ಯಾದಗಿರಿಯಲ್ಲಿ ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದ ನೂರಾರು ಜನ
ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿ ಎನ್ನಲಾಗುತ್ತಿದೆ.
ಯಾದಗಿರಿ: ಹಿಂದು ಧರ್ಮ ತ್ಯಜಿಸಿ ದಲಿತ ಸಮುದಾಯದ ನೂರಾರು ಜನ ಬೌದ್ಧ ಧರ್ಮ ಸ್ವೀಕರ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ. ಬಿ.ಆರ್.ಅಂಬೇಡ್ಕರ್ ಮೊಮ್ಮಗಳಾದ ರಮಾಬಾಯಿ ನೇತೃತ್ವದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಕಾರ್ಯಕ್ರಮ ನಡೆಯಿತು. ನೂರಾರು ಜನರಿಗೆ ವರಜ್ಯೋತಿ ಬಂತೆಜೀ ಸಾನಿಧ್ಯದಲ್ಲಿ ಬೌದ್ಧ ಧಮ್ಮ ದೀಕ್ಷೆ ನೀಡಲಾಯಿತು. ಹಿಂದು ಧರ್ಮದಲ್ಲಿ ಕೀಳಾಗಿ ಕಾಣುತ್ತಿರುವ ಹಿನ್ನಲೆ ದೀಕ್ಷೆ ಪಡೆಯಲಾಗಿದೆ ಎನ್ನಲಾಗುತ್ತಿದೆ. ತ್ರಿಸರಣ ಪಂಚಶೀಲ, ಅಷ್ಟಾಂಗ ಮಾರ್ಗ ಮತ್ತು ಅಂಬೇಡ್ಕರ್ ಪ್ರತಿಪಾಧಿಸಿದ 22 ಪ್ರತಿಜ್ಞಾ ವಿಧಿಗಳನ್ನ ಬೋಧಿಸಲಾಯಿತು. ಪ್ರತಿಜ್ಞಾ ವಿಧಿ ಪಡೆದು ಹಿಂದೂ ಧರ್ಮಕ್ಕೆ ವಿದಾಯ ಹೇಳಿ ಬೌದ್ಧ ಧರ್ಮ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಬೌದ್ಧ ಧರ್ಮ ಸ್ವೀಕರ ಮಾಡಿದರು.
ಇದು ಮತಾಂತರವಲ್ಲ, ದೀಕ್ಷೆ: ಅಧ್ಯಕ್ಷ ವೆಂಕಟೇಶ್ ಹೊಸಮನಿ
ಹಿಂದು ಧರ್ಮದಲ್ಲಿ ದಲಿತರನ್ನು ಇಂದಿಗೂ ಕೀಳಾಗಿ ಕಾಣುತ್ತಿದ್ದಾರೆ. ಅಸ್ಪೃಶ್ಯತೆ ನಮ್ಮಲ್ಲಿ ಇನ್ನು ಜೀವಂತವಾಗಿದೆ. ಇದರಿಂದ ಕೆಳವರ್ಗದವರಿಗೆ ಅನ್ಯಾಯಗಳಾಗುತ್ತಿವೆ. ಹೀಗಾಗಿ ಸ್ವಿಇಚ್ಛೆಯಿಂದಾಗಿ ಬೌದ್ಧ ಧರ್ಮ ಸ್ವೀಕರ ಮಾಡುತ್ತಿದ್ದೇವೆ. ಇದು ಮತಾಂತರವಲ್ಲ, ದೀಕ್ಷೆಯಾಗಿದೆ ಎಂದು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್ ಹೊಸಮನಿ ಹೇಳಿದರು.
ಅಧ್ಯಕ್ಷ ವೆಂಕಟೇಶ್ ಹೊಸಮನಿ ಮನೆಯಲ್ಲಿದ್ದ ಹಿಂದೂ ದೇವರ ಫೋಟೋಗಳನ್ನು ಈ ಹಿಂದೆ ಕೃಷ್ಣ ನದಿಗೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಬೌದ್ಧ ಧರ್ಮದ ಅಧ್ಯಕ್ಷರಾಗಿ ನಿಮ್ಮ ಮನೆಯಲ್ಲಿ ಹಿಂದು ದೇವರ ಫೋಟೋ ಇಟ್ರೆ ಹೇಗೆ ಎಂದು ಪ್ರಶ್ನಿಸಿದ್ದರಂತೆ. ಹಾಗಾಗಿ ತನ್ನ ಮನೆಯಲ್ಲಿನ ಲಕ್ಷ್ಮೀ, ವೆಂಕಟೇಶ್ವರ, ಸರಸ್ವತಿ ಸೇರಿದಂತೆ ಹಲವು ಪೊಟೋ, ಮೂರ್ತಿಗಳನ್ನು ಕೃಷ್ಣಾ ನದಿ ಹಾಕಿದ್ದರು. ಹಿಂದು ಧರ್ಮ ಮರೆತು, ಬೌದ್ಧ ಧರ್ಮಕ್ಕೆ ಕಾಲಿಡುತ್ತಿದ್ದೇವೆ ಎಂದು ನಾಗರಾಜ ಕಲ್ಲದೇವನಹಳ್ಳಿ ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 pm, Fri, 14 October 22