರ್ಯ ಎನ್ನುವುದು ಹಲವರ ಅಭಿಪ್ರಾಯ.

TV9 Facebook Live | ಕಲಿತಿದ್ದು ಬಹಳಷ್ಟಿದೆ, ಅಳವಡಿಸಿಕೊಳ್ಳೋದು ಅದಕ್ಕಿಂತ ಜಾಸ್ತಿ ಇದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ