ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ? ಅಸಲಿ ಸತ್ಯ ಬಿಚ್ಚಿಟ್ಟ ನೀರಾವರಿ ತಜ್ಞ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ ದೊಡ್ಡ ಅನಾಹುತ ಸೃಷ್ಟಿಯಾಗಿತ್ತು. ಹರಸಾಹಸ ಪಟ್ಟು ಗೇಟ್​ನ್ನು ಅಳವಡಿಕೆ ಮಾಡಲಾಗಿದೆ. ಅದೇ ರೀತಿ ಬಸವಸಾಗರ ಜಲಾಶಯಕ್ಕೂ ಸಂಕಷ್ಟ ಎದುರಾಗುತ್ತಾ ಎನ್ನುವ ಅನುಮಾನಗಳು ಮೂಡುತ್ತಿವೆ. ಹೌದು, ಕಳೆದ ಎರಡು ವರ್ಷಗಳಿಂದ ಡ್ಯಾಂನ ಗೇಟ್​ಗಳನ್ನ ನಿರ್ವಹಣೆ ಕಾರ್ಯ ನಿಂತು ಹೋಗಿದೆ. ಎರಡು ವರ್ಷಗಳಿಂದ ನಿರ್ವಹಣೆ ನಿಂತು ಹೋಗಿದ್ದರಿಂದ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ? ಅಸಲಿ ಸತ್ಯ ಬಿಚ್ಚಿಟ್ಟ ನೀರಾವರಿ ತಜ್ಞ
ತುಂಗಭದ್ರಾ ಜಲಾಶಯಕ್ಕೆ ಬಂದ ಸ್ಥಿತಿ ಬಸವಸಾಗರ ಡ್ಯಾಂಗೂ ಬರುತ್ತಾ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 21, 2024 | 10:11 PM

ಯಾದಗಿರಿ, ಆ.21: ನಾಲ್ಕು ಜಿಲ್ಲೆಯ ಜನರ ಜೀವನಾಡಿಯಾಗಿರುವ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯಿರುವ ಬಸವಸಾಗರ ಜಲಾಶಯ(Basava Sagar Dam)ಕ್ಕೆ ಕಂಟಕ ಎದುರಾಗುವ ಆತಂಕ ಎದುರಾಗಿದೆ. ಇದಕ್ಕೆ ಕಾರಣವೇ ಕಳೆದ ವರ್ಷಗಳಿಂದ ಈ ಜಲಾಶಯದ ಗೇಟ್​ಗಳ ನಿರ್ವಹಣೆ ಕಾರ್ಯ ಸ್ಥಗಿತವಾಗಿದೆ. ವಾರ್ಷಿಕ ನಿರ್ವಹಣೆ ಆಗದೆ ಎರಡು ವರ್ಷಗಳು ಕಳೆದಿವೆ. ಇದೆ ಕಾರಣಕ್ಕೆ ಕಳೆದ ಕೆಲ ವಾರಗಳ ಹಿಂದೆ ತುಂಗಭದ್ರಾ ಜಲಾಶಯದ ಗೇಟ್ ಕಿತ್ತುಕೊಂಡು ಹೋದ ಸ್ಥಿತಿ ಈ ಜಲಾಶಯಕ್ಕೂ ಬರುತ್ತಾ ಎನ್ನುವ ಆತಂಕ ರೈತರಲ್ಲಿ ಹಾಗೂ ಅಧಿಕಾರಿಗಳಿಗೆ ಕಾಡುತ್ತಿದೆ.

ಪ್ರತಿ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಗೇಟ್​ಗಳನ್ನ ವಾರ್ಷಿಕ ನಿರ್ವಹಣೆ ಮಾಡಬೇಕು. ಇದಕ್ಕೆ ನೂರಿತ ಹಾಗೂ ಅರ್ಹತೆ ಇರುವ ಕಂಪನಿಗೆ ನಿರ್ವಹಣೆಯ ಟೆಂಡರ್ ನೀಡಿ ನಿರ್ವಹಣೆ ಕಾರ್ಯ ಮಾಡಿಸಬೇಕು. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್ಎಲ್) ಅಧಿಕಾರಿಗಳು ಸರ್ಕಾರಕ್ಕೆ ನಿರ್ವಹಣೆಗಾಗಿ 2 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಗ್ಯಾರಂಟಿ ಒತ್ತಡದಲ್ಲಿರುವ ಸರ್ಕಾರ ಅಳೆದು ತೂಗಿ 63 ಲಕ್ಷ ಹಣವನ್ನ ಬಿಡುಗಡೆ ಮಾಡಿದೆ. ಇದೆ ಕಾರಣಕ್ಕೆ ಅಧಿಕಾರಿಗಳು ಕಳೆದ ಫೆಬ್ರುವರಿಯಲ್ಲಿ ಟೆಂಡರ್ ಕರೆದಿದ್ದರು. ಆದ್ರೆ, ಆಗಿದ್ದ ಟೆಂಡರ್ ರಾಜಕೀಯ ನಾಯಕ ಗುದ್ದಾಟದಿಂದ ಕ್ಯಾನ್ಸಲ್ ಆಗಿದೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯ ಗೇಟ್‌‌ ದುರಸ್ತಿ ಸಂಪೂರ್ಣ ಮುಕ್ತಾಯ: ಹನಿ ನೀರು ಹೊರಹೋಗದಂತೆ ತಡೆಯುವಲ್ಲಿ ಸಿಬ್ಬಂದಿ ಯಶಸ್ವಿ

ಆತಂಕ ವ್ಯಕ್ತಪಡಿಸಿದ ನೀರಾವರಿ ತಜ್ಞ

ಮತ್ತೆ ಅಧಿಕಾರಿಗಳು ಕಳೆದ ವರ್ಷ ಸೆಪ್ಟಂಬರ್​ನಲ್ಲಿ ಎರಡನೇ ಬಾರಿ ಟೆಂಡರ್ ಕರೆದಿದ್ದರೂ ಅದು ಕೂಡ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಹೀಗಾಗಿ ಕಳೆದ ವರ್ಷ ಹಾಗೂ ಈ ವರ್ಷ ಮಳೆಗಾಲಕ್ಕೂ ಮುನ್ನವೇ ಡ್ಯಾಂ ವಾರ್ಷಿಕ ನಿರ್ವಹಣೆ ಕಾರ್ಯ ಆಗಿಲ್ಲ. ಈ ಕಾರಣಕ್ಕೆ ನೀರಾವರಿ ತಜ್ಞ ರಾಘವೇಂದ್ರ ಕಾಮನಟಗಿ ಡ್ಯಾಂ ಬಗ್ಗೆ ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

ನಾಲ್ಕು ಜಿಲ್ಲೆಯ ಜನರ ಜೀವನಾಡಿ

ಬಸವಸಾಗರ ಜಲಾಶಯ ಯಾದಗಿರಿ ಜಿಲ್ಲೆಯಲ್ಲಿದ್ದರೂ ಜಿಲ್ಲೆ ಸೇರಿದಂತೆ ರಾಯಚೂರು,ವಿಜಯಪುರ ಹಾಗೂ ಕಲಬುರ್ಗಿ ಜಿಲ್ಲೆಗಳಿಗೆ ಇದೆ ಜಲಾಶಯದಿಂದ ನೀರು ಸರಬರಾಜು ಮಾಡಲಾಗುತ್ತದೆ. 33.33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಭರ್ತಿಯಾದರೆ, ನಾಲ್ಕು ಜಿಲ್ಲೆಯ ಅನ್ನದಾತರು ವರ್ಷಕ್ಕೆ ಎರಡು ಬೆಳೆಗಳನ್ನ ಬೆಳೆದು ಸಮೃದ್ಧರಾಗಿರುತ್ತಾರೆ. 30 ಕ್ರಸ್ಟ್ ಗೇಟ್​ಗಳನ್ನ ಹೊಂದಿರುವ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದ ಹಾಗೆ ಕಷ್ಣ ನದಿಗೆ ನೀರು ಹರಿ ಬಿಡಲಾಗುತ್ತದೆ. ಸದ್ಯ ಡ್ಯಾಂನಿಂದ ನದಿಗೆ 45 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಡ್ಯಾಂ ನೀರಿನಿಂದ ನಾಲ್ಕು ಜಿಲ್ಲೆಯ 6 ಲಕ್ಷ ಹೆಕ್ಟೇರ್ ಪ್ರದೇಶದ ನೀರಾವರಿ ಪ್ರದೇಶಕ್ಕೆ ನೀರುಣಿಸಲಾಗುತ್ತೆ. ಅಂತಹ ಜಲಾಶಯದ ಗೇಟ್​ಗಳನ್ನ ಕಳೆದ ಎರಡು ವರ್ಷಗಳಿಂದ ಸರಿಯಾಗಿ ನಿರ್ವಹಣೆ ಆಗಿಲ್ಲ ಎನ್ನುವುದು ಆಂತಕದ ವಿಷಯವಾಗಿದೆ.

ಇದನ್ನೂ ಓದಿ:ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿ ಕಾರ್ಯ; ಮೂರನೇ ಎಲಿಮೆಂಟ್​ನ್ನು ಯಶಸ್ವಿಯಾಗಿ ಅಳವಡಿಸಿದ ಸಿಬ್ಬಂದಿ

ಇನ್ನು ಹೈಡ್ರೋಲಿಕ್ ಗೇಟ್​ಗಳಾಗಿದ್ದರಿಂದ ರೋಪ್ ಸಿಸ್ಟಮ್​ನಿಂದ ಗೇಟ್​ಗಳನ್ನ ಇಳಿಸೋದು ಮತ್ತು ಮೇಲಕ್ಕೆತ್ತುವುದು ಮಾಡಲಾಗುತ್ತದೆ. ಈ ರೋಪ್​ಗಳಿಗೆ ವಾರ್ಷಿಕ ಅಲ್ಲದ ಸಮಯಕ್ಕೆ ಸರಿಯಾಗಿ ಗ್ರೀಸಿಂಗ್ ವ್ಯವಸ್ಥೆ ಮಾಡಬೇಕು. ಗ್ರೀಸಿಂಗ್ ವ್ಯವಸ್ಥೆ ಆದರೆ ಮಾತ್ರ ಸರಾಗವಾಗಿ ಗೇಟ್​ಗಳು ಕಾರ್ಯ ನಿರ್ವವಹಿಸುತ್ತವೆ. ಒಂದು ವೇಳೆ ಗ್ರೀಸಿಂಗ್ ಆಗಿಲ್ಲ ಅಂದರೆ ಗೇಟ್​ಗಳು ಸ್ಟ್ರಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು ಸಂದರ್ಭ ಡ್ಯಾಂಗೆ ಒಳ ಹರಿವು ಹೆಚ್ಚಾದಾಗ ಗೇಟ್​ಗಳನ್ನ ಎತ್ತಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಗೇಟ್​ಗಳು ಕಾರ್ಯನಿರ್ವಹಿಸುವುದಿಲ್ಲ.

ಇದೆ ಕಾರಣಕ್ಕೆ ಟೆಂಡರ್ ಕರೆದಿದ್ರೆ ಸುರಪುರದ ಶಾಸಕರು ತಮ್ಮವರಿಗೆ ಟೆಂಡರ್ ಕೊಡಿಸುವ ಉದ್ದೇಶದಿಂದ ಆಗಿದ್ದ ಟೆಂಡರ್ ಕ್ಯಾನ್ಸಲ್ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ, ಟೆಂಡರ್ ಅರ್ಹತೆಯಿರುವ ಕಂಪನಿಗಳಿಗೆ ಕೊಡಬೇಕಾಗುತ್ತೆ. ಈ ಬಗ್ಗೆ ಡ್ಯಾಂನ ಮುಖ್ಯ ಇಂಜಿನೀಯರ್​ಗೆ ಕೇಳಿದರೆ, ‘ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಮೊನ್ನೆ ಮೊನ್ನೆಯಷ್ಟೇ ತುಂಗಭದ್ರಾ ಜಲಾಶಯದ ಗೇಟ್ ಕಿತ್ತು ಹೋಗಿ ಸಾಕಷ್ಟು ಅನಾಹುತ ಸೃಷ್ಟಿಯಾಗಿತ್ತು. ಆದ್ರೆ, ರಾಜ್ಯದ ಮತ್ತೊಂದು ಜಲಾಶಯದ ಸ್ಥಿತಿ ಹಾಗೆ ಆಗಬಾರದು ಅಂದರೆ ಕೂಡಲೇ ಟೆಂಡರ್ ಕರೆದು ಗೇಟ್​ಗಳ ನಿರ್ವಹಣೆ ಸರಿಯಾಗಿ ಆಗಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ