Chanakya Niti: ಯಾವುದೇ ಪುರುಷ ತನ್ನ ಜೀವನದಲ್ಲಿ ಎದುರಿಸಬೇಕಾಗುವ ಮೂರು ದುಃಖದ ಪ್ರಸಂಗ; ಅದಕ್ಕೆ ಪರಿಹಾರ
Chanakya Teachings: ಆಚಾರ್ಯ ಚಾಣಕ್ಯ ತನ್ನ ಜೀವನಾನುಭವಗಳುಳ್ಳ ಚಾಣಕ್ಯ ನೀತಿ ಗ್ರಂಥದಲ್ಲಿ ಜೀವನದ ನಿಗೂಢತೆಯನ್ನು ಭೇದಿಸಿ ಹೇಳಿದ್ದಾನೆ. ಯಾವುದೇ ವ್ಯಕ್ತಿ ಜೀವನದಲ್ಲಿ ಸೂಲುತ್ತಿದ್ದಾನೆ ಅನ್ನಿಸಿದಾಗ ಈ ಚಾಣಕ್ಯ ನೀತಿ ಗ್ರಂಥದಲ್ಲಿ ಬರುವ ಪ್ರಸಂಗಗಳನ್ನು ಮನನ ಮಾಡಿಕೊಂಡರೆ ಅಂತಹವರಿಗೆ ಅಪಜಯ ಎಂಬುದು ದೂರವಾಗುತ್ತದೆ. ಇದುವೇ ಜನಹಿತ ದೃಷ್ಟಿಯಿಂದ ಚಾಣಕ್ಯ ರೂಪಿಸಿದ ನೀತಿಗಳು.
ಯಾವುದೇ ಪುರುಷನಾಗಲಿ ತನ್ನ ಜೀವನದಲ್ಲಿ ಈ ಮೂರು ದುಃಖದ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ ಎಂಬ ತಿಳಿವಳಿಕೆ ಮೂಡಿಸುತ್ತದೆ ಚಾಣಕ್ಯನ ನೀತಿ (Chanakya Niti). ಆಚಾರ್ಯ ಚಾಣಕ್ಯ ತನ್ನ ಜೀವನದುದ್ದಕ್ಕೂ ಅನೇಕ ಸಂಘರ್ಷಗಳನ್ನು ಎದುರಿಸಿದವ. ಆದರೆ ಚಾಅಣಕ್ಯ ಎಂದಿಗೂ, ಎಂಥದ್ದೇ ಪರಿಸ್ಥಿತಿಯಲ್ಲೂ ಧೃತಿಗೆಡಲಿಲ್ಲ, ಅಧೀರನಾಗಲಿಲ್ಲ; ಬದಲಿಗೆ ಎಂಥದ್ದೆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸುತ್ತಾ ಬಲಾಢ್ಯನಾದ. ಅಂತಹ ದುರ್ಭರ ಪರಿಸ್ಥಿತಿಗಳು ಜೀವನದ ಪಾಠಗಳನ್ನು ಉಣಬಿಡಿಸಿದವು. ಅವೇ ಮುಂದೆ ಚಾಣಕ್ಯನ ನೀತಿಗಳಾಗಿ ಇತರರಿಗೂ ದಾರಿದೀಪವಾದವು.
ಆಚಾರ್ಯ ಚಾಣಕ್ಯ ತನ್ನ ಜೀವನಾನುಭವಗಳುಳ್ಳ ಚಾಣಕ್ಯ ನೀತಿ ಗ್ರಂಥದಲ್ಲಿ ಜೀವನದ ನಿಗೂಢತೆಯನ್ನು ಭೇದಿಸಿ ಹೇಳಿದ್ದಾನೆ. ಯಾವುದೇ ವ್ಯಕ್ತಿ ಜೀವನದಲ್ಲಿ ಸೂಲುತ್ತಿದ್ದಾನೆ ಅನ್ನಿಸಿದಾಗ ಈ ಚಾಣಕ್ಯ ನೀತಿ ಗ್ರಂಥದಲ್ಲಿ ಬರುವ ಪ್ರಸಂಗಗಳನ್ನು ಮನನ ಮಾಡಿಕೊಂಡರೆ ಅಂತಹವರಿಗೆ ಅಪಜಯ ಎಂಬುದು ದೂರವಾಗುತ್ತದೆ. ತನ್ನೆಲ್ಲ ಕಷ್ಟ ಕೋಟಲೆಗಳನ್ನು ಮೊದಲೇ ಗ್ರಹಿಸಬಲ್ಲವನಾಗಿ ಅದರಿಂದ ಪಾರಾಗುವುದರತ್ತ ಗಮನ ಹರಿಸುತ್ತಾನೆ. ಇದುವೇ ಜನಹಿತ ದೃಷ್ಟಿಯಿಂದ ಚಾಣಕ್ಯ ರೂಪಿಸಿದ ನೀತಿಗಳು.
ದಾಖಲಾರ್ಹ ಸಂಗತಿಯೆಂದರೆ ಚಾಣಕ್ಯನ ನೀತಿಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಆಚಾರ್ಯ ಚಾಣಕ್ಯ ತನ್ನ ಗ್ರಂಥದಲ್ಲಿ ಅಂತಹ ಮೂರು ದುರ್ಭರ ಪರಿಸ್ಥಿತಿಗಳನ್ನು ಗ್ರಹಿಸಿ, ಅದರಿಂದ ಹೊರಬರುವುದಕ್ಕೆ ಪರಿಹಾರೋಪಾಯ ಸೂಚಿಸಿದ್ದಾನೆ. ಯಾವುದೇ ಪುರುಷ ತನ್ನ ಜೀವಮಾನದಲ್ಲಿ ಎದುರಿಸಬೇಕಾದ ಮೂರು ದುಃಖದ ಪ್ರಸಂಗಗಳ ವರ್ಣನೆ, ಅದಕ್ಕೆ ಚಾಣಕ್ಯ ಸೂಚಿಸುವ ಪರಿಹಾರ ಮಾರ್ಗಗಳು (Chanakya Teachings) ಇಲ್ಲಿವೆ:
ಚಾಣಕ್ಯ ನೀತಿಯಲ್ಲಿ ಬರುವ ಶ್ಲೋಕ: ವೃದ್ಧಕಾಲೇ ಮೃತಾ ಭಾರ್ಯಾ ಬಂಧಹಸ್ತೆ ಗತಂ ಧನಂ ಭೋಜನಂ ಚ ಪರಾಧೀನಃ ತ್ರಯಃ ಪುಂಸಾ ವಿಡಂಬನಃ
ಇದರ ಅರ್ಥ ಹೀಗಿದೆ: 1. ಈ ಶ್ಲೋಕದ ಮೂಲಕ ಚಾಣಕ್ಯ ಏನು ಹೇಳುತ್ತಾನೆ ಅಂದರೆ ಯಾವುದೇ ಪುರುಷನ ಹೆಂಡತಿ ಸತ್ತು ಹೋದರೆ ಅದು ನಿಜಕ್ಕೂ ದೌರ್ಭಾಗ್ಯವೇ ಸರಿ. ವೃದ್ಧಾಪ್ಯದಲ್ಲಿ ಪತ್ನಿಯೇ ಪುರುಷನಿಗೆ ನಿಜಕ್ಕೂ ಆಧಾರ ಸ್ತಂಭವಾಗಿರುವುದು. ಆ ಶಕ್ತಿ ಇಲ್ಲವಾದರೆ ಪುರುಷ ನಿಜಕ್ಕೂ ಅತಂತ್ರಗೊಳ್ಳುತ್ತಾನೆ. ಜೀವನ ದುರ್ಭರಗೊಳ್ಳುತ್ತದೆ.
2. ಈ ಶ್ಲೋಕದ ಮೂಲಕ ಚಾಣಕ್ಯ ಮತ್ತೊಂದು ಪ್ರಸಂಗವನ್ನು ಉಲ್ಲೇಖಿಸುತ್ತಾನೆ. ಧನ ಸಂಪತ್ತು ಎಂಬುದು ಬಲಾಢ್ಯವಾದುದು. ಕೆಟ್ಟ ಘಳಿಗೆ ಎದುರಾದಾಗ ಧನ ಸಂಪತ್ತಿನಿಂದ ಪಾರಾಗಬಹುದು. ಆದರೆ ಈ ಧನ ಸಂಪತ್ತು ಎಂಬುದು ವೈರಿಯ ಕೈ ಸೇರಿಬಿಟ್ಟರೆ ಕೆಟ್ಟ ಘಳಿಗೆ ಎದುರಾಗಿಬಿಡುವುದು ಖಚಿತ. ಅದರಿಂದ ನಿಮ್ಮ ಪ್ರಸ್ತುತತೆಯೇ ಸಂಕಷ್ಟಕ್ಕೆ ಈಡಾಗುತ್ತದೆ. ಅಷ್ಟೇ ಅಲ್ಲ; ಆ ನಿಮ್ಮ ವೈರಿ ನಿಮ್ಮ ಹಣವನ್ನೇ ಬಳಸಿಕೊಂಡು ನಿಮ್ಮ ಜೀವನವನ್ನು ಮತ್ತಷ್ಟು ಬರ್ಬಾದ್ ಮಾಡಲು ಬಳಸತೊಡಗುತ್ತಾನೆ.
3. ಆಚಾರ್ಯ ಚಾಣಕ್ಯನ ಪ್ರಕಾರ ಪುರುಷನಿಗೆ ಎದುರಾಗುವ ಮತ್ತೊಂದು ದುರ್ಭರ ಪರಿಸ್ಥಿತಿಯೆಂದ್ರೆ ಬೇರೊಬ್ಬರ ಆಸರೆಯಲ್ಲಿ ಜೀವನದೂಡಬೇಕಾದ ಪರಿಸ್ಥಿತಿ ಎದುರಾಗುವುದು. ಯಾವುದೇ ವ್ಯಕ್ತಿ ತನಗೆ ಎಷ್ಟು ಜೀವನ ದಕ್ಕಿದೆಯೋ ಅಷ್ಟನ್ನೇ ಶಾಂತಿ ನೆಮ್ಮದಿಯಿಂದ ಕಳೆಯಬೇಕಾಗುತ್ತದೆ. ಬೇರೊಬ್ಬರನ್ನು ಅವಲಂಬಿಸುವ ಪರಿಸ್ಥಿತಿ ಎದುರಾದರೆ ಅದು ನಿಮ್ಮ ಜೀವನ ಚೈತನ್ಯವನ್ನು ಉಡುಗಿಸಿಬಿಡುತ್ತದೆ. ನಿಮ್ಮನ್ನು ಕ್ಷೀಣನನ್ನಾಗಿಸಿಬಿಡುತ್ತದೆ. ಹಾಗಾಗಿ ಬೇರೊಬ್ಬರನ್ನು ಆಶ್ರಯಿಸಿ ಜೀವನ ನಡೆಸುವುದು ಅಂದ್ರೆ ದುಃಖದಿಂದ ಜೀವನ ನಡೆಸುವುದು ಎಂದೇ ಅರ್ಥ.
Chanakya Niti: ಈ ರೀತಿಯ ನಡವಳಿಕೆಯ ಜನರ ಬಡತನಕ್ಕೆ ಅವರೇ ಜವಾಬ್ದಾರರು- ಚಾಣಕ್ಯ ನೀತಿ
(chanakya niti according to Acharya Chanakya these are the 3 situations every man has to undergo misery )