12 ಗೆರೆಯಲ್ಲಿ 3 ಗೆರೆ ಮಾತ್ರ ಸೇವಿಸುತ್ತಿದ್ದೆ ಸಾರ್ -ನಟ ಕಿಶೋರ್ Drug ಅಡಿಕ್ಟ್ ಆಗಿದ್ದು ಹೇಗೆ?
ದಕ್ಷಿಣ ಕನ್ನಡ: ಮಂಗಳೂರಲ್ಲಿ ಬಾಲಿವುಡ್ ನಟ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನಟ ತಾನು ಮಾದಕ ವಸ್ತು ವ್ಯಸನಿ ಆದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ. ತನಿಖೆ ವೇಳೆ ತಾನು ಡ್ರಗ್ಸ್ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ ಕಿಶೋರ್ ನನ್ನ ಆಪ್ತ ಸ್ನೇಹಿತನಿಂದ ನನಗೆ ಡ್ರಗ್ ಪರಿಚಯವಾಯ್ತು ಎಂದು ಒಪ್ಪಿಕೊಂಡಿದ್ದಾನಂತೆ. ನಾನು ರೆಗ್ಯೂಲರ್ ಆಗಿ ಕೊಕೈನ್ ಸೇವಿಸುತ್ತಿದ್ದೆ ಎಂದು ತನಿಖೆ ವೇಳೆ ಕಿಶೋರ್ ಬಾಯಿಬಿಟ್ಟಿದ್ದಾನೆ. ಒಂದು ಗ್ರಾಂನ 12 ಗೆರೆ ಕೊಕೈನ್ನಲ್ಲಿ ಎರಡರಿಂದ ಮೂರು ಗೆರೆ […]
ದಕ್ಷಿಣ ಕನ್ನಡ: ಮಂಗಳೂರಲ್ಲಿ ಬಾಲಿವುಡ್ ನಟ ಕಿಶೋರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ನಟ ತಾನು ಮಾದಕ ವಸ್ತು ವ್ಯಸನಿ ಆದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾನೆ.
ತನಿಖೆ ವೇಳೆ ತಾನು ಡ್ರಗ್ಸ್ ಸೇವಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ ಕಿಶೋರ್ ನನ್ನ ಆಪ್ತ ಸ್ನೇಹಿತನಿಂದ ನನಗೆ ಡ್ರಗ್ ಪರಿಚಯವಾಯ್ತು ಎಂದು ಒಪ್ಪಿಕೊಂಡಿದ್ದಾನಂತೆ. ನಾನು ರೆಗ್ಯೂಲರ್ ಆಗಿ ಕೊಕೈನ್ ಸೇವಿಸುತ್ತಿದ್ದೆ ಎಂದು ತನಿಖೆ ವೇಳೆ ಕಿಶೋರ್ ಬಾಯಿಬಿಟ್ಟಿದ್ದಾನೆ.
ಒಂದು ಗ್ರಾಂನ 12 ಗೆರೆ ಕೊಕೈನ್ನಲ್ಲಿ ಎರಡರಿಂದ ಮೂರು ಗೆರೆ ಸೇವಿಸುತ್ತಿದ್ದೆ ಎಂದು ಕಿಶೋರ್ ಹೇಳಿದ್ದಾನಂತೆ. ಆದರೆ, ನಾನು MDMA ಡ್ರಗ್ ಸೇವಸುತ್ತಿರಲಿಲ್ಲ ಅಂತಾ ಮಾಹಿತಿ ನೀಡಿರುವ ಕಿಶೋರ್ ಡ್ರಗ್ಸ್ಗಳನ್ನು ಬೇರೆಯವರಿಗಾಗಿ ತರಿಸುತ್ತಿದ್ದೆ ಅಂತಾ ಹೇಳಿದ್ದಾನಂತೆ.